ಮಹಿಳೆಯರು (Women) ಇಂದು ಸ್ವಾವಲಂಬಿಗಳಾಗಿ ಬದುಕಬೇಕೆಂದು, ಅನೇಕ ಹಣ ಗಳಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಆರ್ಥಿಕವಾಗಿ ಸಬಲರಾಗುವುದು ಇತ್ತೀಚಿನ ಜನರ ಗುರಿ. ಭಾರತದಲ್ಲಿ, 2025ರ ವೇಳೆಗೆ ಸುಮಾರು ಎರಡು ಕೋಟಿ ಮಹಿಳೆಯರು ಮನೆಯಿಂದಲೇ ಕೆಲಸ ಮಾಡಿ ಆದಾಯ ಗಳಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇನ್ನು ಸರ್ಕಾರದ 'ಸ್ಕಿಲ್ ಇಂಡಿಯಾ' (Skill India) ಯೋಜನೆ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ವಿಸ್ತರಣೆ ಇದಕ್ಕೆ ಪ್ರಮುಖ ಕಾರಣವಾಗಿದೆ.

ಮನೆಯಿಂದಲೇ ಕೆಲಸ ಮಾಡಿ, ಹಣ ಗಳಿಸಿ
1. ಟಿಫಿನ್ ಸರ್ವೀಸ್:
ಅಡುಗೆ ಮಾಡುವುದೂ ಕೂಡಾ ಕಲೆ. ಆದ್ರೆ ಎಲ್ಲರಿಗೂ ಇಂತಹ ವಿಶೇಷ ಕಲೆ ಇರುವುದಿಲ್ಲ. ಆದ್ರೆ ಒಳ್ಳೆಯ ಅಡುಗೆ ಮಾಡುವವರಿಗೆ ಟಿಫಿನ್ ಸರ್ವೀಸ್ ಬ್ಯುಸಿನೆಸ್ ಶುರು ಮಾಡಬಹುದು. ಬೆಂಗಳೂರು, ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಕಚೇರಿಗೆ ಹೋಗುವ ಯುವಕರು ಹೆಚ್ಚಿನವರು ಪಿಜಿಯಲ್ಲಿರುತ್ತಾರೆ. ಆದ್ರೆ ಇವರಿಗೆ ಮನೆಯ ಊಟ ತಿನ್ನಬೇಕು ಎಂದೆನಿಸುತ್ತದೆ. ಅಂಥವರಿಗೆ ನೀವು ಈ ಬ್ಯುಸಿನೆಸ್ ಶುರು ಮಾಡಬಹುದು. ಕೇವಲ ₹500-₹1000 ಹೂಡಿಕೆಯೊಂದಿಗೆ ಇದನ್ನು ಪ್ರಾರಂಭಿಸಬಹುದು. ಕೆಲವು ಕಂಟೇನರ್‌ಗಳು ಮತ್ತು ಸರಳ ಮಾರ್ಕೆಟಿಂಗ್ ತಂತ್ರಗಳು ಗೊತ್ತಿದ್ದರೆ ಸಾಕು.
ಒಮ್ಮೆ ನೀವು ಬ್ಯುಸಿನೆಸ್ ಆರಂಭಿಸಿದ ನಂತರ ಅದನ್ನು ನೀವು WhatsApp, Instagramಗಳಲ್ಲಿ ಅಥವಾ JioMart ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಚಾರ ಮಾಡಬಹುದು. ಆರಂಭದಲ್ಲಿ 5-10 ಗ್ರಾಹಕರೊಂದಿಗೆ ಶುರುಮಾಡಿ, ನಂತರ ಹೆಚ್ಚಿನ ಗ್ರಾಹಕರು ಬರುತ್ತಾರೆ. ಈ ಮೂಲಕ ನಿರಂತರ ಆದಾಯ ಗಳಿಸಬಹುದು.
2. ಕರಕುಶಲ ವಸ್ತುಗಳು ಮತ್ತು ಟೈಲರಿಂಗ್:
ನೀವು ಹೊಲಿಗೆ, ಎಂಬ್ರಾಯ್ಡರಿ ಅಥವಾ ಕರಕುಶಲ ಕೆಲಸಗಳಲ್ಲಿ ಪರಿಣತಿ ಹೊಂದಿದ್ದರೆ, ನೀವು ಅವುಗಳನ್ನು ಕೂಡಾ ತಯಾರಿಸಿ ಆನ್‌ಲೈನ್‌ನಲ್ಲಿ ಸೇಲ್ ಮಾಡಬಹುದು. Meesho, Etsy, Instagram ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ತಯಾರಿಸಿದ ಪ್ರೊಡಕ್ಟ್‌ಗಳನ್ನು ಸೇಲ್ ಮಾಡಿ. ₹2000-₹3000 ವೆಚ್ಚದಲ್ಲಿ ಉತ್ಪನ್ನಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿ. ಆ ನಂತರ ಮಾರಾಟ ಮಾಡಿ.
