ವಯಸ್ಸಾದವರಿಗೆ, 60 ವರ್ಷ ದಾಟಿದವರಿಗೆ ಸರ್ಕಾರದಿಂದ ಒಂದಿಷ್ಟು ಹಣದ ರೂಪದಲ್ಲಿ ಪಿಂಚಣಿ ನೀಡಲಾಗುತ್ತದೆ. ಆದ್ರೆ ಕೆಲವು ವರ್ಷಗಳ ಹಿಂದೆ ಈ ಪಿಂಚಣಿ ಹಣದಲ್ಲೂ (Pension Money) ವಂಚನೆ ಮಾಡುತ್ತಿದ್ದದ್ದು ಬೆಳಕಿಗೆ ಬಂದ ಹಿನ್ನೆಲೆ, ಸರ್ಕಾರ ಪ್ರತೀ ವರ್ಷ ಜೀವನ್ ಪ್ರಮಾಣ ಪತ್ರ (Life Certificate) ಸಲ್ಲಿಸುವುದನ್ನು ಕಡ್ಡಾಯ ಮಾಡಿತ್ತು. ಜೀವನ್ ಪ್ರಮಾಣ ಪತ್ರ ಎಂದರೆ, ಪಿಂಚಣಿದಾರರ ಅಸ್ತಿತ್ವದ ಬಗ್ಗೆ ದೃಢೀಕರಣ ಸಲ್ಲಿಸುವುದಾಗಿದೆ. ಇದನ್ನು ಪ್ರತೀ ವರ್ಷ ಪಿಂಚಣಿದಾರರು ಕಡ್ಡಾಯವಾಗಿ ಸಲ್ಲಿಸಲೇಬೇಕು. ಆ ನಂತರವೇ ಪಿಂಚಣಿ ಹಣ ಪಡೆಯಲು ಅರ್ಹರಾಗುತ್ತಾರೆ. ಜೀವನ್ ಪ್ರಮಾಣಪತ್ರ (Jeevan Pramaan) ಸಲ್ಲಿಸದಿದ್ರೆ ಹಣ ಬರುವುದು ಸ್ಥಗಿತವಾಗುತ್ತದೆ.

ಪ್ರತೀ ತಿಂಗಳು ಪಿಂಚಣಿ ಪಡೆಯುವ ನಿವೃತ್ತ ನೌಕರರಿಗೆ ಇದೀಗ ಸರ್ಕಾರ ಪ್ರಮುಖ ಎಚ್ಚರಿಕೆ ನೀಡಿದೆ. ನವೆಂಬರ್ 30ರೊಳಗೆ ಜೀವನ್ ಪ್ರಮಾಣಪತ್ರ ಸಲ್ಲಿಸದಿದ್ದರೆ, ಪಿಂಚಣಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಹೌದು, ಪಿಂಚಣಿದಾರರು ಈ ತಿಂಗಳ ಅಂತ್ಯದೊಳಗೆ ತಮ್ಮ ಜೀವನ್ ಪ್ರಮಾಣಪತ್ರ ಸಲ್ಲಿಕೆ ಮಾಡದಿದ್ದರೆ ಪಿಂಚಣಿ ಹಣ ಬರುವುದಿಲ್ಲ. ಸರ್ಕಾರಿ ನೌಕರರಾಗಿ ಉದ್ಯೋಗದಲ್ಲಿದ್ದು, ಈಗ ನಿವೃತ್ತಿ ಪಡೆದು ಪಿಂಚಣಿ ಪಡೆಯುತ್ತಿರುವವರು ಕಡ್ಡಾಯವಾಗಿ ಜೀವನ್ ಪ್ರಮಾಣಪತ್ರ ಸಲ್ಲಿಸಲೇ ಬೇಕು. ಇದು ಮುಂದಿನ ಒಂದು ವರ್ಷ ಪಿಂಚಣಿ ಪಡೆಯಬಹುದು. ಈ ಡಿಜಿಟಲ್ ಯುಗದಲ್ಲಿ ಮನೆಯಲ್ಲೇ ಕೂತು, ಆನ್‌ಲೈನ್‌ನಲ್ಲಿ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ಸರ್ಕಾರ ಜಾರಿಗೆ ತಂದಿರುವ ಈ ಡಿಜಿಟಲ್ ವ್ಯವಸ್ಥೆಯು ಹಿರಿಯ ನಾಗರಿಕರು ಯಾವುದೇ ಸಮಸ್ಯೆಯಿಲ್ಲದೇ ಪೆನ್ಷನ್ ಹಣವನ್ನು ಪಡೆಯಬಹುದು. ಭಾರತದಲ್ಲಿ ಜೀವನ್ ಪ್ರಮಾಣಪತ್ರ ಆಧಾರ್ ಆಧಾರಿತ ಬಯೋಮೆಟ್ರಿಕ್‌ನೊಂದಿಗೆ ಲಿಂಕ್ ಆಗಿದ್ದು, ಇದು 1 ಕೋಟಿಗೂ ಹೆಚ್ಚು ಕುಟುಂಬಗಳು ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ.
