ಅಕ್ಷಯ ತೃತೀಯ ಬಂದೇ ಬಿಡ್ತು..ಜನಕ್ಕೆ ಚಿನ್ನ, ಬೆಳ್ಳಿ ಖರೀದಿ ಮಾಡೋ ಖುಷಿ ಒಂದು ಕಡೆಯಾದ್ರೆ, ಬೆಲೆಗಳ ಏರಿಕೆ ಇನ್ನೊಂದು ತಲೆನೋವಾಗಿದೆ. ಆದ್ರೆ ಅಕ್ಷಯ ತೃತೀಯ ಹಬ್ಬದ ದಿನ ಚಿನ್ನ ಕೊಳ್ಳದೇ ಇರೋಕಾಗುತ್ತಾ..? ಹೇಗಿದ್ರೂ ಚಿನ್ನದಂಗಡಿಗಳಲ್ಲಿ ಆಫರ್‍ಗಳಿವೆ, ಇದರ ಜೊತೆಗೆ ಇನ್ನೊಂದು ಆಫರ್ ಸಿಕ್ಕರೆ ಜನ ಬಿಡ್ತಾರಾ. ಹೌದು. ಈ ಇನ್ನೊಂದು ಆಫರ್ ಏನು ಗೊತ್ತಾ? ಈ ಬಾರಿ ಅಕ್ಷಯ ತೃತೀಯ ಹಬ್ಬಕ್ಕೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಕೂಡ ವಿಶೇಷ ಕೊಡುಗೆ ಘೋಷಣೆ ಮಾಡಿದೆ.

ಹೌದು, ಎಸ್‌ಬಿಐ ನೀಡಿರುವ ಆ ವಿಶೇಷ ಕೊಡುಗೆ ಏನಂದ್ರೆ, . ಪ್ರಸಿದ್ಧ ಚಿನ್ನ ಮತ್ತು ವಜ್ರ ಮಳಿಗೆಗಳಲ್ಲಿ ಖರೀದಿಗೆ ತಕ್ಷಣದ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ ಆಫರ್‌ಗಳು ಮತ್ತು ಉತ್ತಮ ಡೀಲ್‌ಗಳು ಲಭ್ಯವಿವೆ. ಈ ಮೂಲಕ ಹಬ್ಬದ ಸಂಭ್ರಮಕ್ಕೆ ಹೊಸತನ ಒದಗಿಸಲಾಗಿದೆ. ಹಾಗಾದ್ರೆ ಯಾವ್ಯಾವ ಪ್ರಸಿದ್ಧ ಜ್ಯುವೆಲರಿ ಶಾಪ್‌ಗಳಲ್ಲಿ ಚಿನ್ನ ಖರೀದಿ ಮಾಡಿದ್ರೆ, ಎಸ್‌ಬಿಐನಿಂದ ಸಿಗುವ ವಿಶೇಷ ಕೊಡುಗೆಗಳೇನು..? ಇಲ್ಲಿ ತಿಳಿಯಿರಿ.
ತನಿಷ್ಕ್ ಜ್ಯುವೆಲರಿ:
ಜ್ಯುವೆಲರಿ ಮಳಿಗೆಗಳ ಪೈಕಿ ತನಿಷ್ಕ್ ಕೂಡ ಒಂದು ಪ್ರಸಿದ್ಧ ಮಳಿಗೆ. ಇಲ್ಲಿ ನೀವೇನಾದ್ರೂ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡಿದ್ರೆ ಒಳ್ಳೆ ಆಫರ್ ಸಿಗುತ್ತದೆ. ಈ ಆಪರ್ ಏಪ್ರಿಲ್ 24ರಿಂದ ಶುರುವಾಗಿದ್ದು, ಏಪ್ರಿಲ್ 30ರ ವರೆಗೆ ಇರಲಿದೆ. ಅಂದ್ರೆ ನಾಳೆ, ಅಕ್ಷಯ ತೃತೀಯದ ದಿನದವರೆಗೂ ಇರುತ್ತದದೆ. ಆಫರ್ ಏನಂದ್ರೆ ₹80,000 ಮತ್ತು ಹೆಚ್ಚು ಮೌಲ್ಯದ ಖರೀದಿಗೆ ₹4,000 ರ ಫ್ಲಾಟ್ ಇನ್ಸ್ಟೆಂಟ್ ರಿಯಾಯಿತಿ ಲಭ್ಯವಿದೆ. ಈ ಕೊಡುಗೆ ದೇಶದಾದ್ಯಂತ ಎಲ್ಲಾ ತನಿಷ್ಕ್ ಶಾಖೆಗಳಲ್ಲಿ ಅನ್ವಯವಾಗುತ್ತದೆ.
