ಮನೆ ಖರೀದಿ ಅಥವಾ ಕಟ್ಟುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಕೆಲವೇ ಮಂದಿ ತಾವು ಕೆಲಸ ಮಾಡಿದ ಉಳಿತಾಯದ ಹಣದಿಂದ ಮನೆ ಕಟ್ಟಲು ಸಫಲತೆ ಕಾಣುತ್ತಾರೆ. ಇನ್ನು ಉಳಿದಂತೆ ಹೆಚ್ಚಿನವರು ಬ್ಯಾಂಕ್‌ಗಳಿಂದ ಗೃಹ ಸಾಲ ಪಡೆದುಕೊಂಡೇ ಮನೆ ಕಟ್ಟಿಕೊಳ್ಳಬೇಕಾಗುತ್ತದೆ. ಇನ್ನು ದೆಹಲಿ, ಮುಂಬೈ, ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ಮನೆ ಕಟ್ಟಿಕೊಳ್ಳುವುದೆಂದರೆ ಅದೊಂದು ದೊಡ್ಡ ಕಾರ್ಯವೇ ಸರಿ. ಈ ಮುಂತಾದ ನಗರಗಳಲ್ಲಿ ಮನೆ ಕಟ್ಟಬೇಕಾದರೆ ಕನಿಷ್ಟವೆಂದರೂ 60-70 ಲಕ್ಷ ರೂ. ಹಣ ಬೇಕೇ ಬೇಕಾಗುತ್ತದೆ. ಒಂದು ವೇಳೆ ನೀವು ಇಷ್ಟು ಮೊತ್ತವನ್ನು ಉಳಿತಾಯ ಮಾಡಿದ್ದರೆ ಮನೆ ಕಟ್ಟಬಹುದು. ಆದರೆ ನಿಮ್ಮಲ್ಲಿ ಬ್ಯಾಂಕ್ ಅಕೌಂಟ್‌ನಲ್ಲಿ ಯಾವುದೇ ಉಳಿತಾಯದ ಹಣ ಇಲ್ಲವೆಂದಾರೆ ಬ್ಯಾಂಕ್‌ಗಳಲ್ಲಿ ಗೃಹ ಸಾಲದತ್ತ ನಾವು ನೋಡಲೇ ಬೇಕಾಗುತ್ತದೆ. ಹಾಗಾಗಿ ಸದ್ಯ ದೇಶದ ಟಾಪ್ 10 ಬ್ಯಾಂಕ್‌ಗಳು 75 ಲಕ್ಷ ರೂ. ಗೃಹ ಸಾಲಕ್ಕೆ ಎಷ್ಟು ಬಡ್ಡಿಯನ್ನು ವಿಧಿಸುತ್ತಿವೆ ಎಂಬುದನ್ನು ಗಮನಿಸುವ ಅಗತ್ಯವಿದೆ. ಅದರಲ್ಲೂ ಈ ಬಡ್ಡಿ ದರವು ನಿಮ್ಮ CIBIL ಅನ್ನು ಅವಲಂಬಿಸಿರುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕಿದೆ.
1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಇನ್ನು ಒಂದು ವೇಳೆ ನಾವು 75 ಲಕ್ಷ ರೂ. ಗೃಹ ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ತೆಗೆದುಕೊಂಡರೆ ಬ್ಯಾಂಕ್ ನಮಗೆ 8.50 ರಿಂದ ಶೇಕಡಾ 9.85 ರವರೆಗಿನ ಬಡ್ಡಿಯನ್ನು ವಿಧಿಸುತ್ತದೆ.

2. ಬ್ಯಾಂಕ್ ಆಫ್ ಬರೋಡಾ
ಸದ್ಯ ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಂದ ಗೃಹ ಸಾಲಗಳ ಮೇಲೆ ಶೇಕಡಾ 8.40 ರಿಂದ 10.90 ರಷ್ಟು ಬಡ್ಡಿಯನ್ನು ವಿಧಿಸುತ್ತಿದೆ.
3. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಯೂನಿಯನ್ ಬ್ಯಾಂಕ್‌ನಿಂದ ಗೃಹ ಸಾಲವನ್ನು ತೆಗೆದುಕೊಳ್ಳುವವರು ರೂ 75 ಲಕ್ಷ ಮೌಲ್ಯದ ಮೊತ್ತಕ್ಕೆ 8.30 ಪ್ರತಿಶತದಿಂದ 10.90 ಪ್ರತಿಶತದವರೆಗೆ ಬಡ್ಡಿಯನ್ನು ಪಾವತಿಸಬೇಕಾಗಬಹುದು.
4. ಪಂಜಾಬ್ ನ್ಯಾಶನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಸ್ತುತ 8.40% ರಿಂದ 10.15% ವರೆಗಿನ ಬಡ್ಡಿದರದಲ್ಲಿ ಜನರಿಗೆ ಗೃಹ ಸಾಲವನ್ನು ನೀಡುತ್ತಿದೆ.