ಪ್ರತಿ ವರ್ಷ ನವೆಂಬರ್ 1 ರಿಂದ 30ರವರೆಗೆ ಪಿಂಚಣಿದಾರರು ತಮ್ಮ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಈ ಪ್ರಮಾಣಪತ್ರ ಸಲ್ಲಿಸಿದ ನಂತರವಷ್ಟೇ ಪಿಂಚಣಿದಾರರ ಖಾತೆಗೆ ಪ್ರತೀ ತಿಂಗಳು ಹಣ ಜಮಾ ಆಗುತ್ತದೆ. ಹಿಂದೆ ಪಿಂಚಣಿದಾರರು ಪಿಂಚಣಿ ಕಚೇರಿ ಅಥವಾ ಬ್ಯಾಂಕ್‌ಗೆ ಖುದ್ದಾಗಿ ಭೇಟಿ ನೀಡಿ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಆದರೆ ಈಗ ಆ ತೊಂದರೆಯೇ ಬೇಡವೆಂದು, ಸರ್ಕಾರ 'ಜೀವನ್ ಪ್ರಮಾಣ್' ಎಂಬ ಡಿಜಿಟಲ್ ಸೌಲಭ್ಯವನ್ನು ಪ್ರಾರಂಭಿಸಿದೆ. ಇದರಿಂದ ಪಿಂಚಣಿದಾರರು ಆನ್‌ಲೈನ್ ನಲ್ಲಿ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ಪ್ರತಿ ಜೀವನ್ ಪ್ರಮಾಣಪತ್ರಕ್ಕೆ ವಿಶಿಷ್ಟ 'ಪ್ರಮಾಣ್ ಐಡಿ' ನೀಡಲಾಗುತ್ತದೆ. ಇದು ಸ್ವಯಂಚಾಲಿತವಾಗಿ ಪಿಂಚಣಿ ನೀಡುವ ಕಂಪನಿಗಳಿಗೆ ಹೋಗಿರುತ್ತದೆ. ಜೀವನ್ ಪ್ರಮಾಣ್, ಆಧಾರ್ ವೇದಿಕೆಯ ಮೂಲಕ ಪಿಂಚಣಿದಾರರ ಬಯೋಮೆಟ್ರಿಕ್ ಅಥವಾ ಇತರ ಬಯೋಮೆಟ್ರಿಕ್ ವಿವರಗಳನ್ನು ಪರಿಶೀಲಿಸುತ್ತದೆ. ಎಲ್ಲಾ ಪರಿಶೀಲನೆ ನಡೆದ ಪ್ರಕಾರ ನಿಮ್ಮ ಜೀವನ್ ಪ್ರಮಾಣ ಪತ್ರ ರೆಡಿಯಾಗುತ್ತದೆ.


Click it and Unblock the Notifications