ಕಾರು ಕೊಳ್ಳಬೇಕು, ಮನೆ ಖರೀದಿಸಬೇಕು ಎಂಬ ಆಸೆ ಯಾರಿಗಿರುವುದಿಲ್ಲ ಹೇಳಿ. ಇಂದಿನ ಕಾಲದಲ್ಲಿ ಮನೆಯಾಗಿರಲಿ ಅಥವಾ ಕಾರಾಗಿರಲಿ, ಎಲ್ಲರೂ ಸಾಲ ತೆಗೆದುಕೊಂಡು ಖರೀದಿಸುತ್ತಾರೆ. ಯಾರು ಒಮ್ಮೆಲೇ ಡೌನ್ ಪೇಮೆಂಟ್ ಮಾಡಿ ಕೊಂಡುಕೊಳ್ಳುವುದಿಲ್ಲ. ಏಕೆಂದರೆ ಅವುಗಳ ಬೆಲೆ ಲಕ್ಷ- ಲಕ್ಷದಲ್ಲಿರುತ್ತದೆ. ಹೀಗಾಗಿ ಎಲ್ಲರಿಗೂ ಇಷ್ಟು ದೊಡ್ಡ ಮೊತ್ತವನ್ನು ಒಂದೇ ಬಾರಿಗೆ ಪಾವತಿಸುವುದು ಸುಲಭದ ಮಾತು ಆಗಿರುವುದಿಲ್ಲ. ಆದರೆ ಸಾಲ ಪಡೆದ ನಂತರ, ಕೆಲವೊಮ್ಮೆ ಪ್ರತಿ ತಿಂಗಳು ಇಎಂಐ ಪಾವತಿಸಲು ತೊಂದರೆಯಾಗುತ್ತದೆ. ಇದಕ್ಕೆ ಕಾರಣವೆಂದರೆ ಜನರು ದೊಡ್ಡ ಮೊತ್ತವನ್ನು ಸಾಲವಾಗಿ ತೆಗೆದುಕೊಳ್ಳುತ್ತಾರೆ ಮತ್ತು ಮೊತ್ತಕ್ಕೆ ಅನುಗುಣವಾಗಿ ಇಎಂಐ ಕೂಡ ದೊಡ್ಡದಾಗಿರುತ್ತದೆ.
ಯಾವಾಗ ಇಎಂಐ ಪಾವತಿಸಲು ಕಷ್ಟವಾಗಲು ಆರಂಭವಾಗುತ್ತದೆಯೋ ಆಗ ಈ ಸಮಸ್ಯೆ ದೊಡ್ಡದಾಗಿ ಕಾಡಲು ಪ್ರಾರಂಭಿಸುತ್ತದೆ. ಹೀಗಾಗಿ ಒಂದು ವೇಳೆ ನೀವು ಹೊಸ ಹಣಕಾಸು ವರ್ಷದಲ್ಲಿ ಕಾರು ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ ಈ ವಿಶೇಷ ಸೂತ್ರದೊಂದಿಗೆ ಖರೀದಿಸಿ. ಈ ಸಂದರ್ಭದಲ್ಲಿ, 50:20:04 ಸೂತ್ರವು ನಿಮಗೆ ತುಂಬಾ ಉಪಯುಕ್ತವಾಗಬಹುದು. ಇದು ನಿಮ್ಮ ಬಜೆಟ್‌ಗೆ ತೊಂದರೆಯಾಗುವುದಿಲ್ಲ. ಅಲ್ಲದೇ ನಿಮ್ಮ ಇಎಂಐ ಕೂಡ ನಿಮಗೆ ಅರಿವೇ ಆಗದ ರೀತಿಯಲ್ಲಿ ಇರುತ್ತದೆ.

50:20:04 ಈ ಸೂತ್ರದಲ್ಲಿ 50ರ ಅರ್ಥವೇನು?
