ಒಂದೇ ಮೊಬೈಲ್‌ನಲ್ಲಿ ಎರಡು ಸಿಮ್‌ಗಳನ್ನು ಹಾಕುವ ಆಯ್ಕೆ ಬಂದ ಬಳಿಕ ಜನರು ಎರಡು ಮೊಬೈಲ್‌ಗಳಲ್ಲಿ ನಾಲ್ಕು ಸಿಮ್‌ಗಳನ್ನು ಹಾಕಿ ಬಳಕೆ ಮಾಡುತ್ತಿರುವ ಸ್ಥಿತಿಯಿದೆ. ಈ ನಡುವೆ ಈಗ ಸಿಮ್ ಕಾರ್ಡ್ ನಿಯಮವನ್ನು ಕಠಿಣಗೊಳಿಸಲಾಗಿದೆ.
ಸಿಮ್ ಕಾರ್ಡ್ ಡೀಲರ್‌ಗಳ ಕಡ್ಡಾಯ ಪರಿಶೀಲನೆ ಮತ್ತು ಬೃಹತ್ ಸಂಪರ್ಕಗಳ ನಿಬಂಧನೆಯನ್ನು ರದ್ದುಗೊಳಿಸುವುದು ಸೇರಿದಂತೆ ಹೊಸ ಸಿಮ್ ಕಾರ್ಡ್ ನಿಯಮಗಳನ್ನು ಡಿಸೆಂಬರ್ 1, 2023 ರಿಂದ ಭಾರತದಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಆನ್‌ಲೈನ್ ಹಣಕಾಸು ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಈ ನಿಯಮ ಬಿಗಿಗೊಳಿಸಲಾಗಿದೆ.

ದೂರಸಂಪರ್ಕ ಇಲಾಖೆ ಸಿಮ್ ಬಳಕೆದಾರರಿಗೆ ಈ ಹೊಸ ನಿಯಮಗಳನ್ನು ಘೋಷಿಸಿದೆ. ಇದನ್ನು ಆರಂಭದಲ್ಲಿ ಆಗಸ್ಟ್ 1 ರಂದು ಪ್ರಾರಂಭಿಸಲು ನಿರ್ಧಾರ ಮಾಡಲಾಗಿತ್ತು. ಆದರೆ ಬಳಿಕ ಮುಂದೂಡಿಕೆ ಮಾಡಲಾಯಿತು. ಈಗ ಡಿಸೆಂಬರ್ ಒಂದರಿಂದ ಅಂದರೆ ನಾಳೆಯಿಂದ ಆರಂಭವಾಗಲಿದೆ. ಈ ಬಗ್ಗೆ ನೀವು ತಿಳಿದಿರಲೇ ಬೇಕಾದ ಮಾಹಿತಿ ಇಲ್ಲಿದೆ ಮುಂದೆ ಓದಿ....
ಟೆಲಿಕಾಂ ಆಪರೇಟರ್‌ಗಳಿಗೆ ನೋಂದಣಿ
ಟೆಲಿಕಾಂ ಆಪರೇಟರ್‌ಗಳು ಫ್ರಾಂಚೈಸಿಗಳು, ಪಾಯಿಂಟ್-ಆಫ್-ಸೇಲ್ (ಪಿಒಎಸ್) ಏಜೆಂಟ್‌ಗಳು ಮತ್ತು ವಿತರಕರನ್ನು ನೋಂದಾಯಿಸುವ ಅಗತ್ಯವಿದೆ. ಈ ಕ್ರಮವು ಪಿಒಎಸ್ ಏಜೆಂಟ್‌ಗಳು ಅನಗತ್ಯ ವಿಚಾರಗಳಿಗೆ ಸಿಮ್ ಕಾರ್ಡ್‌ಗಳನ್ನು ನೀಡುವುದನ್ನು ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಯಲು ಜಾರಿಗೆ ತರಲಾಗುತ್ತಿದೆ.
