ಇಂದಿನ ದುಬಾರಿ ದುನಿಯಾದಲ್ಲಿ, ಜೀವನ ಸಾಗಿಸೋದೆ ದೊಡ್ಡ ಸಾಹಸವಾಗಿಬಿಟ್ಟಿದೆ. ಅತ್ತ ಬೆಲೆ ಏರಿಕರ, ಹಣದುಬ್ಬರ ಸಮಸ್ಯೆಯಿಂದ ಕಂಗಾಲಾಗಿ ಹೋಗಿರುವ ಜನರು, ಹೇಗಪ್ಪಾ ಜೀವನ ಸಾಗಿಸೋದು ಎಂಬ ಚಿಂತೆಯಲ್ಲಿದ್ದಾರೆ. ಅದಲ್ಲದೇ ಹೆಚ್ಚಿನವರು ನಿವೃತ್ತಿ ಜೀವನವನ್ನು (Life) ಕಳೆಯುವುದು ಹೇಗೆ ಎಂಬುದನ್ನೂ ಲೆಕ್ಕ ಹಾಕುತ್ತಿದ್ದಾರೆ. ಅಂಥವರಿಗಾಗಿ ಇಲ್ಲಿದೆ ನೋಡಿ ಟಿಪ್ಸ್.

ನಿವೃತ್ತಿ ಜೀವನದಲ್ಲಿ ಆರ್ಥಿಕ ಭದ್ರತೆಯೇ ಹಲವರಿಗೆ ದೊಡ್ಡ ಸವಾಲು. ಆದರೆ, ಸಮರ್ಥ ಯೋಜನೆ ಮತ್ತು ಶಿಸ್ತಿನ ಹೂಡಿಕೆಯೊಂದಿಗೆ ನಿವೃತ್ತಿಯ ಹೊತ್ತಿಗೆ ಕೋಟ್ಯಾಧಿಪತಿಯಾಗಬಹುದು ಎಂದು ತಜ್ಞರು ಹೇಳುತ್ತಾರೆ. ಪ್ರತಿದಿನ ₹666 SIP ಮೂಲಕ ಹೂಡಿಕೆ ಮಾಡಿದ್ರೆ ₹3.8 ಕೋಟಿ ಆದಾಯ ನಿಮ್ಮದಾಗಿಸಬಹುದು. ಅಲ್ಲದೇ ನಿವೃತ್ತಿಯ ನಂತರ ಹಣದುಬ್ಬರದಂತಹ ಸಮಸ್ಯೆಗಳನ್ನು ಎದುರಿಸಲು ಕೆಲವು ತಂತ್ರಗಳು ಕೂಡಾ ಇದೆ. ಆ ಟಿಪ್ಸ್ ಯಾವುದು ಗೊತ್ತಾ?
₹666 ಹೂಡಿಕೆ ಮಾಡಿ ₹3.8 ಕೋಟಿ ಗಳಿಸುವುದು ಹೇಗೆ?
25ನೇ ವಯಸ್ಸಿನಲ್ಲಿ ಪ್ರತಿದಿನ ₹666 ಮ್ಯೂಚುವಲ್ ಫಂಡ್ SIP ಮೂಲಕ ಹೂಡಿಕೆ ಆರಂಭಿಸಿದರೆ, 12% ವಾರ್ಷಿಕ ಆದಾಯ ಸಿಕ್ಕರೆ, 30 ವರ್ಷಗಳ ನಂತರ (55ನೇ ವಯಸ್ಸಿಗೆ) ಸುಮಾರು ₹3.8 ಕೋಟಿ ಹಣ ನಿಮ್ಮ ಖಾತೆಯಲ್ಲಿರಬಹುದು. ಇದರಲ್ಲಿ ಒಟ್ಟು ಹೂಡಿಕೆ ₹60 ಲಕ್ಷ ಮಾತ್ರವಾಗಿದ್ದು, ಚಕ್ರಬಡ್ಡಿಯಿಂದ ₹3.08 ಕೋಟಿ ಲಾಭ ಗಳಿಸುವಂತೆ ಮಾಡಬಹುದು.
ಏನಿದು '5% ಹಿಂಪಡೆಯುವ ತಂತ್ರ'?
