ಹೂಡಿಕೆ ಮಾಡುವವರಿಗಾಗಿ ಪ್ರಸ್ತುತ ಸರ್ಕಾರ ಮತ್ತು ಹಲವು ಬ್ಯಾಂಕುಗಳು ಹಲವಾರು ರೀತಿಯ ಹೂಡಿಕೆ ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೆ ಇದೀಗ ಹೊಸ ವರ್ಷ (New Year) ಬರುತ್ತಿದ್ದಂತೆ, ಬಡ್ಡಿದರ ಬದಲಾವಣೆ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದಂತೆ, ಇದೀಗ ಹೊಸ ವಿಷಯವೊಂದು ಹೊರಬಿದ್ದಿದೆ. ಹಣಕಾಸು ಸಚಿವಾಲಯ ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಸಾರ್ವಜನಿಕ ಭವಿಷ್ಯ ನಿಧಿ (PPF) ಮತ್ತು ರಾಷ್ಟ್ರೀಯ ಉಳಿತಾಯ ಪತ್ರ (NSC) ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ (Small Savings Scheme) ಮೇಲಿನ ಬಡ್ಡಿದರಗಳ (Interest Rates) ಮಹತ್ವದ ನಿರ್ಧಾರವೊಂದು ವರದಿಯಾಗಿದೆ.

ಹೌದು, ಇದೀಗ ಹಣಕಾಸು ಸಚಿವಾಲಯ ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಹಲವು ಉಳಿತಾಯ ಯೋಜನೆಗಳ 2026ರ ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಯಾವುದೇ ಬದಲಾವಣೆಯಾಗದೆ, ಹಿಂದಿನ ಬಡ್ಡಿದರವನ್ನೇ ಕಾಯ್ದುಕೊಂಡಿದೆ ಎಂದು ಹೇಳಲಾಗಿದೆ.
ಹಣಕಾಸು ಸಚಿವಾಲಯ ಅಧಿಸೂಚನೆಯೇನು?
ಇನ್ನು ಹಣಕಾಸು ಸಚಿವಾಲಯದ ಹೊರಡಿಸಿರು ಅಧಿಸೂಚನೆ ಪ್ರಕಾರ, "2026ರ ಜನವರಿ 1ರಿಂದ 2026ರ ಮಾರ್ಚ್ 31ರವರೆಗೆ ಇರುವ ಆರ್ಥಿಕ ವರ್ಷ 2025-26ರ ನಾಲ್ಕನೇ ತ್ರೈಮಾಸಿಕದ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು, ಆರ್ಥಿಕ ವರ್ಷ 2025-26ರ ಮೂರನೇ ತ್ರೈಮಾಸಿಕಕ್ಕೆ (2025ರ ಸೆಪ್ಟೆಂಬರ್ 1ರಿಂದ ಡಿಸೆಂಬರ್ 31) ಅಧಿಸೂಚಿಸಲಾದ ದರಗಳನ್ನೇ ಹೊಂದಿರುತ್ತದೆ." ಅಂದರೆ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಇಲ್ಲಿ ತಿಳಿಸಲಾಗಿದೆ.
ಯಾವೆಲ್ಲಾ ಬಡ್ಡಿದರಗಳು ಹೇಗಿದೆ?
ಬಡ್ಡಿಗಳು, ಜನಪ್ರಿಯ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಯು ಶೇ 7.1ರ ಬಡ್ಡಿದರವನ್ನೇ ಹೊಂದಿರಲಿದೆ. ಅದೇ ರೀತಿ ಅಂಚೆ ಕಚೇರಿ ಉಳಿತಾಯ ಶೇ 4% ರಷ್ಟಿದ್ದರೆ, ಸುಕನ್ಯಾ ಸಮೃದ್ಧಿ ಯೋಜನೆ ತನ್ನ ಆಕರ್ಷಕ ಬಡ್ಡಿದರ ಶೇ 8.2ರ ದರದಲ್ಲೇ ಮುಂದುವರೆಯಲಿದೆ ಎಂದು ವರದಿಯಾಗಿದೆ.
ಮೂರು ವರ್ಷಗಳ ಅಂಚೆ ಕಚೇರಿ ಟೈಂ ಠೇವಣಿ ಶೇ 7.1ರ ಬಡ್ಡಿದರದಲ್ಲಿರುತ್ತದೆ. ಕಿಸಾನ್ ವಿಕಾಸ ಪತ್ರ (KVP) ಶೇ 7.5ರಷ್ಟು ಆದಾಯ ನೀಡುತ್ತಿದ್ದು, ಇದರ ಮುಕ್ತಾಯ ಅವಧಿ 115 ತಿಂಗಳು. ಅದೇ ರೀತಿ ಈ ಯೋಜನೆಯ ಬಡ್ಡಿಯೂ ಸ್ಥಿರವಾಗಿರಲಿದೆ. ರಾಷ್ಟ್ರೀಯ ಉಳಿತಾಯ ಪತ್ರ (NSC) ಶೇ 7.7ರ ಬಡ್ಡಿದರದಲ್ಲಿ ಮುಂದುವರಿದಿದ್ದು, ಮಾಸಿಕ ಆದಾಯ ಯೋಜನೆ (MIS) ಈ ತ್ರೈಮಾಸಿಕದಲ್ಲಿ ಶೇ 7.4ರಷ್ಟು ಬಡ್ಡಿಯೊಂದಿಗೆ ಮುಂದುವರೆಯಲಿದೆ.
ಬದಲಾವಣೆಯಾಗದ ಬಡ್ಡಿದರ!
ಅಂಚೆ ಕಚೇರಿಗಳು ಮತ್ತು ಬ್ಯಾಂಕುಗಳು ಪ್ರತೀ ತ್ರೈಮಾಸಿಕಗೊಮ್ಮೆ ತಮ್ಮ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಣ್ಣ ಉಳಿತಾಯ ಯೋಜನೆಗಳನ್ನು ಪರಿಶೀಲಿಸುತ್ತಿರುತ್ತದೆ. ಆದರೆ ಇದೀಗ 2026 ರ ತ್ರೈಮಾಸಿಕದಲ್ಲೂ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ಯಾರೇ ಆಗಲಿ ಹೂಡಿಕೆ ಮಾಡೋ ಅಭ್ಯಾಸವನ್ನು ಹೊಂದಿರಬೇಕೆಂದು ಹಣಕಾಸು ತಜ್ಞರು ಸಲಹೆ ನೀಡುತ್ತಾರೆ. ಕಾರಣ, ಇದು ಭವಿಷ್ಯದಲ್ಲಿ ಉತ್ತಮ ಲಾಭವನ್ನು ನೀಡಬಹುದು. ಅದೇ ಕಾರಣದಿಂದ ಬಹುತೇಕರು ಬ್ಯಾಂಕ್, ಪೋಸ್ಟ್ ಆಫೀಸ್‌ಗಳಲ್ಲಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಅಕೌಂಟ್ ಓಪನ್ ಮಾಡುತ್ತಾರೆ. ಅಲ್ಲದೇ ತಾನು ದುಡಿದ ಸ್ವಲ್ಪ ಆದಾಯದಲ್ಲಿ, ಈ ಯೋಜನೆಗಳ ಮೂಲಕ ಹೂಡಿಕೆ ಮಾಡುತ್ತಿದ್ದಾರೆ. ಇದೀಗ ಬಡ್ಡಿಯಲ್ಲಿ ಬದಲಾವಣೆಯಾಗುತ್ತೆ ಎಂದು ಕಾಯುತ್ತಿದ್ದವರಿಗೆ, ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.


Click it and Unblock the Notifications