ಹೆಚ್ಚಿನ ಭಾರತೀಯರಿಗೆ ಸ್ವಂತ ಮನೆ ಹೊಂದುವುದು ಜೀವನದ ಪ್ರಮುಖ ಗುರಿಯಾಗಿದೆ. ಮದುವೆ ಹಾಗೂ ಮನೆ ಜೀವನದ ಪ್ರಮುಖ ಹಂತಗಳನ್ನು ಎಂದೇ ನಿರ್ದರಿಸಲಾಗುತ್ತದೆ. ಆದರೆ ಸ್ವಂತ ಮನೆ ಎಂಬ ಇರಬೇಕು ಹೊಂದಬೇಕು ಎಂಬ ಜನರ ನಂಬಿಕೆ ಈಗೀಗ ಬದಲಾಗುತ್ತಿದೆ. ಇತ್ತೀಚೆಗಂತು ಜನರು ಮನೆ ಖರೀದಿಸುವುದು ನಿಜವಾಗಿಯೂ ಯೋಗ್ಯವೇ ಎಂದು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.
ಒಂದಷ್ಟು ಜನರು 'ನಾನು ಮನೆ ಖರೀದಿಸಬೇಕು' ಎಂದು ಹೇಳುವುದನ್ನೇ ನಿಲ್ಲಿಸಿದ್ದಾರೆ. ನಿಜವಾಗಿಯೂ ಮನೆ ಖರೀದಿಸುವುದು ಯೋಗ್ಯವಾಗಿದೆಯೇ?' ಎಂದು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಯಾಕೆಂದರೆ ಸರಿಯಾದ ಲೆಕ್ಕಚಾರ ಬಲ್ಲವ ನಿಜವಾಗಿ ಜಾಣ ನಡೆ ಅನುಸರಿಸುತ್ತಾನೆ. ಅದು ಹೇಗೆ ಎಂದು ಮುಂದೆ ಅರ್ಥವಾಗುತ್ತದೆ.

ಭದ್ರತೆ, ಆರ್ಥಿಕ ಭದ್ರತೆ, ಸಾಮಾಜಿಕ ಸ್ಥಾನಮಾನ, ಸಾಂಪ್ರದಾಯಿಕ ಮನಸ್ಥಿತಿಯ ಕಾರಣದಿಂದ ಅನೇಕ ಪೋಷಕರು, 2025 ರಲ್ಲೂ ಮನೆ ಖರೀದಿಸುವುದಿಲ್ಲವೇ ಎಂಬ ಪ್ರಶ್ನೆ ಮಗ/ ಮಗಳ ಮುಂದೆ ಇಡುತ್ತಾರೆ. ಭಾರತೀಯ ಪೋಷಕರು ತಮ್ಮ ಮಕ್ಕಳನ್ನು ಮನೆ ಖರೀದಿಸಲು ಒತ್ತಾಯಿಸುವುದು ಈ ಕಾಲಘಟ್ಟದಲ್ಲೂ ಸಾಮಾನ್ಯವಾಗಿದೆ. " ಮಗಾ, ಸ್ವಂತ ಮನೆ ತೆಗೆದುಕೊಳ್ಳುವುದು ಯಾವಾಗ?, ಸ್ವಂತ ಮನೆ ಇದ್ರೆ ಲೈಫ್ ಸೆಟ್ ಆದ ಹಾಗೆ, ಮನೆ ಬಾಡಿಗೆ ಕಟ್ಟಲೆಂದು ಹಣ ವ್ಯರ್ಥ ಮಾಡಬೇಡ ಹೀಗೆ ಮನೆ ವಿಚಾರದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಆಗ್ಗಾಗ್ಗೆ ಕಿವಿಮಾತು ಹೇಳ್ತಾನೇ ಇರುತ್ತಾರೆ. ಆದರೆ ಅಂಕೆ- ಸಂಖ್ಯೆಗಳು ಬೇರೆಯದೇ ಕಥೆಯನ್ನು ಹೇಳುತ್ತವೆ.
ಸರಳವಾಗಿ ಹೇಳುವುದಾದರೆ ₹1.5 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್‌ಗೆ ಸಾಮಾನ್ಯವಾಗಿ ₹30 ಲಕ್ಷ ಡೌನ್ ಪೇಮೆಂಟ್ ಮತ್ತು ₹1.2 ಕೋಟಿ ಗೃಹ ಸಾಲ ಬೇಕಾಗುತ್ತದೆ. 9% ಬಡ್ಡಿದರದಲ್ಲಿ, ಕಾಲಾನಂತರದಲ್ಲಿ ಪಾವತಿಸುವ ಒಟ್ಟು ಮೊತ್ತ ₹2.5 ಕೋಟಿಗಿಂತ ಹೆಚ್ಚಾಗುತ್ತದೆ.ಇದರಲ್ಲಿ, ಬಡ್ಡಿಯ ಅಂಶವು ಗಮನಾರ್ಹವಾಗಿರುತ್ತದೆ, ಇದು ದೀರ್ಘಾವಧಿಯಲ್ಲಿ ದೊಡ್ಡ ಮೊತ್ತಕ್ಕೆ ಕಾರಣವಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಮನೆ ಖರೀದಿಸುವುದರಿಂದ, ನೀವು ಒಂದು ನಿರ್ದಿಷ್ಟ ನಗರದಲ್ಲಿ, ಒಂದು ನಿರ್ದಿಷ್ಟ ಕೆಲಸದಲ್ಲಿ ಮತ್ತು ಒಂದು ನಿರ್ದಿಷ್ಟ ಜೀವನಶೈಲಿಯಲ್ಲಿ ದೀರ್ಘಕಾಲದವರೆಗೆ ಬದ್ಧರಾಗಿ ಇರಬೇಕಾಗುತ್ತದೆ. ಕೆಲಸದ ಬದಲಾವಣೆ ಅಥವಾ ನಗರ ಬದಲಾವಣೆಯ ಅಗತ್ಯವಿದ್ದರೆ ಮನೆ ಎಂ ಬ ವಿಚಾರ ನಮ್ಮನ್ನು ಕಟ್ಟಿಹಾಕಿಬಿಡುತ್ತದೆ. ಇದಲ್ಲದೇ ಮನೆಯ ನಿರ್ವಹಣೆ ಮತ್ತು ಗೃಹ ಸಾಲದ ಮರುಪಾವತಿ ಮನೆ ಖರೀದಿಸಿದಾತನ ಆರ್ಥಿಕ ಸ್ವಾತಂತ್ರ್ಯವನ್ನು ಮಿತಿಗೊಳಿಸಬಹುದು.
