ಹೆಚ್ಚಿನವರು ಹೆಚ್ಚಿನ ಸಂಬಳದ ಉದ್ಯೋಗ (High Salary Jobs) ಅರಸಿಕೊಂಡು ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳಿಗೆ ಹೋಗುತ್ತಾರೆ. ಲಕ್ಷಗಟ್ಟಲೆ ಸಂಬಳದ ಆಸೆಯಿಂದಾಗಿ ಹುಟ್ಟಿದ ಊರು ಬಿಟ್ಟು ಮತ್ತೊಂದು ಊರಿಗೆ ತೆರಳಿ ಜೀವನ ಸಾಗಿಸುತ್ತಾರೆ. ಆದ್ರೆ ನೀವು ಬೇರೆ ಊರುಗಳಿಗೆ ಹೋಗುವ ಬದಲಿಗೆ ಮನೆಯಲ್ಲೇ ಕುಳಿತು ಬ್ಯುಸಿನೆಸ್ (Business) ಆರಂಭಿಸಿ, ಲಕ್ಷಗಟ್ಟಲೆ ಸಂಪಾದಿಸಬಹುದು.

ಇಂದು ಅನೇಕ ಯುವಕರು ಹಣ ಸಂಪಾದಿಸಲು ತಾನು ಹುಟ್ಟಿ ಬೆಳೆದ ಊರನ್ನೇ ಬಿಟ್ಟು ದೊಡ್ಡ ದೊಡ್ಡ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆರ್ಥಿಕ ಸಮಸ್ಯೆ, ಮನೆಯ ಪರಿಸ್ಥಿತಿಯಿಂದಾಗಿ ಯುವಸಮುದಾಯ ಈ ನಿರ್ಧಾರಕ್ಕೆ ಮುಂದಾಗುತ್ತಿದೆ. ಆದರೆ ಮನೆಯಲ್ಲೇ ಇದ್ದುಕೊಂಡು, ನಿಮ್ಮದೇ ಊರಿನಲ್ಲಿದ್ದು ವ್ಯವಹಾರ ಶುರು ಮಾಡಿ, ಲಾಭ ಗಳಿಸಬಹುದಾದ ಬೆಸ್ಟ್ ಬ್ಯುಸಿನೆಸ್ ಐಡಿಯಾಗಳು ಇಲ್ಲಿದೆ ನೋಡಿ.
10 ವರ್ಷ ಹಿಂದೆ ಹೋಲಿಸಿದ್ರೆ, ಇತ್ತೀಚಿನ ವರ್ಷಗಳಲ್ಲಿ ಭಾರತ ಬಹಳಷ್ಟು ಅಭಿವೃದ್ಧಿ ಕಂಡಿದೆ. ಹೀಗಾಗಿ, ಯುವಕರಿಗಾಗಿ ಊರಲ್ಲೇ ಇದ್ದುಕೊಂಡು ಹಣ ಸಂಪಾದಿಸಲು ಅನೇಕ ಮಾರ್ಗಗಳನ್ನು ಕಂಡುಕೊಳ್ಳಬಹುದು. ಜನರ ಅನುಕೂಲಗಳನ್ನು ನೋಡಿಕೊಂಡು ನೀವು ವ್ಯವಹಾರವನ್ನು ಸಹ ಶುರು ಮಾಡಬಹುದು. ಇಲ್ಲಿ ನಿಮಗೆ ಟಾಪ್ 5 ಬ್ಯುಸಿನೆಸ್ ಐಡಿಯಾಗಳನ್ನು ನೀಡಲಾಗಿದೆ ಓದಿ.
ಕೋಳಿ ಸಾಕಾಣಿಕೆ: ಮನೆಯಲ್ಲಿದ್ದುಕೊಂಡೇ ಕೋಳಿ ಸಾಕಾಣಿಕೆ ಮಾಡುವ ಮೂಲಕವೂ ಸಂಪಾದನೆ ಮಾಡಬಹುದು. ಹೂಡಿಕೆಯೂ ಕಡಿಮೆ, ಲಾಭವೂ ಹೆಚ್ಚು. ಆರಂಭದಲಿ 20-25 ಕೋಳಿಗಳನ್ನು ಸಾಕುವ ಮೂಲಕ, ಅಲ್ಲೇ ಮಾರುಕಟ್ಟೆ ಮೊಟ್ಟೆ ಮತ್ತು ಸ್ಥಳೀಯರಿಗೆ ಕೋಳಿ ಮಾಂಸವನ್ನು ಮಾರಾಟ ಮಾಡುವ ಮೂಲಕ ಸಂಪಾದನೆ ಶುರು ಮಾಡಬಹುದು. ಇನ್ನು ಇಂತಹ ವ್ಯವಹಾರಗಳಿಗೆ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಾಲ ಅಥವಾ ಸಬ್ಸಿಡಿ ಕೂಡಾ ಲಭ್ಯವಿದೆ. ಈ ವ್ಯವಹಾರದಿಂದ ಪ್ರತಿ ತಿಂಗಳು ಕನಿಷ್ಠ ಅಂದರೂ 20,000 ರೂ.ವರೆಗೆ ಸಂಪಾದನೆ ಮಾಡಬಹುದು.
