ಸಹಕಾರಿ ಕ್ಷೇತ್ರದ ಅಗ್ರಗಣ್ಯ ಬ್ಯಾಂಕು ಆಗಿರುವ ಸುಕೋ ಬ್ಯಾಂಕು 2021-22ರ ಆರ್ಥಿಕ ಸಾಲಿನಲ್ಲಿ ಒಟ್ಟು 1309 ಕೋಟಿ ರೂಪಾಯಿ ವಹಿವಾಟು ನಡೆಸಿ 4.74 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿ ನಿವ್ವಳ ಶೂನ್ಯ (ಶೇ.0) ಎನ್‌ಪಿಎ (NPO) ಹೊಂದುವ ಮೂಲಕ ಮಹತ್ತರ ಸಾಧನೆ ಮಾಡಿದೆ.
ಸುಕೋ ಬ್ಯಾಂಕಿನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿ, ಬ್ಯಾಂಕು ಒಟ್ಟು 2.8 ಕೋಟಿ ರೂಪಾಯಿ ತೆರಿಗೆ ಪಾವತಿಸಿದೆ. ತೆರಿಗೆ ಪಾವತಿಸಿದ ನಂತರ ಒಟ್ಟು 4.74 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದರು.
ಸುಕೋ ಬ್ಯಾಂಕ್ ಒಟ್ಟು 821 ಕೋಟಿ ರೂಪಾಯಿ ಠೇವಣಿ ಸಂಗ್ರಹ ಮಾಡಿ, ಒಟ್ಟು 488 ಕೋಟಿ ರೂಪಾಯಿ ಸಾಲ ವಿತರಣೆ ಮಾಡಿದೆ. ಬ್ಯಾಂಕಿನ ಎನ್‌ಪಿಎ (ಅನುತ್ಪಾದಕ ಆಸ್ತಿ) ಶೂನ್ಯ ಆಗಿರುವುದು ವಿಶೇಷ ಸಾಧನೆ ಎಂದು ಸುಕೋ ಬ್ಯಾಂಕಿನ ಅಧ್ಯಕ್ಷ ಮೋಹಿತ್ ಮಸ್ಕಿ ಹೇಳಿದರು.

ಮೂರು ಬ್ಯಾಂಕುಗಳ ವಿಲೀನ
"ಸಂಕಷ್ಟದಲ್ಲಿದ್ದ ಬಳ್ಳಾರಿಯ ಮಹಿಳಾ ಶಕ್ತಿ ಕೋ ಆಪರೇಟಿವ್ ಬ್ಯಾಂಕು, ಹುಬ್ಬಳ್ಳಿಯ ವರ್ಧಮಾನ್ ಕೋ ಆಪರೇಟಿವ್ ಬ್ಯಾಂಕು ಮತ್ತು ಕಾರಟಗಿಯ ಶ್ರೀ ಶರಣಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕನ್ನು ನಮ್ಮ ಬ್ಯಾಂಕಿನಲ್ಲಿ ವಿಲೀನ ಮಾಡಿಕೊಳ್ಳಲಾಗಿದೆ. ಈ ಮೂಲಕ ಮೂರು ಸಹಕಾರಿ ಬ್ಯಾಂಕುಗಳನ್ನು ತನ್ನಲ್ಲಿ ವಿಲೀನ ಮಾಡಿಕೊಂಡು ಗ್ರಾಹಕರ ಮತ್ತು ಷೇರುದಾರರ ಹಿತಾಸಕ್ತಿ ಕಾಪಾಡಿದ ಕರ್ನಾಟಕದ ಏಕೈಕ ಸಹಕಾರಿ ಬ್ಯಾಂಕು ಎನ್ನುವ ದಾಖಲೆಯನ್ನು ಸುಕೋ ಬ್ಯಾಂಕು ಹೊಂದಿದೆ," ಎಂದು ಮೋಹಿತ್ ಮಸ್ಕಿ ಮಾಹಿತಿ ನೀಡಿದರು.
"ಪ್ರಸ್ತುತ ಕರ್ನಾಟಕದ 17 ಜಿಲ್ಲೆಗಳಲ್ಲಿ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಹೊಂದಿದ್ದು, 12 ಜಿಲ್ಲೆಗಳಲ್ಲಿ 29 ಶಾಖೆಗಳನ್ನು ಹೊಂದಿದೆ. ಆರ್‌ಬಿಐ (ಖಃI) ನಿಂದ ಸ್ವತಂತ್ರ ಐಎಫ್‌ಎಸ್‌ಸಿ (IಈSಅ) ಕೋಡ್ ಹೊಂದಿದ ಉತ್ತರ ಕರ್ನಾಟಕದ ಪ್ರಪ್ರಥಮ ಸಹಕಾರಿ ಬ್ಯಾಂಕು ಸುಕೋ ಬ್ಯಾಂಕು ಆಗಿದೆ," ಎಂದು ಹೇಳಿದ ಮೋಹಿತ್ ಮಸ್ಕಿ ಈ ಸಂದರ್ಭದಲ್ಲೇ, "ಏಪ್ರಿಲ್ 2022 ರಿಂದ ಆನ್‌ಲೈನ್‌ನಲ್ಲಿ ಸಾಲದ ಅರ್ಜಿಯನ್ನು ಪಡೆದು ತ್ವರಿತವಾಗಿ ಸಾಲ ಮಂಜೂರು ಮಾಡುವ ಹೊಸ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಆನ್‌ಲೈನ್‌ನಲ್ಲಿ ಸಾಲದ ಅರ್ಜಿ ಪಡೆದು ಸಾಲ ಮಂಜೂರು ಮಾಡುವ ಕರ್ನಾಟಕದ ಪ್ರಪ್ರಥಮ ಸಹಕಾರಿ ಬ್ಯಾಂಕು ಸುಕೋ ಬ್ಯಾಂಕು ಆಗಿದೆ," ಎಂದರು.
"ಮಾರುಕಟ್ಟೆಯ ಏರುಪೇರುಗಳು ಮತ್ತು ಆರ್ಥಿಕ ಕ್ಷೇತ್ರದ ಮೇಲೆ ಕೋವಿಡ್ - 19ರ ಪರಿಣಾಮಗಳ ಮಧ್ಯೆಯೂ ಸುಕೋ ಬ್ಯಾಂಕ್ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಗ್ರಾಹಕರು ಮತ್ತು ಷೇರುದಾರರು ಬ್ಯಾಂಕಿನ ಮೇಲೆ ಹೊಂದಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಈ ಸಾಧನೆ ಸಾಕ್ಷೀಕರಿಸುತ್ತದೆ ಎಂದು ಅವರು ಹೇಳಿದರು. ಬ್ಯಾಂಕಿನ ಈ ಸಾಧನೆಯಲ್ಲಿ ಪಾಲ್ಗೊಂಡಿರುವ ಷೇರುದಾರರು, ಗ್ರಾಹಕರು, ಸಿಬ್ಬಂದಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದಗಳು," ಎಂದು ಅವರು ಹೇಳಿದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಗಿರೀಶ್ ಮತ್ತು ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶರಾವ್ ಅವರು ಉಪಸ್ಥಿತರಿದ್ದರು.


Click it and Unblock the Notifications