ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಭಾರತೀಯರು ದೀಪಾವಳಿ ಹಬ್ಬವನ್ನು ಬಹಳ ಗೌರವದಿಂದ, ಸಂಭ್ರಮದಿಂದ ಆಚರಿಸುತ್ತಾರೆ. ಈಗಾಗಲೇ ಕೆಲವರು ಹಬ್ಬದ ತಯಾರಿಗಳನ್ನು ಶುರುಮಾಡಿರುತ್ತಾರೆ. ಆದ್ರೆ ದೀಪಾವಳಿ ಹಬ್ಬದ (Deepavali) ಸಂದರ್ಭದಲ್ಲೂ ಯಾರಾದ್ರೂ ಬ್ಯುಸಿನೆಸ್ ಶುರು ಮಾಡ್ಬೇಕು, ಹಣ ಮಾಡ್ಬೇಕು (Earn Money) ಅನ್ನೋ ಪ್ಲಾನ್ ಮಾಡ್ತಾ ಇದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ಸೂಪರ್ ಡೂಪರ್ ಬ್ಯುಸಿನೆಸ್ ಐಡಿಯಾ (Business Idea). ಈ ಬಾರಿ ದೀಪಾವಳಿಯನ್ನು ಈ ವ್ಯವಹಾರದ ಜೊತೆಗೆ ಸಂಭ್ರಮಾಚರಣೆ ಮಾಡಿ.

ದೀಪಾವಳಿ ಸಮಯದಲ್ಲಿ ಮನೆ, ಆಫೀಸ್, ಅಂಗಡಿ, ವಾಹನಗಳನ್ನು ಬಗೆ ಬಗೆಯ ಅಲಂಕಾರಿಕ ವಸ್ತುಗಳಿಂದ, ಗೂಡುದೀಪಗಳಿಂದ, ಕಲರ್‌ಫುಲ್ ಲೈಟಿಂಗ್ಸ್‌ಗಳಿಂದ ಅಲಂಕಾರ ಮಾಡುತ್ತಾರೆ. ಆದ್ದರಿಂದ ದೀಪಾವಳಿ ಸಂದರ್ಭದಲ್ಲಿ ಫ್ಯಾನ್ಸಿ ಅಂಗಡಿಗಳಿಗೆ ಭಾರೀ ಡಿಮ್ಯಾಂಡು, ಹೂ, ಅಲಂಕಾರಿಕ ವಸ್ತುಗಳ ಅಂಗಡಿಗಳಿಗೆ ಭಾರೀ ಬೇಡಿಕೆ ಇರುತ್ತೆ. ದೀಪಾವಳಿ ಸಮಯದಲ್ಲಿ ನೀವೂ ಕೂಡ ಸಣ್ಣ ವ್ಯವಹಾರ ಪ್ರಾರಂಭಿಸುವ ಆಸಕ್ತಿ ಹೊಂದಿದ್ದರೆ, ನಾವು ನಿಮಗೆ ಟಿಪ್ಸ್ ನೀಡುತ್ತೇವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಿಹಿತಿಂಡಿ ಅಂಗಡಿ:
ಸಿಹಿತಿಂಡಿ ಅಂಗಡಿಗಳಿಗೆ ದೀಪಾವಳಿ ಮಾತ್ರವಲ್ಲ, ಯಾವುದೇ ಹಬ್ಬದ ಸಂದರ್ಭದಲ್ಲೂ ಭಾರೀ ಬೇಡಿಕೆ ಇರುತ್ತದೆ. ದೀಪಾವಳಿ ಹಬ್ಬದಲ್ಲಿ ಮಾರಾಟ ಮಾಡಬಹುದಾದ ತಿಂಡಿಗಳನ್ನೇ ನಿಮ್ಮ ಅಂಗಡಿಯಲ್ಲಿ ಮಾರಾಟ ಮಾಡಿ. ಅಲ್ಲದೇ ಮನೆಯಲ್ಲೇ ತಯಾರಿಸಿದ ತಿಂಡಿಗಳಿಗೆ ಭಾರೀ ಬೇಡಿಕೆಯಿರುತ್ತೆ. 5 ರಿಂದ 10 ಸಾವಿರದಷ್ಟು ಹಣ ಖರ್ಚು ಮಾಡಿ ಮನೆಯಲ್ಲೇ ತಿಂಡಿ ತಯಾರಿಸಿ, ಮನೆ ಮುಂಭಾಗದಲ್ಲೇ ಬ್ಯುಸಿನೆಸ್ ಆರಂಭಿಸಿ. ನೀವು ಪ್ರತಿ ದಿನ ಕಮ್ಮಿಯಂದರೂ 2 ಸಾವಿರದಿಂದ 5 ಸಾವಿರದವರೆಗೆ ಆದಾಯ ಪಡೆಯಬಹುದು. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಈ ಆದಾಯ ಮತ್ತಷ್ಟು ಹೆಚ್ಚಾಗಬಹುದು. ಇನ್ನು ನೀವು ಮಾಡೋ ತಿಂಡಿಗಳ ಗುಣಮಟ್ಟ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಬಹುದು.
