ಒಂದು ಉತ್ತಮ ವ್ಯವಹಾರ ಆರಂಭಿಸಬೇಕೆಂಬುದು ಹಲವರ ಕನಸು. ಆದ್ರೆ ಆಯ್ಕೆ ಜಾಸ್ತಿ ಇದ್ದಾಗಲು, ನಷ್ಟದ ಭಯದಿಂದ ಹೆಚ್ಚಿನವರು ಬ್ಯುಸಿನೆಸ್ ಆರಂಭಿಸಲು ಮುಂದಾಗುವುದಿಲ್ಲ. ಹೆಚ್ಚಿನವರು ಹೋಟೆಲ್, ರೆಸ್ಟೋರೆಂಟ್ ವ್ಯವಹಾರದ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ನೀಡುತ್ತಾರೆ. ಅಂದರೆ ರೆಸ್ಟೋರೆಂಟ್ ಒಂದು ಓಪನ್ ಮಾಡಿದರೆ ಉತ್ತಮ ಆದಾಯ ಸಂಪಾದಿಸಬಹುದು, ಲಾಭವೂ ಸಿಗುತ್ತದೆ ಎಂಬುದು ಹಲವು ಹೇಳುತ್ತಾರೆ (Hotel, Restaurant Business). ಆದರೆ ಈ ಮಾತುಗಳಿಗೆ ಸಾಕ್ಷಿಯೆಂಬಂತೆ ಇಲ್ಲೊಬ್ಬರು ಇದ್ದಾರೆ ನೋಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪರಿಸರದಲ್ಲಿ "ಹೋಟೆಲ್ ಮಾತೃಛಾಯ" ಓಪನ್ ಮಾಡುವ ಮೂಲಕ ಇಂದು ಯಶಸ್ವಿ ಉದ್ಯಮಿಯಾಗಿದ್ದಾರೆ.

ಇದೀಗ ಹೋಟೆಲ್ ಮಾತೃಛಾಯದ ಮಾಲಕ ರಂಜಿತ್ ಅವರು, ತಾನು ಬೆಳೆಯುವುದಲ್ಲದೇ ಮತ್ತೊಬ್ಬರೂ ಕೂಡ ಬೆಳೆಯಬೇಕೆಂಬ ನಿಟ್ಟಿನಲ್ಲಿ ಸಣ್ಣ ಮಟ್ಟಿನಲ್ಲಿ ರೆಸ್ಟೋರೆಂಟ್ ಆರಂಭಿಸುವುದು ಹೇಗೆ? ಇದರಿಂದ ಸಕ್ಸಸ್ ಹೇಗೆ ಕಾಣೋದು? ಎಂಬ ಟಿಪ್ಸ್ ಕೊಟ್ಟಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಬೆಳ್ತಂಗಡಿಯ ಕೇಂದ್ರ ಬಿಂದು ಅಲ್ಲಿನ ಬಸ್ ನಿಲ್ದಾಣ. ಅದರ 500 ಮೀಟರ್ ದೂರದಲ್ಲಿದೆ ಈ ಮಾತೃಛಾಯ ರೆಸ್ಟೋರೆಂಟ್. ಕಳೆದೊಂದು ವರ್ಷದಿಂದ ಬಾಡಿಗೆ ಜಾಗದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ರಂಜಿತ್ ಅವರು, ಸದ್ಯ ಉತ್ತಮ ಆದಾಯ ಸಂಪಾದಿಸುತ್ತಿದ್ದಾರೆ.

