ಪಿಂಚಣಿದಾರರಿಗೆ ಸಿಹಿಸುದ್ದಿ: ವಿಡಿಯೋ ಕರೆ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಸಿ

ಬ್ಯಾಂಕ್‌ ಅಥವಾ ಅಂಚೆ ಕಚೇರಿ ಮೂಲಕ ಪಿಂಚಣಿ ಪಡೆಯುವವರು ವರ್ಷಕ್ಕೆ ಒಂದು ಬಾರಿ ತಮ್ಮ ಇರುವಿಕೆಯ ಬಗ್ಗೆ ಖಾತರಿ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಆದರೆ ಹಲವಾರು ಮಂದಿಗೆ ದೈಹಿಕವಾಗಿ ಹಾಜರಾಗಲು ಸಾಧ್ಯವಾಗುವುದಿಲ್ಲ ಅಥವಾ ಆನ್‌ಲೈನ್‌ ಮೂಲಕ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಪಿಂಚಣಿದಾರರಿಗೆ ಒಂದು ಸಿಹಿ ಸುದ್ದಿಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನೀಡಿದೆ.

ಎಸ್‌ಬಿಐನಲ್ಲಿ ಇನ್ನು ಮುಂದೆ ಬೇರೆ ವಿಧಾನಗಳ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಸಲು ಸಾಧ್ಯವಾಗದವರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪಿಂಚಣಿದಾರರು ಆನ್‌ಲೈನ್‌ ವಿಡಿಯೋ ಕರೆಯ ಮೂಲಕವೇ ಜೀವನ ಪ್ರಮಾಣ ಪತ್ರವನ್ನು ನೀಡುವ ಸೌಲಭ್ಯವನ್ನು ಜಾರಿ ಮಾಡಿದೆ.

ಈ ಬಗ್ಗೆ ಸೋಮವಾರ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. "ಕೋಟ್ಯಾಂತರ ಮಂದಿ ಪಿಂಚಣಿದಾರರು ಸರಳವಾಗಿ ಈ ವಿಡಿಯೋ ಕರೆಯ ಮೂಲಕ ಜೀವ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡುವ ಮೂಲಕ ಪಿಂಚಣಿ ಬರುವಿಕೆಯಲ್ಲಿ ಅಡೆ ತಡೆ ಉಂಟಾಗದಂತೆ ನೋಡಿಕೊಳ್ಳಬಹುದು," ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತಿಳಿಸಿದೆ.

 ವಿಡಿಯೋ ಕರೆ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಸಿ

"ತಮಗೆ ಅನುಕೂಲಕರವಾದ ಸಮಯದಲ್ಲಿ ಪಿಂಚಣಿದಾರರು ವಿಡಿಯೋ ಕರೆಯ ಮೂಲಕ ಬ್ಯಾಂಕಿನ ಸಿಬ್ಬಂದಿಗಳೊಂದಿಗೆ ಮಾತನಾಡಬಹುದು. ಈ ಮೂಲಕ ಬ್ಯಾಂಕಿಗೆ ಭೇಟಿ ನೀಡದೆಯೇ ಪಿಂಚಣಿದಾರರು ತಮ್ಮ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬಹುದು," ಎಂದು ಎಸ್‌ಬಿಐ ಹೇಳಿದೆ.

ವಿಡಿಯೋ ಕರೆ ಮೂಲಕ ಪ್ರಮಾಣ ಪತ್ರ ಸಲ್ಲಿಕೆ ಹೇಗೆ?

