ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಮಾತನ್ನು ಎಲ್ಲರೂ ಕೇಳಿರಬಹುದು. ಏಕೆಂದರೆ ಇವೆರಡೂ ಜೀವನದ ಪ್ರಮುಖ ಘಟ್ಟವೂ ಹೌದು, ಕಷ್ಟದ ಕೆಲಸವೂ ಹೌದು. ಉಳಿದುಕೊಳ್ಳಲು ಸುಂದರವಾದ ಸೂರೊಂದು ಬೇಕು ಎಂಬ ಕನಸು ಇರುತ್ತದೆ. ಅಲ್ಲದೇ ಎಷ್ಟೋ ಮಂದಿನ ಮನೆ ಕಟ್ಟಲು ಸಾಲ ಕೂಡಾ ಮಾಡುತ್ತಾರೆ. ಆದ್ರೆ ತೆಗೆದುಕೊಂಡ ಸಾಲದ ಜೊತೆ ಬಡ್ಡಿ ಕಟ್ಟೋದೆ ದೊಡ್ಡ ತಲೆನೋವು. ಆದ್ರೆ ಇಲ್ಲಿ ಕೆಲವು ಬ್ಯಾಂಕ್‌ಗಳು (Banks) ಗೃಹಸಾಲವನ್ನು (Home Loan) ಕಡಿಮೆ ಬಡ್ಡಿದರದಲ್ಲಿ ನೀಡುತ್ತಿದೆ. ಹಾಗಿದ್ರೆ ಆ ಬ್ಯಾಂಕ್‌ಗಳು ಯಾವುದು ಎಂಬುದರ ಮಾಹಿತಿ ಇಲ್ಲಿದೆ ಓದಿ.

