SGB ಹೂಡಿಕೆದಾರರಿಗೆ ಬಂಪರ್ ಲಾಭ: 5 ವರ್ಷದಲ್ಲಿ 340% ರಿಟರ್ನ್ಸ್, ಇಂದೇ ಹಣ ಹಿಂಪಡೆಯಿರಿ!

ಸ್ಯಾವರಿನ್ ಗೋಲ್ಡ್ ಬಾಂಡ್ (SGB) 2019-20 ಸರಣಿ III ರಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರಿಗೆ ಇಂದಿನಿಂದ ಮೆಚ್ಯೂರಿಟಿಗೂ ಮುನ್ನವೇ ಹಣ ಹಿಂಪಡೆಯುವ (Premature Redemption) ಅವಕಾಶ ಸಿಕ್ಕಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಅವಧಿಪೂರ್ವ ನಿರ್ಗಮನ ಬೆಲೆಯನ್ನು ಪ್ರತಿ ಗ್ರಾಮ್‌ಗೆ ₹15,310 ಎಂದು ನಿಗದಿಪಡಿಸಿದೆ. ಇಂಡಿಯಾ ಬುಲಿಯನ್ ಆಂಡ್ ಜ್ಯುವೆಲರ್ಸ್ ಅಸೋಸಿಯೇಷನ್ ಲಿಮಿಟೆಡ್ (IBJA) ಪ್ರಕಟಿಸಿದ ಸರಾಸರಿ ದರದ ಆಧಾರದ ಮೇಲೆ ಈ ಬೆಲೆಯನ್ನು ನಿಗದಿ ಮಾಡಲಾಗಿದೆ. ಐದು ವರ್ಷಗಳ ಹಿಂದೆ ಆನ್‌ಲೈನ್ ಮೂಲಕ ಪ್ರತಿ ಗ್ರಾಮ್‌ಗೆ ₹3,449 ರಂತೆ ಹೂಡಿಕೆ ಮಾಡಿದವರಿಗೆ ಈಗ ಬರೋಬ್ಬರಿ ಶೇ. 340 ಕ್ಕೂ ಹೆಚ್ಚು ರಿಟರ್ನ್ಸ್ ಸಿಕ್ಕಂತಾಗಿದೆ.

ಹೂಡಿಕೆದಾರರು ತಮ್ಮ ಬಾಂಡ್‌ಗಳನ್ನು ವಿತರಿಸಿದ ಬ್ಯಾಂಕ್, ಪೋಸ್ಟ್ ಆಫೀಸ್ ಅಥವಾ ಡಿಮ್ಯಾಟ್ ಖಾತೆಗಳ ಮೂಲಕ ನೇರವಾಗಿ ಅವಧಿಪೂರ್ವ ರಿಡೆಂಪ್ಷನ್‌ಗೆ ಮನವಿ ಸಲ್ಲಿಸಬಹುದು. ರಿಸರ್ವ್ ಬ್ಯಾಂಕ್ ಮೂಲಕ ನೇರವಾಗಿ ಈ ರೀತಿ ಹಣ ಹಿಂಪಡೆದರೆ, ವ್ಯಕ್ತಿಗಳಿಗೆ ಸಿಗುವ ಬಂಡವಾಳ ಲಾಭದ ಮೇಲಿನ (Capital Gains) ಸಂಪೂರ್ಣ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ಆದರೆ, ಈ ಬಾಂಡ್ ಯುನಿಟ್‌ಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಮಾರಾಟ ಮಾಡಿದರೆ ಸೆಕೆಂಡರಿ ಮಾರ್ಕೆಟ್‌ನ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ನಿಯಮಗಳು ಅನ್ವಯವಾಗುತ್ತವೆ. ಹಿಂಪಡೆದ ಹಣವು ಬಡ್ಡಿ ಪಾವತಿಯ ನಿಗದಿತ ದಿನಾಂಕದಂದು ನೇರವಾಗಿ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

SGB ಹೂಡಿಕೆದಾರರಿಗೆ ಬಂಪರ್ ಲಾಭ, ಇಂದೇ ಹಿಂಪಡೆಯಿರಿ

SGB ಯಿಂದ ಹಣ ಹಿಂಪಡೆಯುವುದು ಉತ್ತಮವೇ? ಗೋಲ್ಡ್ ETF, ಎಫ್‌ಡಿ ಮತ್ತು ಈಕ್ವಿಟಿ SIP ಗಳೊಂದಿಗೆ ಹೋಲಿಕೆ ಇಲ್ಲಿದೆ

