ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಮೊಬೈಲ್ ಮಾರುಕಟ್ಟೆ (Mobile Market) ಕೂಡಾ ಒಂದು. ಸದ್ಯ ಮೊಬೈಲ್ ಮಾರುಕಟ್ಟೆ ಭಾರೀ ಬೇಡಿಕೆಯಲ್ಲಿದೆ. ಅಲ್ಲದೇ ಮೊಬೈಲ್ ಕಂಪನಿಗಳು ಸಹ ತನ್ನ ಬ್ರಾಂಡ್‌ನಡಿಯಲ್ಲಿ ಹೊಸ ಹೊಸ ಮೊಬೈಲ್‌ಗಳನ್ನು ಲಾಂಚ್ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಲೇ ಇರುತ್ತದೆ. ಇದೀಗ 2025ರ ವರ್ಷವು ಬಜೆಟ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಬೆಲೆ ಹೆಚ್ಚಾದರು, ಗ್ರಾಹಕರಿಗೆ ಆಯ್ಕೆಗಳನ್ನು ನೀಡುವ ಮೂಲಕ ಭಾರೀ ಬೇಡಿಕೆಯಲ್ಲಿದೆ. ಅದರಲ್ಲೂ ವಿವೋ, ರಿಯಲ್‌ಮಿ, ಇನ್‌ಫಿನಿಕ್ಸ್ ಜೊತೆಗೆ ಒಪ್ಪೋ ಮತ್ತು ನಥಿಂಗ್ (Vivo, Realme, Infinix, Oppo, Nothing) ಸಹ ಈ ಸಾಲಿಗೆ ಸೇರಿವೆ.

ನಥಿಂಗ್‌ನ CMF ಸಬ್-ಬ್ರ್ಯಾಂಡ್ CMF Phone 2 Pro, ಬಜೆಟ್ ಬೆಲೆಯಲ್ಲಿ ಭಾರೀ ಬೇಡಿಕೆ ಹೊಂದಿದೆ. ಇದು ಡೈಮೆನ್ಸಿಟಿ 7300 ಪ್ರೊ ಚಿಪ್‌ನಿಂದ ಕೆಲಸ ಮಾಡುತ್ತದೆ. ಟ್ರಿಪಲ್ ಕ್ಯಾಮೆರಾ ಸೆಟಪ್ (50MP ಮೈನ್ ಕ್ಯಾಮೆರಾ + 50MP ಟೆಲಿಫೋಟೋ + 8MP ಅಲ್ಟ್ರಾವೈಡ್), 6.7 ಇಂಚಿನ 120Hz AMOLED ಡಿಸ್‌ಪ್ಲೇ ಮತ್ತು ಬಾಕ್ಸ್‌ನಲ್ಲೇ ಚಾರ್ಜರ್ ಅನ್ನೂ ನೀಡಲಿದೆ. Nothing OS 3.0, AI ಫೀಚರ್, 33W ಚಾರ್ಜಿಂಗ್, 5000mAh ಬ್ಯಾಟರಿ, IP54 ರೇಟಿಂಗ್ ಹಾಗೂ ಸ್ಟೋರೇಜ್ ವಿಸ್ತರಣೆಯೊಂದಿಗೆ ಇದು ₹20,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ.
ಒಪ್ಪೋ K13x ವಿನ್ಯಾಸ ಮತ್ತು ಕ್ವಾಲಿಟಿ ಹೆಚ್ಚು ಒತ್ತು ನೀಡುತ್ತದೆ. ಮೀಡಿಯಾಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನಿಂದ ಇದು ಕಾರ್ಯನಿರ್ವಹಿಸುತ್ತದೆ. 8GB RAM, 128GB ಸ್ಟೋರೇಜ್ ಸಾಮರ್ಥ್ಯವನ್ನು ಇದು ಹೊಂದಿದೆ. ಫೋನ್ 7.99mm ತೆಳ್ಳಗಿನ, 194 ಗ್ರಾಂ ತೂಕವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ 6,000mAh ಬ್ಯಾಟರಿ ಮತ್ತು 45W ವೈರ್ಡ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ವಿವೋ T4x, ಬೃಹತ್ 6500mAh ಬ್ಯಾಟರಿ, ಮೀಡಿಯಾಟೆಕ್ ಡೈಮೆನ್ಸಿಟಿ 7300 5G ಚಿಪ್ ಮತ್ತು IP64 ರೇಟಿಂಗ್‌ನೊಂದಿಗೆ ಉತ್ತಮ ವಿನ್ಯಾಸದ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಫೋನ್ 120Hz ಡಿಸ್ಪ್ಲೇ ಮತ್ತು 50MP ಮೈನ್ ಕ್ಯಾಮೆರಾ ಸೆಟಪ್ ಅನ್ನೂ ಹೊಂದಿದೆ. ಅಲ್ಲದೇ ಇದರ ಬ್ಯಾಟರಿ 44W ವೇಗದ ಚಾರ್ಜಿಂಗ್ ಅನ್ನೂ ಬೆಂಬಲಿಸಲಿದೆ.
ರಿಯಲ್‌ಮಿ P4x, "x" . ಇದು 7,000mAh ದೊಡ್ಡ ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 8.39mm ಡಿಸ್‌ಪ್ಲೇ, 208 ಗ್ರಾಂ ತೂಗುವ ಈ ಸಾಧನ ಮೀಡಿಯಾಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. 8GB RAM, 256GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. IP64 ರೇಟಿಂಗ್ ಜೊತೆ ಉತ್ತಮ ಕೂಲಿಂಗ್ ವ್ಯವಸ್ಥೆಯನ್ನೂ ಹೊಂದಿದೆ.
ಇನ್ನು ಇನ್‌ಫಿನಿಕ್ಸ್‌ನ GT 30, ಗೇಮರ್‌ಗಳಿಗಾಗಿ ಲಾಂಚ್ ಮಾಡಿದ ಫೋನ್ ಆಗಿದೆ. ಇದು 144Hz AMOLED ಡಿಸ್ಪ್ಲೇ ಮತ್ತು ಡೈಮೆನ್ಸಿಟಿ 7400 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಗೇಮಿಂಗ್‌ಗೆ GT ಶೋಲ್ಡರ್ ಟ್ರಿಗರ್‌ಗಳು ಹಾಗೂ ಕಸ್ಟಮೈಸ್ ಮಾಡಬಹುದಾದ ಕೆಪಾಸಿಟಿವ್ ಬಟನ್‌ಗಳನ್ನು ಸಹ ನೀಡಲಾಗಿದೆ.


Click it and Unblock the Notifications