EMI vs SIP: 50 ಲಕ್ಷದ ಮನೆ ಖರೀದಿಸಲು ಇಎಂಐ ಅಥವಾ ಎಸ್‌ಐಪಿ; ಯಾವುದು ಉತ್ತಮ?

ಸ್ವಂತ ಮನೆಯನ್ನು (Own House) ಹೊಂದುವುದು ಅನೇಕರ ಕನಸು, ಆದರೆ ಇತ್ತೀಚೆಗೆ ಬೆಲೆ ಏರಿಕೆಯಿಂದ ಯಾವುದೇ ಕನಸು ನನಸಾಗುವಂತೆ ಕಾಣುತ್ತಿಲ್ಲ. ಅದೇ ಕಾರಣದಿಂದ ಒಂದು ಮನೆ ಹೊಂದಬೇಕಾದರೆ ಸರಿಯಾದ ಹೂಡಿಕೆ (Investment), ಪ್ಲಾನಿಂಗ್‌ ಮಾಡೋದು ಬಹಳ ಮುಖ್ಯ. ಈ ಕನಸನ್ನು ನನಸು ಮಾಡುವ ಉದ್ದೇಶದಿಂದ ಹೆಚ್ಚಿನವರು ಗೃಹ ಸಾಲಗಳತ್ತ ಮುಖ ಮಾಡುತ್ತಾರೆ. ಈ ಗೃಹ ಸಾಲಗಳು ಒಮ್ಮೆಗೆಮನೆ ಖರೀದಿಸಲು ದೊಡ್ಡ ಮಟ್ಟಿಗೆ ಸಹಕಾರಿಯಾಗುತ್ತದೆ, ಹಲವು ವರ್ಷಗಳ ಕಾಲ ಇದೊಂದು ದೊಡ್ಡ ಹೊರೆಯಾಗಬಹುದು. ಅದೇ ಕಾರಣದಿಂದ ಕ್ರಮೇಣ ಇಎಂಐ ಎಂಬುದು ದೊಡ್ಡ ಸಮಸ್ಯೆಗೆ ಕಾರಣವಾಗಬಹುದು.

50 ಲಕ್ಷದ ಮನೆ ಖರೀದಿಸಲು ಇಎಂಐ ಅಥವಾ ಎಸ್‌ಐಪಿ; ಯಾವುದು ಉತ್ತಮ?

EMI vs SIP:
ಇಎಂಐ ಪಾವತಿ ಮಾಡುವುದಲ್ಲದೇ, ದೀರ್ಘಾವಧಿ ಹೂಡಿಕೆ ಮಾಡಬೇಕೆಂಬ ಪ್ಲಾನ್‌ ಹೊಂದಿರುವವರು ಮ್ಯೂಚುವಲ್ ಫಂಡ್‌ಗಳಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆ (SIP) ನಂತಹ ಆಯ್ಕೆಗಳನ್ನು ಮಾಡುತ್ತಿದ್ದಾರೆ. ಈ SIP ಗಳಿಂದ ತಮ್ಮ ಕನಸಿನ ಮನೆಗಾಗಿ ಹೂಡಿಕ ಮಾಡಿಕೊಂಡು, ಆಕರ್ಷಕ ಆದಾಯ ಗಳಿಸಬಹುದು ಎಂದು ಹಲವರು ನಂಬಿದ್ದಾರೆ. ಆದ್ದರಿಂದ ಮನೆ ಖರೀದಿಗೆ ಗೃಹ ಸಾಲ (Home Loan EMI) ಅಥವಾ SIP ಗಳಲ್ಲಿ ಯಾವುದು ಉತ್ತಮ ಎಂಬ ಗೊಂದಲ ಅನೇಕರಿಗೆ ಇರುತ್ತದೆ. ಹಾಗಿದ್ರೆ ₹50 ಲಕ್ಷ ಮೌಲ್ಯದ ಮನೆ ಖರೀದಿಗಾಗಿ ಈ ಎರಡೂ ಆಯ್ಕೆಗಳಲ್ಲಿ ಯಾವುದು ಉತ್ತಮ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

₹50 ಲಕ್ಷ ಗೃಹ ಸಾಲದ ವಿವರ:
20 ವರ್ಷಗಳ ಅವಧಿಗೆ, 7.9% ಬಡ್ಡಿ ದರದಲ್ಲಿ ಗೃಹಸಾಲ ಪಡೆದರೆ EMI ಸುಮಾರು ₹41,511 ರೂ. ಆಗಿರುತ್ತದೆ. ಈ ಲೆಕ್ಕಾಚಾರದ ಪ್ರಕಾರ, ₹50 ಲಕ್ಷ ಸಾಲಕ್ಕೆ ₹49,62,727 ಬಡ್ಡಿ ಸೇರಿ, ಒಟ್ಟು ₹99,62,727 ರೂ. ಪಾವತಿ ಮಾಡಬೇಕಾಗುತ್ತದೆ. ಅಂದರೆ, 20 ವರ್ಷಗಳ ಮರುಪಾವತಿ ಅವಧಿಯಲ್ಲಿ ಪಾವತಿಸುವ ಒಟ್ಟು ಬಡ್ಡಿಯು ಮೂಲ ಸಾಲಕ್ಕೆ ಸರಿಸಮಾನವಾಗಿರುತ್ತದೆ. ಗೃಹ ಸಾಲವು ಬಾಡಿಗೆ ಕಟ್ಟುವುದರಿಂದ ಹಿಡಿದು, ಹಲವು ವೆಚ್ಚಗಳಿಂದ ತಕ್ಷಣವೇ ಮುಕ್ತಿ ನೀಡುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ ಗೃಹಸಾಲಕ್ಕೆ ನೀಡಲಾಗುವ ಬಡ್ಡಿ. ಇದರಿಂದ ದೀರ್ಘಾವಧಿಯ ಉಳಿತಾಯ ಮತ್ತು ಇತರ ಹಣಕಾಸು ಗುರಿಗಳ ಮೇಲೆ ಭಾರೀ ಪರಿಣಾಮ ಬೀರಬಹುದು.

50 ಲಕ್ಷ ರೂ. ಎಸ್‌ಐಪಿ ಹೂಡಿಕೆ:
ಗೃಹಸಾಲದ ಬದಲಿಗೆ ಪ್ರತೀ ತಿಂಗಳು ₹41,500 ಮೊತ್ತವನ್ನು 20 ವರ್ಷಗಳ ಕಾಲ SIP ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ (ವಾರ್ಷಿಕ 12% ಸರಾಸರಿ ಆದಾಯ ಊಹಿಸಿದರೆ), ಒಟ್ಟು ₹99,60,000 ಹೂಡಿಕೆಯಾಗುತ್ತದೆ. ಇದರಿಂದ ಅಂದಾಜು ₹3,15,04,638 ರೂ. ಆದಾಯ ಗಳಿಸಬಹುದು. ಈ ಮೂಲಕ ಒಟ್ಟು ಹೂಡಿಕೆ ₹4,14,64,638 ರೂ. ತಲುಪುತ್ತದೆ. ಇದು ಹೂಡಿಕೆ ಮಾಡಿದ ಮೊತ್ತಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಅಂತಾನೇ ಹೇಳಬಹುದು. ಅಷ್ಟೇ ಅಲ್ಲ, ₹50 ಲಕ್ಷ ಮನೆ ಖರೀದಿಯ ಗುರಿಯನ್ನು ಕೇವಲ ಏಳು ವರ್ಷಗಳಲ್ಲಿ ನೀವು ರೀಚ್‌ ಆಗಬಹುದು.

ಲಾಭದ ಜೊತೆ ಅಪಾಯ:
ಎಸ್‌ಐಪಿಯಲ್ಲಿ ಹೂಡಿಕೆ ಮಾಡಿದ್ರೆ ಲಾಭ ಸಿಗುತ್ತೆ ಹೌದು, ಆದ್ರೆ ಹೂಡಿಕೆ ಅಪಾಯಗಳನ್ನು ಸಹ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. 2025ರಲ್ಲಿ ₹50 ಲಕ್ಷಕ್ಕೆ ಖರೀದಿಸಿದ ಮನೆಯ ಮೌಲ್ಯವು 20 ವರ್ಷಗಳ ನಂತರ ನಿರೀಕ್ಷೆಗೂ ಮೀರಿ ಹೆಚ್ಚಾಗಬಹುದು. ಆದರೆ ಹಣದುಬ್ಬರ, ಆಸ್ತಿ ಮೌಲ್ಯ ಹೆಚ್ಚಳ, ಜೀವನ ವೆಚ್ಚ ಮತ್ತು ತೆರಿಗೆಗಳು SIP ಗಳ ನಿಜವಾದ ಆದಾಯದ ಮೇಲೆ ಮಹತ್ತರ ಪರಿಣಾಮ ಬೀರಬಹುದು. ಇದಲ್ಲದೆ, ಷೇರು ಮಾರುಕಟ್ಟೆಯ ಆದಾಯದ ಬಗ್ಗೆ ಎಂದೂ ಪಕ್ಕಾ ಲೆಕ್ಕಾಚಾರ ಮಾಡಲಾಗುವುದಿಲ್ಲ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಆದ್ದರಿಂದ, ಯಾವುದೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಹಣಕಾಸಿನ ತಜ್ಞರ ಸಲಹೆ ಪಡೆಯುವುದು ಉತ್ತಮ.

(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+