ಹೂಡಿಕೆಯನ್ನು ಹಿಂಪಡೆಯಬೇಕೋ ಅಥವಾ ಹಾಗೇ ಮುಂದುವರಿಸಬೇಕೋ ಎಂಬ ನಿರ್ಧಾರವು ನಿಮ್ಮ ಸ್ವಂತ ಹಣಕಾಸಿನ ಗುರಿಗಳನ್ನು ಆಧರಿಸಿರುತ್ತದೆ. ಇತರ ಹೂಡಿಕೆ ಆಯ್ಕೆಗಳೊಂದಿಗೆ ಇದನ್ನು ಹೋಲಿಸಿ ನೋಡುವುದು ಒಳ್ಳೆಯದು. ಉದಾಹರಣೆಗೆ, ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ (ETF) ಪ್ರತಿದಿನ ಸುಲಭವಾಗಿ ಮಾರಾಟ ಮಾಡುವ ಅವಕಾಶ (Liquidity) ನೀಡುತ್ತದೆಯಾದರೂ, ಇದರ ಬಂಡವಾಳ ಲಾಭಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಬ್ಯಾಂಕ್ ಫಿಕ್ಸ್ಡ್ ಡೆಪಾಸಿಟ್ (FD) ನಿಮ್ಮ ಬಂಡವಾಳಕ್ಕೆ ಸುರಕ್ಷತೆ ನೀಡಿದರೂ, ಬಡ್ಡಿಯಿಂದ ಬರುವ ಆದಾಯಕ್ಕೆ ನಿಮ್ಮ ಟ್ಯಾಕ್ಸ್ ಸ್ಲ್ಯಾಬ್‌ ಪ್ರಕಾರ ತೆರಿಗೆ ಬೀಳುತ್ತದೆ. ಇನ್ನೊಂದೆಡೆ, ಈಕ್ವಿಟಿ ಇಂಡೆಕ್ಸ್ ಫಂಡ್‌ಗಳಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP) ಮಾಡುವುದರಿಂದ ದೀರ್ಘಾವಧಿಯಲ್ಲಿ ಹಣದುಬ್ಬರವನ್ನು ಮೀರಿಸುವ ಉತ್ತಮ ಬೆಳವಣಿಗೆ ಕಾಣಬಹುದು.

ಹೂಡಿಕೆ ಆಯ್ಕೆರಿಟರ್ನ್ಸ್ ಸ್ವರೂಪತೆರಿಗೆ ನಿಯಮ
SGB ಯಿಂದ ನಿರ್ಗಮನಚಿನ್ನದ ದರಕ್ಕೆ ಅನುಗುಣವಾಗಿ ಬೆಳವಣಿಗೆತೆರಿಗೆ ರಹಿತ ಲಾಭ
ಗೋಲ್ಡ್ ETFಚಿನ್ನದ ದರಕ್ಕೆ ಅನುಗುಣವಾಗಿ ಬೆಳವಣಿಗೆಲಾಭಕ್ಕೆ ತೆರಿಗೆ ಅನ್ವಯ
ಬ್ಯಾಂಕ್ ಎಫ್‌ಡಿ (FD)ಖಾತರಿಯ ಬಡ್ಡಿ ಆದಾಯಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ ತೆರಿಗೆ
ಈಕ್ವಿಟಿ SIPಶೇರು ಮಾರುಕಟ್ಟೆ ಆಧಾರಿತ ಬೆಳವಣಿಗೆಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ವಯ

ತಮ್ಮ ಪೋರ್ಟ್‌ಫೋಲಿಯೋವನ್ನು ಮರುಹೊಂದಿಸಲು (Portfolio Rebalancing) ಬಯಸುವ ಹೂಡಿಕೆದಾರರಿಗೆ ಗೋಲ್ಡ್ ಬಾಂಡ್‌ಗಳಿಂದ ಅವಧಿಗೆ ಮುನ್ನವೇ ಹಣ ಹಿಂಪಡೆಯುವುದು ತೆರಿಗೆ-ರಹಿತ ನಗದೀಕರಣದ ಅತ್ಯುತ್ತಮ ಅವಕಾಶವಾಗಿದೆ. ಒಂದು ವೇಳೆ ಬಾಂಡ್ ಅನ್ನು ಪೂರ್ಣ ಎಂಟು ವರ್ಷಗಳ ಮೆಚ್ಯೂರಿಟಿ ಅವಧಿಯವರೆಗೆ ಉಳಿಸಿಕೊಂಡರೆ, ಚಿನ್ನದ ಬೆಲೆ ಏರಿಕೆಯ ಜೊತೆಗೆ ವರ್ಷಕ್ಕೆ ಎರಡು ಬಾರಿ ಬಡ್ಡಿ ಆದಾಯವೂ ಸಿಗುತ್ತಿರುತ್ತದೆ. ಇಲ್ಲಿಂದ ಹಿಂಪಡೆದ ಹಣವನ್ನು ಮತ್ತೆ ಚಿನ್ನ, ಸಾಲಪತ್ರಗಳು (Debt) ಅಥವಾ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ನಿಮ್ಮ ಹೂಡಿಕೆ ಅವಧಿ ಮತ್ತು ರಿಸ್ಕ್ ತಗೊಲ್ಲುವ ಸಾಮರ್ಥ್ಯವನ್ನು ಆಧರಿಸಿರುತ್ತದೆ. ಮುಂಬರುವ ದಿನಗಳಲ್ಲಿ ಉತ್ತಮ ಸಂಪತ್ತು ಗಳಿಸಲು ತೆರಿಗೆಯ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಂಡು ಸೂಕ್ತ ಆರ್ಥಿಕ ನಿರ್ಧಾರ ತಗೆದುಕೊಳ್ಳುವುದು ಒಳಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+