ಮಲಬಾರ್ ಗೋಲ್ಡ್ & ಡೈಮಂಡ್ಸ್:
ಪ್ರತಿಷ್ಠಿತ ಚಿನ್ನದ ಮಳಿಗೆಯಾದ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನಲ್ಲಿ ಚಿನ್ನ ಖರೀದಿ ಮಾಡಿದ್ರೂ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಉತ್ತಮ ಆಫರ್ ನೀಡ್ತಿದೆ. ಈ ಆಫರ್ ಕೂಡ ಏಪ್ರಿಲ್ 24ರಿಂದ 30ರವರೆಗೆ ಇರಲಿದ್ದು, ಕನಿಷ್ಠ ₹50,000 ಮೌಲ್ಯದ ಆಭರಣ ಖರೀದಿಗೆ ₹2,500 ಕ್ಯಾಶ್‌ಬ್ಯಾಕ್ ಪಡೆಯಬಹುದು. ಗ್ರಾಹಕರಿಗೆ ಆಫ್‌ಲೈನ್ ಮತ್ತು ಆನ್‌ಲೈನ್ ಎರಡೂ ಮಾರ್ಗಗಳಲ್ಲಿ ಲಾಭ ಪಡೆಯುವ ಅವಕಾಶವಿದೆ. ವೆಬ್‌ಸೈಟ್ ಮತ್ತು ಮೊಬೈಲ್ ಆಪ್‌ನಲ್ಲಿ ನೀವು ಖರೀದಿ ಮಾಡಬಹುದು.
ಜಾಯಾಲುಕ್ಕಾಸ್:
ಜಾಯಾಲುಕ್ಕಾಸ್ ಶಾಖೆಗಳಿಗೆ ಭೇಟಿ ನೀಡಿ ನೀವು, ₹50,000 ಮೌಲ್ಯದ ಚಿನ್ನ ಅಥವಾ ಬೆಳ್ಳಿಯನ್ನು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ, ನಿಮಗೆ ₹2,500 ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಗ್ರಾಹಕರು ತಮ್ಮ ಹಬ್ಬದ ಖರೀದಿಯನ್ನು ಹೆಚ್ಚು ಆರ್ಥಿಕವಾಗಿ ಮಾಡಿಕೊಳ್ಳಬಹುದು. ಈ ಆಫರ್ ಏಪ್ರಿಲ್ 24ರಿಂದ ಶುರುವಾಗಿದ್ದು, ಏಪ್ರಿಲ್ 30ರವರೆಗೆ ಮಾತ್ರ ಇರಲಿದೆ.
ತ್ರಿಭೋವಂದಸ್ ಭೀಮ್‌ಜಿ ಜವೇರಿ:
TBZ..ಅಂದರೆ ತ್ರಿಭೋವಂದಸ್ ಭೀಮ್‌ಜಿ ಜವೇರಿ ಮಳಿಗೆಯಲ್ಲೂ ಏಪ್ರಿಲ್ 24ರಿಂದ ಒಳ್ಳೆಯ ಆಫರ್ ಶುರುವಾಗದೆ. ಇದು ಕೂಡ ನಾಳೆಗೆ ಮುಕ್ತಾಯವಾಗಲಿದ್ದು, ಇಲ್ಲಿ ನೀವು ₹50,000 ರಿಂದ ₹99,999.99 ಮೌಲ್ಯದ್ದು ಖರೀದಿ ಮಾಡಿದ್ರೆ, ನಿಮಗೆ ₹2,500 ಕ್ಯಾಶ್‌ಬ್ಯಾಕ್ ಸಿಗುತ್ತದೆ. ಇನ್ನು ₹1 ಲಕ್ಷ ಮತ್ತು ಹೆಚ್ಚು ಖರೀದಿಗೆ ₹5,000 ಕ್ಯಾಶ್‌ಬ್ಯಾಕ್ ದೊರೆಯುತ್ತದೆ.
ರಿಲಯನ್ಸ್ ಜ್ಯುವೆಲ್ಸ್:
ರಿಲಯನ್ಸ್ ಜ್ಯುವೆಲರಿ ಮಳಿಗೆಗಳ ವೆಬ್‌ಸೈಟ್ ಮತ್ತು ಅಪ್ಲಿಕೇಷನ್‌ನಲ್ಲಿ, ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಕನಿಷ್ಠ ₹25,000 ಮೌಲ್ಯದ ಖರೀದಿ ಮಾಡಿದರೆ ನಿಮಗೆ 5% ಕ್ಯಾಶ್‌ಬ್ಯಾಕ್ ಸಿಗುತ್ತದೆ. ಗರಿಷ್ಠ ಅಂದರೆ ₹2,500 ಸಿಗುತ್ತದೆ. ಈ ಆಫರ್ ಕೂಡ ನಾಳೆ ಮುಕ್ತಾಯವಾಗಲಿದೆ.
ಪಿಎನ್‌ಜಿ ಜ್ಯುವೆಲ್ಲರ್ಸ್:
ಪಿಎನ್‌ಜಿ ಜ್ಯುವೆಲ್ಲರ್ಸ್ ಮಳಿಗೆಗಳಲ್ಲಿ ಏಪ್ರಿಲ್ 25ರಿಂದ 30ರವರೆಗೆ ಉತ್ತಮ ಆಫರ್ ಇಟ್ಟಿದ್ದಾರೆ. ಇಲ್ಲಿ ವಿವಿಧ ಖರೀದಿ ಮೌಲ್ಯದ ಆಧಾರದ ಮೇಲೆ ಕ್ಯಾಶ್‌ಬ್ಯಾಕ್ ಸೌಲಭ್ಯ ನೀಡಲಾಗಿದೆ. ಅಂದರೆ ₹40,000-₹99,999 ಖರೀದಿಗೆ 2.5% ಕ್ಯಾಶ್‌ಬ್ಯಾಕ್, ₹1 ಲಕ್ಷ-₹1.99 ಲಕ್ಷ ಖರೀದಿಗೆ ₹3,000 ಕ್ಯಾಶ್‌ಬ್ಯಾಕ್, ₹2 ಲಕ್ಷ-₹2.99 ಲಕ್ಷ ಖರೀದಿಗೆ ₹4,000 ಕ್ಯಾಶ್‌ಬ್ಯಾಕ್ ಹಾಗೂ ₹3 ಲಕ್ಷ ಮತ್ತು ಹೆಚ್ಚು ಖರೀದಿಗೆ ₹5,000 ಕ್ಯಾಶ್‌ಬ್ಯಾಕ್ ಲಭ್ಯವಿದೆ. ಗರಿಷ್ಠ ಕ್ಯಾಶ್‌ಬ್ಯಾಕ್ ₹5,000 ಪ್ರತಿ ಕಾರ್ಡ್‌ಗೆ ಸೀಮಿತವಾಗಿದೆ.
