ಹೊಸ ವರ್ಷದ (New Year) ಆಗಮನವಾಗುತ್ತಿದೆ. ಇನ್ನೇನು ಹೂಡಿಕೆದಾರರು ಹೊಸ ಹೊಸ ಸೇವಿಂಗ್ಸ್ ಪ್ಲಾನ್‌ಗಳನ್ನು ಹುಡುಕುತ್ತಿರುತ್ತಾರೆ. ತನ್ನ ಸಂಬಳದ ಸ್ವಲ್ಪವಾದ್ರೂ ಹಣವನ್ನು ಉಳಿತಾಯ ಮಾಡುವ ಕನಸನ್ನು ಹೊಂದಿದ್ದರೆ, ಇನ್ನೂ ಕೆಲವರು ಇನ್ನೂ ಹೂಡಿಕೆ (Invest) ಮಾಡೋ ಪ್ಲಾನ್ ಅಲ್ಲೇ ಇರಲ್ಲ. ಆದರೆ ಇದೀಗ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಈ ತಿಂಗಳು ಪರಿಶೀಲನೆಯಾಗಲಿದ ಎಂದು ವರದಿಯಾಗಿದೆ. ಹಾಗಿದ್ರೆ ಸರ್ಕಾರದ ಈ ನಿರ್ಧಾರದಿಂದ ಹೂಡಿಕೆದಾರರು, ವಿಶೇಷವಾಗಿ ಹಿರಿಯ ನಾಗರಿಕರಿಗೆ ಹೇಗೆ ಪ್ರಭಾವ ಬೀರಬಹುದು ಎಂಬ ವಿವರ ಇಲ್ಲಿದೆ.

ಬದಲಾಗುತ್ತಾ ಬಡ್ಡಿದರ?
ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸುತ್ತಿರುತ್ತದೆ. ಅದೇ ಪ್ರಕಾರ, ಇದೀಗ ಜನವರಿ-ಮಾರ್ಚ್ 2026ರ ಅವಧಿಯ ಬಡ್ಡಿದರ ಬಗ್ಗೆ ಡಿಸೆಂಬರ್ ಅಂತ್ಯದಲ್ಲಿ ಘೋಷಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ PPF, NSC, ಸುಕನ್ಯಾ ಸಮೃದ್ಧಿ ಮತ್ತು SCSS ಉಳಿತಾಯ ಯೋಜನೆಗಳ, 2025ರ ಡಿಸೆಂಬರ್ 31ರಂದು ಪರಿಶೀಲನೆಯಾಗಲಿದೆ ಎಂದು ಹೇಳಲಾಗಿದೆ. ಈ ಮಧ್ಯೆ ಏರುತ್ತಿರುವ ಹಣದುಬ್ಬರ, ದರ ಏರಿಕೆಯಿಂದಾಗಿ ಬಡ್ಡಿದರದಲ್ಲಿ ಇಳಿಕೆಯಾಗಬಹುದು ಅಂತಾನೂ ಚರ್ಚೆಯಾಗುತ್ತಿದೆ.
ಬದಲಾವಣೆಯಾಗದ ಬಡ್ಡಿದರ!
ಅಕ್ಟೋಬರ್-ಡಿಸೆಂಬರ್ 2025ರ ತ್ರೈಮಾಸಿಕದಲ್ಲಿ ಸರ್ಕಾರ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. PPF, ಸುಕನ್ಯಾ ಸಮೃದ್ಧಿ, SCSS, NSC ಮತ್ತು ಕಿಸಾನ್ ವಿಕಾಸ್ ಪತ್ರದಂತಹ ಪ್ರಮುಖ ಯೋಜನೆಗಳ ಬಡ್ಡಿದರಗಳ ಬದಲಾವಣೆಯಾಗದೆ, ಒಂದೇ ದರದಲ್ಲಿ ಮುಂದುವರೆದಿತ್ತು. ಅಂದರೆ ಜನವರಿ-ಮಾರ್ಚ್ 2024ರ ತ್ರೈಮಾಸಿಕದಲ್ಲಿ ಕೊನೆಯ ಬಾರಿಗೆ ಬಡ್ಡಿದರ ಪರಿಷ್ಕರಣೆಯಾಗಿದ್ದು, ಇದೀಗ ಮುಂದಿನ ಪರಿಷ್ಕರಣೆಗಾಗಿ ಹೂಡಿಕೆದಾರರು ಕಾದುಕುಳಿತಿದ್ದಾರೆ.
