ಹೆಚ್ಚಿನವರಿಗೆ ಹೂಡಿಕೆ (Investment) ಮಾಡ್ಬೇಕು ಅನ್ನೋದು ಆಸೆ. ಅದರಲ್ಲೂ ಹೂಡಿಕೆ ಮಾಡಿ, ರಿಟರ್ನ್ ಪಡೆಯಬೇಕೆನ್ನುವುದು ಮತ್ತಷ್ಟು ಜನರ ಆಸೆ. ಆದರೆ ಇದೀಗೆ ಹೂಡಿಕೆ ವಿಷ್ಯದಿಂದಲೇ ಬೆಂಗಳೂರಿನ ದಂಪತಿಯೊಂದು ವೈರಲ್ ಆಗಿದೆ. ಈ ದಂಪತಿ (Couple) ಮಾಡಿದ ಪ್ಲಾನ್ ಸದ್ಯ ದೇಶದೆಲ್ಲೆಡೆ ನಿವೃತ್ತಿ ಪಡೆಯುವವರಿಗೆ ಹೊಸ ದಾರಿ ತೋರಿಸಿದೆ.

ಹೌದು, ನಿವೃತ್ತಿ ಪಡೆಯುವವರಿಗೆ ಬೆಂಗಳೂರಿನ ಈ ದಂಪತಿ ಮಾಡಿದ ಐಡಿಯಾ ಭಾರೀ ಸಹಕಾರಿಯಾಗಲಿದೆ. ತಿಂಗಳಿಗೆ 3.2 ಲಕ್ಷ ಗಳಿಸುತ್ತಿರುವ ಈ ದಂಪತಿ, ಯಾವುದೇ ಖರ್ಚು ವೆಚ್ಚಗಳನ್ನು ನೋಡದೆ, ತಮ್ಮ 40ನೇ ವಯಸ್ಸಿ ಬಹುಕೋಟಿ ಆದಾಯದ ಮೂಲ ಕಂಡುಕೊಂಡಿದ್ದಾರೆ.
ಇದೀಗ ಈ ಬಗ್ಗೆ CA ನಿತಿನ್ ಕೌಶಿಕ್ ಅವರು ತಮ್ಮ 'X' (ಟ್ವಿಟ್ಟರ್) ಮೂಲಕ ಶೇರ್ ಮಾಡಿಕೊಂಡಿದ್ದು, ಹೆಚ್ಚಿನ ಅಪಾಯದ ಹೂಡಿಕೆಗಿಂತ ಸರಳ ಹೂಡಿಕೆ ಹೇಗೆ ಉತ್ತಮ ರಿಟರ್ನ್ಸ್ ನೀಡುತ್ತದೆ ಎಂಬುದನ್ನು ತೋರಿಸುತ್ತದೆ.
SIP ತೋರಿಸಿದ ಆದಾಯ!
ಸಿ.ಎ. ನಿತಿನ್ ಕೌಶಿಕ್ ಪ್ರಕಾರ, ಬೆಂಗಳೂರಿನ ಈ ದಂಪತಿ ತಮ್ಮ ಫ್ಯಾಮಿಲಿ ಮನೆಯಲ್ಲಿ ವಾಸಿಸುತ್ತಿದ್ದು, ಅವರಿಗೆ ಯಾವುದೇ ಇಎಂಐ, ಬಾಡಿಗೆ ಕಟ್ಟಬೇಕು ಎಂಬ ಆರ್ಥಿಕ ಸಮಸ್ಯೆ ಇರಲಿಲ್ಲ. ಇದೇ ಕಾರಣದಿಂದ ಈ ದಂಪತಿಗೆ ಆರಾಮವಾಗಿ ಹೂಡಿಕೆ ಪ್ಲಾನ್ ಮಾಡಲು ಸುಲಭವಾಯ್ತು. ಆದಾಯ ಹೆಚ್ಚಾಗಿದೆ, ಕಡಿಮೆ ಖರ್ಚು ಎಂಬ ಕಾರಣಕ್ಕೆ ಐಷಾರಾಮಿ ಜೀವನಶೈಲಿಗೆ ಒಗ್ಗಿಕೊಳ್ಳುವ ಬದಲು, ಆ ದಂಪತಿ ಪ್ರತಿ ತಿಂಗಳು ₹1.8 ಲಕ್ಷ ಹಣವನ್ನು ಎಸ್‌ಐಪಿಗಳ ಮೂಲಕ ಪ್ರತೀ ತಿಂಗಳು ಇನ್ವೆಸ್ಟ್ ಮಾಡುತ್ತಿದ್ದರು ಎನ್ನಲಾಗಿದೆ.
