ನೀವು ಹಣದಿಂದಲೇ ಹಣ ಗಳಿಸಲು ಬಯಸಿಸುತ್ತಿದ್ದೀರಾ? ಆದರೆ ಇದಕ್ಕೆ ಸರಿಯಾದ ಹೂಡಿಕೆ ಯೋಜನೆ ಬಹಳ ಮುಖ್ಯ. ವ್ಯವಸ್ಥಿತ ಹೂಡಿಕೆ ಯೋಜನೆ (SIP) ಕುರಿತಂತೆ ಈ ಹಿಂದೆಯೂ ಅನೇಕ ವಿಚಾರಗಳನ್ನು ಪರಿಚಯಿಸಿದ್ದೇವೆ. ಇದೀಗ SIP ಸಹಾಯದಿಂದ 25 ವರ್ಷಗಳಲ್ಲಿ 5 ಕೋಟಿ ರೂ.ಗಳಿಗಿಂತ ಹೆಚ್ಚಿನ ನಿಧಿಯನ್ನು ರಚಿಸುವುದು ಹೇಗೆ ಎಂದು ನೋಡೋಣ.

ಹೂಡಿಕೆಗೂ ಸರಿಯಾದ ಸಮಯವೆಂಬುವುದು ಇದೆ. ಯಾಕೆಂದರೆ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಭವಿಷ್ಯವನ್ನು ನೀವು ಸುಭದ್ರಗೊಳಿಸಬಹುದು. ಭವಿಷ್ಯವನ್ನು ಸುರಕ್ಷಿತವಾಗಿರಿಸಲು, ಸಾಧ್ಯವಾದಷ್ಟು ಬೇಗ ಹೂಡಿಕೆ ಮಾಡಲು ಪ್ರಾರಂಭಿಸುವು ತುಂಬಾ ಒಳ್ಳೆಯದು. ನೀವು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ SIP ನಿಮಗೆ ಉತ್ತಮ ಆಯ್ಕೆಯಾಗಿದೆ. ನೀವು ಪ್ರಸ್ತುತ 30 ವರ್ಷ ವಯಸ್ಸಿನವರಾಗಿದ್ದರೆ, 55 ವರ್ಷ ವಯಸ್ಸಿನವರೆಗೆ SIP ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಮಿಲಿಯನೇರ್ ಆಗಬಹುದು. ಹಾಗಾದರೆ 30+12+25 ರ SIP ಹಣ ಗಳಿಸುವ ಸೂತ್ರವು ಏನು ಹೇಳುತ್ತದೆ ಎಂದು ತಿಳಿದುಕೊಳ್ಳೋಣ..
ಮಿಲಿಯನೇರ್ ಆಗಬಹುದು.!
ನೀವು ಮಿಲಿಯನೇರ್ ಆಗುವ ಕನಸು ಕಾಣುತ್ತಿದ್ದರೆ, ನಿಮ್ಮ ಆರ್ಥಿಕ ಯೋಜನೆಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ವಯಸ್ಸು 30 ವರ್ಷಗಳಾಗಿದ್ದರೆ ಮತ್ತು ನಿವೃತ್ತಿಯಾಗುವ ವೇಳೆಗೆ ಕೋಟ್ಯಧಿಪತಿಯಾಗುವ ಗುರಿ ಹೊಂದಿದ್ದರೆ, ಕೂಡಲೇ SIP ನಲ್ಲಿ ಹೂಡಿಕೆ ಆರಂಭಿಸುವುದು ಸೂಕ್ತ. ನೀವು ಈಗಿನಿಂದಲೇ ಹೂಡಿಕೆ ಪ್ರಾರಂಭಿಸಿದರೆ, ಕೇವಲ 25 ವರ್ಷಗಳಲ್ಲಿ ಗಣನೀಯ ಪ್ರಮಾಣದ ಹಣವನ್ನು ಸಂಗ್ರಹಿಸಬಹುದು. SIP ಮೂಲಕ ನಿಯಮಿತವಾಗಿ ಹೂಡಿಕೆ ಮಾಡುವುದರಿಂದ, ದೀರ್ಘಾವಧಿಯಲ್ಲಿ ಸಂಯುಕ್ತ ಬಡ್ಡಿಯ ಲಾಭವನ್ನು ಪಡೆಯಬಹುದು. ಇದರಿಂದ ನಿಮ್ಮ ಹೂಡಿಕೆಯ
ಮೌಲ್ಯವು ಗಣನೀಯವಾಗಿ ಹೆಚ್ಚುತ್ತದೆ. ಸರಿಯಾದ SIP ಆಯ್ಕೆಗಳನ್ನು ಆರಿಸಿಕೊಳ್ಳುವುದು ಮತ್ತು ನಿಮ್ಮ ಆರ್ಥಿಕ ಗುರಿಗಳಿಗೆ ಅನುಗುಣವಾಗಿ ಹೂಡಿಕೆ ಮಾಡುವುದು ಅತ್ಯಗತ್ಯ. ಹೀಗಾಗಿ ನೀವು ಈಗ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಕೇವಲ 25 ವರ್ಷಗಳಲ್ಲಿ ನೀವು ಕೋಟಿಗಟ್ಟಲೆ ಹಣವನ್ನು ಸಂಗ್ರಹಿಸಬಹುದು.
