ದೇಶದೆಲ್ಲೆಡೆ ಲಕ್ಷಗಟ್ಟಲೆ ಜನರು ಪಿಂಚಣಿ ಸೌಲಭ್ಯ (Pension Money) ಪಡೆಯುತ್ತಿದ್ದಾರೆ. ಹಿರಿಯನಾಗರಿಕರು, ನಿವೃತ್ತಿ ಪಡೆದವರು ಹೀಗೆ ಹಲವಾರು ರೀತಿಯಲ್ಲಿ ಸರ್ಕಾರದಿಂದ ಪಿಂಚಣಿ ಹಣವನ್ನು ನೀಡಲಾಗುತ್ತಿದೆ. ಆದರೆ ಪಿಂಚಣಿದಾರರು ತಮ್ಮ ಪಿಂಚಣಿ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ನವೆಂಬರ್ 30 ರೊಳಗೆ ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು (Jeevan Pramaan) ಸಲ್ಲಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಬೇಕಾದ ದಾಖಲೆಗಳು, ಆನ್‌ಲೈನ್ ವಿಧಾನಗಳು ಮತ್ತು ನಿಯಮಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಈಗಾಗಲೇ ಹಲವರು ತಿಂಗಳಿಗೆ 500, 1000 ರೂ. ನಂತೆ ಪಿಂಚಣಿ ಹಣವನ್ನು ಪಡೆಯುತ್ತಿದ್ದಾರೆ. ಆದರೆ ಮುಂದಿನ ವರ್ಷವೂ ನಿಮಗೆ ಪಿಂಚಣಿ ಹಣ ಬರಬೇಕೆಂದರೆ ಈ ಕೆಲಸ ಫಸ್ಟ್ ಮಾಡಲೇಬೇಕು. ಅದಕ್ಕಾಗಿ ನಿಮಗೆ ಇರುವ ಸಮಯ ಇನ್ನು ಕೇವಲ 3 ದಿನ.
ಜೀವನ ಪ್ರಮಾಣಪತ್ರ ಸಲ್ಲಿಸಿ, ಹಣ ಪಡೆಯಿರಿ!
ಪಿಂಚಣಿದಾರರು ತಮ್ಮ ಪಿಂಚಣಿ ಹಣ ನಿರಂತರವಾಗಿ ಬರಬೇಕೆಂದರೆ ನವೆಂಬರ್ 30 ರೊಳಗೆ ಜೀವನ ಪ್ರಮಾಣಪತ್ರವನ್ನು (Life Certificate) ಸಲ್ಲಿಸುವುದು ಕಡ್ಡಾಯವಾಗಿದೆ.
ನವೆಂಬರ್ 30, 2025 ರ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತದಾದ್ಯಂತ ಪಿಂಚಣಿದಾರರು ತಮ್ಮ ಮಾಸಿಕ ಪಿಂಚಣಿ ಹಣ ಪಡೆಯಲು ಯಾವುದೇ ಅಡಚಣೆಯಾಗದಂತೆ ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲೇಬೇಕು. ಹಿರಿಯ ನಾಗರಿಕರು, ಕುಟುಂಬ ಪಿಂಚಣಿದಾರರು ಮತ್ತು ಬ್ಯಾಂಕ್ ಪಿಂಚಣಿ ಫಲಾನುಭವಿಗಳು ಈ ಪ್ರಕ್ರಿಯೆಯನ್ನು ಆನ್‌ಲೈನ್ ಅಥವಾ ವೈಯಕ್ತಿಕವಾಗಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಸರ್ಕಾರ ಮನವಿ ಮಾಡಿದೆ. ಇದರಿಂದ ಪಿಂಚಣಿ ಸೌಲಭ್ಯಗಳಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ.
ಜೀವನ ಪ್ರಮಾಣ ಪತ್ರ ಎಂದರೇನು?
ಜೀವನ ಪ್ರಮಾಣಪತ್ರ ಎಂದರೆ, ಪಿಂಚಣಿದಾರರು ಜೀವಂತವಾಗಿದ್ದಾರೆ ಎಂದು ದೃಢೀಕರಿಸುವ ಅಧಿಕೃತ ದಾಖಲೆಯಾಗಿದೆ.
ಪಿಂಚಣಿ ವಿತರಿಸುವ ಅಧಿಕಾರಿಗಳು ಇದೀಗ ತಮ್ಮ ವಾರ್ಷಿಕ ಪರಿಶೀಲನೆಯನ್ನು ಶುರು ಮಾಡಿದ್ದಾರೆ. ಆದ್ದರಿಂದ ನೀವು ಸಲ್ಲಿಸುವ ಜೀವನ ಪ್ರಮಾಣ ಪತ್ರವು, ಅರ್ಹ ಫಲಾನುಭವಿಗಳಿಗೆ ಮಾತ್ರ ಪಿಂಚಣಿ ಸಿಗುತ್ತಿದ್ಯಾ ಎಂದು ಖಚಿತಪಡಿಸಿಕೊಳ್ಳಲು ಮತ್ತು ವಿಳಂಬದ ಹಿನ್ನೆಲೆಯನ್ನು ತಿಳಿಯಲಾಗುತ್ತದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ವಲಯದ ಬ್ಯಾಂಕ್‌ನಿಂದ ಪಿಂಚಣಿ ಪಡೆಯುವ ಎಲ್ಲರೂ ಪ್ರತಿ ವರ್ಷ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಪ್ರಾಥಮಿಕ ಪಿಂಚಣಿದಾರರ ಮರಣದ ನಂತರ ಪಿಂಚಣಿ ಪಡೆಯುವ ಕುಟುಂಬ ಪಿಂಚಣಿದಾರರು ಸಹ ಈ ಪ್ರಮಾಣ ಪತ್ರವನ್ನು ಸಲ್ಲಿಸಲೇಬೇಕು.
