ಪರ್ಸನಲ್ ಲೋನ್: ಉತ್ತಮ ಬಡ್ಡಿ ದರ ನೀಡುವ ಟಾಪ್ 7 ಬ್ಯಾಂಕ್‌ಗಳ ವಿವರ ಬಡ್ಡಿದರ ಮಾಹಿತಿ ಇಲ್ಲಿದೆ

ನಮಗೆ ಹಣದ ಕೊರತೆ ಇದ್ದಾಗ ಮತ್ತು ತುರ್ತಾಗಿ ಹಣದ ಅಗತ್ಯವಿದ್ದಾಗ ಹೆಚ್ಚಾಗಿ ನಾವು ಪರ್ಸನಲ್ ಲೋನ್ ಪಡೆಯಲು ಮುಂದಾಗುತ್ತೇವೆ. ಉದಾಹರಣೆಗೆ, ಮನೆಯಲ್ಲಿ ಮದುವೆ ಸಂದರ್ಭ,ಮನೆಗೆ ನವೀಕರಣ ಅಥವಾ ಅವಶ್ಯಕವಾಗಿರುವ ಹಣದ ಕೊರತೆಯಿದ್ದರೆ, ವೈಯಕ್ತಿಕ ಸಾಲವನ್ನು ಪಡೆಯಬಹುದು.

ಇಂತಹ ಸಂದರ್ಭದಲ್ಲಿ ನಮ್ಮ ಬ್ಯಾಂಕ್ ಬಾಲೆನ್ಸ್ ಅಗತ್ಯ- ಅವಶ್ಯಕತೆಗಳನ್ನು ಪೂರೈಸಲು ಸಾಲುವುದಿಲ. ಹೀಗಾಗಿ ಹೆಚ್ಚಿನ ಸಂದರ್ಭದಲ್ಲಿ ನಾವು ಮೊರೆಹೋಗುವುದು ಪರ್ಸನಲ್ ಲೋನ್ ಗೆ.

ಪರ್ಸನಲ್ ಲೋನ್ ಮೇಲೆ ಬೆಸ್ಟ್ ಬಡ್ಡಿ ದರ ನೀಡುವ  ಟಾಪ್ 7 ಬ್ಯಾಂಕ್‌ಗಳು

ವೈಯಕ್ತಿಕ ಸಾಲವು ಹಣಕಾಸಿನ ಅಗತ್ಯಗಳನ್ನು ಪೂರೈಸಲು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ನೀಡುವ ಒಂದು ರೀತಿಯ ಹಣಕಾಸು ಸಹಾಯವಾಗಿದೆ. ಇದು ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಬಹುದಾದ ಅನಿರ್ಬಂಧಿತ ಸಾಲವಾಗಿರುವುದು ನಮ್ಮ ತುರ್ತು ಅಗತ್ಯಗಳನ್ನು ಪೂರೈಸಲು ಅಥವಾ ದೊಡ್ಡ ಖರ್ಚುಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ನಿಮಗೇನಾದರೂ ಒಂದಷ್ಟು ದೊಡ್ದ ಮೊತ್ತ ಸಾಲ ಬೇಕು ಎಂದು ವೈಯಕ್ತಿಕ ಸಾಲ ಪಡೆಯಲು ನಿರ್ಧರಿಸಿದ್ರೆ , ಅದಕ್ಕೂ ಮುನ್ನ ನೀವು ವಿವಿಧ ಬ್ಯಾಂಕುಗಳಿಂದ ವಿಧಿಸಲಾದ ಬಡ್ಡಿ ದರಗಳನ್ನು ಹೋಲಿಸಲು ಮರಿಬೇಡಿ. ಸಾಲದ ಮರುಪಾವತಿಯು ಮಾಸಿಕ ಬಜೆಟ್‌ನಲ್ಲಿ ಹೆಚ್ಚುವರಿ ಹೊರೆಯನ್ನು ಬೀರುವುದರಿಂದ ಬಡ್ಡಿದರ ಹೋಲಿಸಿ ಜಾಣ ನಡೆಯನ್ನು ಅನುಸರಿಸುವುದು ಒಳ್ಳೆಯದು.

ಬಡ್ಡಿ ದರ ಮತ್ತು ಪ್ರೋಸೆಸಿಂಗ್ ಫೀ

ಪರ್ಸನಲ್ ಲೋನ್ ಪಡೆಯುವ ಮಂದಿಗೆ ಅನುಕೂಲವಾಗಲಿ ಎಂದು ನಾವಿಲ್ಲಿ 2025ರ ಜನವರಿ 3ರಂದು ಖಾಸಗಿ ಮತ್ತು ಸರ್ಕಾರಿ ಎರಡು ವರ್ಗದ ಪ್ರಮುಖ ಬ್ಯಾಂಕ್‌ಗಳು ವಿಧಿಸುವ ಬಡ್ಡಿದರಗಳನ್ನು ಹಂಚಿಕೊಳ್ಳುತ್ತೇವೆ. ಬಡ್ಡಿದರಗಳು ಕಾಲಕಾಲಕ್ಕೆ ಹೆಚ್ಚು- ಕಡಿಮೆ ಆಗುವುದರಿಂದ ಇದನ್ನು ಗಮನಿಸುವುದು ಅತ್ಯಗತ್ಯ. ಆದ್ದರಿಂದ, ಈ ದರಗಳು ಕೇವಲ ಸೂಚಕವಾಗಿದ್ದು, ಸರಿಯಾದ ಹೋಲಿಕೆಗಾಗಿ ಬ್ಯಾಂಕ್‌ನ ಪ್ರತಿನಿಧಿಯೊಂದಿಗೆ ಪರಿಶೀಲಿಸಿ. ಇದರ ಜೊತೆಗೆ ಬ್ಯಾಂಕ್ ವಿಧಿಸುವ ಬಡ್ಡಿಯ ದರವು ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಉದ್ಯೋಗದಾತ ಸೇರಿದಂತೆ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

