ಭಾರತ (India) ಅಭಿವೃದ್ಧಿ ಹೊಂದಿದ ರಾಷ್ಟ್ರ. ದಿನ ಹೋದಂತೆ ಅಬಿವೃದ್ಧಿ ಕಾಣುತ್ತಲೇ ಇದೆ. ಇನ್ನು ಏನಾದರೊಂದು ವ್ಯವಹಾರ ಆರಂಭಿಸಬೇಕು, ಹಣ ಸಂಪಾದಿಸಬೇಕೆಂಬುದು (Money Earnings) ಹಲವರ ಕನಸು. ಆದ್ರೆ ಸರಿಯಾದ ಹೂಡಿಕೆ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕುಟುಂಬದಲ್ಲಿ ಗಂಡ-ಹೆಂಡತಿ ಇಬ್ಬರೂ ಅಕ್ಷರಸ್ಥರಾಗಿರುತ್ತಾರೆ. ಜೊತೆಗೆ ಒಳ್ಳೆಯ ಉದ್ಯೋಗದಲ್ಲೂ (Job) ಇರುತ್ತಾರೆ. ಆದರೆ ಈ ದುಬಾರಿ ದುನಿಯಾದಲ್ಲಿ ಎಷ್ಟು ಸಂಪಾದನೆ ಮಾಡಿದ್ರೂ ಸಾಕಾಗಲ್ಲ. ಅದಕ್ಕಾಗಿ ಏನಾದರೊಂದು ಸೈಡ್ ಬ್ಯುಸಿನೆಸ್ (Business) ಇರಲೇಬೇಕು. ನೀವೂ ಕೂಡ ಅಡುಗೆ ಮಾಡುವ ಕೌಶಲ್ಯ ಹೊಂದಿದ್ದರೆ, ನಿಮಗಾಗಿ ಇಲ್ಲಿದೆ ನೋಡಿ ಸಣ್ಣ ವ್ಯವಹಾರದ ಐಡಿಯಾ.

ಈ ಕೆಲಸದ ಬ್ಯುಸಿ ಲೈಫ್‌ಸ್ಟೈಲ್‌ನಿಂದಾಗಿ ಹೆಚ್ಚಿನವರಿಗೆ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗಲ್ಲ. ಹಾಗಾಗಿ ಹೆಚ್ಚಿನವರು ಹೋಟೆಲ್, ಫಾಸ್ಟ್‌ಫುಡ್‌ಗಳತ್ತ ಅವಲಂಬಿತರಾಗುತ್ತಾರೆ. ಅದೇ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಭಾರತದಲ್ಲಿ ಹೋಟೆಲ್, ತಿಂಡಿ ಅಂಗಡಿಗಳಿಗೆ ಭಾರೀ ಡಿಮ್ಯಾಂಡ್. ಹಾಗಿದ್ರೆ ಈ ಬ್ಯುಸಿನೆಸ್‌ನಿಂದ ಯಾವ ರೀತಿ ಲಾಭ ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ ಓದಿ.
ಕರಿ ಪಾಯಿಂಟ್ ಶುರು ಮಾಡಿ:
ಕರಿ ಪಾಯಿಂಟ್ ಅಂದರೆ ಸಾಂಬಾರು, ಇತರ ಪದಾರ್ಥಗಳ ಹೋಟೆಲ್. ಕರಿ ಪಾಯಿಂಟ್ ಆರಂಭಿಸಲು ಹೆಚ್ಚು ಹೂಡಿಕೆಯ ಅಗತ್ಯವೂ ಇಲ್ಲ. ಒಂದು ಸಣ್ಣ ಅಂಗಡಿಯಲ್ಲಿದ್ದುಕೊಂಡೇ ಇದನ್ನು ಆರಂಭಿಸಬಹುದು. 50 ಸಾವಿರ ರೂ.ಗಿಂತಲೂ ಕಡಿಮೆ ಹಣದಲ್ಲಿ ಇದನ್ನು ಶುರು ಮಾಡಿದ್ರೆ, ದಿನಕ್ಕೆ 3 ರಿಂದ 4 ಸಾವಿರದವರೆಗೆ ಲಾಭ ಗಳಿಸಬಹುದು.
ಕರಿ ಪಾಯಿಂಟ್ಸ್‌ನಲ್ಲಿ ಲಾಭ ಗಳಿಸೋದು ಹೇಗೆ?
ಒಂದು ಕರಿ ಪಾಯಿಂಟ್ ಆರಂಭಿಸುತ್ತಿದ್ದರೆ, ಅದರಲ್ಲಿ 10 ರೀತಿಯ ಕರಿಗಳಿದ್ದರೆ ಸಾಕು. ಅವುಗಳಲ್ಲಿ 4 ರೀತಿಯಲ್ಲಿ ಮಾಂಸಾಹಾರಿ ಮತ್ತು ಉಳಿದ ಆರು ತರಕಾರಿ ಸಾಂಬಾರುಗಳನ್ನು ಮಾಡಿದರೆ ಸಾಕು. ತರಕಾರಿಗಳನ್ನು ಬಳಸಿಕೊಂಡು ನಾಲ್ಕು ಬಗೆಯ ತರಕಾರಿಗಳನ್ನು ಬಳಸಿಕೊಂಡು ಸಾಂಬಾರು ತಯಾರಿಸಬಹುದು. ಅಲ್ಲದೇ ಯಾವುದಾದರೂ ಬೇರೆ ತರಕಾರಿಗಳನ್ನು ಬಳಸಿಕೊಂಡು ಪಲ್ಯ ತಯಾರಿಸಿದರೆ ಸಾಕು.
ಇನ್ನು ಚಿಕನ್ ಕರಿಗಳಿಂದಲೇ 1 ಸಾವಿರದಿಂದ 1,500 ರೂ.ವರೆಗೆ ಲಾಭ ಪಡೆಯಬಹುದು ಎನ್ನಲಾಗಿದೆ. ಅದು ಹೇಗೆಂದರೆ, ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿಗಾಗಿ ಒಟ್ಟು 4 ಕೆಜಿ ಚಿಕನ್ ಖರೀದಿಸಿ, ವಿವಿಧ ರೀತಿಯಲ್ಲಿ ಕರಿಗಳನ್ನು ತಯಾರಿಸಬೇಕು. ಅಲ್ಲಿ ಒಂದು ಕೆಜಿ ಚಿಕನ್ ಬೆಲೆ 250 ರೂ. ಅಂದರೂ, 4 ಕೆಜಿ ಚಿಕನ್ ಬೆಲೆ 1 ಸಾವಿರ ರೂ. ಆಗುತ್ತದೆ. ಇನ್ನೂ ಕೆಲವು ಕೋಳಿ ಅಂಗಡಿಗಳು ಹೋಲ್‌ಸೇಲ್‌ನಲ್ಲಿ ವ್ಯವಹಾರಕ್ಕಾಗಿ ಚಿಕನ್ ಸೇಲ್ ಮಾಡುತ್ತದೆ.
ಇನ್ನು ಆ 4 ಕೆಜಿ ಚಿಕನ್ ತಯಾರಿಸಲು ಗ್ಯಾಸ್, ಮಸಾಲೆ, ಎಣ್ಣೆ, ಈರುಳ್ಳಿ ಎಲ್ಲವನ್ನೂ ಲೆಕ್ಕ ಹಾಕಿದರೂ ಹೆಚ್ಚೆಂದರೆ 200 ರೂ ಖರ್ಚಾಗಬಹುದು ಅಂದರೆ ಒಟ್ಟು ಖರ್ಚು 1,200 ರೂ. ಅಂದುಕೊಳ್ಳಿ. ಸಾಮಾನ್ಯವಾಗಿ ಕರಿ ಪಾಯಿಂಟ್‌ಗಳಲ್ಲಿ 100 ಗ್ರಾಂ ಚಿಕನ್ ಬೆಲೆ ಕಮ್ಮಿ ಅಂದರೂ 70 ರೂ. ಇರುತ್ತದೆ. ಹೀಗಾಗಿ 1 ಕೆಜಿ ಚಿಕನ್‌ನಲ್ಲಿ 700 ರೂ ಆದಾಯ ಸಂಪಾದಿಬಹುದು. ಅದೇ ರೀತಿ ನಾಲ್ಕು ಕೆಜಿ ಚಿಕನ್‌ನಲ್ಲಿ 2,800 ಆದಾಯ ಗಳಿಸಬಹುದು. ಇದರಲ್ಲಿ ಖರ್ಚು 1,200 ಕಳೆದರೆ, 1,600 ರೂ. ಕೇವಲ ಚಿಕನ್‌ನಲ್ಲಿ ಲಾಭ ಪಡೆಯಬಹುದು.
ಎಗ್‌ಬುರ್ಜಿ ತಯಾರಿಸಿ:
ಚಿಕನ್ ಮಾತ್ರವಲ್ಲದೇ ಎಗ್ ಬುರ್ಜಿಯಿಂದಲೂ ನೀವೂ ಲಾಭಗಳಿಸಬಹುದು. ಬಹುತೇಕರು ಎಗ್ ಬುರ್ಜಿ ತಿನ್ನೋ ಅಭ್ಯಾಸ ಹೊಂದಿರುತ್ತಾರೆ. ಇದರ 100 ಗ್ರಾಂ ಬೆಲೆ 30 ರೂ ಅಂದರೂ 20 ರೂಪಾಯಿ ಲಾಭಗಳಿಸಬಹುದು. ಏಕೆಂದರೆ ಒಂದು ಮೊಟ್ಟೆ, ಮಸಾಲೆ, ಈರುಳ್ಳಿ ಸೇರಿಸಿದ್ರೆ 10 ರಿಂದ 15 ರೂ ಖರ್ಚಾಗಬಹುದು. ಈ ಮೂಲಕ ಮಧ್ಯಾಹ್ನ, ರಾತ್ರಿ ಸೇರಿಕೊಡು 2 ರಿಂದ 3 ಕೆಜಿ ಎಗ್ ಬುರ್ಜಿ ಸೇಲ್ ಆದ್ರೆ ಸಾಕು, ನಿಮಗೆ 600 ರೂ. ಲಾಭ ಗಳಿಸಬಹುದು. ಪರೋಟ, ಚಪಾತಿಗಳೊಂದಿಗೆ ಹೆಚ್ಚಿನವರು ಎಗ್ ಬುರ್ಜಿ ಸವಿಯುತ್ತಾರೆ. ಆದ್ದರಿಂದ ಎಗ್ ಬುರ್ಜಿಗಳಿಗೆ ಹೆಚ್ಚಿನ ಬೇಡಿಕೆ ಇದೆ.


Click it and Unblock the Notifications