SIP vs PPF: ವಾರ್ಷಿಕವಾಗಿ 9,500 ರೂಪಾಯಿ ಹೂಡಿಕೆ ಮಾಡಿದ್ರೆ ಎಷ್ಟು ರಿಟರ್ನ್ ಸಿಗುತ್ತೆ? ಹೋಲಿಕೆ ಮಾಡಿ

ಹಣವನ್ನ ಉಳಿತಾಯ ಮಾಡಲು ಜನರು ಹಲವು ಪ್ರಯತ್ನಗಳನ್ನ ಮಾಡುತ್ತಾರೆ. ಇನ್ನು ಹೂಡಿಕೆ ಎಂಬ ವಿಚಾರ ಬಂದಾಗ ಯಾವುದರಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಎಂಬ ಗೊಂದಲ ಕೂಡ ಹಲವರಲ್ಲಿ ಇರುತ್ತದೆ. ಅಲ್ಲದೆ ಯಾವುದರಲ್ಲಿ ಹೂಡಿಕೆ ಮಾಡಿದ್ರೆ ನಾವು ಹೆಚ್ಚು ರಿಟರ್ನ್‌ ಗಳಿಸಬಹುದು ಎಂಬುದರ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಇನ್ನು ಹೂಡಿಕೆ ಅಂತ ಬಂದರೆ ಸಾಮಾನ್ಯವಾಗಿ ಕೆಲವರು SIP ಹಾಗೆ ಕೆಲವರು PPFನಲ್ಲಿ ಹೂಡಿಕೆ ಮಾಡುತ್ತಾರೆ. ಇನ್ನು ಈ ಎರಡರಲ್ಲಿ ನಾವು ವಾರ್ಷಿಕವಾಗಿ 9,500 ರೂ. ಹೂಡಿಕೆ ಮಾಡಿದ್ರೆ ಎಷ್ಟು ರಿಟರ್ನ್‌ ಸಿಗುತ್ತೆ ಎನ್ನುವುದನ್ನು ನೋಡೋಣ.

ವಾರ್ಷಿಕ ಹೂಡಿಕೆ ಅಂತ ಬಂದಾಗ, ವ್ಯವಸ್ಥಿತ ಹೂಡಿಕೆ ಯೋಜನೆಗಳು (SIP ಗಳು) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ಎರಡು ಕೂಡ ಜನಪ್ರಿಯ ಆಯ್ಕೆಗಳಾಗಿವೆ. ಪ್ರತಿಯೊಂದೂ ವಿಶಿಷ್ಟ ವೈಶಿಷ್ಟ್ಯಗಳನ್ನು ಮತ್ತು ಸಂಭಾವ್ಯ ಆದಾಯವನ್ನು ಹೊಂದಿವೆ. ಅಲ್ಲದೆ ಎರಡೂ ಕೂಡ ವಿವಿಧ ಹೂಡಿಕೆದಾರರ ಅಗತ್ಯಗಳನ್ನು ಪೂರೈಸುತ್ತದೆ.

SIP vs PPF: ಹೂಡಿಕೆ ಮಾಡಲು ಯಾವುದು ಉತ್ತಮ?

SIP: ಅಪಾಯಗಳು ಮತ್ತು ಆದಾಯ

ವ್ಯವಸ್ಥಿತ ಹೂಡಿಕೆ ಯೋಜನೆಗಳು SIP ಇದೊಂದು ಶಿಸ್ತುಬದ್ಧ ಹೂಡಿಕೆ ವಿಧಾನವಾಗಿದೆ. ಇದರಲ್ಲಿ ರೂಪಾಯಿ ಮೊತ್ತದ ಸರಾಸರಿ ಮತ್ತು ಸಂಯೋಜನೆಯ ಶಕ್ತಿಯನ್ನ ನಿಯಂತ್ರಿಸುತ್ತದೆ. ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಇದು ಹೂಡಿಕೆದಾರರಿಗೆ ಮಾರುಕಟ್ಟೆ ಏರಿಳಿತ ಮತ್ತು ದೀರ್ಘಾವದಿಯ ಗಳಿಕೆಗೆ ಸಹಾಯ ಮಾಡುತ್ತದೆ.

SIPಯ ಪ್ರಮುಖ ಲಕ್ಷಣಗಳು

SIP ಗಳು ಹೂಡಿಕೆದಾರರಿಗೆ ನಿಗದಿತ ಮೊತ್ತವನ್ನು ಮಾಸಿಕ ಅಥವಾ ತ್ರೈಮಾಸಿಕಗಳಲ್ಲಿ ನೀಡಲು ಅವಕಾಶ ಮಾಡಿಕೊಡುತ್ತದೆ. ಹಾಗೆ ನಂತರದಲ್ಲಿ ಇದರಲ್ಲಿ ಸ್ಥಿರವಾಗಿ ಹೂಡಿಕೆ ಮಾಡಲು ಸುಲಭವಾಗುತ್ತದೆ.

SIP ಗಳು ವಹಿವಾಟಿ ಸಮಯದಲ್ಲಿ ಹೂಡಿಕೆಯ ವೆಚ್ಚವನ್ನು ಸರಾಸರಿ ಮಾಡಲು ಸಹಾಯ ಮಾಡುತ್ತದೆ. ಇದು ಮಾರುಕಟ್ಟೆಯ ಚಂಚಲತೆಯ ಮೇಲೆ ಬಿಳುವ ಪರಿಣಾಮವನ್ನು ಕಡಿಮೆ ಮಾಡುತ್ತದೆ.