ವಿವಿಧ ಬ್ಯಾಂಕುಗಳ ವೈಯಕ್ತಿಕ ಸಾಲದ ಬಡ್ಡಿ ದರಗಳು

ವಿವಿಧ ಬ್ಯಾಂಕುಗಳು ವೈಯಕ್ತಿಕ ಸಾಲಗಳ ಮೇಲೆ ವಿಭಿನ್ನ ಬಡ್ಡಿ ದರಗಳನ್ನು ನೀಡುತ್ತವೆ. ಉದಾಹರಣೆಗೆ, HDFC ಬ್ಯಾಂಕ್ 10.85% ರಿಂದ 24% ವರೆಗೆ, ICICI ಬ್ಯಾಂಕ್ 10.85% ರಿಂದ 16.25% ವರೆಗೆ, ಬ್ಯಾಂಕ್ ಆಫ್ ಬರೋಡಾ 11.40% ರಿಂದ 18.75% ವರೆಗೆ, ಕೋಟಕ್ ಮಹೀಂದ್ರಾ ಬ್ಯಾಂಕ್ 10.99% ರಿಂದ 16.99% ವರೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 11.45% ರಿಂದ 14.60% ವರೆಗೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ 12.40% ರಿಂದ 17.95% ವರೆಗೆ ಮತ್ತು ಆಕ್ಸಿಸ್ ಬ್ಯಾಂಕ್ 10.49% ರಿಂದ 22.50% ವರೆಗೆ ಬಡ್ಡಿ ದರಗಳನ್ನು ನೀಡುತ್ತದೆ. ಈ ಬಡ್ಡಿ ದರಗಳು ಸಾಲದ ಮೊತ್ತ, ಗ್ರಾಹಕರ ಕ್ರೆಡಿಟ್ ಸ್ಕೋರ್ ಮತ್ತು ಇತರ ಅಂಶಗಳನ್ನು ಅವಲಂಬಿಸಿ ಬದಲಾಗಬಹುದು.

ಮೇಲಿನ ವಿವರಗಳಂತೆ HDFC ಬ್ಯಾಂಕ್ ನಿಮ್ಮ ವೈಯಕ್ತಿಕ ಸಾಲದ ಮೇಲೆ 10.85% ರಿಂದ 24% ವರೆಗಿನ ಬಡ್ಡಿ ದರವನ್ನು ವಿಧಿಸಬಹುದು. ಈ ಬಡ್ಡಿ ದರ ನಿಮ್ಮ ಕ್ರೆಡಿಟ್ ಸ್ಕೋರ್, ಆದಾಯ, ಉದ್ಯೋಗ ಮತ್ತು ಇತರ ಅಂಶಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಜೊತೆಗೆ ಸಾಲವನ್ನು ಅನುಮೋದಿಸಲು ಮತ್ತು ನೀಡಲು ಬ್ಯಾಂಕ್ ಸುಮಾರು ₹6,500 ಮತ್ತು ಜಿಎಸ್‌ಟಿ ಶುಲ್ಕವನ್ನು ವಿಧಿಸುತ್ತದೆ.

ಇನ್ನು ICICI ಬ್ಯಾಂಕ್ ಶೇಕಡಾ 10.85 ರಿಂದ 16.25 ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್, ಆದಾಯ ಮತ್ತು ಇತರ ಅಂಶಗಳನ್ನು ಆಧರಿಸಿ ಬದಲಾಗುತ್ತದೆ. ಸಾಲದ ಮೊತ್ತದ ಸುಮಾರು 2% ವರೆಗೆ ಸಂಸ್ಕರಣಾ ಮೊತ್ತ ಪಡೆಯುತ್ತದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ಶೇಕಡಾ 10.99 ರಿಂದ ಶೇಕಡಾ 16.99 ರವರೆಗಿನ ಬಡ್ಡಿಯನ್ನು ಹಾಗೂ ಶೇಕಡಾ 5 ರವರೆಗಿನ ಪ್ರಕ್ರಿಯೆ ಶುಲ್ಕದೊಂದಿಗೆ ವಿಧಿಸುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 11.45 ರಿಂದ 14.60 ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಆದರೆ ಇದು ಜನವರಿ 31, 2025 ರವರೆಗೆ ಶೂನ್ಯ ಸಂಸ್ಕರಣಾ ಶುಲ್ಕವನ್ನು ಹೊಂದಿರುತ್ತದೆ ಎಂಬುವುದು ಗಮನಿಸಬೇಕಾದ ಅಂಶ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ವಾರ್ಷಿಕ 12.40 ರಿಂದ 17.95 ಪರ್ಸೆಂಟ್ ವ್ಯಾಪ್ತಿಯಲ್ಲಿ ಬಡ್ಡಿ ವಿಧಿಸಿದ್ರೆ, ಆಕ್ಸಿಸ್ ಬ್ಯಾಂಕ್ ಶೇಕಡಾ 10.49 ರಿಂದ ಶೇಕಡಾ 22.50 ರ ವ್ಯಾಪ್ತಿಯಲ್ಲಿ ಬಡ್ಡಿದರವನ್ನು ವಿಧಿಸುತ್ತದೆ. ಅಲ್ಲದೇ 2 ಶೇಕಡದವರೆಗೆ ಪ್ರೋಸೆಸಿಂಗ್ ಫೀ ವಿಧಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+