ಇಂತಹ ವ್ಯಕ್ತಿಗಳು ಕ್ರೆಡಿಟ್‌ ಕಾರ್ಡ್‌ಗಳಿಂದ ದೂರವಿರಿ!

ಇಂದಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಗಳ ಬಳಕೆ ಹೆಚ್ಚಾಗಿದೆ. ಸುಲಭವಾಗಿ ಸಾಲ ಪಡೆದು ಶಾಪಿಂಗ್‌ ಮಾಡುವ ಅವಕಾಶ ಇರುವ ಹಿನ್ನೆಲೆಯಲ್ಲಿ ಸದ್ಯ ಹೆಚ್ಚಿನ ಜನರಿಗೆ ಕ್ರೆಡಿಟ್‌ ಕಾರ್ಡ್‌ ಆಕರ್ಷಕವಾಗಿ ಕಂಡುಬರುತ್ತಿದೆ. ಅದೂ ಅಲ್ಲದೆ ಕ್ರೆಡಿಟ್ ಕಾರ್ಡ್‌ಗಳಲ್ಲಿ ಹೆಚ್ಚಿನ ಮಾರಾಟಗಳಲ್ಲಿ ಅನೇಕ ಕೊಡುಗೆಗಳನ್ನು ನೀಡಲಾಗುತ್ತದೆ. ಇದರಿಂದಾಗಿ ಸಾಮಾನ್ಯವಾಗಿ ಹೆಚ್ಚಿನ ಜನರು ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಲು ಬಯಸುತ್ತಾರೆ. ಅಲ್ಲದೆ ಇದರಲ್ಲಿ ಶಾಪಿಂಗ್‌ಗಾಗಿ ರಿಡೀಮ್ ಮಾಡಬಹುದಾದ ರಿವಾರ್ಡ್ ಪಾಯಿಂಟ್‌ಗಳು ಸಹ ಲಭ್ಯವಿವೆ.

ಇನ್ನು ಕೆಲವು ಕ್ರೆಡಿಟ್ ಕಾರ್ಡ್‌ಗಳಲ್ಲಿ ನೀವು ರಿವಾರ್ಡ್ ಪಾಯಿಂಟ್‌ಗಳನ್ನು ನಗದಾಗಿ ಕೂಡ ಪರಿವರ್ತಿಸಬಹುದು. ಇಷ್ಟೆಲ್ಲಾ ಹೇಳಿದ ಮೇಲೆ ಪ್ರತಿಯೊಬ್ಬರಲ್ಲೂ ಕ್ರೆಡಿಟ್‌ ಕಾರ್ಡ್‌ ಹೊಂದಬೇಕೆಂದು ಬಯಸುವುದು ಸಾಮಾನ್ಯ ಸಂಗತಿ. ಹಾಗಾಗಿ ಇಲ್ಲಿ ಆದರೆ ಇಲ್ಲಿ ಒಂದು ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ ಪ್ರತಿಯೊಬ್ಬರೂ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬೇಕೇ? ಅದಕ್ಕೆ ಸರಿಯಾಗಿ ಉತ್ತರ ನೀಡಬೇಕೆಂದರೆ ʻಇಲ್ಲʼ. ಕ್ರೆಡಿಟ್‌ ಕಾರ್ಡ್‌ ತೆಗೆದುಕೊಂಡರೆ ಜನರ ಸಿಬಿಲ್‌ ಸ್ಕೋರ್‌ ಹಾಳಾಗುತ್ತದೆ. ಒಂದು ವೇಳೆ ಸಿಬಿಲ್‌ ಸ್ಕೋರ್‌ ಹಾಳಾದರೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಸಿಗುವುದು ಕೂಡ ಕಠಿಣ. ಹಾಗಾಗಿ ಯಾವ ಜನರು ಕ್ರೆಡಿಟ್‌ ಕಾರ್ಡ್‌ಗಳಿಂದ ದೂರ ಇರಬೇಕು ಎಂಬುದು ಇಲ್ಲಿ ಪ್ರಶ್ನೆ ಉದ್ಬವಿಸುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.

 ಇಂತಹ ವ್ಯಕ್ತಿ ನೀವಾಗಿದ್ರೆ ಕ್ರೆಡಿಟ್‌ ಕಾರ್ಡ್‌ಗಳಿಂದ ದೂರವಿರಿ!