SIP ಗಳಲ್ಲಿ ಮಾಡಿದ ಹೂಡಿಕೆಗಳು ಬೆಳೆಯಲು ಹೆಚ್ಚಿನ ಸಮಯವನ್ನು ಹೊಂದಿರುತ್ತವೆ. ಇದು ದೀರ್ಘಾವಧಿಯಲ್ಲಿ ಹೆಚ್ಚಿನ ಆದಾಯಕ್ಕೆ ಕಾರಣವಾಗುತ್ತದೆ.

SIP ಗಳಲ್ಲಿ ಯಾರು ಭೇಕಾದ್ರೂ ಸಣ್ಣ ಪ್ರಮಾಣದ ಹೂಡಿಕೆಯನ್ನು ಪ್ರಾರಂಭಿಸಬಹುದು. ಎಲ್ಲರಿಗೂ ಹೂಡಿಕೆ ಅವಕಾಶವನ್ನ ನೀಡುತ್ತದೆ.

SIP ರಿಟರ್ನ್‌ಗಳ ಉದಾಹರಣೆ

ನೀವು SIPಯಲ್ಲಿ ಮಾಸಿಕವಾಗಿ 790 ರೂಗಳನ್ನ 15 ವರ್ಷ ಹೂಡಿಕೆ ಮಾಡಿದ್ರೆ ಆ ಮೊತ್ತ ಒಟ್ಟು 1,42,200ಇರುತ್ತದೆ. ಇನ್ನು ನೀವು ಇದರ ಮೂಲಕ ಅಂದಾಜು ಮೌಲ್ಯ 2,56,415 ರೂ. ಗಳಿಸಿದರೆ. ಕೊನೆಗೆ ನಿಮ್ಮ ಒಟ್ಟು ಮೌಲ್ಯ 3,98,615 ರೂ. ಆಗುತ್ತದೆ. ಅಲ್ಲದೆ SIP ಗಳು ಗಮನಾರ್ಹವಾದ ಸಂಪತ್ತು ಸೃಷ್ಟಿಗೆ ಸಹಾಯ ಮಾಡುತ್ತವೆ.

PPF: ಅಪಾಯ ಮುಕ್ತ ಹಾಗು ಸರ್ಕಾರ ಬೆಂಬಲಿತ ಆಯ್ಕೆ

PPF ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ ಹಾಗೆ ಸ್ಥಿರ ಬಡ್ಡಿದರ ಮತ್ತು ಖಾತರಿಯ ಆದಾಯವನ್ನ ನೀಡುತ್ತವೆ. ಅಪಾಯ ಮುಕ್ತ ಹೂಡಿಕೆಗಳನ್ನ ಹುಡುಕುತ್ತಿರುವವರಿಗೆ ಇದು ಸುರಕ್ಷಿತ ಆಯ್ಕೆಯಾಗಿದೆ.

PPFನ ಪ್ರಮುಖ ಲಕ್ಷಣಗಳು

PPF 15 ವರ್ಷಗಳ ಅವಧಿಯೊಂದಿಗೆ, 5 ವರ್ಷಗಳಲ್ಲಿ ವಿಸ್ತರಿಸಬಹುದಾದ ಸರ್ಕಾರಿ ಬೆಂಬಲಿತ, ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ.

PPFಗೆ ಕೊಡುಗೆಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಗಳಿಗೆ ಅರ್ಹವಾಗಿರುತ್ತವೆ.

ಸರ್ಕಾರದ ಬೆಂಬಲಿತ ಯೋಜನೆಯಾಗಿದ್ದು, PPF ಅನ್ನು ಅಪಾಯ-ಮುಕ್ತ ಹೂಡಿಕೆಯಾಗಿದೆ. ಹಾಗೆ ಇದು ಖಾತರಿಯ ಆದಾಯವನ್ನು ನೀಡುತ್ತದೆ.

ಪಿಪಿಎಫ್ ಸ್ಪರ್ಧಾತ್ಮಕ ಬಡ್ಡಿ ದರವನ್ನು ನೀಡುತ್ತದೆ. ಇದು ಸಾಂಪ್ರದಾಯಿಕ ಉಳಿತಾಯ ಖಾತೆಗಳಿಗಿಂತ ಸಾಮಾನ್ಯವಾಗಿ ಹೆಚ್ಚಿರುತ್ತದೆ. PPF ಖಾತೆ ತೆರೆದ 6 ವರ್ಷಗಳ ನಂತರ ಹಣ ಹಿಂಪಡೆಯಲು ಅವಕಾಶ ನೀಡುತ್ತದೆ.

ಪಿಪಿಎಫ್ ರಿಟರ್ನ್‌ಗಳ ಉದಾಹರಣೆ

ನೀವು ಪಿಪಿಎಫ್‌ನಲ್ಲಿ ವಾರ್ಷಿಕವಾಗಿ 9,500ರೂಗಳನ್ನ 15 ವರ್ಷ ಹೂಡಿಕೆ ಮಾಡಿದ್ರೆ ಆ ಮೊತ್ತ ಒಟ್ಟು 1,42,500ರೂ. 1,42,200 ಇರುತ್ತದೆ. ಇನ್ನು ನೀವು ಇದರ ಮೂಲಕ ಅಂದಾಜು ಮೌಲ್ಯ 1,15,153 ರೂ. ಗಳಿಸಿದರೆ. ಕೊನೆಗೆ ನಿಮ್ಮ ಒಟ್ಟು ಮೌಲ್ಯ 2,57,653 ರೂ. ಆಗುತ್ತದೆ. PPF ಸ್ಥಿರವಾದ ಮತ್ತು ಅಪಾಯ ಮುಕ್ತ ಆದಾಯವನ್ನು ಖಾತ್ರಿಗೊಳಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+