ಯುವಕರಿಗೆ ಉದ್ಯಮಿ ರಂಜಿತ್ ಅವರ ಸಲಹೆಯೇನು?
ಯಾವುದೇ ಉದ್ಯಮ ಆರಂಭಿಸುವ ಮುನ್ನ ಯಾವ ಜಾಗದಲ್ಲಿ ಆರಂಭಿಸುತ್ತಿದ್ದೇವೆ ಮತ್ತು ಅದನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ತಿಳಿದಿರಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪ್ರವಾಸಿ ತಾಣಗಳ ತವರೂರು ಅಂದರೂ ತಪ್ಪಾಗಲಲ್ಲ. ಅಲ್ಲದೇ ಸ್ಥಳೀಯ ಆಹಾರಕ್ಕೆ ಇಲ್ಲಿ ಭಾರೀ ಡಿಮ್ಯಾಂಡ್. ಅದರಿಂದಲೇ ಇಲ್ಲಿನ ರೆಸ್ಟೋರೆಂಟ್‌ಗಳು ಲಾಭದಾಯಕ ವ್ಯವಹಾರವನ್ನು ನಡೆಸುತ್ತಿದೆ. ನೀವೂ ಕೂಡಾ ಹೋಟೆಲ್ ಬ್ಯುಸಿನೆಸ್ ಆರಂಭಿಸಬೇಕೆಂದರೆ ಇಲ್ಲಿದೆ ನೋಡಿ ಸಲಹೆ:
ಸ್ಥಳ ಆಯ್ಕೆ:
ರೆಸ್ಟೋರೆಂಟ್, ಹೋಟೆಲ್ ವ್ಯವಹಾರ ಆರಂಭಿಸುವವರು ಸರಿಯಾದ ಸ್ಥಳ ಆಯ್ಕೆಯನ್ನು ಮಾಡಬೇಕು. ಅಂದರೆ ಪ್ರವಾಸಿ ಸ್ಥಳಗಳ ಪಕ್ಕದಲ್ಲಿ, ಹೈವೇಗಳಲ್ಲಿ, ಬೆಳ್ತಂಗಡಿಯಂತಹ ಮಾರ್ಕೆಟ್ ಸಮೀಪದಲ್ಲಿ ಆರಂಭಿಸಬೇಕು ಅಂತಾರೆ ರಂಜಿತ್, ಅಲ್ಲದೇ ಪಾರ್ಕಿಂಗ್ ಜಾಗ, ಸ್ವಚ್ಛತೆ ಮತ್ತು ಉತ್ತಮ ಸಂವಹನ, ಆರೋಗ್ಯಕರ, ರುಚಿಕರ ಆಹಾರ ಕೂಡಾ ನೀಡಬೇಕು. ಇನ್ನು ಸಣ್ಣ ಮಟ್ಟದ ರೆಸ್ಟೋರೆಂಟ್ ಆದ್ರೆ 10 ರಿಂದ 20 ಸೀಟುಗಳಾಗುವಷ್ಟು ಜಾಗ ಬೇಕಾಗುತ್ತದೆ.
ಮೆನು ಆಯ್ಕೆ:
ಮುಖ್ಯವಾಗಿ ಸ್ಥಳೀಯ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ದಕ್ಷಿಣ ಕನ್ನಡದ ಜನರು ಸ್ಥಳೀಯ ಆಹಾರದ ಶೈಲಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅದರಲ್ಲೂ ಮೀನೂಟಕ್ಕೆ ಭಾರೀ ಡಿಮ್ಯಾಂಡ್ ಇರುತ್ತದೆ. ಅಲ್ಲದೇ ಕೋರಿ-ರೊಟ್ಟಿ, ಚಿಕನ್ ಸುಕ್ಕ, ಫಿಶ್ ಕರಿ, ನೀರು ದೋಸೆ, ಬಿರಿಯಾನಿ, ವೆಜ್ ಮೀಲ್ಸ್, ಇಡ್ಲಿ, ಪುಂಡಿ (ಕಡುಬು), ವಡೆ, ಬನ್ಸ್, ಗೋಳಿಬಜೆ, ಚಹಾ, ಕಾಫಿ, ಕಬಾಬ್, ಫಿಶ್ ಫ್ರೈ (ಹಲವು ವಿಧದ ಮೀನುಗಳು) ಹೀಗೆ ವೆಜ್ ಮತ್ತು ನಾನ್ ವೆಜ್ ಆಯ್ಕೆಗಳನ್ನು ನೀಡಿದರೆ ಉತ್ತಮ.

