ಹತ್ತು ವರ್ಷಗಳಿಂದ ಈಚೆಗೆ ಕುಟುಂಬಗಳಲ್ಲಿ ಹೆಚ್ಚುತ್ತಿರುವ ಆರ್ಥಿಕ ಒತ್ತಡಕ್ಕೆ ಕಾರಣ ಏನು ಎಂಬುದಕ್ಕೆ ಇಲ್ಲಿ ಹತ್ತು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಇದನ್ನು ಪಟ್ಟಿ ಮಾಡಿರುವವರು ಪುಣೆ ಮೂಲದ ಭರತ್ ಜಯಕರ್. ಸದ್ಯಕ್ಕೆ ಅವರು ಎಲೆಕ್ಟ್ರೋನಿಕಾ ಫೈನಾನ್ಸ್ ಲಿಮಿಟೆಡ್ ನಲ್ಲಿ ಉಪಾಧ್ಯಕ್ಷ/ ಕಲೆಕ್ಷನ್ಸ್ ಮುಖ್ಯಸ್ಥರಾಗಿದ್ದಾರೆ.
ಇಲ್ಲಿ ನೀಡಿರುವ ಅಂಶಗಳಲ್ಲಿ ಯಾವುದನ್ನೂ ಇಲ್ಲ, ಇದು ಹೀಗಲ್ಲ ಎನ್ನುವಂತಿಲ್ಲ. ಈಗ ನೀವೇ ಮುಂದೆ ಓದಿ ನೋಡಿ. ಇವುಗಳು ಎಷ್ಟು ಖಚಿತವಾಗಿವೆ ಎಂಬುದು ನಿಮಗೆ ಅನಿಸದಿದ್ದರೆ ಕಾಮೆಂಟ್ ಮಾಡಿ.

* ಸಮಾಜದ ಒತ್ತಡಕ್ಕೆ ರಜಾ ದಿನಗಳನ್ನು ಕಳೆಯುತ್ತಿದ್ದೇವೆ. ಅದಕ್ಕಾಗಿ ಖರ್ಚು ಮಾಡುತ್ತಿದ್ದೇವೆ
* ಪ್ರತಿಷ್ಠೆಯ ಸಂಕೇತವಾಗಿ ಕಾರು ಖರೀದಿಸುತ್ತಿದ್ದೇವೆ.
* ಕುಟುಂಬದಲ್ಲಿ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಇದೆ.
* ವಾರಾಂತ್ಯಗಳಲ್ಲಿ ಮನೆಯಲ್ಲಿ ಮಾಡಿದ ಅಡುಗೆ ತಪ್ಪಿಸಿ ಹೊರಗಿನ ಊಟ ಮಾಡುತ್ತಿದ್ದೇವೆ.
* ಸಲೂನ್, ಪಾರ್ಲರ್ ಮತ್ತು ಬಟ್ಟೆ ಇವೆಲ್ಲ ಬ್ರ್ಯಾಂಡೆಡ್ ಆಗಿರಬೇಕು ಎಂಬುದು ಹೆಚ್ಚಾಗಿದೆ. ಜೀವನಶೈಲಿ ಹಾಳಾಗಿ ವೈದ್ಯಕೀಯ ವೆಚ್ಚ ಹೆಚ್ಚಾಗುತ್ತಿದೆ.
* ಐಷಾರಾಮಿ ಮದುವೆಗಳು ಹಾಗೂ ಕುಟುಂಬ ಕಾರ್ಯಕ್ರಮಗಳು ಹೆಚ್ಚಾಗಿವೆ.
* ಆಸ್ಪತ್ರೆಗಳು, ಶಾಲೆಗಳು, ಟ್ಯೂಷನ್ ಗಳು, ಶಿಕ್ಷಣ ಮುಂತಾದವು ವಾಣಿಜ್ಯವಾಗಿವೆ.
* ಇನ್ನೂ ಸಂಪಾದನೆಯೇ ಆಗಿರದೆ ಖರ್ಚು ಮಾಡುತ್ತಿದ್ದೇವೆ. ಅಂದರೆ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗಿವೆ.
* ಗೃಹಾಲಂಕಾರ, ಕಚೇರಿ ಇಂಟೀರಿಯರ್ಸ್ ಗೆ ಸಿಕ್ಕಾಪಟ್ಟೆ ಖರ್ಚು ಮಾಡಿ, ಅದರ ನಿರ್ವಹಣೆಯನ್ನೇ ದುಬಾರಿ ಮಾಡಿಕೊಂಡಿದ್ದೇವೆ.
ನಮ್ಮ ಅಗತ್ಯ ಮತ್ತು ಆದಾಯ ಎರಡನ್ನೂ ಅರ್ಥ ಮಾಡಿಕೊಳ್ಳದೆ ಸುಮ್ಮನೆ ಬೇರೆಯವರನ್ನು ಅನುಕರಣೆ ಮಾಡುತ್ತಿದ್ದೇವೆ. ಇದನ್ನು ನಿಯಂತ್ರಿಸದಿದ್ದರೆ ವಿಪರೀತ ಒತ್ತಡ ಹಾಗೂ ಉದ್ವೇಗಕ್ಕೆ ಕಾರಣವಾಗಲಿದೆ.
ಖರ್ಚು ಬೆಳೆಯುತ್ತಿರುವ ವೇಗದಲ್ಲಿ ಆದಾಯ ಹೆಚ್ಚುತ್ತಿಲ್ಲ. ಇದರ ಪರಿಣಾಮವಾಗಿ ಒತ್ತಡ ಹೆಚ್ಚಾಗುತ್ತಿದ್ದು, ನೆಮ್ಮದಿ- ಶಾಂತಿ ಕಡಿಮೆಯಾಗುತ್ತಿದೆ.


Click it and Unblock the Notifications