1. ಖರ್ಚುಗಳ ಮೇಲೆ ನಿಯಂತ್ರಣ ಇಲ್ಲದಿರುವವರು ದೂರವಿರಿ!

ಯಾರಿಗಾದರೂ ತನ್ನ ಖರ್ಚುಗಳನ್ನು ನಿಯಂತ್ರಿಸಲು ಕಷ್ಟವಾಗಿದ್ದರೆ ಮತ್ತು ಯೋಚಿಸದೆ ಹೆಚ್ಚು ಖರ್ಚು ಮಾಡಿದರೆ, ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವುದರಿಂದ ಆ ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಈ ಕಾರಣದಿಂದಾಗಿ, ಅವರು ಭಾರೀ ಬಡ್ಡಿದರದಲ್ಲಿ ಸಾಲವನ್ನು ಮರುಪಾವತಿಸಬೇಕಾಗಬಹುದು. ಇದರಿಂದ ಸಿಬಿಲ್‌ ಸ್ಕೋರ್‌ ಕೂಡ ಕಡಿಮೆಯಾಗಿ, ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆ ಉದ್ಬವಿಸುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.,

2. ಸಾಲವನ್ನು ಸಕಾಲಕ್ಕೆ ಪಾವತಿಸದವರು

ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಸಮಯಕ್ಕೆ ಪಾವತಿಸದಿದ್ದರೆ, ಬಡ್ಡಿ ಮತ್ತು ಶುಲ್ಕಗಳು ಹೆಚ್ಚಾಗಬಹುದು. ಒಬ್ಬ ವ್ಯಕ್ತಿಯು ತನ್ನ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಪಾವತಿಸಬಹುದೆಂದು ಖಚಿತವಾಗಿರದಿದ್ದರೆ, ಅವನು ಕ್ರೆಡಿಟ್ ಕಾರ್ಡ್‌ನಿಂದ ದೂರವಿರಬೇಕು. ಸೂಕ್ತ ಸಮಯದಲ್ಲಿ ಸಾಲಗಳನ್ನು ಪಾವತಿಸದಿದ್ದರೆ ಬಡ್ಡಿ ಹಾಗೂ ಶುಲ್ಕಗಳು ಹೆಚ್ಚಾಗಿ ಬಹುದೊಡ್ಡ ಹಣಕಾಸಿನ ಸಮಸ್ಯೆಗೆ ವ್ಯಕ್ತಿ ಸಿಲುಕಿಕೊಳ್ಳಬಹುದು.

3. ಹೆಚ್ಚು ಸಾಲದಲ್ಲಿರುವ ಇರುವ ವ್ಯಕ್ತಿಗಳು!

ಒಬ್ಬ ವ್ಯಕ್ತಿಯು ಈಗಾಗಲೇ ಹೆಚ್ಚುವರಿ ಸಾಲವನ್ನು ಹೊಂದಿದ್ದರೆ, ಅವನು ಕ್ರೆಡಿಟ್ ಕಾರ್ಡ್‌ಗಳಿಂದ ದೂರವಿರಬೇಕು. ಈ ಸಾಲವು ವೈಯಕ್ತಿಕ ಸಾಲ, ಶಿಕ್ಷಣ ಸಾಲ, ವಾಹನ ಸಾಲ, ಗೃಹ ಸಾಲ ಆಗಿರಬಹುದು. ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ಮೂಲಕ, ಅಂತಹ ಜನರ ಸಾಲವು ಮತ್ತಷ್ಟು ಹೆಚ್ಚಾಗಬಹುದು, ಇದರಿಂದಾಗಿ ಹಣಕಾಸಿನ ಪರಿಸ್ಥಿತಿಯು ಹದಗೆಡಬಹುದು.

