ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಇದೀಗ ಗ್ರಾಹಕ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ. ಎಸ್‌ಬಿಐ ತನ್ನ ಎಟಿಎಂ ಮತ್ತು ಸ್ವಯಂ ಚಾಲಿತ ಠೇವಣಿ-ಕಮ್-ಹಿಂತೆಗೆದುಕೊಳ್ಳುವ ಯಂತ್ರಗಳ (ADWM) ಟ್ರಾನ್ಸಾಕ್ಷನ್ ಚಾರ್ಜ್‌ಗಳನ್ನು ಹೆಚ್ಚಿಸಿದೆ. ಇನ್ನು ಈ ನಿಯಮ ಡಿಸೆಂಬರ್ 1, 2025 ರಿಂದ ಜಾರಿಗೆ ಬಂದಿದ್ದು, ಬ್ಯಾಂಕ್ ತನ್ನ ಸೇವೆಯಲ್ಲಿ 2025 ರಲ್ಲಿ ಮಾಡಿದ ಮೊದಲ ಹೆಚ್ಚಳವಾಗಿದೆ.

ಹೌದು, ಎಸ್‌ಬಿಐ ತನ್ನ ಎಟಿಎಂ ಮತ್ತು ADWM ವಹಿವಾಟು ಶುಲ್ಕವನ್ನು ಏರಿಕೆ ಮಾಡಿದ್ದು, ಗ್ರಾಹಕರ ಆರ್ಥಿಕತೆ ಮತ್ತಷ್ಟು ಹೊರೆ ಬೀಳುವಂತಿದೆ. ಇನ್ನು ಈ ನಿರ್ಧಾರಕ್ಕೆ ಇಂಟರ್‌ಚೇಂಜ್ ಫೀಸ್ ಅಂದರೆ ಇತರ ಬ್ಯಾಂಕ್‌ಗಳೊಂದಿಗಿನ ವಹಿವಾಟು ಶುಲ್ಕ ಹೆಚ್ಚಳವೇ ಕಾರಣ ಎಂದು ಹೇಳಲಾಗಿದೆ. ಆದ್ದರಿಂದ ಉಚಿತ ವಹಿವಾಟಿನ ಮಿತಿಯನ್ನು ಮೀರಿಯೂ, ಇತರ ಬ್ಯಾಂಕುಗಳ ಎಟಿಎಂಗಳನ್ನು ಬಳಸುವ ಗ್ರಾಹಕರಿಗೆ ಇದರ ನೇರ ಪರಿಣಾಮ ಬೀಳಲಿದೆ.
ಯಾರಿಗೆ ಹೊರೆ?
ಎಸ್‌ಬಿಐ ತೆಗೆದುಕೊಂಡ ಶುಲ್ಕ ಹೆಚ್ಚಳದ ನಿರ್ಧಾರ ಮುಖ್ಯವಾಗಿ ಎಸ್‌ಬಿಐ ಅಲ್ಲದ ಎಟಿಎಂಗಳಲ್ಲಿ ಟ್ರಾನ್ಸಾಕ್ಷನ್ ಮಾಡುವವರಿಗೆ ಅನ್ವಯವಾಗುತ್ತದೆ. ಆದ್ದರಿಂದ ಎಸ್‌ಬಿಐನ ಸ್ವಂತ ಎಟಿಎಂ ಬಳಸಿದ್ರೆ ಟ್ರಾನ್ಸಾಕ್ಷನ್ ಶುಲ್ಕಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
ಎಸ್‌ಬಿಐ ಹೇಳಿದ್ದೇನು?
ಎಸ್‌ಬಿಐ ಹೇಳಿದಂತೆ, ಇತ್ತೀಚೆಗೆ ಇಂಟರ್‌ಚೇಂಜ್ ಶುಲ್ಕ ಹೆಚ್ಚಳವಾಗಿದೆ. ಈ ಹಿನ್ನೆಲೆ ಎಟಿಎಂ ಮತ್ತು ಎಡಿಡಬ್ಲೂಎಮ್ ಟ್ರಾನ್ಸಾಕ್ಷನ್ ಶುಲ್ಕಗಳು ಕೂಡಾ ಏರಿಕೆಯಾಗಿದೆ. ಕಳೆದ ಫೆಬ್ರವರಿಯ ನಂತರ ಬ್ಯಾಂಕ್ ತೆಗೆದುಕೊಂಡ ಮೊದಲ ಶುಲ್ಕ ಪರಿಷ್ಕರಣೆ ಇದಾಗಿದೆ ಎಂದು ಹೇಳಿಕೊಂಡಿದೆ.