* ಮೊದಲು ಪಿಂಚಣಿದಾರರು www.pensionseva.sbi ಗೆ ಲಾಗಿನ್‌ ಆಗಿ
* ಬಳಿಕ Video LC ಮೇಲೆ ಕ್ಲಿಕ್‌ ಮಾಡಿ
* ಆ ನಂತರ ನಿಮ್ಮ ಎಸ್‌ಬಿಐನ ಪಿಂಚಣಿ ಖಾತೆ ಸಂಖ್ಯೆಯನ್ನು ನಮೂದಿಸಿ (ಪಿಂಚಣಿ ಬರುವ ನಿಮ್ಮ ಬ್ಯಾಂಕ್‌ ಖಾತೆಯ ಸಂಖ್ಯೆ)
* ನಿಮ್ಮ ಬ್ಯಾಂಕ್‌ಗೆ ಲಿಂಕ್‌ ಆದ ಮೊಬೈಲ್‌ಗೆ ಒಟಿಪಿ ಬರಲಿದೆ, ಅದನ್ನು ನಮೂದಿಸಿ
* ನಿಯಮಗಳು ಮತ್ತು ಷರತ್ತುಗಳ ಪಟ್ಟಿ ಬರಲಿದ್ದು, ಅದನ್ನು ಸಂಪೂರ್ಣವಾಗಿ ಓದಿಕೊಳ್ಳಿ
* ಅದಾದ ನಂತರ Start Journey ಮೇಲೆ ಕ್ಲಿಕ್‌ ಮಾಡಿ
* I am ready ಎಂದು ಕ್ಲಿಕ್‌ ಮಾಡುವ ಮೂಲಕ ವಿಡಿಯೋ ಕರೆಗೆ ಅವಕಾಶ ನೀಡಿ

ಇನ್ನು ಈ ವಿಡಿಯೋ ಕರೆಯ ಸಂದರ್ಭದಲ್ಲಿ ಎಸ್‌ಬಿಐ ಪಿಂಚಣಿದಾರರ ಕೈಯಲ್ಲಿ ಪ್ಯಾನ್‌ ಕಾರ್ಡ್ ಇರಬೇಕಾಗುತ್ತದೆ. ಈ ಬಗ್ಗೆ ಮಾಹಿತಿ ನೀಡಿದ ಎಸ್‌ಬಿಐನ ಅಧ್ಯಕ್ಷ, ದಿನೇಶ್‌ ಖಾರಾ, "ಹಿರಿಯ ನಾಗರಿಕರಿಗಾಗಿ ನಾವು ಹೊಸ ಗ್ರಾಹಕ ತಾಂತ್ರಿಕ ವ್ಯವಸ್ಥೆಯನ್ನು ನಿಮ್ಮ ಮುಂದೆ ಪರಿಚಯಿಸಲು ಸಂತಸಪಡುತ್ತೇವೆ. ಈ ಹೊಸ ತಾಂತ್ರಿಕ ಕಾರ್ಯಕ್ರಮವು ಪಿಂಚಣಿದಾರರನ್ನು ಡಿಜಿಟಲ್‌ ಆಗಿ ಸದೃಢರನ್ನಾಗಿಸುತ್ತದೆ. ಹಾಗೆಯೇ ಪಿಂಚಣಿದಾರರು ಈ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತು ಜೀವನ ಪ್ರಮಾನ ಪತ್ರವನ್ನು ಸಲ್ಲಿಕೆ ಮಾಡಬಹುದು ಆಗಿದೆ. ನಾವು ಎಲ್ಲಾ ಗ್ರಾಹಕರಿಗೂ ಅಡತಡೆ ಇಲ್ಲದ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕದ ಕಾರಣದಿಂದಾಗಿ ಮತ್ತು ಹಿರಿಯ ನಾಯಕರಿಗೆ ಈ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರುವುದು ಕಷ್ಟ ಎಂಬ ಕಾರಣದಿಂದಾಗಿ ಕೇಂದ್ರ ಸರ್ಕಾರವು ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಹಾಗೆಯೇ ಕಳೆದ ವರ್ಷ ಕೇಂದ್ರ ಸರ್ಕಾರದ ಪಿಂಚಣಿ ನೀತಿಯಡಿ ಬರುವ ಎಲ್ಲಾ ಪಿಂಚಣಿದಾರರು ನವೆಂಬರ್‌ 1 ರಿಂದ ಡಿಸೆಂಬರ್‌ 31 ರವರೆಗೆ ತಮ್ಮ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬಹುದು ಸರ್ಕಾರ ತಿಳಿಸಿತ್ತು. ಆದರೆ 80 ವರ್ಷಕ್ಕಿಂತ ಅಧಿಕ ವಯಸ್ಸಾದವರು ತಮ್ಮ ಜೀವನ ಪ್ರಮಾಣ ಪತ್ರವನ್ನು ಅಕ್ಟೋಬರ್‌ 1 ರಿಂದ ಡಿಸೆಂಬರ್‌ 31 ರವರೆಗೆ ಸಲ್ಲಿಸಬಹುದು ಎಂದು 2020 ರಲ್ಲಿ ಕೇಂದ್ರ ಸರ್ಕಾರ ಹೇಳಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+