ಹೂಡಿಕೆ ಮಾಡೋದು (Investment), ಸೇವಿಂಗ್ಸ್ ಮಾಡೋದು (Savings), ಮ್ಯೂಚುವಲ್ ಫಂಡ್ಸ್ (Mutual Fund), ಸ್ಟಾಕ್ ಮಾರ್ಕೆಟ್, ಆರ್‌ಡಿ, ಎಫ್‌ಡಿ ಹೀಗೆ ಹತ್ತು ಹಲವು ಯೋಜನೆಗಳಲ್ಲಿ ಹಲವರು ಕೋಟಿಗಟ್ಟಲೆ ಹಣ ಸುರಿದಿದ್ದಾರೆ. ಆದ್ರೆ ಕೆಲವರಿಗೆ ಹಣ ಉಳಿತಾಯ ಮಾಡೋದು ಅಭ್ಯಾಸವಾದ್ರೆ, ಇನ್ನೂ ಕೆಲವರಿಗೆ ಹಣ ಖರ್ಚು ಮಾಡೋದೆ ಒಂದು ಹವ್ಯಾಸ. ಆದರೆ ಸರಿಯಾದ ಪ್ಲಾನ್ ನಿಮ್ಮಲ್ಲಿದ್ರೆ, ನೀವು ಸಂಪಾದಿಸಿದ ಹಣದಲ್ಲಿ ಸ್ವಲ್ಪವಾದ್ರೂ ಉಳಿಸಬಹುದು.

ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್‌ಮಸ್ ಹಬ್ಬ, ಹೊಸ ವರ್ಷ ಬರಲಿದೆ. ಈ ಸಂದರ್ಭಗಳಲ್ಲಂತೂ ಪಾರ್ಟಿ, ಸೆಲೆಬ್ರೇಷನ್ ಅಂತ ಹೇಳಿ ಬಹಳಷ್ಟು ಹಣ ಖರ್ಚಾಗುತ್ತದೆ. ನೀವೂ ಕೂಡ ಹಣ ಉಳಿತಾಯ ಮಾಡ್ಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ 2026 ರಿಂದ ಹೀಗೆ ಹಣ ಸೇವ್ ಮಾಡಿಕೊಳ್ಳಿ.
ಹೊಸ ವರ್ಷದಿಂದ ಬದಲಾಯಿಸಿ ನಿಮ್ಮ ಲೈಫ್‌ಸ್ಟೈಲ್!
ಹೊಸ ವರ್ಷ ಬರುತ್ತಿದ್ದಂತೆ, ಹಲವರು ಹಲವು ಪ್ಲಾನ್‌ಗಳು ಮಾಡಿಕೊಳ್ಳುತ್ತಾರೆ. ಕೆಲವರು ಹೊಸ ಬ್ಯುಸಿನೆಸ್ ಆರಂಭಿಸಬೇಕು ಅಂದುಕೊಂಡರೆ, ಇನ್ನೂ ಕೆಲವರು ತಾವು ದುಡಿದ ಹಣದಲ್ಲಿ ಸ್ವಲ್ಪ ಸೇವ್ ಮಾಡಿಟ್ಟುಕೊಳ್ಳಬೇಕು ಎಂಬ ಪ್ಲಾನ್ ಮಾಡುತ್ತಾರೆ. ಆದರೆ ಅದಕ್ಕಾಗಿ ಕೆಲವು ಟಿಪ್ಸ್‌ಗಳನ್ನು ಕಡ್ಡಾಯವಾಗಿ ಫಾಲೋ ಮಾಡಬೇಕು. ಸಾಲ ನಿರ್ವಹಣೆಯಿಂದ ಹಿಡಿದು ಹೂಡಿಕೆ ಪ್ಲಾನ್‌ಗಳನ್ನು ಮಾಡುವವರೆಗೆ 2026ರಲ್ಲಿ ಒತ್ತಡ ಜೀವನದಿಂದ ಹೊರಬಂದು ಆರಾಮದಾಯಕ ಲೈಫ್ ಲೀಡ್ ಮಾಡಬಹುದು.
ಉಳಿಸುವ ಜೊತೆಗೆ ಖರ್ಚು ಮಾಡಿ: ನೀವು ಹಣ ಖರ್ಚು ಮಾಡುವ ಮುನ್ನ ಉಳಿತಾಯ ಮಾಡಲು ತಿಳಿದಿರಬೇಕು. ಅಂದರೆ ಹೆಚ್ಚಿನವರು ಹಣ ಗಳಿಸುವುದಕ್ಕಿಂದ ಹೆಚ್ಚಾಗಿ ಖರ್ಚು ಮಾಡುತ್ತಾರೆ. ಅದಕ್ಕಾಗಿ ಆದಾಯದ ಒಂದು ನಿರ್ದಿಷ್ಟ ಭಾಗವನ್ನು ಉಳಿತಾಯ ಮಾಡಲು ಬಳಸಬೇಕು. ಇದು ಆರ್ಥಿಕ ಸ್ವಾತಂತ್ರ್ಯಕ್ಕೆ ಮೊದಲ ಹಾಗೂ ಪ್ರಮುಖ ಹೆಜ್ಜೆಯಾಗಿದೆ.
ಸಾಲ-ಮುಕ್ತರಾಗಿ: 2026 ರಲ್ಲಿ ಆದಷ್ಟು ಸಾಲ ಮಾಡದೆ ಜೀವನ ಸಾಗಿಸಿ. ಅದೂ ಸಾಧ್ಯವಾಗದಿದ್ದರೆ ನಿಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡಲು ಅಥವಾ ಪೂರ್ಣವಾಗಿ ತೀರಿಸಲು ನಿರ್ಧರಿಸಿ. ಇದರಿಂದಲೂ ನೀವು ಹೆಚ್ಚುವರಿ ಹಣ ನೀಡುವುದನ್ನು ತಪ್ಪಿಸಬಹುದು.
ಖರ್ಚೇ ಮಾಡದ ದಿನ ನಿಮ್ಮದಾಗಲಿ: ಇನ್ನು ನೀವು ಅಂದುಕೊಂಡಿದ್ದನ್ನು ಸಾಧಿಸಲು ಚರ್ಚು ಮಾಡದೆ ದಿನ ಸಾಗಿಸಲು ಪ್ಲಾನ್ ಮಾಡಿ. ಇದು ಅನಗತ್ಯ ಖರ್ಚನ್ನು ನಿಯಂತ್ರಿಸಿ, ಉಳಿತಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ತುರ್ತು ನಿಧಿ ಕ್ರಿಯೇಟ್ ಮಾಡಿ: ಈ ವರ್ಷ ನಿಮ್ಮ ತುರ್ತು ನಿಧಿಯನ್ನು ಹಂತ ಹಂತವಾಗಿ ಹೆಚ್ಚಿಸುವುದು ಹೇಗೆ ಎಂಬುದರ ಮೇಲೆ ಗಮನ ಕೊಡಿ. ಅಂದರೆ ಭದ್ರತೆ ಮೊದಲು, ಒತ್ತಡ ನಂತರ ಎಂಬ ಗುರಿಯನ್ನು ಇಟ್ಟುಕೊಂಡು, ಆರ್ಥಿಕ ಸುಭದ್ರತೆಗೆ ಇದು ಅನಿವಾರ್ಯ ಎಂಬುದರ ಮೇಲೆ ಗಮನಹರಿಸಿ.
ಹೂಡಿಕೆ ಮೇಲೆ ಗಮನಕೊಡಿ: ನಿಯಮಿತವಾಗಿ ಹೂಡಿಕೆ ಮಾಡಲು 2026ರಲ್ಲಿ ಪ್ಲಾನ್ ಮಾಡಿ. ಅಂದರೆ ವರ್ಷಪೂರ್ತಿ ನಿಮ್ಮ ಆದಾಯದಲ್ಲಿ ಸ್ವಲ್ಪ ಹೂಡಿಕೆ ಮಾಡಿದ್ರೆ, ಉಳಿತಾಯವೂ ಆಗುತ್ತದೆ. ಜೊತೆಗೆ ಅದರಿಂದಲೂ ಆದಾಯ ಗಳಿಸಬಹುದು.
ಖರ್ಚಿನ ಬಗ್ಗೆ ತಿಳಿದಿರಲಿ: ನೀವು ಮಾಡುವ ಪ್ರತೀ ಖರ್ಚಿನ ಬಗ್ಗೆಯೂ ಬರೆದಿಡಿ. ಇದರಿಂದ ಹಣ ಎಲ್ಲಿ ಖರ್ಚಾಗುತ್ತಿದೆ ಎಂದು ತಿಳಿದು, ಎಲ್ಲಿ, ಎಷ್ಟು ಖರ್ಚು ಮಾಡಬೇಕೆಂದು ತಿಳಿದುಕೊಳ್ಳಲು ಸಹಾಯಕವಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications