ಮನೆ ಕಟ್ಟಬೇಕು, ಬ್ಯುಸಿನೆಸ್ ಶುರು ಮಾಡ್ಬೇಕು, ಕಾರು ತೆಗೆದುಕೊಳ್ಳಬೇಕು ಹೀಗೆ ಹಲವಾರು ಕಾರಣಗಳಿಗಾಗಿ ಜನ ಸಾಲ ಮಾಡುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಸಾಲ ನೀಡುವ ವಿಚಾರದಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಕ್ರೆಡಿಟ್ ಸ್ಕೋರ್ (Credit Score) ಅನ್ನು ಹಲವು ಬ್ಯಾಂಕುಗಳು (Bank) ಗಂಭೀರವಾಗಿ ಪರಿಗಣಿಸುತ್ತದೆ.

ಆದ್ದರಿಂದ ಪ್ರಸ್ತುತ ಪ್ರತಿಯೊಬ್ಬರು ಕೂಡಾ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಉತ್ತಮ. ಸಾಮಾನ್ಯವಾಗಿ ಕೆಲವೊಮ್ಮೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಆದರೆ ಅದರ ಹಿಂದಿನ ಕಾರಣ ಏನು ಎಂಬುದು ಯಾರಿಗೂ ತಿಳಿಯುವ ಕುತೂಹಲ ಇರುವುದಿಲ್ಲ. ಆದ್ರೆ ಅದಕ್ಕೆ ಹಲವಾರು ಕಾರಣಗಳಿವೆ. ಹಾಕಿದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಲು ಕಾರಣಗಳೇನು ಗೊತ್ತಾ? ಇಲ್ಲಿದೆ ಓದಿ.
ಪೇಮೆಂಟ್‌ನಲ್ಲಿ ವಿಳಂಬ: ಟ್ರಾನ್ಸಾಕ್ಷನ್ ಹಿಸ್ಟರಿ ಕೂಡಾ ಒಬ್ಬರ ಕ್ರೆಡಿಟ್ ಸ್ಕೋರ್‌ನ ಅತ್ಯಂತ ಅಗತ್ಯವಾದ ಅಂಶವಾಗಿದೆ. ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ವೈಯಕ್ತಿಕ ಸಾಲದ ಇಎಂಐಗಳನ್ನು ಒಂದು ದಿನ ತಡವಾಗಿ ಪಾವತಿಸಿದರೂ ಕ್ರೆಡಿಟ್ ಸ್ಕೋರ್‌ನಲ್ಲಿ ಇಳಿಕೆಯಾಗಬಹುದು. ಆದ್ದರಿಂದ ಸರಿಯಾದ ಸಮಯದಲ್ಲಿ ಪೇಮೆಂಟ್‌ಗ ಕ್ಲಿಯರ್ ಮಾಡಿದ್ರೆ ಒಳ್ಳೆಯದು.
ಆದರೆ ದಿನಹೋದಂತೆ ಸಾಲ ಮರುಪಾವತಿ ವಿಳಂಬವಾದರೆ, ಸಾಲದಾತರ ಆರ್ಥಿಕ ಸಂಕಷ್ಟದ ಬಗ್ಗೆ ತಿಳಿಯುತ್ತದೆ. ಇನ್ನು 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಬ್ಯಾಂಕುಗಳು ಉತ್ತಮ ಸ್ಕೋರ್ ಎಂದು ಪರಿಗಣಿಸುತ್ತವೆ. ಆದರೆ ಒಮ್ಮೆ ಪೇಮೆಂಟ್‌ನಲ್ಲಿ ತಡಮಾಡಿದ್ರೆ ಅದು 50 ರಿಂದ 70 ಪಾಯಿಂಟ್‌ವರೆಗೆ ಕುಸಿತ ಕಾಣಬಹುದು. ಇದರಿಂದ ಕ್ರೆಡಿಟ್ ಕಾರ್ಡ್‌ಗಳು ಮತ್ತು ವೈಯಕ್ತಿಕ ಸಾಲಗಳನ್ನು ಪಡೆಯುವುದಕ್ಕೂ ಕಷ್ಟವಾಗಲಿದೆ.
ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಳಕೆ:
ನಿಮ್ಮ ಕ್ರೆಡಿಟ್ ಯುಟಿಲೈಸೇಶನ್ ರೇಷಿಯೋ, ಅಂದರೆ ನೀವು ಬಳಸಿದ ಕ್ರೆಡಿಟ್ ಮಿತಿಯ ಪಾಲು, ಸಾಮಾನ್ಯವಾಗಿ 30% ಕ್ಕಿಂತ ಕಡಿಮೆ ಇರಬೇಕು. ಆದರೆ ಕ್ರೆಡಿಟ್ ಕಾರ್ಡ್ ಬಳಕೆದಾರರು ತಮ್ಮ ಕಾರ್ಡ್‌ಗಳನ್ನು ಅಜಾಗರೂಕತೆಯಿಂದ ಅಂದರೆ, ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿದಾಗ ಹಲವು ಸಮಸ್ಯೆಗಳು ಎದುರಾಗುತ್ತದೆ.
ಆದ್ದರಿಂದ ಕ್ರೆಡಿಟ್ ಮಿತಿಗಿಂತಲೂ 50-60% ಕ್ಕಿಂತ ಹೆಚ್ಚು ಬಳಸಿದರೆ, ಇದು ಕ್ರೆಡಿಟ್ ಕಾರ್ಡ್‌ನಿಂದ ಸಾಲ ಪಡೆದಿದ್ದೀರಿ ಎಂದು ಸ್ಪಷ್ಟನೆ ನೀಡುತ್ತದೆ. ಅದರಿಂದ ನಿಮ್ಮ ಕ್ರೆಡಿಟ್ ಪ್ರೊಫೈಲ್ ಜೊತೆಗೆ ಕ್ರೆಡಿಟ್ ಸ್ಕೋರ್ ಮೇಲೆಯೂ ಪರಿಣಾಮ ಬೀರುತ್ತದೆ..
ಅನೇಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅರ್ಜಿಗಳು: ನೀವು ಪ್ರತಿ ಬಾರಿ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದಾಗ, ಅಂದರೆ ಹೊಸ ಪರ್ಸನಲ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದಾಗ, ನಿಮ್ಮ ಅಕೌಂಟ್ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ. ಆದ್ದರಿಂದ ಅಲ್ಪಾವಧಿಯಲ್ಲಿ ಹೆಚ್ಚು ಅರ್ಜಿಗಳನ್ನು ಸಲ್ಲಿಸುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು, ಅಲ್ಲದೇ ಸಾಲ ನೀಡುವವರಿಗೂ ಹಲವು ಸಂಶಯಗಳು ಬರುತ್ತದೆ.
ನಿಮ್ಮ ಕ್ರೆಡಿಟ್ ವರದಿಯಲ್ಲಿನ ದೋಷಗಳು:
ಹಳೆಯ ವೈಯಕ್ತಿಕ ಸಾಲದ ಮಾಹಿತಿ, ತಪ್ಪಾದ ಪರ್ಸನಲ್ ಡಿಟೇಲ್ಸ್ ಅಥವಾ ಮರುಪಾವತಿಯಲ್ಲಿ ವಿಳಂಬ ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಹಾನಿ ಮಾಡಬಹುದು. CRIF ಹೈ ಮಾರ್ಕ್, CIBIL, Experian ಮತ್ತು Equifax ನಂತಹ ಪ್ರಮುಖ ಕ್ರೆಡಿಟ್ ಬ್ಯೂರೋಗಳಿಂದ ನಿಮ್ಮ ಉಚಿತ ವಾರ್ಷಿಕ ಕ್ರೆಡಿಟ್ ವರದಿಯನ್ನು ಯಾವಾಗಲೂ ಚೆಕ್ ಮಾಡಿ. ನಿಮ್ಮ ಕ್ರೆಡಿಟ್ ಪ್ರೊಫೈಲ್ ಉತ್ತಮವಾಗಿರಲು ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಿರಲು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.
ಹಳೆಯ ಕ್ರೆಡಿಟ್ ಖಾತೆಗಳನ್ನು ಮುಚ್ಚುವುದು:
ಹಳೆಯ ಅಕೌಂಟ್‌ಗಳು ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿವೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸುತ್ತದೆ. ಅದರಲ್ಲೂ ಸರಿಯಾದ ಪೇಮೆಂಟ್ ಮಾಡಿದ ಅಕೌಂಟ್‌ಗಳು, ಇದು ಒಟ್ಟಾರೆ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡಬಹುದು, ಇದು ನಿಮ್ಮ ಕ್ರೆಡಿಟ್ ಪ್ರೊಫೈಲ್ ಅನ್ನೂ ಉತ್ತಮವಾಗಿ ನಿರ್ವಹಿಸುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications