ಹಣಕಾಸಿನ ತುರ್ತು ಅಗತ್ಯವಿರುವವರು, ಉದ್ಯೋಗಸ್ಥರು, ಉದ್ಯಮಿಗಳು ಅಗತ್ಯ ಬೇಕಾದಾಗ ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಕಾರ್ಡ್ ಮೂಲಕ ನೀಡುವ ಒಂದಿಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡುತ್ತದೆ. ಇದೀಗ ಎಸ್‌ಬಿಐ ಕಾರ್ಡ್ ಬಳಕೆದಾರರೇ ಇಲ್ಲಿ ಗಮನಿಸಿ, ಏಪ್ರಿಲ್ 1 ರಿಂದ ಬದಲಾಗಲಿದೆ ನಿಯಮ.

ಹೌದು, ಎಸ್‌ಬಿಐ ಕಾರ್ಡ್ ಬಳಕೆದಾರರು ಈ ಸುದ್ದಿಯನ್ನು ಓದಲೇಬೇಕು. ಏಕೆಂದರೆ ಎಸ್‌ಬಿಐ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಸ್ಟೇಟ್‌ಮೆಂಟ್ ಕ್ರೆಡಿಟ್‌ಗೆ ಬದಲಾಯಿಸಲು ಮಹತ್ವದ ನಿಯಮವನ್ನು ಜಾರಿಗೆ ತಂದಿದೆ.
ಎಸ್‌ಬಿಐ ಗ್ರಾಹಕರೇ ಇಲ್ಲಿ ಗಮನಿಸಿ!
ಏಪ್ರಿಲ್ 1, 2026 ರಿಂದ ಎಸ್‌ಬಿಐ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ರಿಡಿಂಪ್ಷನ್ ನಿಯಮ ಮತ್ತಷ್ಟು ಕಠಿಣವಾಗಲಿದೆ. ರಿವಾರ್ಡ್ ಪಾಯಿಂಟ್‌ಗಳನ್ನು ಸ್ಟೇಟ್‌ಮೆಂಟ್ ಕ್ರೆಡಿಟ್‌ಗೆ ಬದಲಾಯಿಸುವ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ತರಲಾಗಿದೆ. ಈ ಬದಲಾವಣೆಗಳನ್ನು ಈಗಾಗಲೇ ಎಸ್‌ಬಿಐ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.
ಏನಿದು ಹೊಸ ನಿಯಮ?
ತಿಂಗಳ ರಿಡೀಂಪ್ಷನ್ ಮಿತಿ:
ಏಪ್ರಿಲ್ 1, 2026 ರಿಂದ, ಸ್ಟೇಟ್‌ಮೆಂಟ್ ಕ್ರೆಡಿಟ್‌ಗಾಗಿ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಂ ಮಾಡುವುದಕ್ಕಾಗಿ ಪ್ರತೀ ತಿಂಗಳಿಗೆ ಗರಿಷ್ಠ 60,000 ಪಾಯಿಂಟ್‌ಗಳ ಮಿತಿ ಮಾತ್ರ ವಿಧಿಸಲಾಗುತ್ತದೆ. ಇದು ಪ್ರತೀ ಕಾರ್ಡ್‌ಗಳಿಗೂ ಅನ್ವಯವಾಗಲಿದೆ. ಈ ಹಿಂದಿನ ನಿಯಮಗಳಲ್ಲಿ ಯಾವುದೇ ಮಿತಿ ನೀಡಲಾಗಿರಲಿಲ್ಲ. ಆದ್ರೆ ಇದೀಗ ನಿಯಮ ಜಾರಿಗೆ ತಂದಿದ್ದು, ಇನ್ಮೇಲೆ ಹೆಚ್ಚು ಪಾಯಿಂಟ್‌ಗಳನ್ನು ಹೊಂದಿರುವ ಗ್ರಾಹಕರು, ಮಿತಿಯೊಳಗೆ ರಿಡೀಂಪ್ಷನ್ ಮಾಡಿಕೊಳ್ಳಬೇಕು.
ರಿಡೀಂಪ್ಷನ್ ಮಲ್ಟಿಪಲ್‌ಗಳು:
ರಿವಾರ್ಡ್ ಪಾಯಿಂಟ್‌ಗಳನ್ನು ಕ್ರೆಡಿಟ್ ಸ್ಟೇಟ್‌ಮೆಂಟ್‌ಗೆ ಅಪ್ಡೇಟ್ ಮಾಡುವಾಗ ಕನಿಷ್ಠ 4000 ಮಲ್ಟಿಪಲ್‌ಗಳಲ್ಲಿ ಮಾತ್ರ ಮಾಡಬೇಕು. ಅಂದರೆ 4,000, 8000, 12000, ಈ ರೀತಿಯಲ್ಲಿ ಮಾಡಲು ಮಾತ್ರ ಸಾಧ್ಯ. ಸಣ್ಣ ಮೊತ್ತ ಅಥವಾ ಬೇರೆ ರೀತಿಯಲ್ಲಿ ರಿಡಿಂಪ್ಷನ್ ಮಾಡಲು ಸಾಧ್ಯವಿಲ್ಲ.
ಎಸ್‌ಬಿಐ ಜಾರಿಗೆ ತಂದ ಈ ಹೊಸ ನಿಯಮಗಳು ಮುಖ್ಯವಾಗಿ ಸ್ಟೇಟ್‌ಮೆಂಟ್ ಕ್ರೆಡಿಟ್‌ಗೆ ಮಾತ್ರ ಸೀಮಿತವಾಗಿದೆ. ಅಂದರೆ ಇತರ ರಿಡೀಂಪ್ಷನ್ ಆಯ್ಕೆಗಳಾದ ಗಿಫ್ಟ್ ವೋಚರ್, ಏರ್‌ಮೈಲ್ಸ್ ಅಥವಾ ಇತರ ಆಫರ್‌ಗಳಿಗೆ ಈ ಮಿತಿಗಳು ಅನ್ವಯವಾಗದಿರಬಹುದು ಅಥವಾ ಬೇರೆ ನಿಯಮಗಳು ಬರಬಹುದು ಎನ್ನಲಾಗಿದೆ.
ಗ್ರಾಹಕರಿಗೆ ಸಲಹೆ:
ಈ ನಿಯಮ ಏಪ್ರಿಲ್‌ನಿಂದ ಜಾರಿಗೆ ಬರಲಿದ್ದು, ಆದ್ದರಿಂದ ಅದಕ್ಕೂ ಮೊದಲೇ ಹೆಚ್ಚಿನ ಪಾಯಿಂಟ್‌ಗಳನ್ನು ಹೊಂದಿರುವ ಗ್ರಾಹಕರು ಸಾಧ್ಯವಾದಷ್ಟು ರಿಡೀಂ ಮಾಡಿಕೊಳ್ಳುವುದು ಉತ್ತಮ. ಸಂಪೂರ್ಣ ವಿವರಗಳಿಗಾಗಿ ಮತ್ತು ಟರ್ಮ್ಸ್ ಆಂಡ್ ಕಂಡೀಷನ್ಸ್‌ಗಾಗಿ sbicard.com ವೆಬ್‌ಸೈಟ್‌ನಲ್ಲಿ ಲಾಗಿನ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಬಹುದು. ಅಲ್ಲದೇ ಕಸ್ಟಮರ್‌ಕೇರ್‌ಗೆ ಕರೆ ಮಾಡಿ ವಿಚಾರಿಸಬಹುದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications