For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಚಿನ್ನದ ಸಾಲ: ಬಡ್ಡಿಯೆಷ್ಟು?, ಇಲ್ಲಿದೆ ವಿವರ

|

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು (ಎಸ್‌ಬಿಐ) ಆಕರ್ಷಣೀಯ ಬಡ್ಡಿ ದರದ ಮೂಲಕ ಚಿನ್ನದ ಸಾಲವನ್ನು ನೀಡಲಿದೆ. ಹಾಗೆಯೇ ಸಾಲಗಾರರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಸಾಲವನ್ನು ಮರುಪಾವತಿ ಮಾಡುವ ಅವಕಾಶವನ್ನು ಪಡೆಯಲಿದ್ದಾರೆ.

 

ಈ ಬಗ್ಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ಟ್ವೀಟ್‌ ಮಾಡಿದೆ. "ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಯಸಿದ ರೀತಿಯಲ್ಲಿ ಮರುಪಾವತಿಯನ್ನು ಮಾಡುವ ಆಯ್ಕೆಯನ್ನು ಪಡೆಯಬಹುದು. ನೀವು ಎಸ್‌ಬಿಐ ಚಿನ್ನದ ಸಾಲಗಳನ್ನು ಪಡೆಯಿರಿ ಹಾಗೂ ಹಬ್ಬದ ಅತ್ಯುತ್ತಮ ಕೊಡುಗೆಗಳ ಜೊತೆ ಎಸ್‌ಬಿಐ ಚಿನ್ನದ ಸಾಲವನ್ನು ಪಡೆಯಿರಿ. ಈಗಲೇ ಅರ್ಜಿ ಸಲ್ಲಿಕೆ ಮಾಡಿ," ಎಂದು ಎಸ್‌ಬಿಐ ಟ್ವೀಟ್‌ನಲ್ಲಿ ಗ್ರಾಹಕರಲ್ಲಿ ಮನವಿ ಮಾಡಿದೆ.

ಯೋನೊ ಬಳಸಿ ಎಸ್‌ಬಿಐ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?, ಇಲ್ಲಿದೆ ಮಾಹಿತಿ

ಎಸ್‌ಬಿಐ ಈಗ ಚಿನ್ನದ ಸಾಲಕ್ಕೆ ಶೇಕಡ 7.50 ಬಡ್ಡಿ ದರವನ್ನು ವಿಧಿಸುತ್ತದೆ. "ನಿಮಗೆ ಚಿನ್ನದ ಸಾಲ ಬೇಕೇ?. ಚಿನ್ನದ ಸಾಲದ ಮೇಲಿನ ಬಡ್ಡಿದರವು ಶೇಕಡ 7.50 ಕ್ಕೆ ಇಳಿಕೆ ಆಗಿದೆ," ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ಟ್ವೀಟ್‌ ಮಾಡಿದೆ. ಎಸ್‌ಬಿಐನ ಚಿನ್ನದ ಸಾಲವು ಈಗ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮರು ಪಾವತಿ ಮಾಡಬಹುದಾದ ಆಯ್ಕೆಗಳು ಇದೆ. ಎಸ್‌ಬಿಐ ಚಿನ್ನದ ಸಾಲದಲ್ಲಿ ಬುಲೆಟ್ ಮರುಪಾವತಿ, ಓವರ್‌ಡ್ರಾಫ್ಟ್ ಸೌಲಭ್ಯ ಮತ್ತು ಇಎಂಐ ಸೌಲಭ್ಯಗಳು ಕೂಡಾ ಇದೆ.

 ಎಸ್‌ಬಿಐ ಚಿನ್ನದ ಸಾಲ: ಬಡ್ಡಿಯೆಷ್ಟು?, ಇಲ್ಲಿದೆ ವಿವರ

"ಚಿನ್ನದ ಸಾಲಕ್ಕೆ ಕಡಿಮೆ ಬಡ್ಡಿ ದರ ವಿಧಿಸಲಾಗುತ್ತದೆ. ಇದನ್ನು ಹೊರತುಪಡಿಸಿ ನಾವು ದೈನಂದಿನ ಕಡಿತದ ಮೇಲೆ ಬಡ್ಡಿಯನ್ನು ವಿಧಿಸುತ್ತೇವೆ," ಎಂದು ಕೂಡ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ಉಲ್ಲೇಖ ಮಾಡಿದೆ. "ಕನಿಷ್ಠ ದಾಖಲೆ ಸಲ್ಲಿಕೆ ಅವಕಾಶವಿದೆ. ನೀವು ಯಾವಾಗಲೂ ಬಯಸುವಂತೆ ಈಗ ಕನಿಷ್ಠ ದಾಖಲೆಯನ್ನು ಸಲ್ಲಿಕೆ ಮಾಡಲು ಈ ಎಸ್‌ಬಿಐ ಸಾಲವು ಅವಕಾಶ ನೀಡುತ್ತದೆ. ನೀವು ಪೂರ್ವ ಪಾವತಿ ಮಾಡಿದರೆ ದಂಡಗಳು ಇಲ್ಲ. ನಿಮ್ಮ ಬಡ್ಡಿ ಹೊರೆಯನ್ನು ಕಡಿಮೆ ಮಾಡಿ ಹಾಗೂ ಸಾಲವನ್ನು ಪೂರ್ವ ಪಾವತಿ ಮಾಡುವ ಮೂಲಕ ನೀವು ಅಧಿಕ ಹಣವನ್ನು ಬಳಸಿಕೊಳ್ಳಿ," ಎಂದು ಎಸ್‌ಬಿಐ ತಿಳಿಸಿದೆ.

