ನೀವು ಎಸ್‌ಬಿಐ ಖಾತೆಯನ್ನ ನೀವುರುವಲ್ಲಿಗೇ ವರ್ಗಾಯಿಸಲು ಬಯಸಿದ್ದರೆ ಅದೀಗ ಬಹಳ ಸುಲಭವಾಗಿದೆ. ಬ್ಯಾಂಕ್‌ಗೆ ನಾಕೈದು ಬಾರಿ ಅಲೆದು ಸುಸ್ತಾಗಿ ನಂತರ ಸಾಲಿನಲ್ಲಿ ನಿತ್ತು ಫಾರ್ಮ್ ತುಂಬಿ ನಿಮ್ಮ ಶಾಖೆಯನ್ನ ಬದಲಾಯಿಸಬೇಕಿಲ್ಲ. ಈಗ ನೀವು ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಇಚ್ಛೆಯ ಶಾಖೆಗೆ ನಿಮ್ಮ ಖಾತೆಯನ್ನ ವರ್ಗಾಯಿಸಬಹುದು.
ನೆಟ್-ಬ್ಯಾಂಕಿಂಗ್, ಆನ್‌ಲೈನ್ ಪೇಮೆಂಟ್‌ಗಳ ರೀತಿ ಈಗ ಎಸ್‌ಬಿಐ ಗ್ರಾಹಕರು ಆನ್‌ಲೈನ್ ಮೂಲಕವೇ ಶಾಖೆಗಳನ್ನ ಸಹ ಬದಲಾಯಿಸಬಹುದು. ಭಾರತದ ಅತೀ ದೊಡ್ಡ ವಾಣಿಜ್ಯ ಬ್ಯಾಂಕ್ ಎಂದೇ ಹೆಸರಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆನ್‌ಲೈನ್ ಮೂಲಕವೇ ಗ್ರಾಹಕರಿಗೆ ತನ್ನ ಸೇವೆಗಳನ್ನ ನೀಡ್ತಿದೆ. ಇದರ ಜೊತೆಗೆ ಗ್ರಾಹಕರು ಆನ್‌ಲೈನ್ ಮೂಲಕ ಸುಲಭ ಮಾರ್ಗದಲ್ಲಿ ಬ್ಯಾಂಕ್ ಶಾಖೆಯನ್ನ ಸಹ ತೆರೆಯಬಹುದು.

ಇತ್ತೀಚಿನ ದಿನಗಳಲ್ಲಿ ಎಲ್ಲಾ ರೀತಿಯ ವಹಿವಾಟುಗಳು ಆನ್‌ಲೈನ್ ಮೂಲಕವೇ ನಡೆಯುತ್ತಿರುವುದರಿಂದ ಎಸ್‌ಬಿಐ ಕೂಡ ತನ್ನ ಎಲ್ಲಾ ಸೇವೆಗಳನ್ನು ಆನ್‌ಲೈನ್‌ನಲ್ಲಿ ಮಾಡಿದೆ. ಇದರಿಂದ ಗ್ರಾಹಕರು ಶಾಖೆಗೆ ಹೋಗಿ ಯಾವುದೇ ಕೆಲಸ ಮಾಡಬೇಕಾಗಿಲ್ಲ. ದೇಶದ ಅತಿದೊಡ್ಡ ಸಾಲದಾತ ಆಗಿರುವ ಎಸ್‌ಬಿಐ ತನ್ನ ಗ್ರಾಹಕರಿಗೆ ಸುಲಭ ಮತ್ತು ಮುಕ್ತ ವಹಿವಾಟುಗಳಿಗಾಗಿ ಹಲವಾರು ಆನ್‌ಲೈನ್ ಸೌಲಭ್ಯವನ್ನ ನೀಡ್ತಿದೆ.
ನೀವೇನಾದ್ರು ಎಸ್‌ಬಿಐ ಖಾತೆಯನ್ನ ಹೊಂದಿದ್ದರೆ ಹಾಗೆ ನೀವೇನಾದ್ರು ನಿಮ್ಮ ಬ್ಯಾಂಕ್ ಶಾಖೆಯನ್ನು ಬದಲಾಯಿಸಲು ಇಚ್ಚಿಸಿದ್ರೆ, ನೀವು ಬ್ಯಾಂಕ್‌ಗೆ ಅಲೆಯುವ ಅಗತ್ಯ ಇಲ್ಲ. SBI ಯ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿಕೊಂಡು ನೀವು ಕೂತ ಜಾಗದಲ್ಲೇ ಆನ್‌ಲೈನ್ ಮೂಲಕ ನಿಮ್ಮ ಬ್ಯಾಂಕ್ ಶಾಖೆಯನ್ನ ಬದಲಾಯಿಸಬಹುದು.