ಲೈಸೆನ್ಸ್ ಅಗತ್ಯ:
ಇನ್ನು ಯಾವುದೇ ಉದ್ಯಮ ಆರಂಭಿಸಬೇಕೆಂದರು ಅದಕ್ಕೆ ಸಂಬಂಧಿಸಿದ ಅನುಮತಿ ಬೇಕು. ಅದರಲ್ಲೂ ಹೋಟೆಲ್ ಬ್ಯುಸಿನೆಸ್ ಆರಂಭಿಸುವವರು ಟ್ರೇಡ್ ಲೈಸೆನ್ಸ್ ಪಡೆಯುವುದು ಅಗತ್ಯ. ಅದನ್ನು ಸ್ಥಳೀಯ ನಗರ ಪಂಚಾಯತ್ ಅಥವಾ ಗ್ರಾಮ ಪಂಚಾಯತ್‌ಗಳಲ್ಲಿ ಪಡೆಯಬಹುದು. ಅಂದರೆ ಆಯಾ ನಗರದ ಕಾನೂನಿಗೆ ತಕ್ಕಂತೆ ಲೈಸೆನ್ಸ್ ಪಡೆಯಬೇಕು.

ಖರ್ಚು ಮತ್ತು ಲಾಭ:
ಇನ್ನು ರಂಜಿತ್ ಅವರು ಹೇಳುವಂತೆ, ಹೋಟೆಲ್ ಬ್ಯುಸಿನೆಸ್‌ನಲ್ಲಿ ಲಾಭ ನಾವು ಮಾಡುವ ಖರ್ಚು, ನಿರ್ವಹಣೆ ಮೇಲೆ ಅವಲಂಬನೆಯಾಗಿರುತ್ತದೆ. ಅಂದರೆ ಆರಂಭದಲ್ಲಿ ಕಮ್ಮಿಯಂದರೂ 5 ರಿಂ 7 ಲಕ್ಷ ಬಜೆಟ್ ಬೇಕಾಗುತ್ತದೆ. ಅಂದರೆ ರೆಂಟ್, ಅಡ್ವಾನ್ಸ್, ಇಂಟೀರಿಯರ್ ಕಿಚನ್ ಐಟಮ್ಸ್‌ಗಾಗಿ ಖರ್ಚು ಮಾಡಬೇಕಾಗುತ್ತದೆ. ನಂತರ ದಿನದ ಖರ್ಚು ಮಾಡಬೇಕಾಗುತ್ತದೆ. ಅಂದರೆ ತರಕಾರಿ, ನಾನ್‌ವೆಜ್, ಅಡುಗೆ ಸಾಮಾನುಗಳಿಗೆ ಖರ್ಚು ಮಾಡಬೇಕು ಆದಷ್ಟು ಹೋಲ್‌ಸೇಲ್‌ನಲ್ಲಿ ಖರೀದಿಸಿ ಎಂದು ಟಿಪ್ಸ್ ನೀಡುತ್ತಾರೆ ರಂಜಿತ್. ಇನ್ನು ದಿನದ ಖರ್ಚು ನೀವು 10 ಸಾವಿರ ಮಾಡಿದ್ರೆ, 20 ಸಾವಿರಕ್ಕೂ ಅಧಿಕ ಲಾಭ ಪಡೆಯಬಹುದು ಅಂತಾರೆ ರಂಜಿತ್. ಆದರೆ ಇಲ್ಲಿ ನಿರ್ವಹಣೆ ಬಹಳ ಮುಖ್ಯವಾಗಿರುತ್ತದೆ.
ರಂಜಿತ್ ಮನದಾಳದ ಮಾತು:
ಇನ್ನು ವ್ಯವಹಾರದ ಬಗ್ಗೆ ಕೇಳಿದಾಗ ರಂಜಿತ್, "ಕೇವಲ ವ್ಯವಹಾರ ಆರಂಭಿಸಬೇಕು ಎಂಬ ಕನಸು ಕಂಡರೆ ಸಾಲದು. ಬದಲಿಗೆ ಅದಕ್ಕಾಗಿ ಶ್ರಮವೂ ಪಡಬೇಕು. ಮನಸಿದ್ದರೆ ಎಲ್ಲವೂ ಸಾಧ್ಯ. ಅಲ್ಲದೇ ಇಲ್ಲಿ ನಾವು ಕೇವಲ ಓನರ್‌ಗಳಾಗದೆ, ಕೆಲಸಗಾರರೂ ಆಗಿರಬೇಕು. ಹಾಗಿದ್ದರೆ ಮಾತ್ರ ನೀವು ಒಂದು ಯಶಸ್ವಿ ವ್ಯವಹಾರವನ್ನಾಗಿ ಬದಲಾಯಿಸಬುದು" ಎಂದು ಹೇಳಿದ್ದಾರೆ.


Click it and Unblock the Notifications