ಅಲಂಕಾರಿಕ ವಸ್ತುಗಳ ಬ್ಯುಸಿನೆಸ್:
ನೀವು ದೀಪಾವಳಿ ಸಂದರ್ಭದಲ್ಲೇ ಬ್ಯುಸಿನೆಸ್ ಸ್ಟಾರ್ಟ್ ಮಾಡ್ಬೇಕು ಅಂದುಕೊಂಡಿದ್ದರೆ, ಅಲಂಕಾರಿಕ ಅಂಗಡಿಗಳು ಸಹ ಬೆಸ್ಟ್. ಆದರೆ ನೀವು ಯಾವ ರೀತಿಯ ಅಂಗಡಿ ಹೊಂದುತ್ತೀರಿ ಎಂಬುದು ಮುಖ್ಯ. ಮಣ್ಣಿನ ದೀಪಗಳು, ಕಲರ್‌ಫುಲ್ ಲೈಟ್‌ಗಳು, ಮೇಣದ ಬತ್ತಿಗಳು, ರಂಗೋಲು ಪುಡಿ, ಗೂಡುದೀಪಗಳು, ಗೋಡೆಯ ಅಲಂಕಾರಿಕ ವಸ್ತುಗಳು, ಹೂವಿನ ಅಲಂಕಾರಗಳು ಇವುಗಳಿಗೆಲ್ಲಾ ಭಾರೀ ಬೇಡಿಕೆಯಿರುತ್ತದೆ. ಆದ್ದರಿಂದ ಇವುಗಳನ್ನೆಲ್ಲಾ ಮಾರಾಟ ಮಾಡಿದರೆ ಒಳ್ಳೆಯದು.
ಪಟಾಕಿ ಅಂಗಡಿ:
ಪಟಾಕಿ ಅಂಗಡಿ ಹಾಕೋದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ಕಠಿಣ ನಿಯಮಗಳಿವೆ. ಸರ್ಕಾರದಿಂದ ಪರವಾನಗಿ ಪಡೆದು ಪಟಾಕಿ ಅಂಗಡಿಯನ್ನು ಹಾಕಬಹುದು. ಅಲ್ಲದೇ ಸರ್ಕಾರದ ನಿಯಮಗಳನ್ನು ಪಾಲಿಸುವುದು ಕಡ್ಡಾಯ. 10 ರಿಂದ 20 ಸಾವಿರದವರೆಗಿನ ಬಂಡವಾಳ ಹಾಕಿ ಡಬಲ್ ಲಾಭವನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.
ಪ್ರಮೋಷನ್ ಅಗತ್ಯ:
ಇದು ಡಿಜಿಟಲ್ ಯುಗ. ಸದ್ಯ ಏನೇ ಹೊಸದಾಗಿ ಆರಂಭಿಸುವುದಾದರೂ ಪ್ರಮೋಷನ್ ಅಗತ್ಯ. ಆದ್ದರಿಂದ ನಿಮ್ಮ ಬ್ಯುಸಿನೆಸ್ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಇನ್ನಿತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಮೋಷನ್ ಮಾಡಿದರೆ ಒಳ್ಳೆಯದು. ಅಲ್ಲದೇ ಆನ್‌ಲೈನ್‌ನಲ್ಲೂ ನೀವು ಮಾರಾಟ ಮಾಡಬಹುದು.
ಕಡಿಮೆ ಹೂಡಿಕೆ, ಸರಿಯಾದ ಪ್ಲಾನ್ ಮತ್ತು ಕಠಿಣ ಶ್ರಮ, ತಾಳ್ಮೆ, ಒಂದು ಯಶಸ್ವಿ ಉದ್ಯಮವನ್ನಾಗಿ ಪರಿವರ್ತಿಸಬಹುದು. ಆದ್ದರಿಂದ ನೀವೂ ಕೂಡಾ ವ್ಯವಹಾರದಲ್ಲಿ ಲಾಭ ಗಳಿಸಬೇಖು, ಸಕ್ಸಸ್ ಕಾಣಬೇಕೆಂದರೆ ಈ ಸೂತ್ರ ಫಾಲೋ ಮಾಡಿ.
(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)


Click it and Unblock the Notifications