4. ತಮ್ಮ ಬಜೆಟ್ ಬಗ್ಗೆ ಹೆಚ್ಚು ಗಮನ ಹರಿಸದವರು

ಒಬ್ಬರಿಗೆ ಬಜೆಟ್ ಮತ್ತು ವೆಚ್ಚವನ್ನು ಹೇಗೆ ಯೋಜಿಸುವುದು ಎಂದು ತಿಳಿದಿಲ್ಲದಿದ್ದರೆ ಅಂಥವರು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವುದು ತಮ್ಮ ಭವಿಷ್ಯಕ್ಕೆ ಪೆಟ್ಟು ನೀಡಿದಂತೆಯೇ ಸರಿ. ಹಾಗಾಗಿ ಅಂತಹ ಜನರು ಕ್ರೆಡಿಟ್ ಕಾರ್ಡ್‌ಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಖರ್ಚುಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಮತ್ತು ಬಾಕಿ ಪಾವತಿಸುವಲ್ಲಿ ಡೀಫಾಲ್ಟ್ ಆಗುವ ಸಾಧ್ಯತೆ ಹೆಚ್ಚಿದೆ.

5. ಕಡಿಮೆ ಆದಾಯ ಹೊಂದಿದ ಜನರು

ಯಾರಾದರೂ ಆದಾಯ ಕಡಿಮೆ ಆದಾಯ ಹೊಂದಿದ್ದರೆ ಮತ್ತು ಅವರ ನಿತ್ಯದ ಖರ್ಚುಗಳನ್ನು ಪೂರೈಸಲು ಕಷ್ಟವಾಗುತ್ತಿದ್ದರೆ ಅಂಥವರು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದರಿಂದ ಅವರನ್ನು ಆರ್ಥಿಕವಾಗಿ ಇನ್ನಷ್ಟು ದುರ್ಬಲಗೊಳಿಸಬಹುದು. ಹಾಗಾಗಿ ಕಡಿಮೆ ಆದಾಯ ಹೊಂದಿದ ಜನರು ಕ್ರೆಡಿಟ್‌ ಕಾರ್ಡ್‌ನ ಗೋಚಿಗೆ ಹೋಗದಿರುವುದೇ ಸೂಕ್ತವಾಗಿದೆ.

6. ಆರ್ಥಿಕ ಭದ್ರತೆಯ ಬಗ್ಗೆ ಗೊತ್ತಿಲ್ಲದ ಜನರು

ಕ್ರೆಡಿಟ್ ಕಾರ್ಡ್ ಬಳಸುವಾಗ ವಂಚನೆ ರಕ್ಷಣೆ, EMI ಆಯ್ಕೆಗಳು ಮತ್ತು ಬಡ್ಡಿದರಗಳನ್ನು ಅರ್ಥಮಾಡಿಕೊಳ್ಳುವಂತಹ ಅನೇಕ ಭದ್ರತಾ ಕ್ರಮಗಳಿವೆ. ಯಾರಾದರೂ ಈ ಆರ್ಥಿಕ ಭದ್ರತಾ ಕ್ರಮಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಅಂಥ ವ್ಯಕ್ತಿಗಳು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬಹುದು. ಹಾಗಾಗಿ ಅಂತಹ ಜನರು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವುದು ಸೂಕ್ತ ನಿರ್ಧಾರವಲ್ಲ.

7. ಆರ್ಥಿಕ ಶಿಸ್ತು ಕಾಪಾಡಿಕೊಳ್ಳದವರು

ಕ್ರೆಡಿಟ್ ಕಾರ್ಡ್‌ಗಳನ್ನು ಸರಿಯಾಗಿ ಬಳಸುವುದಕ್ಕೆ ಆರ್ಥಿಕ ಶಿಸ್ತು ಅಗತ್ಯ. ಯಾರಾದರೂ ಈ ಶಿಸ್ತು ಹೊಂದಿಲ್ಲದಿದ್ದರೆ ಅವರು ಕ್ರೆಡಿಟ್ ಕಾರ್ಡ್‌ಗಳನ್ನು ತಪ್ಪಿಸಬೇಕು. ಆರ್ಥಿಕತೆಯ ಬಗ್ಗೆ ಸರಿಯಾದ ಜ್ಞಾನ ಹೊಂದಿಲ್ಲದೇ ಇರುವುದು ಮುಂತಾದ ವಿಚಾರಗಳು ಕ್ರೆಡಿಟ್‌ ಕಾರ್ಡ್‌ ತೆಗೆದುಕೊಳ್ಳದೇ ಇರುವುದು ಸೂಕ್ತ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+