SIP ಹೂಡಿಕೆ: ನಷ್ಟ ಉಂಟಾಗದಿರಲು 6 ತಪ್ಪುಗಳ ಬಗ್ಗೆ ಅರಿವಿರಲಿ

ಮ್ಯೂಚುವಲ್ ಫಂಡ್ ನ SIP ಎಂದರೆ ಒಂದು ವ್ಯವಸ್ಥಿತ ಹೂಡಿಕೆ ಯೋಜನೆ (ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್) ಹೂಡಿಕೆ ಮಾಡಿದರೆ ಲಾಭ ಪಡೆಯಬಹುದು ಎಂಬ ವಿಚಾರವನ್ನು ಅನೇಕ ಲೇಖನಗಳನ್ನು ಓದಿ ಅಥವಾ ಇನ್ನಿತರರಿಂದ ನೀವು ತಿಳಿದುಕೊಂಡಿರಬಹುದು. ಇಲ್ಲಿ ಹೂಡಿಕೆದಾರರು ನಿಯಮಿತವಾಗಿ (ತಿಂಗಳಿಗೆ ಒಮ್ಮೆ ಅಥವಾ ತ್ರೈಮಾಸಿಕಕ್ಕೆ ಒಮ್ಮೆ) ನಿರ್ದಿಷ್ಟ ಮೊತ್ತದ ಹಣವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇಂದು SIP ಮ್ಯೂಚುವಲ್ ಫಂಡ್‌ಗಳು ಬಹಳ ಜನಪ್ರಿಯ ಯೋಜನೆಯಾಗಿದೆ ಏಕೆಂದರೆ ಇದು ದೀರ್ಘಾವಧಿಯಲ್ಲಿ ಉತ್ತಮ ಲಾಭ ಗಳಿಸುವ ಅವಕಾಶವನ್ನು ಒದಗಿಸುತ್ತದೆ. ಆದರೆ ಅಧಿಕ ಲಾಭವನ್ನು ತಂದುಕೊಡುವ SIPಯಲ್ಲಿ ಹೂಡಿಕೆ ಮಾಡಿ ಅನೇಕ ಮಂದಿ ಕೈ ಸುಟ್ಟುಕೊಂಡವರಿದ್ದಾರೆ. ಇವುಗಳೆಲ್ಲವೂ ಸಣ್ಣ - ಪುಟ್ಟ ತಪ್ಪುಗಳಿಂದ ಸಂಭವಿಸುವಂತದ್ದು. ಹೀಗಾಗಿ SIP ಹೂಡಿಕೆದಾರರು ಭಾರಿ ನಷ್ಟವನ್ನು ಅನುಭವಿಸುವಂತ ತಪ್ಪುಗಳ ಬಗ್ಗೆ ಅರಿತುಕೊಂಡು ಜಾಣ ನಡೆ ಮುಂದಿಡಿ.

1. ಸಂಶೋಧನೆ ನಡೆಸಿ, ಸಲಹೆ ಪಡೆದು ಹೂಡಿಕೆ ಆರಂಭಿಸಿ.

ನೀವು SIP ಹೂಡಿಕೆ ಮಾಡುವ ಮೊದಲು ಮಾರುಕಟ್ಟೆ ಮತ್ತು ವಿವಿಧ ಮ್ಯೂಚುವಲ್ ಫಂಡ್‌ಗಳ ಬಗ್ಗೆ ಸರಿಯಾದ ಸಂಶೋಧನೆ ಮಾಡಿ. ಯಾಕೆಂದರೆ ಮಾಹಿತಿ ಕೊರತೆಯಿಂದ ಮಾಡಿದ ಹೂಡಿಕೆಯಿಂದ ನಷ್ಟ ಉಂಟಾಗುವ ಅಪಾಯಗಳ್ ಹೆಚ್ಚು. ಅವರವರ ಅಗತ್ಯಕ್ಕೆ ಅನುಗುಣವಾಗಿ ಬುದ್ಧಿವಂತಿಕೆಯಿಂದ SIP ಆಯ್ಕೆ ಮಾಡಿ ಬಳಿಕ ಹೂಡಿಕೆ ಮಾಡುವುದು ಉತ್ತಮ. ನಿಮಗೆ ಮಾಹಿತಿ ಇಲ್ಲದಿದ್ದರೆ ಈ ವಿಷಯದಲ್ಲಿ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಆದರೆ ಬೇರೆಯವರ ಮಾತು ಕೇಳಿ ಯಾವುದೇ ಸಂಶೋಧನೆ ಮತ್ತು ಮಾಹಿತಿ ಇಲ್ಲದೆ ಹೂಡಿಕೆ ಮಾಡುವುದರಿಂದ ನಷ್ಟ ಎಂಬುವುದು ಕಟ್ಟಿಟ್ಟ ಬುತ್ತಿ.

