ಗಳಿಕೆ ಇಂದು ಬಹಳ ಮುಖ್ಯ, ಅದು ಇಲ್ಲದೆ ಉಳಿಕೆ ಮತ್ತು ಹೂಡಿಕೆಗಳ ಪ್ರಸ್ತಾಪ ಮಾಡಲು ಕೂಡ ಸಾಧ್ಯವಿಲ್ಲ. ಇಂದಿನ ದಿನದಲ್ಲಿ ಉಳಿಕೆ ಮತ್ತು ಹೂಡಿಕೆಯ ನಡುವೆ ಅಗಾಧ ವ್ಯತ್ಯಾಸವಿದೆ. ಸಂಪಾದನೆಯನ್ನು ಉಳಿಸಲು , ಉಳಿಸಿದನ್ನು ಬೆಳೆಸಲು ಹೂಡಿಕೆ ಮುಖ್ಯ. ಹೀಗಾಗಿ ಪ್ರತಿಯೊಬ್ಬರ ಜೀವನದಲ್ಲೂ ಹೂಡಿಕೆ ಎನ್ನುವುದು ಬಹಳ ಪ್ರಾಮುಖ್ಯತೆ ಪಡೆದಿದೆ. ನೀವೇನಾದರೂ ಹೂಡಿಕೆ ಮಾಡಲು ನಿರ್ಧರಿಸಿದರೆ, ಸಣ್ಣ ಮೊತ್ತದಿಂದಲೂ ಪ್ರಾರಂಭಿಸಬಹುದು. ಕೇವಲ 250 ರೂಪಾಯಿಗಳಿಂದಲೂ ಹೂಡಿಕೆ ಆರಂಭಿಸಿ, ದೀರ್ಘಾವಧಿಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು. ಮ್ಯೂಚುಯಲ್ ಫಂಡ್, ಷೇರು ಮಾರುಕಟ್ಟೆ, ಸ್ಥಿರ ಠೇವಣಿಗಳು, ಸಾರ್ವಜನಿಕ ಭವಿಷ್ಯ ನಿಧಿ (PPF) ಮತ್ತು ಚಿನ್ನದಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ, ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು.

ದೈನಂದಿನ ಆದಾಯವನ್ನು ಅವಲಂಬಿಸಿರುವವರು ಅಥವಾ ತಿಂಗಳಿಗೆ 5 ರಿಂದ 10 ಸಾವಿರ ರೂಪಾಯಿಗಳನ್ನು ಗಳಿಸಲಾಗದ ಜನರು ಸಹ ಈ ಯೋಜನೆಗಳಲ್ಲಿ ಸುಲಭವಾಗಿ ಹಣವನ್ನು ಹೂಡಿಕೆ ಮಾಡಬಹುದು. ಅಂತಹ ಕೆಲವು ಯೋಜನೆಗಳ ಬಗ್ಗೆ ಇಲ್ಲಿ ತಿಳಿಯಬಹುದು.
