ಸುರಕ್ಷಿತ ಹೂಡಿಕೆ ಯೋಜನೆ, ಆಕರ್ಷಿತ ಬಡ್ಡಿದರ ನೀಡುವ ಮೂಲಕ ಪೋಸ್ಟ್ ಆಫೀಸ್ (Post Office) ದೇಶದಲ್ಲಿ ಕೋಟಿಗಟ್ಟಲೆ ಗ್ರಾಹಕರನ್ನು ಹೊಂದಿದೆ. ಇದೀಗ ಸರ್ಕಾರಿ ಸ್ವಾಮ್ಯದ ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ. ಇನ್ಮೇಲೆ ಪೋಸ್ಟ್ ಆಫೀಸ್‌ನ ಯಾವುದೇ ಕೆಲಸಗಳನ್ನು ಮನೆಯಲ್ಲೇ ಕ್ಷಣಮಾತ್ರದಲ್ಲಿ ಮಾಡಬಹುದು. ಹೌದು, ಪೋಸ್ಟ್ ಆಫೀಸ್ ಇದೀಗ ಗ್ರಾಹಕರ ಅನುಕೂಲಕ್ಕಾಗಿ "ಡಾಕ್ ಸೇವಾ ಮೊಬೈಲ್ ಆಪ್" (Dak Sewa App) ಲಾಂಚ್ ಮಾಡಿದೆ. ಆದ್ದರಿಂದ ಜನರು ಇನ್ಮೇಲೆ ಮನೆಯಲ್ಲೇ ಕುಳಿತು ಸ್ಪೀಡ್ ಪೋಸ್ಟ್, ಟ್ರ್ಯಾಕಿಂಗ್, ದೂರು ನೀಡುವುದು, ಬಡ್ಡಿದರ ಲೆಕ್ಕಾಚಾರ ಮಾಡಲು ಸಾಧ್ಯವಾಗುತ್ತದೆ.

"ಡಾಕ್ ಸೇವಾ, ಜನ ಸೇವಾ"
"ಡಾಕ್ ಸೇವಾ, ಜನ ಸೇವಾ" ಘೋಷವಾಕ್ಯದೊಂದಿಗೆ ಇದೀಗ ಪೋಸ್ಟ್ ಆಫೀಸ್ ಡಿಜಿಟಲ್ ಯುಗಕ್ಕೂ ದಾಪುಗಾಲು ಇಟ್ಟಿದೆ. ಈ ಮೂಲಕ ಪೋಸ್ಟ್ ಆಫೀಸ್ ಹೊಸ ಕ್ರಾಂತಿ ರೂಪಿಸಲಿದೆ ಎಂಬ ನಿರೀಕ್ಷೆಯಿದೆ. ಈ ಹಿಂದೆ ಇದ್ದ "ಪೋಸ್ಟ್ ಇನ್ಫೋ" ಆಪ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಭಾರತೀಯ ಅಂಚೆ ಇಲಾಖೆ, ಇದೀಗ ಹೊಸದಾಗಿ "ಡಾಕ್ ಸೇವಾ" ಎಂಬ ಮೊಬೈಲ್ ಆಪ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಒಂದು ಆಪ್, ಹಲವು ಸೇವೆ:
- ಟ್ರ್ಯಾಕಿಂಗ್: ಈ ಆಪ್ ಮೂಲಕ ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್ ಲೆಟರ್, ಪಾರ್ಸೆಲ್, ಇ-ಮನಿ ಆರ್ಡರ್ ಹೀಗೆ ಎಲ್ಲವೂ ಟ್ರ್ಯಾಕ್ ಮಾಡಬಹುದಾಗಿದೆ.
- ಪೋಸ್ಟ್ ಆಫೀಸ್: ನಿಮಗೆ ಬೇಕಾದ ಹತ್ತಿರದ ಪೋಸ್ಟ್ ಆಫೀಸ್ ಎಲ್ಲಿದೆ ಎಂದು ಪಿನ್‌ಕೋಡ್ ಮೂಲಕ ಸರ್ಚ್ ಮಾಡಬಹುದು.
- ಪೋಸ್ಟೇಜ್ ಲೆಕ್ಕಾಚಾರ: ಇನ್ನು ನಿಮ್ಮ ಪಾರ್ಸೆಲ್ ತೂಕಕ್ಕೆ ಅನುಗುಣವಾಗಿ ಶುಲ್ಕವನ್ನು ಲೆಕ್ಕಾಚಾರ ಮಾಡಬಹುದು.
- ದೂರು ನೀಡುವುದು: ಪೋಸ್ಟ್ ಆಫೀಸ್ ಸಂಬಂಧಿಸಿ ಏನಾದರೂ ದೂರುಗಳಿದ್ದರೂ ಆಪ್ ಮೂಲಕ ಸಲ್ಲಿಸಬಹುದು.
- ಬಡ್ಡಿದರ ಲೆಕ್ಕಾಚಾರ: PLI, RPLI, SSY, RD, TD, FD, SCSS ಹೀಗೆ ಮುಂತಾದ ಯೋಜನೆಗಳಿಂದ ಬರುವ ಬಡ್ಡಿಯನ್ನು ಕೂತಲ್ಲೇ ಲೆಕ್ಕಾಚಾರ ಮಾಡಬಹುದು.
ಡೌನ್‌ಲೋಡ್ ಮಾಡುವುದು ಹೇಗೆ?
ಈಗ ನೀವು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ಪೋಸ್ಟ್ ಆಫೀಸ್‌ನ ಹೊಸ ಡಾಕ್ ಸೇವಾ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದಕ್ಕಾಗಿ ನೀವು ಆಂಡ್ರಾಯ್ಡ್ ಮೊಬೈಲ್ ಹೊಂದಿದ್ದರೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ "Dak Sewa" ಎಂದು ಸರ್ಚ್ ಮಾಡಿ. ಅದೇ ರೀತಿ ಐಫೋನ್ ಹೊಂದಿದ್ದರೆ ಆಪ್ ಸ್ಟೋರ್‌ನಲ್ಲಿ "Dak Sewa 2.0" ಎಂದು ಸರ್ಚ್ ಮಾಡಿ. ಅಥವಾ ನೀವು QR ಕೋಡ್ ಸ್ಕ್ಯಾನ್ ಮಾಡಿ ಡೌನ್‌ಲೋಡ್ ಮಾಡಬಹುದು. ಬಳಿಕ ಬಯೋಮೆಟ್ರಿಕ್ ಮೂಲಕ ಲಾಗಿನ್ ಮಾಡಿಕೊಳ್ಳಬಹುದು.
ಪೋಸ್ಟ್ ಆಫೀಸ್‌ನಲ್ಲಿ ಇಂದು ಹಲವರು ಹೂಡಿಕೆ ಮಾಡುತ್ತಿದ್ದಾರೆ. ಆದ್ರೆ ಪ್ರತಿಯೊಂದು ವಿಷಯವನ್ನೂ ತಿಳಿಯಬೇಕಾದರೂ ಹತ್ತಿರದ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಬೇಕು. ಆದ್ರೆ ಈ ಡಿಜಿಟಲ್ ಆಪ್‌ನಿಂದಾಗಿ ಹಲವು ಕೆಲಸಗಳು ಸುಗಮವಾಗಲಿದೆ. ಆದ್ದರಿಂದ ಡಾಕ್ ಸೇವಾ ಆಪ್ ಹೊಸ ಕ್ರಾಂತಿಗೆ ಕಾರಣವಾಗಲಿದೆ.


Click it and Unblock the Notifications