ಭಾರತ ಸರ್ಕಾರವು ಸಮಾಜದ ವಿವಿಧ ಸ್ತರದ ಜನರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಸಣ್ಣ ಉಳಿತಾಯ ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳು ಅಂಚೆ ಕಚೇರಿಗಳ ಮೂಲಕ ಲಭ್ಯವಿವೆ.ಹುಡುಗಿಯರು, ಮಹಿಳೆಯರು, ವೃದ್ಧರು, ರೈತರು ಮತ್ತು ಇತರ ಎಲ್ಲ ವರ್ಗದ ಜನರಿಗಾಗಿ ಹಲವಾರು ಸಣ್ಣ ಉಳಿತಾಯ ಯೋಜನೆಗಳನ್ನು ಜಾರಿಗೊಳಿಸಿದೆ. ಇನ್ನು ಇತರ ಹೂಡಿಕೆಗಳಿಗಿಂತ ಇಂದು ಕೂಡಾ ಸಂಪ್ರದಾಯಿಕ ಹೂಡಿಕೆಗಳ ಬಗ್ಗೆ ಬಂದರೆ ಜನ ಪೋಸ್ಟ್ ಅಫೀಸ್ ಯೀಜನೆಗಳನ್ನು ನೆಚ್ಚಿಕೊಳ್ಳುವುದು ಜಾಸ್ತಿ.
ಈ ಲೇಖನದಲ್ಲಿ ನಾವು ಮಹಿಳೆಯರಿಗೆ ಇರುವ ಉತ್ತಮ ಯೋಜನೆಗಳು ಯಾವುವು? ಈ ಯೋಜನೆಗಳಲ್ಲಿ ಬಡ್ಡಿದರ ಮತ್ತು ತೆರಿಗೆ ಪ್ರಯೋಜನಗಳನ್ನು ಹೇಗೆ ಪಡೆಯಬಹುದು ಎಂಬ ಕುರಿತು ಮಾಹಿತಿ ಪಡೆದುಕೊಳ್ಳೋಣ..

ನಿವೃತ್ತಿ ಜೀವನ, ಮಕ್ಕಳ ಶಿಕ್ಷಣ, ಆರ್ಥಿಕ ಭದ್ರತೆ ಅಥವಾ ವ್ಯವಹಾರದ ಬೆಳವಣಿಗೆಗಾಗಿ ಹಣವನ್ನು ಉಳಿಸಲು ಬಯಸುವವರಿಗೆ ಈ ಯೋಜನೆಗಳು ತುಂಬಾ ಸಹಾಯಕವಾಗಿವೆ. ಈ ಯೋಜನೆಗಳು ಆಕರ್ಷಕ ಬಡ್ಡಿ ದರಗಳ ಜೊತೆಗೆ ತೆರಿಗೆ ಪ್ರಯೋಜನಗಳನ್ನು ಸಹ ಹೊಂದಿವೆ. ಈ ಲೇಖನದಲ್ಲಿ ಅಂತಹ 5 ಪ್ರಮುಖ ಯೋಜನೆಗಳ ಬಗ್ಗೆ ತಿಳಿದಕೊಳ್ಳೋಣ.. ಅವರವರ ವೈಯಕ್ತಿಕ ಆಯ್ಕೆಗೆ ಅನುಗುಣವಾಗಿ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ..