ಹಾಗಿದ್ರೆ ಅದೇ ಮನೆ ಬಾಡಿಗೆಗೆ ಪಡೆದ್ರೆ ಲೆಕ್ಕಚಾರ ಹೇಗಿರುತ್ತೆ ಅಂತ ನೋಡೋಣಾ... ತಿಂಗಳಿಗೆ ಸುಮಾರು ₹40,000 ಬಾಡಿಗೆ ಎಂದಾದರೆ ಮನೆ ಖರೀದಿಗೆ ಮಾಡಬಹುದಾದ ₹30 ಲಕ್ಷ ಡೌನ್ ಪೇಮೆಂಟ್ ಅನ್ನು ಹೂಡಿಕೆ ಮಾಡಿದರೆ ಅದು ಮ್,ಉಂದಿನ 20 ವರ್ಷಗಳಲ್ಲಿ ಆ ಹಣವು ₹3 ಕೋಟಿಗೂ ಹೆಚ್ಚು ಬೆಳೆಯುವ ಸಾಧ್ಯತೆ ಇದೆ. 20 ವರ್ಷಗಳಲ್ಲಿ ಆ ಹಣವು ₹3 ಕೋಟಿಗೂ ಹೆಚ್ಚು ಬೆಳೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಿಸುವುದರಿಂದ, ಗೃಹ ಸಾಲದ ಇಎಂಐ ಮತ್ತು ನಿರ್ವಹಣಾ ವೆಚ್ಚಗಳಿಂದ ಮುಕ್ತರಾಗಿ, ಆರ್ಥಿಕವಾಗಿ ಹೆಚ್ಚು ಸ್ವಾತಂತ್ರವಾಗಿರುವ ಮನೋಭಾವ ಹೊಂದಿರಬಹುದು.
ಮನೆ ಖರೀದಿ ಅರ್ಥಪೂರ್ಣ ಯಾವಾಗ?
ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಖಾಸಗಿ ಡೆವಲಪರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಖಾಸಗಿ ಡೆವಲಪರ್‌ಗಳು ಲಾಭದ ಉದ್ದೇಶದಿಂದ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಹೀಗಾಗಿ ಅವರು ತಮ್ಮ ಮನೆಗಳನ್ನು ಅಗ್ಗವಾಗಿ ಮಾರಾಟ ಮಾಡಲು ಬಯಸುವುದಿಲ್ಲ. ತಮ್ಮ ಹೆಚ್ಚಿನ ಲಾಭ ಸಿಗುವಂತೆ ಮಾಡಲು ಡೆವಲಪರ್‌ಗಳು ಯೋಜನೆಗಳನ್ನು ಪೂರ್ಣಗೊಳಿಸಲು ವರ್ಷಗಟ್ಟಲೆ ಕಾಯಬಹುದು. ಕೆಲವು ಸಂದರ್ಭದಲ್ಲಿ ಹಸ್ತಾಂತರಗಳನ್ನು ವಿಳಂಬ ಮಾಡಬಹುದು. ಅದು ಕೆಲಸ ಮಾಡದಿದ್ದರೆ ಯೋಜನೆಗಳನ್ನೇ ಸ್ಥಗಿತಗೊಳಿಸಬಹುದು. ಕೆಲವು ಸಂದರ್ಭಗಳಲ್ಲಿ, ಡೆವಲಪರ್‌ಗಳು ತಮ್ಮ ಯೋಜನೆಗಳನ್ನು ದೊಡ್ಡ ಹೂಡಿಕೆದಾರರಿಗೆ ಮಾರಾಟ ಮಾಡುತ್ತಾರೆ. ಇದು ಸಾಮಾನ್ಯ ಖರೀದಿದಾರರಿಗೆ ಮನೆಗಳನ್ನು ಖರೀದಿಸುವುದನ್ನು ಸಂಕಷ್ಟಕ್ಕೆ ನೂಕಬಹುದು.
ಮನೆ ಮಾಲೀಕತ್ವವು ಇನ್ನೂ ಅನೇಕರಿಗೆ ಕನಸಾಗಿ ಉಳಿದಿದೆ. ಆದರೆ, ಆರ್ಥಿಕವಾಗಿ ನೋಡಿದರೆ, ಇದು ಒಂದು ದುಬಾರಿಯಾದ ನಮ್ಮನ್ನು ನಾವೇ ಸಿಲುಕಿಸಿಕೊಳ್ಳಬಹುದಾದ ಬಲೆಯಾಗಬಹುದು. ಆದ್ದರಿಂದ, ಎಲ್ಲಾ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ, ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತು ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಮುಖ್ಯ.
Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.


Click it and Unblock the Notifications