5. ಬ್ಯಾಂಕ್ ಆಫ್ ಇಂಡಿಯಾ
ಬ್ಯಾಂಕ್ ಆಫ್ ಇಂಡಿಯಾ ರೂ 75 ಲಕ್ಷದ ಗೃಹ ಸಾಲದ ಮೇಲೆ 8.35 ಪ್ರತಿಶತದಿಂದ 11.10 ಪ್ರತಿಶತದವರೆಗೆ ಗೃಹ ಸಾಲದ ದರಗಳನ್ನು ವಿಧಿಸುತ್ತದೆ.
6. ಕೆನರಾ ಬ್ಯಾಂಕ್
ಕೆನರಾ ಬ್ಯಾಂಕ್‌ನಿಂದ ಗೃಹ ಸಾಲವನ್ನು ತೆಗೆದುಕೊಳ್ಳುವರಿದ್ದರೆ ನೀವು ಶೇಕಡಾ 8.40 ರಿಂದ ಶೇಕಡಾ 11.15 ರವರೆಗಿನ ಬಡ್ಡಿಯನ್ನು ಪಾವತಿಸಬೇಕಾಗಬಹುದು.
7. ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್‌ನಲ್ಲಿ ಗೃಹ ಸಾಲದ ಬಡ್ಡಿ ದರಗಳು ಶೇಕಡಾ 8.75 ರಿಂದ ಪ್ರಾರಂಭವಾಗುತ್ತವೆ.
8. ಆಕ್ಸಿಸ್ ಬ್ಯಾಂಕ್
ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಂದ ಗೃಹ ಸಾಲದ ಮೇಲೆ ಶೇಕಡಾ 8.75 ರಿಂದ 9.65 ರವರೆಗೆ ಬಡ್ಡಿಯನ್ನು ವಿಧಿಸುತ್ತಿದೆ.
9. ಯುಸಿಒ ಬ್ಯಾಂಕ್
UCO ಬ್ಯಾಂಕ್ ತನ್ನ ಗ್ರಾಹಕರಿಗೆ ಗೃಹ ಸಾಲದ ಮೇಲೆ ಶೇಕಡಾ 8.45 ರಿಂದ 10.30 ರಷ್ಟು ಬಡ್ಡಿದರಗಳನ್ನು ವಿಧಿಸುತ್ತದೆ. ಅಂದರೆ ಸಾಲಗಾರರು ಶೇಕಡಾ 10.30 ರವರೆಗೆ ಬಡ್ಡಿಯನ್ನು ಪಾವತಿಸಬೇಕಾಗಬಹುದು.
10. ಹೆಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್
ನೀವು ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಗೃಹ ಸಾಲವನ್ನು ತೆಗೆದುಕೊಂಡರೆ ಗೃಹ ಸಾಲದ ಮೇಲಿನ ಬಡ್ಡಿ ದರಗಳು ಶೇಕಡಾ 8.75 ರಿಂದ ಪ್ರಾರಂಭವಾಗುತ್ತವೆ.
ಇನ್ನು ಈ ಮೇಲೆ ನೀಡಿದ ಬ್ಯಾಂಕ್ ಬಡ್ಡಿದರಗಳು ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕನ ಸಿಬಿಲ್ ಸ್ಕೋರ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ನಾವು ನಮ್ಮ ಹಿಂದಿನ ಸಾಲ ಮೊತ್ತವನ್ನು ಸರಿಯಾದ ರೀತಿ ಹಾಗೂ ಸಮಯದಲ್ಲಿ ಪಾವತಿ ಮಾಡಿದ್ದರೆ ನಮ್ಮ ಸಿಬಿಲ್ ಸ್ಕೋರ್ ಕೂಡ ಉತ್ತಮ ಮಟ್ಟದಲ್ಲಿ ಇದ್ದು, ಸಾಲ ಪಡೆಯುವ ಹಾಗೂ ಪಡೆದ ನಂತರ ಬಡ್ಡಿಮೊತ್ತದಲ್ಲಿ ಕೂಡ ಕಡಿಮೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬನೂ ಕೂಡ ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಪಾವತಿಸುವುದು ಅತೀ ಮುಖ್ಯವಾಗಿದೆ. ಕೆಲವೊಂದು ಬ್ಯಾಂಕ್‌ಗಳು ಗೃಹ ಸಾಲವನ್ನು ಅತೀ ಕಡಿಮೆ ಮೊತ್ತಕ್ಕೆ ನೀಡುತ್ತದೆ.


Click it and Unblock the Notifications