ಜೀವನ ಪ್ರಮಾಣಪತ್ರವನ್ನು ಸಲ್ಲಿಸುವುದು ಹೇಗೆ?
ಪಿಂಚಣಿದಾರರ ಅನುಕೂಲಕ್ಕೆ ತಕ್ಕಂತೆ ಜೀವನ ಪ್ರಮಾಣಪತ್ರಗಳನ್ನು ಆಫ್‌ಲೈನ್ ಅಥವಾ ಡಿಜಿಟಲ್ ಮೂಲಕ ಸಲ್ಲಿಸಬಹುದು.
ಆಫ್‌ಲೈನ್ ಸಲ್ಲಿಕೆ:
ಪಿಂಚಣಿದಾರರು ತಮ್ಮ ಪಿಂಚಣಿ ವಿತರಿಸುವ ಬ್ಯಾಂಕ್ ಶಾಖೆ ಅಥವಾ ಏಜೆನ್ಸಿಗೆ ಭೇಟಿ ನೀಡಬಹುದು. ಅವರು ಆಧಾರ್ ಕಾರ್ಡ್, ಪಿಂಚಣಿ ID ಅಥವಾ ಬ್ಯಾಂಕ್ ಪಾಸ್‌ಬುಕ್‌ನಂತಹ ದಾಖಲೆಗಳೊಂದಿಗೆ ಮತ್ತು ಪಿಂಚಣಿ ಖಾತೆಯ ವಿವರಗಳನ್ನು ಕೊಂಡೊಯ್ಯಬೇಕು. ಕೆಲವು ಬ್ಯಾಂಕುಗಳು ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ಸಹ ಕೇಳಬಹುದು. ಆಯಾ ಶಾಖೆಯಲ್ಲಿ ಪರಿಶೀಲನೆಯನ್ನು ಪೂರ್ಣಗೊಳಿಸಲಾಗುತ್ತದೆ ಮತ್ತು ಪ್ರಮಾಣಪತ್ರವನ್ನು ತಕ್ಷಣವೇ ದಾಖಲಿಸಲಾಗುತ್ತದೆ.
ಜೀವನ್ ಪ್ರಮಾಣ್ ಮೂಲಕ ಆನ್‌ಲೈನ್ ಸಲ್ಲಿಕೆ:
ಡಿಜಿಟಲ್ ಮೂಲಕ ಸಲ್ಲಿಸುವುದು ಸುಲಭ ಮತ್ತು ಜನಪ್ರಿಯವಾಗಿದೆ. ಏಕೆಂದರೆ ಪಿಂಚಣಿದಾರರು ಮನೆಯಲ್ಲೇ ಕೂತು ಈ ಕೆಲಸ ಮಾಡಬಹುದು.
ಹಂತ 1: https://jeevanpramaan.gov.in ನಲ್ಲಿ ಜೀವನ್ ಪ್ರಮಾಣ್ ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2: ಫಿಂಗರ್ ಪ್ರಿಂಟ್ ಅಥವಾ ಮುಖ ಗುರುತಿಸುವಿಕೆ ಮೂಲಕ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿ.
ಹಂತ 3: ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLC) ಅನ್ನು ಕ್ರಿಯೇಟ್ ಮಾಡಿ.
ಹಂತ 4: DLC ಸ್ವಯಂಚಾಲಿತವಾಗಿ ಪಿಂಚಣಿ ಪ್ರಾಧಿಕಾರಕ್ಕೆ ಕಳುಹಿಸಲಾಗುತ್ತದೆ ಮತ್ತು ಪಿಂಚಣಿದಾರರು SMS ದೃಢೀಕರಣವನ್ನು ಪಡೆಯುತ್ತಾರೆ.
ಜೀವನ್ ಪ್ರಮಾಣ್‌ನಲ್ಲಿ ಪಿಂಚಣಿ ಮಂಜೂರು ಮಾಡುವ ಪ್ರಾಧಿಕಾರವು ನೋಂದಾಯಿಸಲ್ಪಟ್ಟಿರುವ ಪಿಂಚಣಿದಾರರು ಮಾತ್ರ ಈ ವಿಧಾನವನ್ನು ಬಳಸಬಹುದು. ಮರು ವಿವಾಹಿತ ಅಥವಾ ಮರು ಉದ್ಯೋಗ ಪಡೆದ ಪಿಂಚಣಿದಾರರು ಇದಕ್ಕೆ ಅರ್ಹರಲ್ಲ.
ಪಿಂಚಣಿದಾರರ ಪರವಾಗಿ ಕುಟುಂಬ ಸದಸ್ಯರು ಸಲ್ಲಿಸಬಹುದೇ?
ಇಲ್ಲ. ಪಿಂಚಣಿದಾರರು ಸಲ್ಲಿಕೆಯನ್ನು ವೈಯಕ್ತಿಕವಾಗಿ ಸಲ್ಲಿಸಬೇಕು. ಆದರೆ ಹಿರಿಯ ನಾಗರಿಕರಿಗಾಗಿ ಮನೆ ಬಾಗಿಲಿಗೆ ಬಂದು ಸೌಲಭ್ಯವನ್ನು ನೀಡಲಾಗುತ್ತದೆ.


Click it and Unblock the Notifications