೫೦ ಎಂದರೆ ನಿಮ್ಮ ಆದಾಯದ 50 ಪ್ರತಿಶತ ಎಂದು ಅಂದುಕೊಳ್ಳಬಹುದು.ಮಾರುಕಟ್ಟೆಯಲ್ಲಿನ ಆಕರ್ಷಕ ಐಷಾರಾಮಿ ಕಾರುಗಳನ್ನು ನೋಡಿದಾಗ, ಅವುಗಳನ್ನು ಖರೀದಿಸುವ ಆಸೆ ಸಹಜ. ಆದರೆ, ಯಾವುದೇ ಆರ್ಥಿಕ ಯೋಜನೆ ಇಲ್ಲದೆ ಕೇವಲ ಆಸೆಗೆ ಮರುಳಾಗಿ ಬ್ಯಾಂಕಿನಿಂದ ದೊಡ್ಡ ಸಾಲ ಪಡೆಯುವುದು ವಿವೇಚನೆಯುಕ್ತ ನಿರ್ಧಾರವಲ್ಲ.
ಐಷಾರಾಮಿ ಕಾರುಗಳು ಕೇವಲ ಆಕರ್ಷಣೆ ಮಾತ್ರವಲ್ಲ, ಅವುಗಳ ನಿರ್ವಹಣಾ ವೆಚ್ಚ, ವಿಮೆ, ಇಂಧನ ವೆಚ್ಚ ಮುಂತಾದವುಗಳನ್ನು ಗಮನಿಸಬೇಕು. ಸಾಲದ ಹೊರೆ ಹೆಚ್ಚಾದಂತೆ, ನಮ್ಮ ಭವಿಷ್ಯದ ಆರ್ಥಿಕ ಭದ್ರತೆಗೂ ಧಕ್ಕೆಯಾಗುತ್ತದೆ. ದೊಡ್ಡ ಮೊತ್ತದ ಸಾಲವನ್ನು ಪಡೆದ ನಂತರ, ನೀವು ದೊಡ್ಡ ಇಎಂಐ ಅನ್ನು ಸಹ ಪಾವತಿಸಬೇಕಾಗುತ್ತದೆ, ಅದು ನಂತರ ನಿಮ್ಮ ಮನೆಯ ಬಜೆಟ್ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ವ್ಯಕ್ತಿ ತನ್ನ ವಾರ್ಷಿಕ ಆದಾಯದ ಶೇಕಡಾ 50 ಕ್ಕಿಂತ ಹೆಚ್ಚು ಮೌಲ್ಯದ ಕಾರನ್ನು ಖರೀದಿಸಬಾರದು ಎಂದು ಹಣಕಾಸು ತಜ್ಞರು ನಂಬುತ್ತಾರೆ. ನಿಮ್ಮ ವಾರ್ಷಿಕ ಪ್ಯಾಕೇಜ್ 12 ಲಕ್ಷ ರೂ. ಆಗಿದ್ದರೆ, ನೀವು 6 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಕಾರನ್ನು ಖರೀದಿಸಬಾರದು.
20 ರ ಗುಟ್ಟು ಅರ್ಥಮಾಡಿಕೊಳ್ಳಿ
50:20:04 ಈ ಸೂತ್ರದಲ್ಲಿ 50ರ ನಿಮ್ಮ ಆದಾಯವಾಗಿದ್ರೆ, 20 ಎಂದರೆ ವಾಹನದ ಆನ್-ರೋಡ್ ಬೆಲೆಯ ಡೌನ್ ಪೇಮೆಂಟ್. ಕಾರನ್ನು ಖರೀದಿಸುವ ಮೊದಲು, ನೀವು ಕಾರಿನ ಆನ್-ರೋಡ್ ಬೆಲೆಯ ಕನಿಷ್ಠ ಶೇ. 20 ಹಣವನ್ನು ಹೊಂದಿರಬೇಕು, ಅದನ್ನು ನೀವು ಡೌನ್ ಪೇಮೆಂಟ್ ಆಗಿ ಪಾವತಿಸಬಹುದು. 20 ರಷ್ಟು ಡೌನ್ ಪೇಮೆಂಟ್ ಮಾಡುವ ಮೂಲಕ, ನಿಮ್ಮ ಸಾಲದ ಹೊಣೆಗಾರಿಕೆ ಕಡಿಮೆಯಾಗುತ್ತದೆ.