 

ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ನೀವು ಎಸ್‌ಬಿಐ ಚಿನ್ನದ ಸಾಲಕ್ಕಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ವೆ‌ನ್‌ಸೈಟ್‌ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಇಡೀ ಪ್ರಕ್ರಿಯೆಯು ಕೇವಲ ಮೂರು ಹಂತಗಳನ್ನು ಹೊಂದಿದೆ. ಅರ್ಹತೆ ಪಡೆಯುವುದು, ಸಾಲದ ಕೊಡುಗೆ ಹಾಗೂ ಸಂಪೂರ್ಣ ಅರ್ಜಿಯು ಈ ಮೂರು ಹಂತಗಳು ಆಗಿದೆ. ಇನ್ನು ನೀವು ಎಸ್‌ಬಿಐನ ಯೋನೊ ಆಪ್‌ ಮೂಲಕವು ಚಿನ್ನದ ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಎಸ್‌ಬಿಐನಲ್ಲಿ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಲು, ನೀವು ಕೆಲವೊಂದು ಅರ್ಹತೆಯನ್ನು ಹೊಂದಿರಬೇಕು. ಕನಿಷ್ಠ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ನಿವಾಸಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಯೋನೊ ಆಪ್ ಬಳಸಿ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಎಸ್‌ಬಿಐ ಶೇ. 0.75 ಬಡ್ಡಿ ದರದಲ್ಲಿ ರಿಯಾಯಿತಿ ನೀಡುತ್ತದೆ. ಮೊದಲು ನಿಮ್ಮ ಮೊಬೈಲ್ ಫೋನಿನಲ್ಲಿ ಯೋನೊ ಆಪ್ ಅನ್ನು ಡೌನ್‌ ಮಾಡಿ, ಅದನ್ನು ತೆರೆಯಿರಿ. ಬಳಿಕ ಅಗತ್ಯವಿರುವ ರುಜುವಾತುಗಳನ್ನು ಬಳಸಿಕೊಂಡು ನಿಮ್ಮ ಖಾತೆಗೆ ಸೈನ್ ಇನ್ ಮಾಡಿ. ಈಗ 'Gold Loan' ಅನ್ನು ಟ್ಯಾಪ್ ಮಾಡಿ ಮತ್ತು ನಂತರ 'Apply Now' ಅನ್ನು ಟ್ಯಾಪ್ ಮಾಡಿ. ಆ ಬಳಿಕ ನಿಮ್ಮ ಚಿನ್ನದ ಆಭರಣಗಳ ಪ್ರಕಾರ, ಪ್ರಮಾಣ, ಕ್ಯಾರೆಟ್ ಮತ್ತು ನಿವ್ವಳ ತೂಕದಂತಹ ಇತರ ಅಗತ್ಯ ವಿವರಗಳನ್ನು ನಮೂದಿಸಿ. ನಂತರ ನಿಮ್ಮ ವೈಯಕ್ತಿಕ ವಿವರಗಳಾದ ನಿವಾಸದ ಪ್ರಕಾರ, ಉದ್ಯೋಗ, ನಿವ್ವಳ ಮಾಸಿಕ ಆದಾಯವನ್ನು ನಮೂದಿಸಿ ಮತ್ತು ನಿಮ್ಮ ಸಾಲದ ಅರ್ಜಿಯನ್ನು ಸಲ್ಲಿಸಿ. ಈಗ ನಿಮ್ಮ ಎಸ್‌ಬಿಐ ಬ್ಯಾಂಕ್ ಶಾಖೆಗೆ ವಾಗ್ದಾನ ಮಾಡಲಿರುವ ನಿಮ್ಮ ಚಿನ್ನದ ವಸ್ತುಗಳು, 2 ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳು ಮತ್ತು ಮೇಲೆ ಚರ್ಚಿಸಲಾಗಿರುವ ಇತರ ಕೆವೈಸಿ ದಾಖಲೆಗಳೊಂದಿಗೆ ಭೇಟಿ ನೀಡಿ. ಎಲ್ಲಾ ದಾಖಲೆಗಳನ್ನು ಲಗತ್ತಿಸುವ ಮೂಲಕ ಸಾಲದ ಅರ್ಜಿಯನ್ನು ಸಲ್ಲಿಸಿದರೆ ನಿಮ್ಮ ಎಲ್ಲಾ ಹಂತಗಳು ಮುಕ್ತಾಯವಾಗುತ್ತದೆ.

English summary

SBI Gold Loan: Check Interest Rate and other Key Details in kannada

SBI Gold Loan: Check Interest Rate, Key Details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X