ಆದಾಯ ಗಳಿಸುವುದರ (Income) ಜೊತೆಗೆ ಹೂಡಿಕೆ ಮಾಡುವುದು ಕೂಡಾ ಬಹಳ ಮುಖ್ಯ. ನೀವು ನಿತ್ಯ ಕುಡಿಯುವ ಟೀ, ಕಾಫಿ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಿದ್ರೆ, ಆದಾಯ ಸಂಪಾದಿಸಬಹುದು ಎಂಬುದು ಯಾರಿಗಾದ್ರೂ ಗೊತ್ತಾ? ಹೌದು, ಎಸ್‌ಐಪಿ (SIP) ಮೂಲಕ ಇದನ್ನು ಸತ್ಯ ಮಾಡಬಹುದು. ಪ್ರತಿ ತಿಂಗಳು ಕೇವಲ ₹2026 ರೂ. ಉಳಿತಾಯ (Savings) ಮಾಡಿದ್ರೆ ಸಾಕು ಲಕ್ಷಗಟ್ಟಲೆ ಹಣ ಸಂಪಾದಿಸಬಹುದು. ಹಾಗಿದ್ರೆ ಎಸ್‌ಐಪಿ ಮೂಲಕ ಹೂಡಿಕೆ ಮಾಡುವುದು ಹೇಗೆ ಗೊತ್ತಾ? ಇಲ್ಲಿದೆ ಓದಿ.

ಹಣ ಗಳಿಸಲು ಹಲವು ಮಾರ್ಗಗಳಿದ್ದರೂ, ಸಣ್ಣ ಮೊತ್ತದಿಂದ ದೊಡ್ಡ ಲಾಭ ಗಳಿಸಬೇಕೆಂದರೆ ಎಸ್‌ಐಪಿ (SIP) ಸುಲಭ ಮಾರ್ಗವಾಗಿದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (Systematic Investment Plan) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಶಿಸ್ತುಬದ್ಧವಾಗಿ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಹೂಡಿಕೆ ಮಾಡಿದರೆ, ದೀರ್ಘಾವಧಿಯಲ್ಲಿ ಉತ್ತಮ ಆದಾಯ ಗಳಿಸಬಹುದು. ಮಾರುಕಟ್ಟೆ ಏರಿಳಿತಗಳ ನಡುವೆಯೂ, ಸರಾಸರಿ 12% ವಾರ್ಷಿಕ ಆದಾಯ ನಿರೀಕ್ಷಿಸಬಹುದು.
ಎಸ್‌ಐಪಿಯಲ್ಲಿ ಹೂಡಿಕೆ ಮಾಡುವುದು ಸುಲಭ ಎಂದು ಹೂಡಿಕೆದಾರರು ಹೇಳುತ್ತಾರೆ. ಏಕೆಂದರೆ ಇಲ್ಲಿ ಒಮ್ಮೆ ಹೂಡಿಕೆ ಮಾಡಿದರೆ, ನಂತರ ನೀವು ಆಯ್ಕೆ ಮಾಡಿದ ದಿನದಂದು ಬ್ಯಾಂಕ್ ಖಾತೆಯಿಂದ ನಿಗದಿತ ಮೊತ್ತ ಸ್ವಯಂಚಾಲಿತವಾಗಿ ಡೆಬಿಟ್ ಆಗುತ್ತದೆ. ಅಂದರೆ ಪ್ರತೀ ತಿಂಗಳು, ನೀವಾಗಿಯೇ ಹೂಡಿಕೆ ಮಾಡುವ ಅಗತ್ಯವಿಲ್ಲ. ಆ ದಿನದ ಎನ್‌ಎವಿ (NAV) ಮೌಲ್ಯಕ್ಕನುಗುಣವಾಗಿ ಮ್ಯೂಚುವಲ್ ಫಂಡ್ ಯುನಿಟ್‌ಗಳು ಹಂಚಿಕೆಯಾಗುತ್ತವೆ. ಆದ್ದರಿಂದ ನೀವು ಹಾಕಿದ ಹಣ ಕೆಲವೊಮ್ಮೆ ನಷ್ಟವೂ ಆಗಬಹುದು, ಕೆಲವೊಮ್ಮೆ ಲಾಭವೂ ಪಡೆಯಬಹುದು. ಆದರೆ ದೀರ್ಘಾವಧಿಯ ಹೂಡಿಕೆಗಳು ಹೆಚ್ಚು ಲಾಭವನ್ನು ನೀಡುತ್ತದೆ.
2026 ರೂ. ಹೂಡಿಕೆ ಮಾಡಿದ್ರೆ ಎಷ್ಟು ಸಿಗುತ್ತದೆ?
ಪ್ರತಿ ತಿಂಗಳು ಕೇವಲ ₹2026 ಅನ್ನು 26 ವರ್ಷ ಹೂಡಿಕೆ ಮಾಡಿದರೆ, 12% ವಾರ್ಷಿಕ ಆದಾಯದೊಂದಿಗೆ ನಿಮ್ಮ ಹೂಡಿಕೆ ಮೊತ್ತವೇ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದರೆ, ಚಕ್ರಬಡ್ಡಿ (Compounding) ಲಾಭ ಹೆಚ್ಚು. ಕಾಲ ಕಳೆದಂತೆ, ಬಡ್ಡಿಯ ಮೇಲಿನ ಆದಾಯವೇ ಸಂಪತ್ತನ್ನು ವೇಗವಾಗಿ ಹೆಚ್ಚಿಸುತ್ತದೆ.
ಈ 26 ವರ್ಷಗಳಲ್ಲಿ ನೀವು ಮಾಡುವ ಒಟ್ಟು ಹೂಡಿಕೆ ₹6,32,112 ರೂ. ಆಗಿರುತ್ತದೆ. ಆದರೆ, ಮೆಚ್ಯೂರಿಟಿ ಸಮಯದಲ್ಲಿ ಲಭಿಸುವ ಆದಾಯ ₹37,26,041 ರಷ್ಟಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಂದರೆ, ಹೂಡಿಕೆಯೊಂದಿಗೆ ಒಟ್ಟು ₹43,58,153 ನಿಮ್ಮ ಕೈ ಸೇರುತ್ತದೆ. ಇದು ನೀವು ಹೂಡಿಕೆ ಮಾಡಿದ ಮೂಲಧನಕ್ಕಿಂತ ಸುಮಾರು ಆರು ಪಟ್ಟು ಹೆಚ್ಚು ಎಂಬುದು ಗಮನಾರ್ಹ.
ಆದರೆ ಇದು ಮಾರುಕಟ್ಟೆಗೆ ಏರಿಳಿತಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಸರಿಯಾದ ಹೂಡಿಕೆ ಆಯ್ಕೆ ಮಾಡುವುದು ಒಳ್ಳೆಯದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications