ಸ್ಟಾಕ್ ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮುಕ್ತಾಯ ಹಾಗೂ ಸೆಟಲ್ಮೆಂಟ್ ನಿಯಮಗಳನ್ನು ಬಂಡವಾಳ ಮಾರುಕಟ್ಟೆ ನಿಯಂತ್ರಕ 'ಸೆಬಿ' (SEBI) ಪೂರ್ಣಪ್ರಮಾಣದಲ್ಲಿ ಬದಲಾಯಿಸಿದೆ. ಈ ನೂತನ ನಿಯಮಗಳು 2026ರ ಡಿಸೆಂಬರ್ 7ರಿಂದ ಜಾರಿಗೆ ಬರಲಿವೆ. ಹೊಸ ನಿಯಮದಂತೆ ಕ್ಲೋಸಿಂಗ್ ಆಕ್ಷನ್ ಸೆಷನ್ (CAS) ಪ್ರತಿದಿನ ಮಧ್ಯಾಹ್ನ 3:30ರಿಂದ 3:40ರವರೆಗೆ ನಡೆಯಲಿದೆ. ಮಾರುಕಟ್ಟೆಯ ಅಂತಿಮ ಕ್ಲೋಸಿಂಗ್ ಸಮಯವನ್ನು ಸಿಸ್ಟಂ ಆಧಾರಿತವಾಗಿ 3:38ರಿಂದ 3:40ರ ನಡುವೆ ರ್ಯಾಂಡಮ್ ಆಗಿ ನಿರ್ಧರಿಸಲಾಗುತ್ತದೆ. ಇನ್ನು ಎಕ್ಸ್ಪೈರಿ ದಿನದಂದು ಎಕ್ಸ್ಪೈರ್ ಆಗುವ ಇಂಡೆಕ್ಸ್ ಡೆರಿವೇಟಿವ್ಸ್ಗಳ ಟ್ರೇಡಿಂಗ್ ಮಧ್ಯಾಹ್ನ 3:30ಕ್ಕೆ ಮುಕ್ತಾಯಗೊಳ್ಳಲಿದ್ದು, ಉಳಿದ ಉತ್ಪನ್ನಗಳ ವಹಿವಾಟು 3:45ರವರೆಗೆ ಮುಂದುವರಿಯಲಿದೆ. ಅಂತಿಮ ಸೆಟಲ್ಮೆಂಟ್ ಅನ್ನು ಮತ್ತೆ ಕೊನೆಯ 30 ನಿಮಿಷಗಳ VWAP ದರದ ಆಧಾರದಲ್ಲೇ ಕೈಗೊಳ್ಳಲಾಗುತ್ತದೆ.
ಕ್ಲೋಸಿಂಗ್ ಆಕ್ಷನ್ ಸೆಷನ್ಗೆ (CAS) ಕೊನೆಯ 15 ನಿಮಿಷಗಳ ಕ್ಯಾಶ್ VWAP ದರವನ್ನು ರೆಫರೆನ್ಸ್ ಬೆಲೆಯಾಗಿ ಪರಿಗಣಿಸಲಾಗುತ್ತದೆ. ಒಂದು ವೇಳೆ ಇದು ಲಭ್ಯವಿಲ್ಲದಿದ್ದರೆ, ಎಲ್ಟಿಪಿ (LTP) ಅಥವಾ ಹಿಂದಿನ ದಿನದ ಕ್ಲೋಸಿಂಗ್ ದರವೇ ಆಧಾರವಾಗಲಿದೆ. ಪೋಸ್ಟ್-ಕ್ಲೋಸ್ ಕ್ಯಾಶ್ ಸೆಷನ್ ಮಧ್ಯಾಹ್ನ 3:50ರಿಂದ 4:00ರವರೆಗೆ ಯಥಾರೀತಿ ಮುಂದುವರಿಯಲಿದೆ. ಷೇರು ವಿನಿಮಯ ಕೇಂದ್ರಗಳು ಈ ಕುರಿತ ಪರಿಷ್ಕೃತ ಕಾರ್ಯವಿಧಾನಗಳನ್ನು 7 ದಿನಗಳ ಒಳಗೆ ಪ್ರಕಟಿಸಬೇಕಿದೆ. ಆರ್ಡರ್ ಕ್ಯಾರಿಓವರ್ ಹಾಗೂ ಐಸ್ಬರ್ಗ್ ಟ್ರಾನ್ಸಿಷನ್ಗೆ ಸಂಬಂಧಿಸಿದ ಬದಲಾವಣೆಗಳು 2027ರ ಫೆಬ್ರವರಿ 8ರಿಂದ ಜಾರಿಗೆ ಬರಲಿವೆ.