ಸಿಮ್ ಕಾರ್ಡ್ ಹಂಚಿಕೆ ಕಾರ್ಯವನ್ನು ಮಾಡಬೇಕಾದರೆ, ಪರವಾನಗಿದಾರರೊಂದಿಗೆ ಲಿಖಿತ ಒಪ್ಪಂದವನ್ನು ಮಾಡಿಕೊಂಡು, ನೋಂದಾಯಿಸಿಕೊಳ್ಳಬೇಕು. ಪಿಒಎಸ್ ಏಜೆಂಟ್‌ಗಳು ಹೊಸ ನಿಯಮಗಳನ್ನು ಅನುಸರಿಸದಿದ್ದರೆ ಅವರ ಪರವಾನಗಿ ರದ್ದು ಮಾಡಲಾಗುತ್ತದೆ ಮತ್ತು ಮೂರು ವರ್ಷಗಳ ಕಾಲ ಕಪ್ಪುಪಟ್ಟಿಗೆ ಹಾಕಲಾಗುತ್ತದೆ. ಅಂದರೆ ಮೂರು ವರ್ಷ ಈ ಕೆಲಸ ಮಾಡಲಾಗುವುದಿಲ್ಲ. ಅಸ್ತಿತ್ವದಲ್ಲಿರುವ ಪಿಒಎಸ್ ಏಜೆಂಟ್‌ಗಳು ಹೊಸ ನೋಂದಣಿ ಪ್ರಕ್ರಿಯೆಯನ್ನು ಅನುಸರಿಸಲು 12-ತಿಂಗಳ ಅವಕಾಶ ನೀಡಲಾಗಿದೆ.
ಆಧಾರ್ ದುರ್ಬಳಕೆಗೆ ತಡೆ
ಆಧಾರ್‌ನ ದುರ್ಬಳಕೆಯನ್ನು ಪರಿಹರಿಸಲು, ಮುದ್ರಿತ ಆಧಾರ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಜನಸಂಖ್ಯಾ ವಿವರಗಳನ್ನು ಕಡ್ಡಾಯವಾಗಿ ಸೆರೆಹಿಡಿಯಬೇಕು. ಮೊಬೈಲ್ ಸಂಖ್ಯೆಯ ಸಂಪರ್ಕ ಕಡಿತಗೊಂಡರೆ, 90 ದಿನಗಳ ಕೂಲ್-ಆಫ್ ಅವಧಿಯು ಲಭ್ಯವಿರುತ್ತದೆ.
ಕಡ್ಡಾಯ ಇಕೆವೈಸಿ
ಡಿಸೆಂಬರ್ 1 ರಿಂದ ಜಾರಿಗೆ ಬರಲಿರುವ ಹೊಸ ನಿಯಮಗಳಲ್ಲಿ ಡಿಜಿಟಲ್ ನೋ ಯುವರ್ ಕಸ್ಟಮರ್ (ಕೆವೈಸಿ) ಅನ್ನು ಕಡ್ಡಾಯಗೊಳಿಸಲಾಗಿದೆ. ಇದು ಪ್ರತಿ ಸಿಮ್ ಬಳಕೆದಾರರ ಡಿಜಿಟಲ್ ಪರಿಶೀಲನೆಯನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ.
ಬೃಹತ್ ಸಂಪರ್ಕಗಳ ಪೂರೈಕೆ ನಿಲ್ಲಿಸುವುದು
ಸಿಮ್ ಡೀಲರ್‌ಗಳಿಂದ ಮೋಸದ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ಬೃಹತ್ ಸಂಪರ್ಕಗಳನ್ನು ನೀಡುವುದನ್ನು ನಿಲ್ಲಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಅಶ್ವಿನಿ ವೈಷ್ಣವ್, "ವಂಚನೆಗಳನ್ನು ತಡೆಯಲು ಸಿಮ್ ಡೀಲರ್‌ಗಳ ನಿರ್ವಿವಾದದ ಪರಿಶೀಲನೆಯು ಕಡ್ಡಾಯವಾಗಿದೆ. ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಡೀಲರ್‌ಗಳಿಗೆ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ," ಎಂದು ಹೇಳಿದರು.
ಈ ಕ್ರಮಗಳು ಒಟ್ಟಾರೆಯಾಗಿ ಸಿಮ್ ಕಾರ್ಡ್‌ಗಳ ವಿತರಣೆ ಮತ್ತು ಬಳಕೆಯಲ್ಲಿ ಭದ್ರತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಸುರಕ್ಷಿತ ಆನ್‌ಲೈನ್ ಪರಿಸರಕ್ಕೆ ಇದು ಸಹಕಾರಿಯಾಗಿದೆ. ವಂಚನೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಚಿವರು ತಿಳಿಸಿದರು.


Click it and Unblock the Notifications