ಕ್ಯಾರೆಟ್ಲೇನ್:
ಕ್ಯಾರೆಟ್ಲೇನ್ ಅಂಗಡಿಗಳು ಮತ್ತು ಅವರ ಆಧಿಕೃತ ವೆಬ್‌ಸೈಟ್ ಅಥವಾ ಆಪ್‌ನಲ್ಲಿ ಏಪ್ರಿಲ್ 24ರಿಂದ 30ರವರೆಗೆ, ₹40,000 ಅಥವಾ ಹೆಚ್ಚು ಮೌಲ್ಯದ ಖರೀದಿಗೆ ₹2,000 ರ ಫ್ಲಾಟ್ ಇನ್ಸ್ಟೆಂಟ್ ರಿಯಾಯಿತಿ ದೊರೆಯುತ್ತದೆ.
ಮಿಯಾ ಬೈ ತನಿಷ್ಕ್:
ಮಿಯಾ ಶಾಖೆಗಳು, ವೆಬ್‌ಸೈಟ್ ಮತ್ತು ಆಪ್‌ನಲ್ಲಿ ಕೂಡ ಏಪ್ರಿಲ್ 24ರಿಂದ 30ರವರೆಗೆ ₹40,000 ಮೌಲ್ಯದ ಖರೀದಿಗೆ ₹2,000 ರ ತಕ್ಷಣದ ರಿಯಾಯಿತಿ ನೀಡಲಾಗುತ್ತದೆ. ಹಬ್ಬದ ವಿಶೇಷ ಆಭರಣ ಖರೀದಿಗೆ ಇದು ಉತ್ತಮ ಅವಕಾಶವಾಗಿದೆ.
ಸೆನ್ಕೊ ಗೋಲ್ಡ್ & ಡೈಮಂಡ್ಸ್:
ಸೆನ್ಕೊ ಅಂಗಡಿಗಳಲ್ಲಿ ಏಪ್ರಿಲ್ 26ರಿಂದ 30ರವರೆಗೆ ನಡೆಯುವ ವಿಶೇಷ ಆಫರ್‌ಗಳಂತೆ, ₹50,000-₹99,999 ಖರೀದಿಗೆ ₹1,000 ರಿಯಾಯಿತಿ, ₹1 ಲಕ್ಷ-₹1.99 ಲಕ್ಷ ಖರೀದಿಗೆ ₹2,000 ರಿಯಾಯಿತಿ, ₹2 ಲಕ್ಷ-₹2.99 ಲಕ್ಷ ಖರೀದಿಗೆ ₹3,000 ರಿಯಾಯಿತಿ, ₹3 ಲಕ್ಷ-₹3.99 ಲಕ್ಷ ಖರೀದಿಗೆ ₹4,000 ರಿಯಾಯಿತಿ ಮತ್ತು ₹4 ಲಕ್ಷ ಮತ್ತು ಹೆಚ್ಚು ಖರೀದಿಗೆ ₹5,000 ರಿಯಾಯಿತಿ ಲಭ್ಯವಿದೆ.
ಈ ಕೊಡುಗೆಗಳು ಕಾರ್ಪೊರೇಟ್ ಕಾರ್ಡ್‌ಗಳು, ಪೇಟಿಎಂ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮತ್ತು ಕ್ಯಾಶ್‌ಬ್ಯಾಕ್ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳಿಗೆ ಅನ್ವಯವಾಗುವುದಿಲ್ಲ. ಆಫ್‌ಲೈನ್ ಮತ್ತು ಆನ್‌ಲೈನ್ ಚಾನೆಲ್‌ಗಳಲ್ಲಿ ಖರೀದಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ಪ್ರತಿ ಕಾರ್ಡ್ ಖಾತೆಗೆ ಪ್ರತಿ ಆಫರ್ ಒಂದು ವಹಿವಾಟಿಗೆ ಮಾತ್ರ ಮಾನ್ಯವಾಗಿದೆ.


Click it and Unblock the Notifications