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ (NSC)
ಯೋಜನೆಯು ಅಂಚೆ ಕಚೇರಿಯ ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಡಿ ಶೇ.7.7% ರಷ್ಟು ಬಡ್ಡಿದರ ನಿಗದಿಯಾಗಿದ್ದು, 5 ವರ್ಷದ ಉಳಿತಾಯ ಯೋಜನೆ. ಅತ್ಯಲ್ಪ ರಿಸ್ಕ್ ಇರುವ ಈ ಯೋಜನೆಯಲ್ಲಿ ಕನಿಷ್ಠ ₹1000 ದಿಂದಲೂ ಹೂಡಿಕೆ ಆರಂಭಿಸಬಹುದು. ಗರಿಷ್ಠ ಹೂಡಿಕೆ ಯಾವುದೇ ಮಿತಿ ಇಲ್ಲ. ಇದಕ್ಕೆ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳೂ ಇವೆ. ಮಕ್ಕಳ ಶಿಕ್ಷಣ ಅಥವಾ ನಿವೃತ್ತಿ ಯೋಜನೆಗೆ ಇದು ಉತ್ತಮ ಆಯ್ಕೆ. ಯಾವುದೇ ಭಾರತೀಯ ಪ್ರಜೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಲು ಅನುಮತಿಸಲಾಗಿದೆ. ಈ ಯೋಜನೆಯು ಮಹಿಳೆಯರಿಗೆ ಉತ್ತಮ ಯೋಜನೆ ಎಂದು ಪರಿಗಣಿಸಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ (SSY)
ಈ ಯೋಜನೆಯನ್ನು 2015 ರಲ್ಲಿ ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಪ್ರಾರಂಭಿಸಿತು. ಇದನ್ನು "ಬೇಟಿ ಬಚಾವೋ, ಬೇಟಿ ಪಡಾವೋ" ಉಪಕ್ರಮದ ಭಾಗವಾಗಿ ಪರಿಚಯಿಸಲಾಗಿತ್ತು. ಕೇಂದ್ರ ಸರ್ಕಾರ ಅನೇಕ ಯೋಜನೆಗಳಲ್ಲಿ "ಸುಕನ್ಯಾ ಸಮೃದ್ಧಿ ಯೋಜನೆ" ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಹೆಣ್ಣುಮಕ್ಕಳನ್ನು ಆರ್ಥಿಕ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಹೆಣ್ಣು ಮಗು ಜನನದ ದಿನದಿಂದ 10 ವರ್ಷದೊಳಗೆ ಯಾವುದೇ ಸಮಯದಲ್ಲಿ ಖಾತೆ ತೆರೆಯಬಹುದು. ಹೆಣ್ಣು ಮಗುವಿಗೆ 21 ವರ್ಷ ತುಂಬಿದ ನಂತರ ಮೆಚ್ಯೂರಿಟಿ ಆಗುತ್ತದೆ. ಸತತ 15 ವರ್ಷಗಳು ವಾರ್ಷಿಕ ಕನಿಷ್ಠ 250 ರೂ. ನಿಂದ ಗರಿಷ್ಠ 1.50 ಲಕ್ಷ ರೂ ವರೆಗೆ ಇನ್ವೆಸ್ಟ್ ಮಾಡಬಹುದು. ಇದರಲ್ಲಿ ತೆರಿಗೆ ಪ್ರಯೋಜನಗಳೂ ಇವೆ.. ಪೋಷಕರು ಈ ಯೋಜನೆಯಲ್ಲಿ ವಾರ್ಷಿಕ ₹1.5 ಲಕ್ಷ ಹೂಡಿಕೆ ಮಾಡಿದರೆ, ಮಗಳ ಮದುವೆ ಸಮಯಕ್ಕೆ ನಿಮ್ಮಲ್ಲಿಂದಾಜು ₹69 ಲಕ್ಷ ಇರುತ್ತದೆ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS)
ಅಧಿಕ ಬಡ್ಡಿ, ಸ್ಥಿರ ಆದಾಯ ತರುವ ಹೂಡಿಕೆಗಳಲ್ಲಿ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಒಂದು. ಇದು ಏಕಕಾಲಕ್ಕೆ ಮಾಡಲಾಗುವ ಹೂಡಿಕೆ. ಐದು ವರ್ಷದ ಸ್ಕೀಮ್ ಇದು. ಕನಿಷ್ಠ ಹೂಡಿಕೆ 1,000 ರೂ ಇದೆ. ಒಂದು ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂ ಠೇವಣಿ ಇಡಬಹುದು. ಜಂಟಿ ಖಾತೆಯಾದರೆ 15 ಲಕ್ಷ ರೂವರೆಗೂ ಠೇವಣಿ ಇಡಲು ಅವಕಾಶ ಇರುತ್ತದೆ.ಒಂದಕ್ಕಿಂತ ಹೆಚ್ಚು ಖಾತೆಗಳಲ್ಲಿ ನೀವು ಮಂಥ್ಲಿ ಇನ್ಕಮ್ ಅಕೌಂಟ್ಗಳನ್ನು ತೆರೆಯಬಹುದಾದರೂ ಒಟ್ಟಾರೆ ಸೇರಿ ಠೇವಣಿಗಳು 9 ಲಕ್ಷ ರೂ ಮೀರುವಂತಿಲ್ಲ.