ಒಂದು ವರ್ಷದಲ್ಲಿ ಅವರ ಹೂಡಿಕೆ ₹21.6 ಲಕ್ಷವಾಗುತ್ತದೆ. ಅವರು 50 ವರ್ಷ ವಯಸ್ಸಾಗುವವರೆಗೂ ಇದೇ ಹೂಡಿಕೆ ಪ್ಲಾನ್ ಮಾಡಿದ್ದರು. ಇನ್ನು ಬೇಗನೆ ಶ್ರೀಮಂತರಾಗುವುದು ಅವರ ಗುರಿಯಾಗಿರಲಿಲ್ಲ, ಬದಲಿಗೆ ಆರ್ಥಿಕವಾಗಿ ಸಬಲರಾಗಿ, ನಿವೃತ್ತಿ ಹೊಂದುವುದೇ ಅವರ ಗುರಿಯಾಗಿತ್ತು ಎಂದು ಸ್ವತಃ ದಂಪತಿಯೇ ಸಿಎ ನಿತಿನ್ ಅವರೊಂದಿಗೆ ಹೇಳಿಕೊಂಡಿದ್ದಾರೆ.
ಹೂಡಿಕೆ ಜೊತೆಗೆ, ಆರಾಮದಾಯಕ ಲೈಫ್!
ದೊಡ್ಡ ಮೊತ್ತದ ಹೂಡಿಕೆ ಜೊತೆಗೆ, ದಂಪತಿ ತಮ್ಮ ಜೀವನಶೈಲಿಗೆ ಯಾವುದೇ ನಿರ್ಬಂಧಗಳನ್ನು ಹಾಕಿಕೊಂಡಿಲ್ಲ. ಅವರು ಇಂದಿಗೂ ವಾರಾಂತ್ಯದಲ್ಲಿ ತಿರುಗಾಡಲು ಹೋಗುತ್ತಾರೆ, ವಾರ್ಷಿಕವಾಗಿ ರಜೆಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಮನೆಯಲ್ಲಿ ಆರಾಮದಾಯಕ ಜೀವನ ನಡೆಸುತ್ತಾರೆ ಎಂದು ಹೇಳಿದ್ದಾರೆ.
ಹೂಡಿಕೆ ಜೊತೆ ಶೇರಿಂಗ್!
ದಂಪತಿ ತಮ್ಮ ಹೂಡಿಕೆ ಯೋಜನೆಗಳನ್ನು ಸಮವಾಗಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಇಕ್ವಿಟಿ ಮ್ಯೂಚುಯಲ್ ಫಂಡ್ ಎಸ್‌ಐಪಿಗಳು, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಹೂಡಿಕೆ ಮಾಡುತ್ತಾರೆ.
ಸಿ.ಎ. ನಿತಿನ್ ಕೌಶಿಕ್ ಅವರ ಪ್ರಕಾರ, ಆರ್ಥಿಕವಾಗಿ ಸಬಲರಾಗುವುದೆಂದರೆ ಜಾಕ್‌ಪಾಟ್‌ನಂತೆ ಸಿಗುವುದಿಲ್ಲ. ಹೂಡಿಕೆ ಮಾಡುವುದನ್ನು ತಿಳಿದುಕೊಳ್ಳಲು ಹೊರಗಿನಿಂದ ಕಷ್ಟ ಎನಿಸಿದರೂ, ದೀರ್ಘಾವಧಿಯಲ್ಲಿ ಇದು ಉತ್ತಮ ಆದಾಯ ನೀಡುವುದಂತೂ ಪಕ್ಕಾ.
ದಂಪತಿಯ ಸರಳ ಸೂತ್ರ:
ಬೇಗನೆ ಹೂಡಿಕೆ ಆರಂಭಿಸಿ, ಅನಗತ್ಯ ಸಾಲವನ್ನು ತಪ್ಪಿಸಿ, ನಿರಂತರ ಹೂಡಿಕೆ ಮಾಡಿ . ಇದು ಸರಳವಾಗಿ ಅನುಸರಿಸಬಹುದಾದ ಮಾರ್ಗವಾಗಿದೆ. ಆದ್ದರಿಂದ ಆರಂಭಿಕ ಹೂಡಿಕೆದಾರರಿಗೆ ಇದು ಬೆಸ್ಟ್ ಎಂದು ಗುರುತಿಸಲಾಗಿದೆ.


Click it and Unblock the Notifications