ಟ್ಯಾಬ್ ಆಧಾರಿತ NRO, NRE ಖಾತೆ ತೆರೆಯುವ ಸೌಲಭ್ಯ ಆರಂಭಿಸಿದ SBI: ಇವು ಹೇಗೆ ಕೆಲಸ ಮಾಡಲಿವೆ ಇಲ್ಲಿ ತಿಳಿಯಿರಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) NRE ಮತ್ತು NRO ಖಾತೆಗಳನ್ನ ಸುಲಭವಾಗಿ ತೆರೆಯಲು ಅನಿವಾಸಿ ಭಾರತೀಯರಿಗೆ TAB ಆಧಾರಿತ ಎಂಡ್-ಟು-ಎಂಡ್ ಡಿಜಿಟಲ್ ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ಆರಂಭ ಮಾಡಿದೆ. ಇನ್ನು ಈ ಮಾಹಿತಿಯನ್ನ ಎಸ್‌ಬಿಐ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

ನೀವು ನಿಮ್ಮ ಉಳಿತಾಯ ಖಾತೆಯನ್ನು NRE ಖಾತೆಯಾಗಿ ಬದಲಾಯಿಸಬಹುದಾ?

ಈ ಟ್ಯಾಬ್ ಆಧಾರಿತ ಬ್ಯಾಂಕಿಂಗ್ ಸೌಲಭ್ಯ ಎಂದರೆ ಸಾಮಾನ್ಯವಾಗಿ ಬ್ಯಾಂಕ್‌ಗೆ ನಾವು ಭೇಟಿ ನೀಡದೆ ಬ್ಯಾಂಕ್ ಖಾತೆಗಳನ್ನು ಹೊಂದುವದಾಗಿದೆ.

SBI: NRO, NREಗಳಿಗೆ ಟ್ಯಾಬ್ ಆಧಾರಿತ ಖಾತೆ ಸೌಲಭ್ಯ!

2023 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) NRO ಮತ್ತು NRIಗಳು ಸುಲಭವಾಗಿ ಖಾತೆಗಳನ್ನ ತೆರಯಲು ಮೊಬೈಲ್ ಅಪ್ಲಿಕೇಶನ್ YONOವನ್ನು ಆರಂಭ ಮಾಡಿತು ಈ ಮೂಲಕ ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ಒಳಗೊಂಡಂತೆ ಎಲ್ಲಾ ಖಾತೆಗಳನ್ನು ಸುಲಭವಾಗಿ ತೆರೆಯಲು ಅನುವು ಮಾಡಿಕೊಟ್ಟಿತ್ತು. ಇದರಿಂದಾಗಿ NRO ಮತ್ತು NRIಗಳಿಗೆ ಸಾಕಷ್ಟು ಉಪಯೋಗಗಳನ್ನ ಮಾಡಿಕೊಟ್ಟಿದೆ.

TAB-ಆಧಾರಿತ ಎಂಡ್-ಟು-ಎಂಡ್ ಡಿಜಿಟಲ್ ಆನ್‌ಬೋರ್ಡಿಂಗ್ ಪ್ರಕ್ರಿಯೆಯ ಪ್ರಯೋಜನಗಳೇನು?

ಈ ಹೊಸ TAB-ಆಧಾರಿತ ಪ್ರಕ್ರಿಯೆಯು ನಮಗೆ ವೇಗವಾಗಿ ಖಾತೆಯನ್ನ ಹೊಂದು ಹಾಯ ಮಾಡುತ್ತದೆ. ಇನ್ನು ಈ ಉಪಕ್ರಮವು ಭೌತಿಕ ದಾಖಲಾತಿಗಳ ಅಗತ್ಯವನ್ನ ನಿವಾರಿಸುತ್ತದೆ, ಹಾಗೆ ಶಾಖೆಗಳಲ್ಲಿ ಮತ್ತು ಗ್ರಾಹಕರ ಭೇಟಿಯ ಸಮಯದಲ್ಲಿ ದಾಖಲೆಗಳನ್ನು ಡಿಜಿಟಲ್ ಮೂಲಕ ದೃಢೀಕರಿಸುವ ಮೂಲಕ ವೇಗವಾಗಿ ಖಾತೆ ತೆರೆಯಲು ನಿಮಗೆ ಸಹಾಯ ಮಾಡಿಕೊಡುತ್ತದೆ. ಅಲ್ಲದೆ ಖಾತೆ ತೆರೆಯುವ ಕಾರ್ಯವನ್ನ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸುಲಭಗೊಳಿಸುತ್ತದೆ.

NRI ಭಾರತದಲ್ಲಿ ಯಾವ ಬ್ಯಾಂಕ್ ಖಾತೆಗಳನ್ನು ತೆರೆಯಬಹುದು?

ಎಸ್‌ಬಿಐ ಹೇಳುವ ಪ್ರಕಾರ, ಒಂದು ಎನ್‌ಆರ್‌ಐ ಭಾರತೀಯ ರೂಪಾಯಿ ಅಥವಾ ವಿದೇಶಿ ಕರೆನ್ಸಿಯಲ್ಲಿ ಖಾತೆಗಳನ್ನು ತೆರೆಯಬಹುದು ಮತ್ತು ಆ ಖಾತೆಯನ್ನ ನಿರ್ವಹಿಸಬಹುದು:

ಭಾರತೀಯ ರೂಪಾಯಿಗಳಲ್ಲಿ ಎನ್‌ಆರ್‌ಇ ಅಥವಾ ಎನ್‌ಆರ್‌ಒ ಚಾಲ್ತಿಯಲ್ಲಿರುವ ಖಾತೆ ಅಥವಾ ಸ್ಥಿರ ಠೇವಣಿಯಾಗಿ ಖಾತೆ ಹೊಂದಬಹುದು.

ಹಾಗೆ ಕೇವಲ ಸ್ಥಿರ ಠೇವಣಿಯಾಗಿ ಎಫ್‌ಸಿಎನ್‌ಆರ್ (ಬಿ) ಖಾತೆಯಲ್ಲಿ USD, EURO, GBP, CAD, JPY ಮತ್ತು AUD ಹೊಂದಬಹುದು.

NRO ಖಾತೆಯಲ್ಲಿ ಯಾವ ರೀತಿಯ ಹಣವನ್ನು ಠೇವಣಿ ಮಾಡಬಹುದು?

ಈ ರೀತಿಯ ಹಣವನ್ನು NRO ಖಾತೆಯಲ್ಲಿ ಠೇವಣಿ ಮಾಡಬಹುದು:

-ಅನಿವಾಸಿ ಭಾರತೀಯ / NRE / NRO / FCNR (B) ಖಾತೆಯಿಂದ ವರ್ಗಾವಣೆ

-ಬ್ಯಾಂಕಿಂಗ್ ಚಾನೆಲ್ ಮೂಲಕ ವಿದೇಶದಿಂದ ಹೊಸದಾಗಿ ರವಾನೆ

-ವಿದೇಶಿ ಖಾತೆಯಲ್ಲಿ ವೈಯಕ್ತಿಕ ಚೆಕ್‌ಗಳನ್ನು ಡ್ರಾ ಮಾಡಲಾಗಿದೆ

-ಭಾರತಕ್ಕೆ ಭೇಟಿ ನೀಡುವಾಗ NRI / PIO / OCI ಮೂಲಕ ಟೆಂಡರ್ ಮಾಡಿದ ವಿದೇಶಿ ಕರೆನ್ಸಿ ನೋಟುಗಳು / ಪ್ರಯಾಣಿಕರ ಚೆಕ್‌ಗಳ ಆದಾಯ. ಕರೆನ್ಸಿಯಲ್ಲಿ USD 5000 ಅಥವಾ ಸಮಾನ ಇದ್ದರೆ ಅಥವಾ ಟ್ರಾವೆಲರ್ಸ್ ಚೆಕ್‌ಗಳಲ್ಲಿ USD 10,000 ಗಿಂತ ಹೆಚ್ಚಿನ ಮೊತ್ತವು ಕರೆನ್ಸಿ ಡಿಕ್ಲರೇಶನ್ ಫಾರ್ಮ್ ಜೊತೆಗೆ ಇರಬೇಕು

-ವಾಪಸಾತಿಗೆ ಒಳಪಡದ ಆಧಾರದ ಮೇಲೆ ಭಾರತದಲ್ಲಿ ಮಾಡಿದ ಹೂಡಿಕೆಗಳ ಬಡ್ಡಿ, ಡಿವಿಡೆಂಡ್ ಮತ್ತು ಮೆಚುರಿಟಿ ಆದಾಯ ಇತ್ಯಾದಿ ಇರಬೇಕು.

ಓರ್ವ NRI, YONO ಆಪ್ ಮೂಲಕ ಖಾತೆಯನ್ನು ತೆರೆಯುವುದು ಹೇಗೆ?

