ಭಾರತದಲ್ಲಿ ಹಿರಿಯ ನಾಗರಿಕರಿಗೆ, ಹೆಣ್ಣು ಮಕ್ಕಳಿಗಾಗಿ, ಮಕ್ಕಳಿಗಾಗಿ ಹಲವಾರು ಹೂಡಿಕೆ ಯೋಜನೆಗಳಿವೆ. ಪೋಸ್ಟ್ ಆಫೀಸ್, ಬ್ಯಾಂಕ್‌ಗಳಲ್ಲಿ ಹಲವಾರಿ ಸೇವಿಂಗ್ಸ್ ಯೋಜನೆಗಳಿವೆ (Savings Plan). ಅದರಲ್ಲಿ ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) ಕೂಡಾ ಒಂದು. ಸರ್ಕಾರ-ಬೆಂಬಲಿತ ಸ್ಥಿರ-ಆದಾಯ ಯೋಜನೆ ಇದಾಗಿದೆ. ಈಗಾಗಲೇ 2026 ಸಮೀಪಿಸುತ್ತಿದ್ದು, SCSS ನಿಯಮಗಳಲ್ಲಿ ದೊಡ್ಡ ಬದಲಾವಣೆಗಳಾಗಿಲ್ಲ. ಆದರೂ ಹಿರಿಯ ನಾಗರಿಕರು (Senior Citizen) ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

2026ರಲ್ಲಿ ಬಡ್ಡಿ ದರಗಳ ಹೆಚ್ಚಾಗುತ್ತಾ? ಇಳಿಕೆಯಾಗುತ್ತಾ? ಎಂಬ ಕುತೂಹಲವಿದೆ. SCSS ನಂತಹ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಅಪ್‌ಡೇಟ್ ಮಾಡಲಾಗುತ್ತದೆ. ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ದರಗಳನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಪ್ರಕಟಿಸುವ ನಿರೀಕ್ಷೆಯಿರುವುದರಿಂದ, 2026ರಲ್ಲಿ ನಿವೃತ್ತಿ ಹೊಂದಲಿರುವವರು ಪರಿಷ್ಕೃತ ದರಗಳಿಗೆ ಸಿದ್ಧರಾಗಿರಬೇಕು ಎಂದು ಹೇಳಲಾಗಿದೆ.
ಪ್ರಸ್ತುತ, 2025-2026ರ ಆರ್ಥಿಕ ವರ್ಷಕ್ಕೆ SCSS ಬಡ್ಡಿ ದರವು ವಾರ್ಷಿಕ 8.2% ರಷ್ಟಿದ್ದು, ಉತ್ತಮ ಆದಾಯವನ್ನು ಇಂದು ನೀಡುತ್ತದೆ. ಆದರೆ ಭವಿಷ್ಯದಲ್ಲಿ ಬಡ್ಡಿ ದರಗಳು ಕಡಿಮೆಯಾಗುವ ಮುನ್ನ, ಹಿರಿಯರು ಹೆಚ್ಚಿನ ಆದಾಯವನ್ನು ಗಳಿಸಲು ಇದು ಬೆಸ್ಟ್ ಟೈಂ. ಒಮ್ಮೆ ಖಾತೆಯನ್ನು ತೆರೆದರೆ, ನಿರ್ದಿಷ್ಟ ಬಡ್ಡಿ ದರವನ್ನು ಮುಂದಿನ ಐದು ವರ್ಷಗಳ ಸಂಪೂರ್ಣ ಅವಧಿಗೆ ನಿಗದಿಪಡಿಸಲಾಗುತ್ತದೆ. ನಂತರ ಯಾವುದೇ ಬದಲಾವಣೆಗಳು ಆ ಖಾತೆ ಮೇಲೆ ಪರಿಣಾಮ ಬೀರಲ್ಲ.
SCSS ಯೋಜನೆಯ ಮೂಲಕ ಪ್ರತಿ ತ್ರೈಮಾಸಿಕದಲ್ಲಿ (ಏಪ್ರಿಲ್ 1, ಜುಲೈ 1, ಅಕ್ಟೋಬರ್ 1 ಮತ್ತು ಜನವರಿ 1 ರಂದು) ಬಡ್ಡಿ ಪಾವತಿ ಮಾಡುತ್ತದೆ. ಇದು ಮನೆ, ವೈದ್ಯಕೀಯ ಮತ್ತು ತುರ್ತು ವೆಚ್ಚಗಳನ್ನು ನಿರ್ವಹಿಸಲು ನೆರವಾಗುತ್ತವೆ. ಹೂಡಿಕೆಯ ಮಿತಿ ವೈಯಕ್ತಿಕವಾಗಿ ₹30 ಲಕ್ಷ, ದಂಪತಿಗಳು ಎರಡು ಪ್ರತ್ಯೇಕ ಖಾತೆಗಳ ಮೂಲಕ ₹60 ಲಕ್ಷದವರೆಗೆ ಹೂಡಿಕೆ ಮಾಡಬಹುದು.
SCSS ಖಾತೆಯ ಮುಕ್ತಾಯ ಅವಧಿ ಐದು ವರ್ಷಗಳು. ಮೆಚ್ಯೂರಿಟಿ ನಂತರ, ಹೆಚ್ಚುವರಿ ಮೂರು ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿದೆ. ಇಂಡಿಯಾ ಪೋಸ್ಟ್ ನಿಯಮಗಳ ಪ್ರಕಾರ, ಖಾತೆದಾರರು ಸತತ ಮೂರು ವರ್ಷಗಳ ಬ್ಲಾಕ್ ಗಳಾಗಿ ಹಲವು ಬಾರಿ ಖಾತೆಯನ್ನು ವಿಸ್ತರಿಸಬಹುದು.
ತೆರಿಗೆ ವಿನಾಯಿತಿ ಲಭ್ಯ:
ತೆರಿಗೆ ವಿಚಾರದಲ್ಲಿ, ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಮಾಡಿದ ಹೂಡಿಕೆಗಳಿಗೆ ಸೆಕ್ಷನ್ 80C ಅಡಿಯಲ್ಲಿ ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ. ಆದರೆ, ಗಳಿಸಿದ ಬಡ್ಡಿಯು ಸಂಪೂರ್ಣವಾಗಿ ತೆರಿಗೆಗೆ ಒಳಪಟ್ಟಿರುತ್ತದೆ ಮತ್ತು ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿರುತ್ತದೆ. ಸೆಕ್ಷನ್ 80TTB ಅಡಿಯಲ್ಲಿ ₹50,000ದವರೆಗೆ ಬಡ್ಡಿ ಆದಾಯಕ್ಕೆ ಕಡಿತವನ್ನು ಪಡೆಯಬಹುದು. ಆದಾಗ್ಯೂ, ಬಡ್ಡಿ ಆದಾಯವು ₹50,000 ಮೀರಿದರೆ, ಬ್ಯಾಂಕ್ ಅಥವಾ ಅಂಚೆ ಕಚೇರಿಯು ಹೆಚ್ಚುವರಿ ಬಡ್ಡಿಯ ಮೇಲೆ ಟಿಡಿಎಸ್ ಕಡಿತಗೊಳಿಸುತ್ತದೆ (ಫಾರ್ಮ್ 15H ಸಲ್ಲಿಸಿ ನಿಮ್ಮ ಆದಾಯ ಮಿತಿಗಿಂತ ಕಡಿಮೆಯಿದ್ದರೆ ವಿನಾಯಿತಿ ಪಡೆಯುವ ಅವಕಾಶವಿದೆ).
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications