ಡಿಜಿಟಲ್ ಚಿನ್ನದ ಹೂಡಿಕೆಗಳಿಗೆ (Digital Gold Investment) ಸಂಬಂಧಿಸಿದಂತೆ ಇದೀಗ SEBI ಹೂಡಿಕೆದಾರರಿಗೆ ಖಡಕ್ ವಾರ್ನಿಂಗ್ ನೀಡಿದೆ. ಈ ಮೂಲಕ ಡಿಜಿಟಲ್ ಚಿನ್ನದ ಮೇಲಿನ ಹೂಡಿಕೆದಾರರು ಎದುರಿಸಬಹುದಾದ ಅಪಾಯಗಳ ಬಗ್ಗೆ ಸೆಕ್ಯುರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಎಚ್ಚರಿಕೆ ನೀಡಿದೆ. ಅಂದರೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಒದಗಿಸುವ ಡಿಜಿಟಲ್ ಚಿನ್ನ ಅಥವಾ ಇ-ಗೋಲ್ಡ್ ಉತ್ಪನ್ನಗಳು (Gold Products) ಸೆಬಿಯ ಮೇಲ್ವಿಚಾರಣೆ ನಡೆಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ನವೆಂಬರ್ 8 ರಂದು ಸೆಬಿ ಹೊರಡಿಸಿದ ಅಧಿಸೂಚನೆ ಪ್ರಕಾರ, ಕೆಲವು ಡಿಜಿಟಲ್ ಚಿನ್ನಗಳು ತಮ್ಮ ನಿಯಮದಡಿ ಬರುತ್ತದೆ. ಇನ್ನೂ ಕೆಲವು ತಮ್ಮ ನಿಯಮದಡಿಯಲ್ಲಿ ಬರುವುದಿಲ್ಲ ಎಂದು ಸೂಚನೆ ಸೂಚನೆ ನೀಡಿದೆ.

SEBI ನಿಯಂತ್ರಣದಲ್ಲಿರುವ ಡಿಜಿಟಲ್ ಚಿನ್ನಗಳು:
ಎಕ್ಸ್ಚೇಂಜ್ ಟ್ರೇಡೆಡ್ ಕಮಾಡಿಟಿ ಡೆರಿವೇಟಿವ್ ಕಾಂಟ್ರ್ಯಾಕ್ಟ್‌ಗಳು, ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಸ್ (ETFs) ಮತ್ತು ಎಲೆಕ್ಟ್ರಾನಿಕ್ ಗೋಲ್ಡ್ ರಸೀದಿಗಳು (EGRs) ಸೆಬಿ ಕಣ್ಗಾವಲಿನಲ್ಲಿರುತ್ತವೆ ಎನ್ನಲಾಗಿದೆ. ಇವುಗಳನ್ನು ಸೆಬಿ-ನೋಂದಾಯಿತ ಮಧ್ಯವರ್ತಿಗಳ ಮೂಲಕ ಖರೀದಿಸಬಹುದು ಮತ್ತು ನಿಯಂತ್ರಕ ಸಂಸ್ಥೆಯ ರಕ್ಷಣೆಯಲ್ಲಿರುತ್ತದೆ ಎಂದು ವರದಿಯಾಗಿದೆ.
ಎಚ್ಚರಿಕೆ ಕೊಟ್ಟ "SEBI"!
ಡಿಜಿಟಲ್ ಹೂಡಿಕೆದಾರರಿಗೆ ಎಚ್ಚರಿಕೆ ಕೊಟ್ಟ ಸೆಬಿ, ಹಲವಾರು ಡಿಜಿಟಲ್ ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು "ಡಿಜಿಟಲ್ ಚಿನ್ನ" ಅಥವಾ "ಇ-ಗೋಲ್ಡ್" ಉತ್ಪನ್ನಗಳನ್ನು ಭೌತಿಕ ಚಿನ್ನದ ಬದಲಾಗಿ ನೀಡುತ್ತಿವೆ. ಆದರೆ ಈ ಉತ್ಪನ್ನಗಳು ಸೆಕ್ಯುರಿಟಿಗಳಾಗಿ ಗುರುತಿಸಲ್ಪಟ್ಟಿಲ್ಲ ಅಥವಾ ಕಮಾಡಿಟಿ ಡೆರಿವೇಟಿವ್‌ಗಳಾಗಿ ನಿಯಂತ್ರಿಸಲ್ಪಟ್ಟಿಲ್ಲ. ಅವುಗಳನ್ನು ಸೆಬಿ ಮೇಲ್ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿದೆ.