ಮಹಿಳೆಯರಿಗೆ ಪ್ರತಿ ತಿಂಗಳೂ ಒಂದಷ್ಟು ನಿಯಮಿತ ಆದಾಯ ಬೇಕೆಂದರೆ 'ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (' (POMIS)ಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ 7.4% ಬಡ್ಡಿ ದೊರೆಯುತ್ತದೆ. ನೀವು 5 ಲಕ್ಷ ರೂ ಠೇವಣಿ ಇರಿಸಿದರೆ ಮುಂದಿನ ತಿಂಗಳಿಂದಲೇ ೫ ವರ್ಷಗಳ ಕಾಲ 3,083 ರೂ ಆದಾಯ ಸಿಗುತ್ತಾ ಹೋಗುತ್ತದೆ.
ಕಿಸಾನ್ ವಿಕಾಸ್ ಪತ್ರ (KVP)
ಕಿಸಾನ್ ವಿಕಾಸ್ ಪತ್ರವು ಭಾರತೀಯ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಯಾಗಿದೆ. ಸ್ಥಿರ ಠೇವಣಿ ಮೂಲಕ ಆದಾಯ ದ್ವಿಗುಣಗೊಳಿಸಲು ಬಯಸುವವರಿಗೆ ಕಿಸಾನ್ ವಿಕಾಸ್ ಪತ್ರ (KVP) ಸಹಾಯಕ. ಪ್ರಾರಂಭಿಕ ಹಂತದಲ್ಲಿ ಇದು ರೈತರಿಗಾಗಿ ಜಾರಿಗೊಳಿಸಿದ ಯೋಜನೆ ಆಗಿತ್ತು. ಹೀಗಾಗಿ ಇದಕ್ಕೆ ಈ ಹೆಸರು ಬಂದಿದೆ. ಆದರೆ ಇಂದು, ಇದರ ಅರ್ಹತಾ ಮಾನದಂಡಗಳನ್ನು ಪೂರೈಸುವ ಯಾರಾದರೂ ಇದರಲ್ಲಿ ಹೂಡಿಕೆ ಮಾಡಬಹುದು.ಪ್ರಸ್ತುತ ಈ ಯೋಜನೆಯಡಿ 7.5% ದರದಲ್ಲಿ ಬಡ್ಡಿ ದೊರೆಯುತ್ತದೆ. ಈ ಯೋಜನೆಯ ಕಾಲಾವಧಿ 113 ತಿಂಗಳುಗಳು. ಈ ಯೋಜನೆಯಲ್ಲಿ ಸುಮಾರು 10 ವರ್ಷಗಳಲ್ಲಿ ನಿಮ್ಮ ಠೇವಣಿ ದುಪ್ಪಟ್ಟಾಗುತ್ತದೆ. ಈ ಯೋಜನೆಗೆ ಕನಿಷ್ಠ 1,000 ರು. ನಿಂದ ಬಯಸಿದಷ್ಟು ಹೂಡಿಕೆ ಮಾಡಬಹುದಾಗಿದೆ. ಆದಾಗ್ಯೂ 50,000ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಪಾನ್ ಕಾರ್ಡ್ ವಿವರಗಳನ್ನು ಅಂಚೆ ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಈ ಯೋಜನೆ ಕೂಡಾ ಮಹಿಳೆಯರಿಗೆ ಹೇಳಿ ಮಾಡಿಸಿದಂತಿದೆ.
ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಂ (SCSS)
ನಿವೃತ್ತಿಯ ನಂತರ ಆರ್ಥಿಕ ಭದ್ರತೆಗಾಗಿ ಹಿರಿಯ ನಾಗರಿಕರು ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ (SCSS) ಅನ್ನು ಪರಿಗಣಿಸಬಹುದು. 60 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯು 8.2% ವರೆಗೆ ಬಡ್ಡಿ ದರವನ್ನು ನೀಡುತ್ತದೆ, ಮತ್ತು ಬಡ್ಡಿಯನ್ನು ಪ್ರತಿ 3 ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ. ಹೂಡಿಕೆಯ ಮೊತ್ತವು ಕನಿಷ್ಠ 1 ಸಾವಿರ ರೂಪಾಯಿಗಳಿಂದ ಗರಿಷ್ಠ 30 ಲಕ್ಷ ರೂಪಾಯಿಗಳವರೆಗೆ ಇರಬಹುದು. ಯೋಜನೆಯ ಅವಧಿ ಐದು ವರ್ಷಗಳು, ಮತ್ತು ಇದನ್ನು ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿದೆ.


Click it and Unblock the Notifications