ನಿಯಮ 04
ಈ ಸೂತ್ರದಲ್ಲಿ, 04 ರ ನಿಯಮವು ನೀವು ಬ್ಯಾಂಕಿನಿಂದ ಪಡೆದ ಸಾಲದ ಮೊತ್ತದ EMI 4 ವರ್ಷಗಳಿಗಿಂತ ಹೆಚ್ಚಿರಬಾರದು ಎಂದು ಹೇಳುತ್ತದೆ. ಅನೇಕ ಬಾರಿ ಜನರು ಇಎಂಐ ಕಡಿಮೆ ಮಾಡಲು ಸಾಲದ ಅವಧಿಯನ್ನು ಹೆಚ್ಚಿಸುತ್ತಾರೆ. ಆದರೆ ಸಾಲದ ಅವಧಿಯನ್ನು ಹೆಚ್ಚಿಸುವುದರಿಂದ, ನಿಮ್ಮ EMI ಖಂಡಿತವಾಗಿಯೂ ಕಡಿಮೆಯಾಗುತ್ತದೆ ಆದರೆ ಬಡ್ಡಿ ತುಂಬಾ ಹೆಚ್ಚಾಗುತ್ತದೆ, ಅಂದರೆ ನೀವು ನಷ್ಟವನ್ನು ಮಾತ್ರ ಅನುಭವಿಸುತ್ತೀರಿ. ಆದ್ದರಿಂದ ಸಾಲದ ಅವಧಿಯನ್ನು ಸಾಧ್ಯವಾದಷ್ಟು ಕಡಿಮೆ ಇರಿಸಿ. ಕಾರು ಅಥವಾ ಯಾವುದೇ ವಾಹನವನ್ನು ಖರೀದಿಸುವಾಗ, ಸಾಲದ ಅವಧಿಯನ್ನು 4 ವರ್ಷಗಳಿಗಿಂತ ಹೆಚ್ಚಿಸದಿರುವುದು ಸೂಕ್ತ. ದೀರ್ಘಾವಧಿಯ ಸಾಲಗಳು ಭವಿಷ್ಯದ ಆರ್ಥಿಕ ಯೋಜನೆಗಳ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೇ ಹೆಚ್ಚಿನ ಬಡ್ಡಿಯಿಂದಾಗಿ, ಇತರ ಅಗತ್ಯಗಳಿಗೆ ಹಣವನ್ನು ಉಳಿಸಲು ಕಷ್ಟವಾಗಬಹುದು.
ಹೀಗಾಗಿ ನೀವು ಹೊಸ ಹಣಕಾಸು ವರ್ಷದಲ್ಲಿ ಕಾರು ಖರೀದಿಸಲಿದ್ದರೆ, ಈ ವಿಶೇಷ ಸೂತ್ರವನ್ನು ಅನುಸರಿಸಿ. ಇದು ನಿಮ್ಮ ಬಜೆಟ್‌ಗೆ ತೊಂದರೆಯಾಗುವುದಿಲ್ಲ ಮತ್ತು ನಿಮ್ಮ ಇಎಂಐ ಕೂಡ ನಿಮಗೆ ಅರಿವೇ ಆಗದ ರೀತಿಯಲ್ಲಿ ಇರುವುದರಿಂದ ನಿಮ್ಮ ಮುಂದಿನ ಆರ್ಥಿಕ ಯೋಜನೆಗಳು ಸುಗಮವಾಗಿ ಸಾಗುತ್ತದೆ.


Click it and Unblock the Notifications