SIP ಹೂಡಿಕೆ: ಈ 6 ತಪ್ಪುಗಳು ಅಪ್ಪಿತಪ್ಪಿಯೂ ಮಾಡಬೇಡಿ

2. ಆರ್ಥಿಕ ಪರಿಸ್ಥಿತಿ ನಿರ್ಲಕ್ಷಿಸುವುದು

SIP ಹೂಡಿಕೆ ಎಂಬುವುದು ದೀರ್ಘಾವಧಿಯ ಹೂಡಿಕೆಯಾಗಿದೆ. ಆದರೆ ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ SIP ನಲ್ಲಿ ಭಾರೀ ಮೊತ್ತವನ್ನು ಹೂಡಿಕೆ ಮಾಡುವುದು ಸರಿಯಾದ ನಿರ್ಧಾರವಲ್ಲ. ಮ್ಮ ದೈನಂದಿನ ಖರ್ಚುಗಳಿಗೆ ತೊಂದರೆಯಾಗದಂತೆ ಹೂಡಿಕೆ ಮಾಡಬೇಕು. ಇಲ್ಲವಾದರೆ ನಿಮ್ಮ ಬಜೆಟ್ ತೊಂದರೆಗೊಳಗಾಗಿ ನಿಮ್ಮ SIP ಅನ್ನು ದೀರ್ಘಕಾಲದವರೆಗೆ ಮುಂದುವರಿಸಲು ನಿಮಗೆ ಸಾಧ್ಯವಾಗದಿರಬಹುದು. SIP ಹೂಡಿಕೆಯು ಮಾರುಕಟ್ಟೆಯ ಅಪಾಯಕ್ಕೆ ಒಳಪಟ್ಟಿರುತ್ತದೆ. ಮಾರುಕಟ್ಟೆ ಕುಸಿದಾಗ, ನಿಮ್ಮ ಹೂಡಿಕೆಯ ಮೌಲ್ಯ ಕಡಿಮೆಯಾಗಬಹುದು.ಆದ್ದರಿಂದ, ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆಯ ಮೊತ್ತವನ್ನು ನೀವು ನಿರ್ಧರಿಸಬೇಕು. ನೀವು SIP ಯಾವುದೇ ಸಮಯದಲ್ಲಿ ನಿಲ್ಲಿಸಬಹುದು, ಮಧ್ಯದಲ್ಲಿ ಕೊಂಚ ವಿರಾಮಗೊಳಿಸಬಹುದು ಮತ್ತು SIP ನಲ್ಲಿ ಮೊತ್ತವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಈ ನಮ್ಯತೆಯ ಲಾಭವನ್ನು ಪಡೆದು ನಿಮ್ಮ ಜೇಬಿಗೆ ಅನುಗುಣವಾಗಿ ಹೂಡಿಕೆ ಮಾಡಿ. ನಂತರ ಆದಾಯ ಹೆಚ್ಚಾದಂತೆ, ಅದಕ್ಕೆ ತಕ್ಕಂತೆ ಹೂಡಿಕೆಯನ್ನು ಹೆಚ್ಚಿಸುತ್ತಲೇ ಇರಿ

3.ದೀರ್ಘಾವಧಿ ಮುಂದುವರಿಸಿ

ಅಧಿಕ ಲಾಭ ಪಡೆಯಲು ದೀರ್ಘಾವಧಿಯ SIP ಮಾಡುವುದು ಸೂಕ್ತ. ಇದರಲ್ಲಿ ಅಪಾಯ ಕಡಿಮೆ ಜೊತೆಗೆ ನೀವು ಸಂಯುಕ್ತ ಬಡ್ಡಿಯ ಪ್ರಯೋಜನವನ್ನು ಸಹ ಪಡೆಯುತ್ತೀರಿ. ಆದರೆ ನೀವು ದೀರ್ಘಾವಧಿಯ SIP ಅನ್ನು ಪ್ರಾರಂಭಿಸಿದ್ದರೆ ಅದನ್ನು ಮಧ್ಯದಲ್ಲಿ ನಿಲ್ಲಿಸಬೇಡಿ. ಇಲ್ಲದಿದ್ದರೆ, ನಿಮ್ಮ ಲಾಭದ ಗುರಿಯನ್ನು ಸಾಧಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನೀವು ಹೆಚ್ಚು ಸಮಯ ಹೂಡಿಕೆ ಮಾಡಿದಷ್ಟೂ, ನೀವು ಸಂಯುಕ್ತದಿಂದ ಹೆಚ್ಚು ಲಾಭ ಪಡೆಯುತ್ತೀರಿ ಮತ್ತು ದೊಡ್ಡ ನಿಧಿಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.