ಇಂತಹ ಉತ್ಪನ್ನಗಳು ಹೂಡಿಕೆದಾರರಿಗೆ ಅಪಾಯಕ್ಕೆ ಸಿಲುಕಿಸಬಹುದು ಎಂದು ಸೆಬಿ ಹೇಳಿದೆ. ಈ ಡಿಜಿಟಲ್ ಚಿನ್ನದ ಉತ್ಪನ್ನಗಳು SEBI ನಿಯಂತ್ರಿತ ಚಿನ್ನದ ಉತ್ಪನ್ನಗಳಿಗಿಂತ ಭಿನ್ನವಾಗಿರುತ್ತದೆ. ಅವುಗಳನ್ನು ಸೆಕ್ಯೂರಿಟೀಸ್ ಎಂದು ಗುರುತಿಸಿಲ್ಲ ಅಥವಾ ಸರಕು ಉತ್ಪನ್ನಗಳೆಂದು ನಿಯಂತ್ರಿಸಲಾಗಿಲ್ಲ ಎಂದು SEBI ತನ್ನ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
ಸೆಬಿ ಪ್ರಕಾರ, ಆನ್‌ಲೈನ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೀಡಲಾಗುವ ಡಿಜಿಟಲ್ ಚಿನ್ನ ಅಥವಾ ಇ-ಗೋಲ್ಡ್ ಮೇಲಿನ ಹೂಡಿಕೆಗಳನ್ನು ಮರುಪಾವತಿಸಲು ವಿಫಲವಾದರೆ, ಹೂಡಿಕೆದಾರರಿಗೆ SEBI ರಕ್ಷಣೆ ನೀಡುವುದಿಲ್ಲ. ಆ ಸಂದರ್ಭದಲ್ಲಿ ಹೂಡಿಕೆದಾರರು SEBI ನೆರವು ಪಡೆಯಲು ಸಾಧ್ಯವಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಮೂಲಕ ಹೂಡಿಕೆದಾರರು ಕೇವಲ SEBI ನಿಯಂತ್ರಿತ ಚಿನ್ನ ಮತ್ತು ಚಿನ್ನ-ಸಂಬಂಧಿತ ಉತ್ಪನ್ನಗಳ ಮೇಲೆ ಮಾತ್ರ ಹೂಡಿಕೆ ಮಾಡಬೇಕು ಎಂದು SEBI ಸೂಚನೆ ನೀಡಿದೆ. ಇವುಗಳಲ್ಲಿ ಎಕ್ಸ್‌ಚೇಂಜ್ ಟ್ರೇಡೆಡ್ ಕಮಾಡಿಟಿ ಡೆರಿವೇಟಿವ್ ಒಪ್ಪಂದಗಳು, ಮ್ಯೂಚುವಲ್ ಫಂಡ್‌ಗಳು ನೀಡುವ ಚಿನ್ನದ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು (ETFs) ಮತ್ತು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವಹಿವಾಟು ನಡೆಸುವ ಎಲೆಕ್ಟ್ರಾನಿಕ್ ಚಿನ್ನದ ರಸೀದಿಗಳು (EGRs) ಸೇರಿಸಲಾಗಿದೆ.
ಇತ್ತೀಚೆಗೆ ಚಿನ್ನದ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಿರುವುದರಿಂದ, ಹೆಚ್ಚಿನ ಹೂಡಿಕೆದಾರರು ಡಿಜಿಟಲ್ ಚಿನ್ನದ ಮೇಲಿನ ಹೂಡಿಕೆಯತ್ತ ಮುಖ ಮಾಡಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿ SEBI ಈ ಎಚ್ಚರಿಕೆಯನ್ನು ನೀಡಿದೆ.


Click it and Unblock the Notifications