ರೈತರ ಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರದಿಂದ ಜಾರಿಗೆ ತಂದ ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Yojana) ಕೂಡಾ ಒಂದು. 2019 ರಲ್ಲಿ ಜಾರಿಗೆ ತಂದ ಈ ಯೋಜನೆ ಈಗಾಗಲೇ 2000 ಸಾವಿರ ರೂ.ನಂತೆ 20 ಕಂತುಗಳನ್ನು ಪೂರೈಸಿದೆ. ಇದೀಗ ಎಲ್ಲರ ಚಿತ್ತ 21ನೇ ಕಂತಿನತ್ತ ನೆಟ್ಟಿದೆ. 20ನೇ ಕಂತಿನ ಹಣ ಬಿಡುಗಡೆಯಾಗಿ 2 ತಿಂಗಳು ಕಳೆದರೂ, ವರ್ಷಾಂತ್ಯ ಹತ್ತಿರಕ್ಕೆ ಬರುತ್ತಿದ್ದರೂ ಈ ವರ್ಷದ ಕೊನೆಯ ಕಂತಿನ ಹಣ ಇನ್ನೂ ಬಿಡುಗಡೆಯಾಗಿಲ್ಲ. ಆದ್ದರಿಂದ ದೇಶದ ಲಕ್ಷಗಟ್ಟಲೆ ರೈತರು, ಈ ಬಾರಿ ಯಾವಾಗ 21ನೇ ಕಂತಿನ (21st Installment) 2 ಸಾವಿರ ಹಣ ಬರುತ್ತದೆ ಎಂಬ ಕಾತುರದಲ್ಲಿದ್ದಾರೆ. ಅಲ್ಲದೇ ಕೆಲ ರೈತರಿಗೆ ಈ ಬಾರಿ 4 ಸಾವಿರ ಹಣ ಜಮಾ ಆಗಲಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ 21ನೇ ಕಂತಿನ 2,000 ರೂಪಾಯಿ ಬಿಡುಗಡೆಗಾಗಿ ಲಕ್ಷಾಂತರ ರೈತರು ಕಾದು ಕುಳಿತಿದ್ದಾರೆ. ಈ ವರ್ಷದ ಎರಡು ಕಂತುಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲೊಂದು ಫೆಬ್ರವರಿ ಬಿಡುಗಡೆ ಮಾಡಿದರೆ ಮತ್ತೊಂದು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ, ಮೂರನೇ ಕಂತಿನ ಹಣ ಇನ್ನೂ ಬಿಡುಗಡೆಯಾಗಿಲ್ಲ. ಹಬ್ಬದ ಸೀಸನ್ ಮತ್ತು ಬಿಹಾರ ಚುನಾವಣೆ ಎಲ್ಲಾ ಮುಗಿದರೂ, 21ನೇ ಕಂತಿನ ಪಿಎಂ ಕಿಸಾನ್ ಹಣ ಇನ್ನೂ ಜಮೆಯಾಗಿಲ್ಲ ಎಂಬ ಚಿಂತೆಯಲ್ಲಿದ್ದಾರೆ.
ಪಿಎಂ ಕಿಸಾನ್ ಹಣ:
ಪ್ರತಿ ವರ್ಷ, ಕೇಂದ್ರ ಸರ್ಕಾರದಿಂದ ಪಿಎಂ-ಕಿಸಾನ್ ಯೋಜನೆಯಡಿ ಮೂರು ಕಂತುಗಳಲ್ಲಿ ಒಟ್ಟು 6 ಸಾವಿರ ಹಣ ಜಮಾ ಮಾಡಲಾಗುತ್ತದೆ. ಈ ಹಣವನ್ನು ರೈತರು ನೇರ ಲಾಭ ವರ್ಗಾವಣೆ (DBT) ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ಪಡೆಯುತ್ತಾರೆ. 2025ರ ಆಗಸ್ಟ್ 2 ರಂದು 20ನೇ ಕಂತಿನ ಹಣ ಜಮಾ ಮಾಡಲಾಗಿತ್ತು. ಅದಕ್ಕೂ ಮುನ್ನ ಫೆಬ್ರವರಿಯಲ್ಲಿ 19ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ 21ನೇ ಕಂತಿನ ಹಣ ಯಾವಾಗ ಬರುತ್ತದೆ ಎಂಬ ಪ್ರಶ್ನೆ ರೈತರಲ್ಲಿ ಮೂಡಿದೆ.
ಆರಂಭದರಲ್ಲಿ ರೈತರು 21ನೇ ಕಂತು ದೀಪಾವಳಿಗೆ (ಅಕ್ಟೋಬರ್ 21) ಮೊದಲು ಅಥವಾ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಬರಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಹಬ್ಬ, ಬಿಹಾರ ಚುನಾವಣೆ ಮುಗಿದರೂ, ಇನ್ನೂ ಹಣ ಬಂದಿಲ್ಲ.
ಈ ರೈತರಿಗೆ 4 ಸಾವಿರ ರೂ.!
ಇನ್ನು ಹಲವಾರು ರೈತರಿಗೆ ಈ ಬಾರಿ ಪಿಎಂ ಕಿಸಾನ್ ಹಣ ಲಭ್ಯವಾಗುವುದು ಬಹುತೇಕ ಡೌಟು. ಕಾರಣ, ಅನರ್ಹರ ಅರ್ಜಿ ಸಲ್ಲಿಕೆ, ಅಪೂರ್ಣ ಕೆವೈಸಿ ನಂತಹ ತಾಂತ್ರಿಕ ಕಾರಣಗಳಿಂದಾಗಿ 21ನೇ ಕಂತಿನ ಹಣ ಬರುವುದಿಲ್ಲ ಎನ್ನಲಾಗಿದೆ. ಇನ್ನೂ ಕೆಲವು ರೈತರು 20ನೇ ಕಂತಿನ ಹಣವನ್ನು ಸ್ವೀಕರಿಸಿಲ್ಲ. ಏಕೆಂದರೆ ಅಪೂರ್ಣ ಕೆವೈಸಿ. ಇದೀಗ ಕೆವೈಸಿ ಸಂಪೂರ್ಣ ಮಾಡಿದ ರೈತರು ಮುಂದಿನ 21 ನೇ ಕಂತಿನೊಂದಿಗೆ ಬಾಕಿ ಉಳಿದಿರುವ 2,000 ರೂಪಾಯಿಗಳನ್ನು ಪಡೆಯಲಿದ್ದಾರೆ. ಅಂದರೆ, ಅನೇಕರಿಗೆ 20ನೇ ಮತ್ತು 21ನೇ ಕಂತುಗಳು ಸೇರಿ 4,000 ರೂಪಾಯಿಗಳು ಅವರ ಖಾತೆಗೆ ಜಮೆಯಾಗಬಹುದು.
2024ರಲ್ಲಿ ಪಿಎಂ-ಕಿಸಾನ್ ಹಣ ಬೇಗ ಬೇಗ ಜಮೆಯಾಗುತ್ತಿತ್ತು. ಅಂದರೆ 17ನೇ ಕಂತು ಜೂನ್ 18 ರಂದು, 18ನೇ ಕಂತು ಅಕ್ಟೋಬರ್ 5 ರಂದು ಬಿಡುಗಡೆಯಾಗಿತ್ತು. ಅಂದರೆ, ರೈತರು ನಾಲ್ಕು ತಿಂಗಳ ಅಂತರದಲ್ಲಿ ಹಣ ಪಡೆಯುತ್ತಿದ್ದರು.
ಆದರೆ, 2025 ರಲ್ಲಿ ಕಂತು ಬಿಡುಗಡೆಯಲ್ಲಿ ಭಾರೀ ವಿಳಂಬವಾಗಿದೆ. ಈ ಬಾರಿ 19ನೇ ಕಂತು ಫೆಬ್ರವರಿ 24, 2025 ರಂದು ಬಂದರೆ, 20ನೇ ಕಂತು ಆಗಸ್ಟ್ 2, 2025 ರಂದು ಜಮೆಯಾಗಿದೆ. ಈ ಮೂಲಕ 5 ತಿಂಗಳು ಅಂತರದಲ್ಲಿ ಹಣ ಜಮಾ ಆಗಿದೆ. ಇದೀಗ ವರ್ಷದ ಅಂತ್ಯದಲ್ಲಿದ್ದರೂ 21ನೇ ಕಂತಿನ ಹಣ ಇನ್ನೂ ಬಿಡುಗಡೆಯಾಗದಿರುವುದು ಹಲವು ಪ್ರಶ್ನೆಗಳಿಗೆ ಸಾಕ್ಷಿಯಾಗಿದೆ.


Click it and Unblock the Notifications