4. ವೈವಿಧ್ಯೀಕರಣದ ಕೊರತೆ

ಏಕ ನಿಧಿಯಲ್ಲಿ ಹೂಡಿಕೆ ಮಾಡುವುದು ಅಪಾಯಕ್ಕೆ ಅಹ್ವಾನ ಕೊಟ್ಟಂತೆ ಸರಿ. ಹೀಗಾಗಿ ನಿಮ್ಮ ಎಲ್ಲಾ ಹಣವನ್ನು ಒಂದೇ ನಿಧಿಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ನಿಧಿ ಕೆಟ್ಟದಾಗಿ ಕಾರ್ಯನಿರ್ವಹಿಸಿದರೆ, ನಿಮ್ಮ ಎಲ್ಲಾ ಹಣವನ್ನು ಕಳೆದುಕೊಳ್ಳುವ ಅಪಾಯವಿದೆ. ಹೀಗಾಗಿ ನೀವು ಷೇರು ಮತ್ತು ಇತರ ಆಸ್ತಿ ವರ್ಗಗಳಲ್ಲಿ ನಿಮ್ಮ ಹೂಡಿಕೆಗಳನ್ನು ಸಮತೋಲನಗೊಳಿಸಬೇಕು. ಇದರೊಂದಿಗೆ ನೀವು ನಿಮ್ಮ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.

5. ವೆಚ್ಚ ಅನುಪಾತವನ್ನು ನಿರ್ಲಕ್ಷಿಸಬೇಡಿ

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ವೆಚ್ಚ ಅನುಪಾತವನ್ನು ನಿರ್ಲಕ್ಷಿಸಬೇಡಿ. ಮ್ಯೂಚುವಲ್ ಫಂಡ್ ನಿರ್ವಹಣಾ ಶುಲ್ಕ, ಆಡಳಿತಾತ್ಮಕ ವೆಚ್ಚಗಳು ಮತ್ತು ಇತರ ವೆಚ್ಚಗಳನ್ನು ಒಳಗೊಂಡಂತೆ ಮ್ಯೂಚುವಲ್ ಫಂಡ್ ಅನ್ನು ನಿರ್ವಹಿಸಲು ತಗಲುವ ವಾರ್ಷಿಕ ವೆಚ್ಚವನ್ನು ವೆಚ್ಚ ಅನುಪಾತ ಎನ್ನುತ್ತಾರೆ. ಇದನ್ನು ಸಾಮಾನ್ಯವಾಗಿ ಫಂಡ್‌ನ ಒಟ್ಟು ಸ್ವತ್ತುಗಳ ಶೇಕಡಾವಾರು ರೂಪದಲ್ಲಿ ವ್ಯಕ್ತಪಡಿಸಲಾಗುತ್ತದೆ. ಸಾಮಾನ್ಯವಾಗಿ ನೀವು ಒಂದು ನಿಧಿಯ ಲಾಭವು ಶೇಕಡಾ 15 ಅಥವಾ 18 ರಷ್ಟಿದ್ದರೆ, ಹೂಡಿಕೆಯ ಮೇಲೂ ಅದೇ ಲಾಭವನ್ನು ಪಡೆಯುತ್ತೀರಿ ಎಂದು ಭಾವಿಸಬಹುದು. ಯಾವುದೇ ನಿಧಿಯ ವೆಚ್ಚ ಅನುಪಾತವು ನಿಮಗೆ ಎಷ್ಟು ಅಗ್ಗವಾಗಿ ನಿಧಿ ಸಿಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಹೆಚ್ಚಿನ ಅಥವಾ ಕಡಿಮೆ ವೆಚ್ಚದ ಅನುಪಾತವು ನಿಮ್ಮ ಆದಾಯದ ಮೇಲೆ ಪರಿಣಾಮ ಬೀರುತ್ತದೆ.

6. ಪೋರ್ಟ್‌ಫೋಲಿಯೊ ಮೌಲ್ಯಮಾಪನವನ್ನು ನಿರ್ಲಕ್ಷಿಸಬೇಡಿ

ನೀವು ಯಾವುದೇ ಹೂಡಿಕೆ ಮಾಡಿದ್ದರೂ, ಅದನ್ನು ಕಾಲಕಾಲಕ್ಕೆ ಪರಿಶೀಲಿಸುವುದು ಬಹಳ ಮುಖ್ಯ. ನೀವು ಇದನ್ನು ಮಾಡದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು. ನಿಧಿಯ ಕಾರ್ಯಕ್ಷಮತೆ ಮತ್ತು ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನು ನಿರ್ಲಕ್ಷಿಸುವುದರಿಂದ ನಿಮ್ಮ ಆದಾಯದ ಮೇಲೆ ಪರಿಣಾಮ ಬೀರಬಹುದು.

Disclaimer

The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+