1. YONO ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

2. ಉಳಿತಾಯ ಖಾತೆ ತೆರೆಯಿರಿ ಕ್ಲಿಕ್ ಮಾಡಿ ನಂತರ NRE/NRO ಖಾತೆಯನ್ನು ತೆರೆಯಿರಿ

3. ದೇಶದ ಹೆಸರು, ISD ಕೋಡ್‌ನೊಂದಿಗೆ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ನಮೂದಿಸಿ ಮತ್ತು submit ಮೇಲೆ ಕ್ಲಿಕ್ ಮಾಡಿ. ನಂತರ ಖಾತೆ ತೆರೆಯುವಿಕೆಗೆ ಹೋಗಿ OTP ಪರಿಶೀಲನೆ ಮಾಡಿ. ಮೊಬೈಲ್ OTP, ಇಮೇಲ್ OTP ನಮೂದಿಸಿ ಮತ್ತು submit ಮೇಲೆ ಕ್ಲಿಕ್ ಮಾಡಿ.

4. ಎನ್‌ಆರ್‌ಐ ಸಮ್ಮತಿಯ ಅಡಿಯಲ್ಲಿ - ನೀವಿರುವ ದೇಶವನ್ನು ದೃಢೀಕರಿಸಿ, ಡೇಟಾ ಹಂಚಿಕೆ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ. ಅದರ ನಂತರ ಆಯ್ಕೆಮಾಡಿ
-ಖಾತೆ - NRE/NRO,
-ಪ್ರಕಾರ - ಉಳಿತಾಯ/ಪ್ರಸ್ತುತ,
-ಸ್ಥಿತಿ -NRI/ PIO ಮತ್ತು ಮುಂದೆ ಕ್ಲಿಕ್ ಮಾಡಿ.
-ಅಲ್ಲಿ ಬುವ ಮಾಹಿತಿಯನ್ನ ಓದಿ ಮತ್ತು ಮುಂದೆ ಕ್ಲಿಕ್ ಮಾಡಿ.
-ಆಯ್ಕೆಗಳ ಮೂಲಕ ಖಾತೆ ತೆರೆಯಿರಿ - ಭಾರತದಲ್ಲಿ ಶಾಖೆ ಭೇಟಿ / ಭಾರತದಲ್ಲಿ GNC ಗೆ ಕೊರಿಯರ್ ದಾಖಲೆಗಳನ್ನು ಆಯ್ಕೆಮಾಡಿ.

5. ವೈಯಕ್ತಿಕ ವಿವರಗಳು, ಹೆಚ್ಚುವರಿ ವೈಯಕ್ತಿಕ ವಿವರಗಳು, ಪಾಸ್‌ಪೋರ್ಟ್ ಮತ್ತು ವೀಸಾ ವಿವರಗಳು, ಪ್ರಸ್ತುತ ಮತ್ತು ಶಾಶ್ವತ ವಿಳಾಸದ ವಿವರಗಳನ್ನು ಹಾಕಿ.

6.ಹೆಚ್ಚುವರಿ ವಿವರಗಳು, ಸಂಪರ್ಕ ವಿವರಗಳು, ಶೈಕ್ಷಣಿಕ ಅರ್ಹತೆ, ಧರ್ಮ, ವರ್ಗ, ಉದ್ಯೋಗ, ನಾಮನಿರ್ದೇಶನ ವಿವರಗಳು, ಸೇವೆಗಳನ್ನ ಆಯ್ಕೆಮಾಡಿ. ಉದಾಹಣೆಗೆ SMS ಎಚ್ಚರಿಕೆಗಳು, ಚೆಕ್ ಪುಸ್ತಕ, ಡೆಬಿಟ್ ಕಾರ್ಡ್, ತೆರಿಗೆ ವಿವರಗಳು ಮತ್ತು ವಿಳಾಸವನ್ನ ಆಯ್ಕೆ ಮಾಡಿ.

7. ವಿವರಗಳನ್ನು ಪರಿಶೀಲಿಸಿ, ನಿಯಮಗಳು ಮತ್ತು ಷರತ್ತುಗಳ ಅಂಗೀಕಾರಕ್ಕಾಗಿ OTP ಅನ್ನು ನಮೂದಿಸಿ. ಒಮ್ಮೆ ನೀವು ಈ ಎಲ್ಲಾ ಹಂತಗಳನ್ನು ಅನುಸರಿಸಿದರೆ, ನಿಮ್ಮ NRI ಅರ್ಜಿಯು ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+