3. ಆನ್‌ಲೈನ್ ಟ್ಯೂಷನ್:
ಸಾಮಾನ್ಯವಾಗಿ ಊರುಗಳಲ್ಲಿ ಹೋಗಿ ಟ್ಯೂಷನ್ ಕೊಡ್ತಾರೆ. ಆದ್ರೆ ಯಾವುದಾದರೂ ವಿಷಯದಲ್ಲಿ ನೀವು ತಿಳಿದಿದ್ದರೆ, ಅದನ್ನು ಮಕ್ಕಳಿಗೆ ಆನ್‌ಲೈನ್ ಮೂಲಕ ಪಾಠ ಮಾಡಬಹುದು. 1ನೇ ತರಗತಿಯಿಂದ 10ನೇ ತರಗತಿಯವರೆಗೆ ಗಣಿತ, ಇಂಗ್ಲಿಷ್, ವಿಜ್ಞಾನದಂತಹ ವಿಷಯಗಳ ಬಗ್ಗೆ ಪಾಠ ಮಾಡಬಹುದು. Zoom ಅಥವಾ Google Meet ಮೂಲಕ ಪಾಠ ಮಾಡಬಹುದು. ಕೇವಲ 5000 ವೆಚ್ಚದಲ್ಲಿ ಇಂಟರ್ನೆಟ್ ಮತ್ತು ಲ್ಯಾಪ್‌ಟಾಪ್ ಸೌಲಭ್ಯದೊಂದಿಗೆ 10 ಸಾವಿರದವರೆಗೆ ಆದಾಯ ಗಳಿಸಬಹುದು.
4. ಹರ್ಬಲ್ ಉತ್ಪನ್ನಗಳು:
ಅರಿಶಿನ, ಬೇವು, ಅಲೋವೆರಾದಂತಹ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಹರ್ಬಲ್ ಸೋಪುಗಳು, ಫೇಸ್‌ಪ್ಯಾಕ್‌ಗಳು ಮತ್ತು ತೈಲಗಳನ್ನು ಮಾರಾಟ ಮಾಡಬಹುದು. ಕೇವಲ 2000 ದಿಂದ 4000 ರೂ.ವರೆಗಿನ ಹೂಡಿಕೆಯೊಂದಿಗೆ ಮನೆಯಿಂದಲೇ ಇದನ್ನು ಶುರು ಮಾಡಬಹುದು. ನೀವು ತಯಾರಿಸಿದ ಉತ್ಪನ್ನವನ್ನು WhatsApp, Instagram ಅಥವಾ ಸ್ಥಳೀಯ ಮಾರುಕಟ್ಟೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಿ, ಹಣ ಸಂಪಾದಿಸಬಹುದು.
5. ಕಂಟೆಂಟ್ ಕ್ರಿಯೇಷನ್:
ಸೋಷಿಯಲ್ ಮೀಡಿಯಾ ಮೂಲಕ ಆದಾಯ ಗಳಿಸಬೇಕೆಂದುಕೊಂಡವರಿಗೆ ಇದು ಬೆಸ್ಟ್ ಬ್ಯುಸಿನೆಸ್. ವೀಡಿಯೋ, ರೀಲ್ಸ್ ಮಾಡುವ ಆಸಕ್ತಿ ನಿಮಗಿದ್ಯಾ? ಹಾಗಿದ್ದರೆ, YouTube ಅಥವಾ Instagram ನಲ್ಲಿ ರೆಸಿಪಿ, ಟೈಲರಿಂಗ್ ಟಿಪ್ಸ್, ಬ್ಯೂಟಿ ಟಿಪ್ಸ್‌ಗಳಂತಹ ವೀಡಿಯೊಗಳನ್ನು ಪೋಸ್ಟ್ ಮಾಡಿ, ಹಣ ಸಂಪಾದಿಸಬಹುದು. ಬರೀ ಒಂದು ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಇದ್ದರೆ ಸಾಕು. ನಿಮ್ಮ ಯೂಟ್ಯೂಬ್ ಚಾನೆಲ್, 1 ಸಾವಿರ ಸಬ್‌ಸ್ಕ್ರೈಬರ್ಸ್ ಮತ್ತು 4 ಸಾವಿರ ಗಂಟೆ ವೀಕ್ಷಣೆ ಪಡೆದರೆ, ನೀವು ಆದಾಯ ಗಳಿಸಬಹುದು.
ಇಂತಹ ಪ್ಲಾನ್‌ಗಳು ಮಹಿಳೆಯರಿಗಾಗಿ ತುಂಬಾನೇ ಪ್ರಯೋಜನಕಾರಿಯಾಗಿದ್ದು, ಮನೆಯಲ್ಲೇ ಕುಳಿತು ಹಣ ಮಾಡಲು ಒಳ್ಳೆಯ ಪ್ಲಾನ್‌ಗಳಾಗಿದೆ.


Click it and Unblock the Notifications