30+12+25 ಸೂತ್ರದ ಸಿಕ್ರೇಟ್ ಏನು?
30+12+25 ಸೂತ್ರವನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ಕೋಟ್ಯಾಧಿಪತಿಯಾಗಬಹುದು. 30+12+25 ಸೂತ್ರವು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಕೋಟ್ಯಧಿಪತಿಯಾಗುವ ಗುರಿಯನ್ನು ಹೊಂದಿರುವವರಿಗೆ ಉಪಯುಕ್ತವಾಗಿದೆ. ಈ ಸೂತ್ರದ ಪ್ರಕಾರ, ನೀವು ತಿಂಗಳಿಗೆ 30,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಈ ಹೂಡಿಕೆಯ ಮೇಲೆ ನೀವು ಸುಮಾರು ಶೇಕಡಾ 12 ರಷ್ಟು ಲಾಭವನ್ನು ಪಡೆಯುತ್ತೀರಿ. ನಂತರ ನಾವು ಈ ಹೂಡಿಕೆಯನ್ನು ಸುಮಾರು 25 ವರ್ಷಗಳ ಕಾಲ ಮುಂದುವರಿಸಬೇಕಾಗುತ್ತದೆ. ಆದರೆ, ನೀವು 30,000 ರೂಪಾಯಿಗಳ ಈ ಹೂಡಿಕೆಯನ್ನು 25 ವರ್ಷಗಳ ಕಾಲ ನಿರಂತರವಾಗಿ ಮುಂದುವರಿಸಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಇದದರಲ್ಲಿ ನಿಮ್ಮ ಹೂಡಿಕೆಯ ಮೊತ್ತ ಸುಮಾರು ₹90,00,000 ಆಗಿರುತ್ತದೆ. ಈ ಹೂಡಿಕೆಯ ಮೇಲೆ ನಿಮಗೆ ಸುಮಾರು ₹4,20,66,197 ಲಾಭ ಸಿಗುತ್ತದೆ. ನಂತರ 25 ವರ್ಷಗಳ ನಂತರ ನಿಮಗೆ ಒಟ್ಟು ₹5,10,66,197 ನಿಧಿ ಸಿಗುತ್ತದೆ. ಅಂದರೆ ನೀವು 30,000 ರೂ.ಗಳನ್ನು ಹೂಡಿಕೆ ಮಾಡುವ ಮೂಲಕ 25 ವರ್ಷಗಳಲ್ಲಿ 5 ಕೋಟಿ ರೂ.ಗಳಿಗಿಂತ ಹೆಚ್ಚಿನ ನಿಧಿಯನ್ನು ರಚಿಸಬಹುದು.
ನೀವು ಅದೇ ಹೂಡಿಕೆ ಮತ್ತು ಕಾಲಾವಧಿಯನ್ನು 15% ದರದಲ್ಲಿ ಲೆಕ್ಕ ಹಾಕಿದರೆ, ನೀವು ನಿಧಿ ಇನ್ನಷ್ಟು ಬಲಗೊಳ್ಳುತ್ತದೆ. ಹೌದು, ನೀವು 30,000 ರೂ.ಗಳಿಗೆ 15% ಲಾಭದೊಂದಿಗೆ 25 ವರ್ಷಗಳ ಕಾಲ ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ, ನಿಮಗೆ 8 ಕೋಟಿಗಿಂತ ಹೆಚ್ಚಿನ ನಿಧಿ ಸಿಗುತ್ತದೆ. ಹೌದು, ಇದರಲ್ಲಿ ನಿಮ್ಮ ಹೂಡಿಕೆಯ ಮೊತ್ತ ಸುಮಾರು ₹90,00,000 ಆಗಿರುತ್ತದೆ. ಈ ಹೂಡಿಕೆಯ ಮೇಲೆ ನಿಮಗೆ ಸುಮಾರು ₹7,36,96,823 ಲಾಭ ಸಿಗುತ್ತದೆ. ನಂತರ 25 ವರ್ಷಗಳ ನಂತರ ನಿಮಗೆ ಒಟ್ಟು ₹8,26,96,823 ನಿಧಿ ಸಿಗುತ್ತದೆ.
Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.


Click it and Unblock the Notifications