ಹೌದು, ಹಲವು ಪ್ರಮುಖ ಬ್ಯಾಂಕ್‌ಗಳು 20 ವರ್ಷಗಳ ಅವಧಿಯಲ್ಲಿ 50 ಲಕ್ಷ ಸಾಲ ಪಡೆದರೆ ಶೇ. 7.3% ರಿಂದ ಶೇ. 9%.ವರೆಗೆ ಬಡ್ಡಿದರವನ್ನು ನೀಡುತ್ತದೆ. ಆದರೆ ಕ್ರೆಡಿಟ್ ಸ್ಕೋರ್, ಆದಾಯದಂತೆ ಪ್ರಮುಖ ದಾಖಲೆಗಳಿಂದಾಗಿ ಬಡ್ಡಿದರ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು ಎಂಬ ಮಾಹಿತಿ ಇಲ್ಲಿ ತಿಳಿಯಿರಿ.
ಪಂಜಾಬ್ ನ್ಯಾಷನಲ್ ಬ್ಯಾಂಕ್: ಗೃಹಸಾಲ ನೀಡುವ ಬ್ಯಾಂಕ್‌ಗಳಲ್ಲಿ PNB ಕೂಡಾ ಒಂದು. ಈ ಬ್ಯಾಂಕ್‌ನಲ್ಲೂ ಬಡ್ಡಿದರ 7.45% ರಿಂದ ಆರಂಭವಾಗುತ್ತವೆ. ₹50 ಲಕ್ಷದ ಸಾಲವನ್ನು 20 ವರ್ಷಗಳ ಅವಧಿಗೆ ತೆಗೆದುಕೊಂಡರೆ ನೀವು EMI ₹40,127 ಪಾವತಿಸಬೇಕು.
ಕೋಟಕ್ ಮಹೀಂದ್ರಾ ಬ್ಯಾಂಕ್: ಗೃಹ ಸಾಲ ನೀಡುವಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡಾ ಒಂದು. ಇದರಲ್ಲಿ ಬಡ್ಡಿ ದರಗಳು 7.99% ರಿಂದ ಆರಂಭವಾಗುತ್ತವೆ. ಅದೇ ರೀತಿ ₹50 ಲಕ್ಷ ಸಾಲಕ್ಕೆ 20 ವರ್ಷಗಳವರೆಗೆ EMI ₹41,791 ರೂ. ಪಾವತಿಸಬೇಕು.
ಕೆನರಾ ಬ್ಯಾಂಕ್: ಸಾರ್ವಜನಿಕ ವಲಯದ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಕೆನರಾ ಬ್ಯಾಂಕ್ ಕೂಡ ಗ್ರಾಹಕರಿಗೆ ಉತ್ತಮ ಬಡ್ಡಿದರದೊಂದಿಗೆ ಸಾಲ ನೀಡುತ್ತದೆ. 7.3% ಬಡ್ಡಿ ದರದಲ್ಲಿ, 20 ವರ್ಷಗಳ ಅವಧಿಯಲ್ಲಿ ₹50 ಲಕ್ಷದ ಸಾಲಕ್ಕೆ EMI ₹39,670 ಇರುತ್ತದೆ.
ಬ್ಯಾಂಕ್ ಆಫ್ ಬರೋಡಾ: ಈ ಬ್ಯಾಂಕ್‌ನಲ್ಲೂ 7.45% ದೊಂದಿಗೆ ಗೃಹ ಸಾಲಗಳನ್ನು ನೀಡುತ್ತದೆ. 20 ವರ್ಷಗಳ ಅವಧಿಗೆ ₹50 ಲಕ್ಷದ ಸಾಲಕ್ಕೆ EMI ₹40,127 ಪಾವತಿಸಬೇಕು.
YES ಬ್ಯಾಂಕ್: ಗೃಹ ಸಾಲ ನೀಡುವುದರಲ್ಲಿ ಯೆಸ್ ಬ್ಯಾಂಕ್ ಕೂಡಾ ಮುಂಚೂಣಿಯಲ್ಲಿದೆ. ಆದ್ದರಿಂದ ಯೆಸ್ ಬ್ಯಾಂಕ್‌ನಲ್ಲಿ ಬಡ್ಡಿದರ 9% ರಿಂದ ಪ್ರಾರಂಭವಾಗುತ್ತವೆ. ಆದ್ದರಿಂದ 50 ಲಕ್ಷ ಸಾಲಕ್ಕೆ 20 ವರ್ಷಗಳ ಅವಧಿಯಲ್ಲಿ EMI ₹44,986 ರೂ.ವರೆಗೆ ಪಾವತಿ ಮಾಡಬೇಕು.
ICICI ಬ್ಯಾಂಕ್: ಐಸಿಐಸಿಐ ಬ್ಯಾಂಕ್ ಗ್ರಾಹಕರು ಗೃಹಸಾಲಗಳನ್ನು ಪಡೆಯಲು ಬಯಸಿದರೆ, 7.7% ರಿಂದ ಪ್ರಾರಂಭವಾಗುತ್ತವೆ. ಒಂದು ವೇಳೆ 20 ವರ್ಷಗಳ ಅವಧಿಗೆ 50 ಲಕ್ಷ ರೂ. ಸಾಲ ಮಾಡಿದ್ರೆ, EMI ₹40,893 ರೂ.ವರೆಗೆ ಪಾವತಿ ಮಾಡಬೇಕಾಗುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಒಂದು. ಈ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತದೆ. ಅಂದರೆ ಇಲ್ಲಿ ಬಡ್ಡಿ ದರ 7.3% ರಿಂದ ಪ್ರಾರಂಭವಾಗುತ್ತದೆ. 20 ವರ್ಷಗಳ ಅವಧಿಯಲ್ಲಿ ₹50 ಲಕ್ಷದ ಸಾಲಕ್ಕೆ EMI ₹39,670 ಪೇ ಮಾಡಬೇಕು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಭಾರತೀಯ ನಂಬರ್ 1 ಬ್ಯಾಂಕ್ ಎಂದು ಗುರುತಿಸಿಕೊಂಡಿರುವ SBI ಬ್ಯಾಂಕ್, 7.5% ರಿಂದ ಪ್ರಾರಂಭವಾಗುವ ಬಡ್ಡಿ ದರದಲ್ಲಿ ಗೃಹ ಸಾಲಗಳನ್ನು ನೀಡುತ್ತದೆ. 20 ವರ್ಷಗಳ ಅವಧಿಯಲ್ಲಿ ₹50 ಲಕ್ಷದ ಸಾಲಕ್ಕೆ EMI ₹40,280 ವರೆಗೆ ಪಾವತಿ ಮಾಡಬೇಕು.
ಆಕ್ಸಿಸ್ ಬ್ಯಾಂಕ್: 8.35% ಬಡ್ಡಿ ದರದಲ್ಲಿ ಗೃಹ ಸಾಲಗಳನ್ನು ಆಕ್ಸಿಸ್ ಬ್ಯಾಂಕ್ ಕೂಡಾ ನೀಡುತ್ತದೆ. ₹50 ಲಕ್ಷ ರೂ. ಸಾಲಕ್ಕೆ 20 ವರ್ಷಗಳ ಅವಧಿಗೆ EMI ₹42,918 ರೂ. ಆಗಿರುತ್ತದೆ.
HDFC ಬ್ಯಾಂಕ್: ಖಾಸಗಿ ವಲಯದಲ್ಲಿ ಗುರುತಿಸಿಕೊಂಡಿರುವ ಬ್ಯಾಂಕ್‌ಗಳಲ್ಲಿ HDFC ಬ್ಯಾಂಕ್ ಕೂಡಾ ಒಂದು. ಈ ಬ್ಯಾಂಕ್ ತನ್ನ ಗ್ರಾಹಕರಿಗೆ 7.4% ಬಡ್ಡಿದರದೊಂದಿಗೆ ಗೃಹ ಸಾಲವನ್ನು ನೀಡುತ್ತದೆ. ಅದೇ ರೀತಿ ₹50 ಲಕ್ಷ ರೂಪಾಯಿ ಸಾಲವನ್ನು 20 ವರ್ಷಗಳ ಅವಧಿಗೆ ತೆಗೆದುಕೊಂಡರೆ, EMI ₹39,974 ರೂ.ವರೆಗೆ ಪಾವತಿಸಬೇಕು.
(ಈ ಸುದ್ದಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಖಾತರಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರರಲ್ಲ. ನಾವು ಯಾವುದೇ ಹೂಡಿಕೆ ಮಾಡಲು ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟವನ್ನು ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ)
More From GoodReturns

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

Pink Line Metro: ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಶೀಘ್ರದಲ್ಲಿ ಆರಂಭ, ಹೊಸ ರೈಲಿನ ಆಗಮನ

Tumkur Railway: ತುಮಕೂರಿನ ಈ ಭಾಗದಲ್ಲಿ ಲೆವೆಲ್ ಕ್ರಾಸಿಂಗ್ ಕಾಮಗಾರಿ; ಸುಮಾರು 25 ರೈಲುಗಳ ಸಂಚಾರ ವ್ಯತ್ಯಯ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

New Income Tax: ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ: ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ



Click it and Unblock the Notifications