ನಿಯಮ ಮೀರಿದರೆ ಶುಲ್ಕ ಅನ್ವಯ!
ಹೊಸ ನಿಯಮದ ಪ್ರಕಾರ, ಎಸ್‌ಬಿಐ ಅಲ್ಲದೇ ಬೇರೆ ಬ್ಯಾಂಕ್‌ನ ಎಟಿಎಂಗಳಲ್ಲಿ ಫ್ರೀ ಟ್ರಾನ್ಸಾಕ್ಷನ್ ಲಿಮಿಟ್ ಮುಗಿದ ನಂತರದ ಹೆಚ್ಚುವರಿ ಟ್ರಾನ್ಸಾಕ್ಷನ್‌ಗಳಿಗೆ ಶುಲ್ಕ ಅನ್ವಯವಾಗುತ್ತದೆ. ಇನ್ನು ಈ ಶುಲ್ಕಗಳು ಜಿಎಸ್‌ಟಿಯೊಂದಿಗೆ (18%) ಸೇರಿ ಪಾವತಿಸಬೇಕು.
ಕ್ಯಾಶ್ ವಿಥ್ ಡ್ರಾಯಲ್ ಚಾರ್ಜ್:
- ಹೊಸ ಚಾರ್ಜ್: 23 ರೂ. ಜೊತೆಗೆ ಜಿಎಸ್‌ಟಿ ಅನ್ವಯ
- ಹಿಂದಿನ ಚಾರ್ಜ್: 21 ರೂ. ಜೊತೆಗೆ ಜಿಎಸ್‌ಟಿ
- ಇದು ಫೈನಾನ್ಷಿಯಲ್ ಟ್ರಾನ್ಸಾಕ್ಷನ್‌ಗಳಿಗೆ ಅಂದರೆ ಹಣ ತೆಗೆಯುವುದಕ್ಕೆ ಅನ್ವಯವಾಗುತ್ತದೆ.
ನಾನ್ ಫೈನಾನ್ಷಿಯಲ್ ಟ್ರಾನ್ಸಾಕ್ಷನ್ ಚಾರ್ಜ್:
- ಹೊಸ ಚಾರ್ಜ್: 11 ರೂ. ಜೊತೆಗೆ ಜಿಎಸ್‌ಟಿ
- ಹಿಂದಿನ ಚಾರ್ಜ್: 10 ರೂ. ಜೊತೆಗೆ ಜಿಎಸ್‌ಟಿ
- ಇದು ಬ್ಯಾಲೆನ್ಸ್ ಚೆಕ್, ಮಿನಿ ಸ್ಟೇಟ್‌ಮೆಂಟ್, ಪಿನ್ ಬದಲಾವಣೆ, ಹೀಗೆ ಮುಂತಾದ ಸೇವೆಗಳಿಗೆ ಅನ್ವಯವಾಗುತ್ತದೆ.
ಫ್ರೀ ಟ್ರಾನ್ಸಾಕ್ಷನ್ ಲಿಮಿಟ್ ಎಷ್ಟು?
ನಾನ್ ಎಸ್‌ಬಿಐ ಎಟಿಎಂಗಳಲ್ಲಿ ಫ್ರೀ ಟ್ರಾನ್ಸಾಕ್ಷನ್ ಲಿಮಿಟ್ ಮುಗಿತ ನಂತರ ಈ ಹೆಚ್ಚಳ ಅನ್ವಯವಾಗುತ್ತದೆ. ಇನ್ನು ಲಿಮಿಟ್ ಅಕೌಂಟ್ ಪ್ರಕಾರ ಬದಲಾವಣೆಯಾಗುತ್ತದೆ.
ಸೇವಿಂಗ್ಸ್ ಅಕೌಂಟ್‌ಗಳಲ್ಲಿ ಮಾಸಿಕವಾಗಿ 3 ಫ್ರೀ ಟ್ರಾನ್ಸಾಕ್ಷನ್ ಮಾಡಲು ಅವಕಾಶವಿರುತ್ತದೆ. ಇನ್ನು ಸ್ಯಾಲರಿ ಅಕೌಂಟ್‌ಗಳಲ್ಲಿ ಹಿಂದೊಮ್ಮೆ ಅನ್‌ಲಿಮಿಟೆಡ್ ಫ್ರೀ ಟ್ರಾನ್ಸಾಕ್ಷನ್ ಇತ್ತು. ಆದ್ರೆ ಪ್ರಸ್ತುತ ಮಾಸಿಕ 10 ಉಚಿತ ಟ್ರಾನ್ಸಾಕ್ಷನ್ ನೀಡಲಾಗಿದೆ.


Click it and Unblock the Notifications