ಸಾವಯವ ತರಕಾರಿ ಕೃಷಿ: ಎಲ್ಲವೂ ರಾಸಾಯನಿಕವಾಗಿ ಉತ್ಪಾದನೆಯಾಗುವ ಈ ಕಾಲದಲ್ಲಿ, ಹೆಚ್ಚಿನವರು ನೈಸರ್ಗಿಕ, ಸಾವಯ ತರಕಾರಿಗಳ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ನೀವೂ ಕೂಡಾ ರಾಸಾಯನಿಕ ಮುಕ್ತ ತರಕಾರಿಗಳನ್ನು ಬೆಳೆಯುವ ಮೂಲಕ ನಗರಗಳಲ್ಲಿ ಮಾರಾಟ ಮಾಡಬಹುದು. ಇದರಿಂದ ವೆಚ್ಚವೂ ಕಡಿಮೆ, ಆರೋಗ್ಯಕ್ಕೂ ಒಳ್ಳೆಯದು. ಇಂತಹ ವ್ಯವಹಾರಗಳಿಗೆ ಬೇಡಿಕೆಯೂ ಹೆಚ್ಚು.
ಜೇನುತುಪ್ಪ ಉತ್ಪಾದನೆ: ಸುತ್ತಲೂ ವಿಶಾಲ ಜಾಗಗಳನ್ನು ಹೊಂದಿರುವ ಗ್ರಾಮಗಳಲ್ಲಿ ಜೇನುತುಪ್ಪದ ವ್ಯವಹಾರವು ಬೆಸ್ಟ್ ಎಂದು ಪರಿಗಣಿಸಲಾಗಿದೆ. ಕೆಲವರು ಜೇನು ಪೆಟ್ಟಿಗೆಗಳನ್ನು ಮನೆಯಲ್ಲೇ ಇಟ್ಟುಕೊಂಡು, ನೈಸರ್ಗಿಕವಾಗಿ ಜೇನುತುಪ್ಪವನ್ನು ಉತ್ಪಾದಿಸುತ್ತಾರೆ. ಜೇನು ಪೆಟ್ಟಿಗೆ ಸಂಗ್ರಹಕ್ಕಾಗಿ ಅದರದೇ ಆದ ತರಬೇತಿಗಳಿವೆ. ಅದನ್ನೂ ಕೂಡಾ ಪಡೆಯಬಹುದು ನಗರಗಳಲ್ಲಿ ನೈಸರ್ಗಿಕ ತುಪ್ಪಗಳಿಗೆ ಭಾರೀ ಡಿಮ್ಯಾಂಡ್ ಇರುವುದರಿಂದ ಈ ವ್ಯವಹಾರದಿಂದ ಅಧಿಕ ಲಾಭ ಗಳಿಸಬಹುದು.
ಡೈರಿ ವ್ಯವಹಾರ: ನೀವು ಊರಲ್ಲಿ ಸ್ವಲ್ಪ ಜಮೀನು ಹೊಂದಿದ್ದರೆ ಸಾಕು ಡೈರಿ ವ್ಯವಹಾರವನ್ನು ಶುರುಮಾಡಬಹುದು. ಹಸು ಅಥವಾ ಎಮ್ಮೆಗಳನ್ನು ಸಾಕುವ ಮೂಲಕ ಮನೆಯಲ್ಲಿದ್ದುಕೊಂಡೇ ನೀವು ಡೈರಿ ವ್ಯವಹಾರವನ್ನು ಶುರುಮಾಡಬಹುದು. ಆರಂಭದಲ್ಲಿ, ಕಡಿಮೆ ಬಜೆಟ್‌ನಲ್ಲಿ ಎರಡರಿಂದ ಮೂರು ಹಸುಗಳನ್ನು ಸಾಕಬೇಕು. ನಂತರ ಈ ಸಂಖ್ಯೆಯನ್ನು ಹೆಚ್ಚಿಸಿ, ದೊಡ್ಡ ಮಟ್ಟದಲ್ಲಿ ಲಾಭವನ್ನು ಪಡೆಯಬಹುದು. ಹಾಲಿನ ಜೊತೆಗೆ ಪನ್ನೀರ್, ತುಪ್ಪ ಮತ್ತು ಮೊಸರು ತಯಾರಿಸಿ ಮಾರಾಟ ಮಾಡಿ, ಲಾಭ ಗಳಿಸಬಹುದು. ಹಳ್ಳಿಗಳಲ್ಲಿ, ನಗರಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಉತ್ತಮ ಸಂಪಾದನೆ ಮಾಡಬಹುದು.
ಹೂವಿನ ಕೃಷಿ: ಯಾವುದೇ ಹಬ್ಬ, ಮದುವೆ, ಕಾರ್ಯಕ್ರಮಗಳಿಗೂ ಹೂ ಬಹಳ ಅಗತ್ಯ. ಆದ್ದರಿಂದ ಹೂವಿನ ಕೃಷಿಯನ್ನೂ ಶುರು ಮಾಡಬಹುದು. ಮನೆಯಲ್ಲೇ ಚೆಂಡು ಹೂ, ಗುಲಾಬಿ ಅಥವಾ ಮಲ್ಲಿಗೆಯಂತಹ ಹೂವುಗಳ ಕೃಷಿಯನ್ನು ಕಡಿಮೆ ಬಂಡವಾಳದೊಂದಿಗೆ ಶುರು ಮಾಡಿ, ಹೆಚ್ಚು ಆದಾಯ ಗಳಿಸಬಹುದು. ಒಂದು ಎಕರೆ ಭೂಮಿಯಲ್ಲಿ ಹೂವಿನ ಕೃಷಿ ಆರಂಭಿಸಿ ಪ್ರತಿ ಸೀಸನ್‌ಗೆ 50 ಸಾವಿರ ರೂ.ನಿಂದ 1 ಲಕ್ಷದವರೆಗೆ ಸಂಪಾದನೆ ಮಾಡಬಹುದು.


Click it and Unblock the Notifications