ಎಸ್‌ಎಸ್‌ವೈ ಯೋಜನೆ:
ಎಸ್‌ಎಸ್‌ವೈ ಯೋಜನೆಯನ್ನು ಸುಕನ್ಯಾ ಸಮೃದ್ಧಿ ಯೋಜನೆ ಎಂದು ಕರೆಯಲಾಗುತ್ತದೆ. ನಿಮ್ಮ ಮಗಳ ಭವಿಷ್ಯಕ್ಕಾಗಿ ನೀವು ದುಡ್ದು ಉಳಿಸಲು ಬಯಸಿದರೆ, ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ದೊಡ್ಡ ಮೊತ್ತ ಬೇಕಾಗಿಲ್ಲ. ನೀವು ಈ ಯೋಜನೆಯಲ್ಲಿ 250 ರೂಪಾಯಿಗಳಿಂದ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಇದರಲ್ಲಿ, 15 ವರ್ಷಗಳವರೆಗೆ ಹೂಡಿಕೆ ಮಾಡಬೇಕು ಮತ್ತು ಯೋಜನೆಯು 21 ವರ್ಷಗಳಲ್ಲಿ ಪಕ್ವವಾಗುತ್ತದೆ. ಪ್ರಸ್ತುತ, ಈ ಯೋಜನೆಯು ಶೇಕಡಾ 8.2 ರ ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ. ನೀವು ತಿಂಗಳಿಗೆ 250 ರೂಪಾಯಿ ಹೂಡಿಕೆ ಮಾಡಿದರೂ, ಒಂದು ವರ್ಷದಲ್ಲಿ 3,000 ರೂಪಾಯಿ ಹೂಡಿಕೆ ಮಾಡುತ್ತೀರಿ ಮತ್ತು 15 ವರ್ಷಗಳಲ್ಲಿ ಒಟ್ಟು 45,000 ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತದೆ. 8.2% ದರದಲ್ಲಿ, ನೀವು 93,552 ರೂ. ಬಡ್ಡಿಯನ್ನು ಪಡೆಯುತ್ತೀರಿ ಮತ್ತು ಈ ರೀತಿಯಾಗಿ, ತಿಂಗಳಿಗೆ ಕೇವಲ 250 ರೂ.ಗಳನ್ನು ಠೇವಣಿ ಮಾಡುವ ಮೂಲಕ, ನಿಮ್ಮ ಮಗಳಿಗಾಗಿ ಒಟ್ಟು 1,38,552 ರೂ.ಗಳನ್ನು ಉಳಿಸಬಹುದು.
ಎಸ್‌ಐಪಿ ಯೋಜನೆ:
ನೀವು SIP (ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ನಲ್ಲಿಯೂ ಹೂಡಿಕೆ ಮಾಡಬಹುದು. SBI ಜನ್ ನಿವೇಶ್ SIP ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ, ನೀವು ಕೇವಲ 250 ರೂಪಾಯಿಗಳಿಂದ ಹೂಡಿಕೆ ಆರಂಭಿಸಬಹುದು. ತಿಂಗಳಿಗೆ 250 ರೂಪಾಯಿಗಳಂತೆ 20 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಒಟ್ಟು 60,000 ರೂಪಾಯಿ ಹೂಡಿಕೆ ಆಗುತ್ತದೆ. ಶೇಕಡಾ 12ರಷ್ಟು ವಾರ್ಷಿಕ ಆದಾಯದ ಪ್ರಕಾರ ಲೆಕ್ಕ ಹಾಕಿದರೆ, 1,89,786 ರೂಪಾಯಿ ಬಡ್ಡಿ ಸಿಗುತ್ತದೆ. ಹೀಗಾಗಿ, ನೀವು ಒಟ್ಟು 2,49,786 ರೂಪಾಯಿಗಳನ್ನು ಗಳಿಸಬಹುದು.
ಆರ್‌ಡಿ
ಮರುಕಳಿಸುವ ಠೇವಣಿ ನಿಮ್ಮ ಪಿಗ್ಗಿ ಬ್ಯಾಂಕ್ ಗೆ ಹೋಲಿಸಬಹುದು. ಈ ಯೋಜನೆ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಅಂಚೆ ಕಚೇರಿಯಲ್ಲಿ ಆರ್‌ಡಿ ಯೋಜನೆಯ ಅವಧಿ 5 ವರ್ಷಗಳು. ಈ ಯೋಜನೆಯಲ್ಲಿ ಹೂಡಿಕೆಯನ್ನು ಕೇವಲ 100 ರೂಪಾಯಿಗಳಿಂದ ಪ್ರಾರಂಭಿಸಬಹುದು. ಪ್ರಸ್ತುತ, ಇದು 6.7% ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ. ನೀವು ತಿಂಗಳಿಗೆ 250 ರೂಪಾಯಿ ಠೇವಣಿ ಇಟ್ಟರೂ, 5 ವರ್ಷಗಳಲ್ಲಿ ಒಟ್ಟು 15,000 ರೂಪಾಯಿಗಳನ್ನು ಹೂಡಿಕೆ ಮಾಡಿ 6.7% ಬಡ್ಡಿದರದಲ್ಲಿ 2,841 ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಗಳಿಸಬಹುದು. ಈ ರೀತಿಯಾಗಿ, ನೀವು ಒಟ್ಟು 17,841 ರೂ. ಗಳಿಸಬಹುದು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್‌ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?



Click it and Unblock the Notifications