ಪೋಸ್ಟ್ ಆಫೀಸ್ ಯೋಜನೆಗಳ ಬಡ್ಡಿ:
ಪ್ರಸ್ತುತ, ಅಂಚೆ ಕಚೇರಿ ಉಳಿತಾಯ ಖಾತೆಗಳು ಶೇ 4% ರಷ್ಟು ಬಡ್ಡಿ ನೀಡುತ್ತವೆ. ಅಂದರೆ ಒಂದು ವರ್ಷದ ಅವಧಿಯ ಠೇವಣಿಗಳು ಶೇ 6.9% ರಷ್ಟು, ಎರಡು ವರ್ಷದ ಠೇವಣಿಗಳು ಶೇ 7% ರಷ್ಟು, ಮತ್ತು ಮೂರು ವರ್ಷದ ಠೇವಣಿಗಳು ಶೇ 7.1% ರಷ್ಟು ಬಡ್ಡಿಯನ್ನು ನೀಡುತ್ತವೆ. ಅದೇ ಐದು ವರ್ಷದ ಅವಧಿಯ ಠೇವಣಿಯು ಶೇ 7.5% ರಷ್ಟು ಬಡ್ಟಿ ನೀಡಿದರೆ, ಐದು ವರ್ಷದ ಆರ್‌ಡಿ ಯೋಜನೆಯಲ್ಲಿ ಶೇ 6.7$ ರಷ್ಟನ್ನು ಪಡೆಯಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಶೇ 8.2% ರಷ್ಟು ಬಡ್ಡಿದರದೊಂದಿಗೆ ಅತ್ಯುತ್ತಮ ಯೋಜನೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಅಲ್ಲದೇ ಮಾಸಿಕ ಆದಾಯ ಯೋಜನೆ (MIS) ಶೇ 7.4% ರಷ್ಟು, NSC ಶೇ 7.7% ರಷ್ಟು ಮತ್ತು PPF ಶೇ 7.1% ರಷ್ಟು ಬಡ್ಡಿಯನ್ನು ನೀಡುತ್ತವೆ. ಇನ್ನು ಹೆಣ್ಣುಮಕ್ಕಳಿಗಾಗಿ ಜಾರಿಗೆ ತಂದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಶೇ 8.2% ರಷ್ಟು ಬಡ್ಡಿ ನೀಡುತ್ತಿದೆ. ಆದ್ರೆ ಇವೆಲ್ಲಾ ಯೋಜನೆಗಳ ಬಡ್ಡಿದರ ಹೆಚ್ಚಾಗುತ್ತಾ? ಇಳಿಕೆಯಾಗುತ್ತಾ? ಎಂಬ ಮಹತ್ವದ ನಿರ್ಧಾರವನ್ನು ಸರ್ಕಾರ ನಾಳೆ ಕೈಗೊಳ್ಳುವ ಸಾಧ್ಯತೆ ಇದೆ.
ಬಡ್ಡಿದರ ಬದಲಾವಣೆ, ಹೂಡಿಕೆದಾರರ ಮೇಲೆ ಪರಿಣಾಮ!
ಬಡ್ಡಿದರಗಳು ಹೆಚ್ಚಾಗಲಿ, ಕಡಿಮೆಯಾಗಲಿ, ಯಾವುದೇ ಬದಲಾವಣೆಯು ಲಕ್ಷಾಂತರ ಹೂಡಿಕೆದಾರರ ಮೇಲೆ ನೇರ ಪರಿಣಾಮ ಬೀರುತ್ತದೆ. ಅದರಲ್ಲೂ ಸುರಕ್ಷಿತ ಆದಾಯ ಬಯಸಿ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿರುವ ಹಿರಿಯ ನಾಗರಿಕರು ಮತು ಮಧ್ಯಮ ವರ್ಗದ ಜನರ ಮೇಲೆ ಪರಿಣಾಮ ಬೀರಲಿದೆ.


Click it and Unblock the Notifications