ಕ್ಲೋಸಿಂಗ್ ಆಕ್ಷನ್ ಸೆಷನ್ ಸಮಯದ ವಿವರ
ಈ ನೂತನ ವೇಳಾಪಟ್ಟಿಯು ಬೆಲೆ ನಿರ್ಧಾರ (Price Discovery) ಹಾಗೂ ಎಕ್ಸ್ಪೈರಿ ಸೆಟಲ್ಮೆಂಟ್ ಪ್ರಕ್ರಿಯೆಯನ್ನು ಪ್ರತ್ಯೇಕಿಸಲಿದ್ದು, ಆಕ್ಷನ್ ಅವಧಿಯಲ್ಲಿ ಉಂಟಾಗುವ ದಿಢೀರ್ ಏರಿಳಿತಗಳನ್ನು ತಡೆಯಲಿದೆ. ಎಕ್ಸ್ಪೈರ್ ಆಗುವ ಇಂಡೆಕ್ಸ್ ಕಾಂಟ್ರಾಕ್ಟ್ಗಳ ವಹಿವಾಟು 3:30ಕ್ಕೆ ಕೊನೆಗೊಳ್ಳುವುದರಿಂದ ಆಕ್ಷನ್ ಸೆಷನ್ ಜೊತೆಗಿನ ಸಂಘರ್ಷ ತಪ್ಪಲಿದೆ. ಸ್ಟಾಕ್ ಡೆರಿವೇಟಿವ್ಸ್ ಹಾಗೂ ಎಕ್ಸ್ಪೈರ್ ಆಗದ ಇಂಡೆಕ್ಸ್ ವಹಿವಾಟುಗಳು ಮಧ್ಯಾಹ್ನ 3:45ರವರೆಗೆ ನಡೆಯಲಿವೆ. ಇದರಿಂದ ಹೆಡ್ಜರ್ಗಳಿಗೆ CAS ದರದ ಬೆನ್ನತ್ತದೆ ತಮ್ಮ ಪೊಸಿಷನ್ಗಳನ್ನು ಹಿಂಪಡೆಯಲು 15 ನಿಮಿಷಗಳ ಹೆಚ್ಚುವರಿ ಕಾಲಾವಕಾಶ ಸಿಗಲಿದೆ. ಈ ಮೊದಲು ಡೆರಿವೇಟಿವ್ಸ್ ವಹಿವಾಟು 3:40ಕ್ಕೆ ಮುಕ್ತಾಯಗೊಳ್ಳುತ್ತಿತ್ತು ಮತ್ತು CAS ಸಮಯ 3:15ರಿಂದ 3:35ರವರೆಗೆ ಇರುತ್ತಿತ್ತು.
| ವಿವರಗಳು | ಹಿಂದಿನ ನಿಯಮ (2026ರ ಡಿಸೆಂಬರ್ 6ರವರೆಗೆ) | ಹೊಸ ನಿಯಮ (2026ರ ಡಿಸೆಂಬರ್ 7ರಿಂದ) |
|---|---|---|
| ಕ್ಲೋಸಿಂಗ್ ಆಕ್ಷನ್ ಸೆಷನ್ ಸಮಯ | ಮಧ್ಯಾಹ್ನ 3:15–3:35 | ಮಧ್ಯಾಹ್ನ 3:30–3:40 |
| ಎಕ್ಸ್ಪೈರಿ ದಿನದಂದು ಇಂಡೆಕ್ಸ್ ಡೆರಿವೇಟಿವ್ಸ್ | ಮಧ್ಯಾಹ್ನ 3:40ರವರೆಗೆ | ಎಕ್ಸ್ಪೈರ್ ಆಗುವ ಒಪ್ಪಂದಗಳು 3:30ಕ್ಕೆ ಮುಕ್ತಾಯ; ಎಕ್ಸ್ಪೈರ್ ಆಗದ ಒಪ್ಪಂದಗಳು 3:45ರವರೆಗೆ |
| ಸ್ಟಾಕ್ ಡೆರಿವೇಟಿವ್ಸ್ | ಮಧ್ಯಾಹ್ನ 3:40ರವರೆಗೆ | ಎಕ್ಸ್ಪೈರಿ ದಿನವೂ ಸೇರಿದಂತೆ ಮಧ್ಯಾಹ್ನ 3:45ರವರೆಗೆ |
| ಪೋಸ್ಟ್-ಕ್ಲೋಸ್ ಕ್ಯಾಶ್ ಸೆಷನ್ | ಮಧ್ಯಾಹ್ನ 3:50–4:00 | ಮಧ್ಯಾಹ್ನ 3:50–4:00 |
30 ನಿಮಿಷಗಳ VWAP ಆಧಾರಿತ ಎಕ್ಸ್ಪೈರಿ ಸೆಟಲ್ಮೆಂಟ್
ಉದಾಹರಣೆಗೆ, 'ABC' ಕಂಪನಿಯ ಷೇರಿನ ಕೊನೆಯ 30 ನಿಮಿಷಗಳ ಕ್ಯಾಶ್ VWAP ದರ ವಿವಿಧ ಎಕ್ಸ್ಚೇಂಜ್ಗಳಲ್ಲಿ 100 ರೂಪಾಯಿ ಇದೆ ಎನ್ನೋಣ. ಆಗ CAS ದರ ಏನೇ ಇದ್ದರೂ ಎಕ್ಸ್ಪೈರ್ ಆಗುವ ಫ್ಯೂಚರ್ಸ್ ಹಾಗೂ ಆಪ್ಷನ್ಸ್ 100 ರೂಪಾಯಿಗೇ ಸೆಟಲ್ ಆಗುತ್ತವೆ. ಇನ್ನು ನಿಫ್ಟಿ ವಿಷಯಕ್ಕೆ ಬಂದರೆ, ಎಕ್ಸ್ಚೇಂಜ್ಗಳು ಅದೇ ಅವಧಿಯ ಘಟಕ ಷೇರುಗಳ VWAP ಆಧರಿಸಿ ಇಂಡೆಕ್ಸ್ ಲೆಕ್ಕಹಾಕಲಿವೆ. ಒಂದು ವೇಳೆ ಈ ಮೌಲ್ಯ 22,000 ತಲುಪಿದರೆ, ಎಕ್ಸ್ಪೈರ್ ಆಗುವ ಇಂಡೆಕ್ಸ್ ಆಪ್ಷನ್ಸ್ ಮತ್ತು ಫ್ಯೂಚರ್ಸ್ 22,000ಕ್ಕೆ ಸೆಟಲ್ ಆಗಲಿವೆ. ಈ ಸೂಚ್ಯ ಮೌಲ್ಯಗಳ ಲೈವ್ ಮಾಹಿತಿ ಲಭ್ಯವಿರಲಿದೆ.
ಟ್ರೇಡರ್ಗಳಿಗಾಗಿ ಪ್ರಮುಖ ಪ್ರಶ್ನೋತ್ತರಗಳು (FAQs)
ಪ್ರಶ್ನೆ: ಎಕ್ಸ್ಪೈರಿ ದಿನದಂದು ಆಪ್ಷನ್ ಸೆಟಲ್ಮೆಂಟ್ ಯಾವ ದರದಲ್ಲಿ ನಡೆಯುತ್ತದೆ? ಉತ್ತರ: ಕೊನೆಯ 30 ನಿಮಿಷಗಳ ಕ್ಯಾಶ್ VWAP ದರದಲ್ಲಿ ನಡೆಯುತ್ತದೆ. ಪ್ರಶ್ನೆ: ಎಕ್ಸ್ಪೈರ್ ಆಗುವ ಇಂಡೆಕ್ಸ್ ಆಪ್ಷನ್ಗಳ ಟ್ರೇಡಿಂಗ್ ಎಷ್ಟು ಗಂಟೆಯವರೆಗೆ ಇರುತ್ತದೆ? ಉತ್ತರ: ಎಕ್ಸ್ಪೈರಿ ದಿನದಂದು ಮಧ್ಯಾಹ್ನ 3:30ಕ್ಕೆ ವಹಿವಾಟು ಸ್ಥಗಿತಗೊಳ್ಳುತ್ತದೆ. ಆದರೆ, ಎಕ್ಸ್ಪೈರ್ ಆಗದ ಇಂಡೆಕ್ಸ್ ಹಾಗೂ ಎಲ್ಲಾ ಸ್ಟಾಕ್ ಕಾಂಟ್ರಾಕ್ಟ್ಗಳ ವಹಿವಾಟು ಮಧ್ಯಾಹ್ನ 3:45ರವರೆಗೆ ಮುಂದುವರಿಯುತ್ತದೆ.


Click it and Unblock the Notifications