ಇದರಿಂದಾಗಿ ನೀವು ಪ್ರತಿದಿನ ಬ್ಯಾಂಕ್‌ಗೆ ಹೋಗಿ ನಿಮ್ಮ ಸಮಯ ವ್ಯರ್ಥ ಮಾಡಬೇಕಿಲ್ಲ. ನಿಮ್ಮ ಕೆಲಸವನ್ನ ಶಾಖೆಗೆ ಹೋಗದೆ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಎಸ್‌ಬಿಐ ಖಾತೆಯನ್ನ ಒಂದು ಶಾಖೇಯಿಂದ ಮತ್ತೊಂದು ಶಾಖೆಗೆ ಬದಲಾಯಿಸಬಹುದು.
ಆನ್‌ಲೈನ್‌ನಲ್ಲಿ SBI ಬ್ಯಾಂಕ್ ಖಾತೆಯ ಶಾಖೆ ಬದಲಿಸುವುದು ಹೇಗೆ?
ನೆಟ್ ಬ್ಯಾಂಕಿಂಗ್ ಮೂಲಕ ಎಸ್‌ಬಿಐ ಉಳಿತಾಯ ಖಾತೆಯ ಶಾಖೆಯನ್ನ ಬದಲಾಯಿಸಲು ವಿನಂತಿಯನ್ನ ನಮೂದಿಸಬೇಕು. ನಂತರ ನೀವು ನಿಮ್ಮ ಖಾತೆಯನ್ನು ವರ್ಗಾಯಿಸಲು ಬಯಸುವ ಶಾಖೆಯ ಕೋಡ್ ಬೇಕಾಗುತ್ತದೆ. ಅಲ್ಲದೆ ನಿಮ್ಮ ಮೊಬೈಲ್ ಸಂಖ್ಯೆಯನ್ನ ಬ್ಯಾಂಕಿನಲ್ಲಿ ನೋಂದಾಯಿಸಿ ಇಂಟರ್‌ನೆಟ್ ಬ್ಯಾಂಕಿಂಗ್ ಆರಂಭಿಸಬೇಕು.
1. ಮೊದಲನೆಯ ಹಂತ ನೀವು SBI ಅಧಿಕೃತ ವೆಬ್‌ಸೈಟ್ onlinesbi.com ಗೆ ಲಾಗ್ ಇನ್ ಮಾಡಿ.
2. 'ಪರ್ಸನಲ್ ಬ್ಯಾಂಕಿಂಗ್' ಮೇಲೆ ಕ್ಲಿಕ್ ಮಾಡಿ.
3. ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಿ.
4. ನಂತರ ನೀವು ಮುಂದೆ ಇ-ಸೇವೆಯ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
5. ವರ್ಗಾವಣೆ ಉಳಿತಾಯ ಖಾತೆಯ ಮೇಲೆ ಕ್ಲಿಕ್ ಮಾಡಿ.
6. ನಿಮ್ಮ ಖಾತೆಯನ್ನು ವರ್ಗಾಯಿಸಲು ಆಯ್ಕೆ ಮಾಡಿ.
7. ನೀವು ಖಾತೆಯನ್ನು ವರ್ಗಾಯಿಸಲು ಬಯಸುವ ಶಾಖೆಯ IFSC ಕೋಡ್ ವಿವರವನ್ನ ಹಾಕಿರಿ.
8. ಒಮ್ಮೆ ಎಲ್ಲವನ್ನೂ ಪರಿಶೀಲಿಸಿ ಮತ್ತು ದೃಢೀಕರಿಸು ಕ್ಲಿಕ್ ಮಾಡಿ.
9. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ಭರ್ತಿ ಮಾಡಿ ಮತ್ತು ನಂತರ ದೃಢೀಕರಿಸಿ ಒತ್ತಿರಿ.
10. ಕೆಲವು ದಿನಗಳ ನಂತರ, ನಿಮ್ಮ ಖಾತೆಯನ್ನು ನೀವು ವಿನಂತಿಸಿದ ಶಾಖೆಗೆ ವರ್ಗಾಯಿಸಲಾಗುತ್ತದೆ.
SBI ಬ್ಯಾಂಕ್ ಉಳಿತಾಯ A/c ಶಾಖೆ YONO ಅಪ್ಲಿಕೇಶನ್ ಮೂಲಕ ಬದಲಾವಣೆ
ಆನ್‌ಲೈನ್ ಪ್ರಕ್ರಿಯೆಯ ಹೊರತಾಗಿ, ನೀವು YONO ಅಪ್ಲಿಕೇಶನ್ ಅಥವಾ YONO ಲೈಟ್ ಮೂಲಕ ನಿಮ್ಮ ಶಾಖೆಯನ್ನು ಬದಲಾಯಿಸಬಹುದು. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಸ್ಟೇಟ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು, ಅದರಲ್ಲಿ ನಿಮ್ಮ ಒಟಿಪಿ ಕೇಳಲಾಗುತ್ತದೆ. ನಿಮ್ಮ ಇಲ್ಲದಿದ್ದರೆ OTP ಇಲ್ಲದೆ ಖಾತೆಯನ್ನು ಬದಲಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ.


Click it and Unblock the Notifications