ನಿವೃತ್ತಿಯ ನಂತರ ನಿಧಿ ಬೇಗ ಖಾಲಿಯಾಗದಂತೆ, ನಿಮ್ಮ ಖರ್ಚನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಮೊದಲ ವರ್ಷ, ನಿಮ್ಮ ಒಟ್ಟು ನಿಧಿಯ (corpus) 5% ಹಿಂಪಡೆಯಿರಿ. ₹3.8 ಕೋಟಿ ನಿಧಿಯಾದರೆ, ಮೊದಲ ವರ್ಷ ಸುಮಾರು ₹19 ಲಕ್ಷ (ಪ್ರತಿ ತಿಂಗಳು ₹1.58 ಲಕ್ಷ) ನಿಮಗೆ ಸಿಗುತ್ತದೆ. ಇದನ್ನೇ 5% ಹಿಂಪಡೆಯುವ ತಂತ್ರ ಎಂದು ಕರೆಯುತ್ತಾರೆ.
ಮುಂದಿನ ವರ್ಷಗಳಲ್ಲಿ ಹಣದುಬ್ಬರಕ್ಕೆ ಅನುಗುಣವಾಗಿ ಹಿಂಪಡೆಯುವ ಹಣವನ್ನು ಹೆಚ್ಚಿಸಬಹುದು. ಉಳಿದ ಹಣ ಹೂಡಿಕೆಯಲ್ಲಿ ಮುಂದುವರಿಯುವುದರಿಂದ, ಅದರಿಂದ ಬರುವ ಆದಾಯವು ನಿಮ್ಮ ಆದಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದಕ್ಕಾಗಿ ಹಂತ ಹಂತವಾಗಿ ಹಣ ವಿಥ್‌ಡ್ರಾ ಮಾಡಬೇಕು.
ಹಣದುಬ್ಬರವನ್ನು ಹೇಗೆ ಎದುರಿಸುವುದು?
ಸಾಮಾನ್ಯವಾಗಿ ನಿವೃತ್ತಿ ನಂತರ ಹೂಡಿಕೆ ಮಾಡಿದ ಯೋಜನೆಗಳಿಂದ ಹಣ ಹಿಂಪಡೆಯುವುದು ಸಾಮಾನ್ಯ. ಆದ್ರೆ ಹಲವು ವೆಚ್ಚಗಳೇ, ದೊಡ್ಡ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಿವೃತ್ತಿ ಸಮಯದಲ್ಲಿ ದೊಡ್ಡ ಮೊತ್ತವಿದ್ದರೂ, ನಿಮ್ಮ ಖರ್ಚಿಗೆ ತಕ್ಕಂತೆ ಹಣ ಹಿಂಪಡೆಯಬೇಕು. ಆದರೆ, 5% ಮಾತ್ರ ಹಿಂಪಡೆದು ಉಳಿದ ಹಣವನ್ನು ಇಕ್ವಿಟಿ-ಸಂಬಂಧಿತ ನಿಧಿಗಳಲ್ಲಿ ಇಡುವುದರಿಂದ, ಹಣದುಬ್ಬರ ದರಕ್ಕಿಂತ ಹೆಚ್ಚಿನ ಆದಾಯ ಗಳಿಸಬಹುದು. ಇದು ನಿಮ್ಮ ಸಂಪತ್ತು ದೀರ್ಘಕಾಲ ಉಳಿಯಲು ಸಹಾಯ ಮಾಡುತ್ತದೆ.
ಇದನ್ನು ಫಾಲೋ ಮಾಡಲೇಬೇಕು!
ಬಹಳ ಮುಖ್ಯವಾಗಿ, ಯಾರೇ ಆಗಲಿ, ಕಮ್ಮಿ ಸಂಬಳ ಇರಲಿ, ಜಾಸ್ತಿ ಇರಲಿ ಹೂಡಿಕೆ ಬೇಗ ಪ್ರಾರಂಭಿಸಿದಷ್ಟೂ ದೊಡ್ಡ ಮೊತ್ತ ಸಂಗ್ರಹಿಸಬಹುದು. ಆದಾಯ ಹೆಚ್ಚಾದಂತೆ ಹೂಡಿಕೆ ಮೊತ್ತವನ್ನೂ ಹೆಚ್ಚಿಸುವುದು ಉತ್ತಮ. ಆದರೆ ಹೂಡಿಕೆ ಮಾಡುವ ಮುನ್ನ ಹಣಕಾಸು ತಜ್ಞರ ಸಲಹೆ ಪಡೆದರೆ ಉತ್ತಮ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications