Girl Child Schemes: ಭಾರತದಲ್ಲಿ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಇರುವ ಪ್ರಮುಖ ಯೋಜನೆಗಳು ಯಾವುವು..ಇಲ್ಲಿ ತಿಳಿಯಿರಿ!

ಭಾರತದಲ್ಲಿ ಹೆಣ್ಣು ಮಕ್ಕಳಿಗಾಗಿ ಸಾಕಷ್ಟು ಯೋಜನೆಗಳಿವೆ. ಅದರಲ್ಲೂ ಪೋಸ್ಟ್‌ ಆಫಿಸ್‌ ಯೋಜನೆಗಳು ಅತಿಹೆಚ್ಚು ಉಪಯುಕ್ತವಾಗಿವೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲು, ಉತ್ತಮವಾದ ಭವಿಷ್ಯ ರೂಪಿಸಲೆಂದೇ ಸಾಕಷ್ಟು ಯೋಜನೆಗಳಿವೆ. ಕೇಂದ್ರ ಸರ್ಕಾರವೂ ಕೂಡ ಹಲವು ಯೋಜನೆಗಳನ್ನು ನೀಡಿದೆ. ಅದರಂತೆ ದೇಶದಲ್ಲಿರುವ ರಾಜ್ಯಗಳ ಸರ್ಕಾರದ ಅಡಿಯಲ್ಲೂ ಹೆಣ್ಣು ಮಕ್ಕಳಿಗಾಗಿ ವಿಶೇಷ ಯೋಜನೆಗಳಿವೆ. ಹೆಣ್ಣು ಮಕ್ಕಳ ಜನನದಿಂದಲೇ ಜ್ಞಾನ, ಸಬಲೀಕರಣ ಮತ್ತು ಸ್ವಾವಲಂಬನೆ ಎಂಬ ಮೂರು ದಿಕ್ಕುಗಳಲ್ಲಿ ಪ್ರಗತಿಪಥಕ್ಕೆ ಕರೆದೊಯ್ಯುವುದು. ಈ ಲೇಖನದಲ್ಲಿ ಇವುಗಳಲ್ಲಿ ಪ್ರಮುಖ ಯೋಜನೆಗಳನ್ನು ವಿವರವಾಗಿ ವಿಶ್ಲೇಷಿಸುತ್ತೇವೆ.

ಭಾರತದಲ್ಲಿ ಹೆಣ್ಣು ಮಕ್ಕಳಿಗಾಗಿ ಇರುವ ಯೋಜನೆಗಳು..!

ಹಾಗಾದರೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಯೋಜನೆಗಳು ಯಾವುವು, ರಾಜ್ಯಗಳ ಸರ್ಕಾರದ ಅಡಿಯಲ್ಲಿ ಬರುವ ಯೋಜನೆಗಳು ಯಾವುವು. ಅವುಗಳ ವಿಶೇಷತೆ ಏನು. ಅವುಗಳು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಎಷ್ಟು ಉಪಯೋಗಕರವಾಗಿವೆ ಎಂಬುದರ ಬಗ್ಗೆ ಇಲ್ಲಿ ತಿಳಿಯಿರಿ.

ಕೇಂದ್ರ ಸರ್ಕಾರದ ಯೋಜನೆಗಳು:

1. ಬೇಟಿ ಬಚಾವೋ ಬೇಟಿ ಪಡಾವೋ:

ಹೆಣ್ಣು ಮಕ್ಕಳ ಲಿಂಗಾನುಪತದ ಇಳಿಕೆ, ಬಾಲ್ಯವಿವಾಹ ಮತ್ತು ಲೈಂಗಿಕ ಅಸಮಾನತೆಯ ವಿರುದ್ಧ ಹೋರಾಡುವ ಉದ್ದೇಶದಿಂದ ಈ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯು 2015ರಲ್ಲಿ ಪ್ರಾರಂಭವಾಗಿದ್ದು, ಹೆಣ್ಣು ಮಕ್ಕಳ ಉಳಿವಿಗೆ ಮತ್ತು ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುತ್ತದೆ. ಅಲ್ಲದೇ ಇದರ ಅಡಿಯಲ್ಲಿ ವಿವಿಧ ಮಾಧ್ಯಮಗಳಲ್ಲಿ ಜಾಗೃತಿ ಅಭಿಯಾನಗಳು, , ಶಾಲಾ ಸೌಲಭ್ಯಗಳ ಸುಧಾರಣೆ ಮತ್ತು ಸಮುದಾಯದ ಸಜ್ಜುಗೊಳಿಸುವಿಕೆಗೆ ಪ್ರಾಮುಖ್ಯತೆ ನೀಡಲಾಗಿದೆ. PCPNDT ಕಾಯ್ದೆಯ ಮೂಲಕ ಆಯ್ಕೆಮೂಲಕ ಗರ್ಭಪಾತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

2. ಸುಕನ್ಯಾ ಸಮೃದ್ಧಿ ಯೋಜನೆ:

ಹೆಣ್ಣು ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವ ಉದ್ದೇಶದಿಂದ, ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತರಲಾಗಿದೆ. ಅಂದರೆ ಪೋಷಕರು ತಮ್ಮ 10 ವರ್ಷದೊಳಗಿನ ಮಗಳ ಹೆಸರಿನಲ್ಲಿ ಖಾತೆ ತೆರೆಯಲು ಅನುಮತಿ ನೀಡುವ ಮೂಲಕ, ಈ ಯೋಜನೆಯು ಭವಿಷ್ಯಕ್ಕೆ ಭದ್ರತೆ ಒದಗಿಸುತ್ತದೆ. ಈ ಯೋಜನೆಯ ಖಾತೆಯನ್ನು ಅಂಚೆ ಕಚೇರಿ ಅಥವಾ ಬ್ಯಾಂಕಿನಲ್ಲಿ ಖಾತೆ ತೆರೆದು, ವರ್ಷಕ್ಕೆ ಕನಿಷ್ಠ ₹250ರಿಂದ ₹1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಯೋಜನೆ ಶ್ರೇಷ್ಠ ಬಡ್ಡಿದರ ಅಂದರೆ..8% ಗೂ ಹೆಚ್ಚಿನ ಬಡ್ಡಿದರ ಒದಗಿಸುತ್ತಿದ್ದು, ಇದರ ಮೇಲೆ ತೆರಿಗೆ ವಿನಾಯಿತಿಯೂ ಸಿಗುತ್ತದೆ. maturity ಸಮಯದಲ್ಲಿ ಹಣವನ್ನು ಶಿಕ್ಷಣ ಅಥವಾ ಮದುವೆಗಾಗಿ ಉಪಯೋಗಿಸಬಹುದು.

3. ಬಾಲಿಕಾ ಸಮೃದ್ಧಿ ಯೋಜನೆ:

ಬಾಲಿಕಾ ಸಮೃದ್ಧಿ ಯೋಜನೆಯು 1997ರಲ್ಲಿ ಪ್ರಾರಂಭಗೊಂಡಿದ್ದು, ಇಂದಿಗೂ ಸಾಕಷ್ಟು ಉಪಯೋಗಕರವಾದ ಯೋಜನೆಯಾಗಿದೆ. ಬಿಪಿಎಲ್ ಕುಟುಂಬಗಳ ಹೆಣ್ಣು ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಈ ಯೋಜನೆ ಕಾರ್ಯ ನಿರ್ವಹಿಸುತ್ತಿದೆ. ಅಂದರೆ ಮನೆಯಲ್ಲಿ ಹೆಣ್ಣು ಮಗು ಜನಿಸಿದಾಗ ₹500 ಪ್ರೋತ್ಸಾಹಧನ ನೀಡಲಾಗುತ್ತದೆ. ನಂತರ ಪ್ರತಿ ಶಾಲಾ ವರ್ಷಕ್ಕೆ ₹300 ರಿಂದ ₹1,000 ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಈ ಯೋಜನೆಯ ಮೂಲಕ ಬಾಲ್ಯವಿವಾಹ ತಡೆಗಟ್ಟುವುದು ಮತ್ತು ಶಿಕ್ಷಣವನ್ನು ಉತ್ತೇಜಿಸುವುದು ಉದ್ದೇಶವಾಗಿದೆ.

4. CBSE ಉಡಾನ್ ಯೋಜನೆ:

11ನೇ ತರಗತಿಯಲ್ಲಿ CBSE ಮೌಲ್ಯಮಾಪನದ ಅಧೀನದಲ್ಲಿರುವ ಹೆಣ್ಣು ಮಕ್ಕಳು, PCM (Physics, Chemistry, Maths) ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದರೆ ಅವರಿಗೆ ಉಚಿತ ಅಧ್ಯಯನ ಸಂಪನ್ಮೂಲಗಳು, ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯ ಸಹಾಯವನ್ನು ಈ ಯೋಜನೆ ಒದಗಿಸುತ್ತದೆ. ಇದು ಮೂಲತಃ ಎಂಜಿನಿಯರಿಂಗ್ ಕ್ಷೇತ್ರವನ್ನು ತಲುಪಲು ಬಯಸುವ ಹುಡುಗಿಯರಿಗೆ ಆರ್ಥಿಕ ನೆರವು ಮತ್ತು ಶೈಕ್ಷಣಿಕ ಬೆಂಬಲ ನೀಡುವ ಒಂದು ಹೆಜ್ಜೆಯಾಗಿದೆ.

5. ಪ್ರೌಢ ಶಿಕ್ಷಣಕ್ಕಾಗಿ ಬಾಲಕಿಯರಿಗೆ ಪ್ರೋತ್ಸಾಹಧನ:

ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದುಕೊಳ್ಳಬೇಕು ಎಂಬ ಉದ್ದೇಶ ಹೊಂದಿರುವ, SC/ST ಹೆಣ್ಣು ಮಕ್ಕಳಿಗೆ ಆರ್ಥಿಕ ಪ್ರೋತ್ಸಾಹ ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಆ ಹೆಣ್ಣು ಮಗು ವ್ಯಾಸಾಂಗ ಮಾಡುತ್ತಿರುವ ಅವಧಿಯಲ್ಲಿ, ಆಕೆಯ ಬ್ಯಾಂಕ್ ಖಾತೆಗೆ ₹3,000 ಮೊತ್ತವನ್ನು ಎಫ್‌ಡಿಯಾಗಿ ಠೇವಣಿ ಇಡಲಾಗುತ್ತದೆ. ಮತ್ತು ವಿದ್ಯಾರ್ಥಿನಿ 18ನೇ ವಯಸ್ಸನ್ನು ತಲುಪಿದ ನಂತರ ಅದನ್ನು ಪಡೆಯಬಹುದು. ಈ ಮೊತ್ತವನ್ನು ಶಿಕ್ಷಣ ಅಥವಾ ಇತರ ಅಗತ್ಯಗಳಿಗೆ ಉಪಯೋಗಿಸಬಹುದು.


ರಾಜ್ಯ ಸರ್ಕಾರಗಳ ಮಹತ್ವದ ಯೋಜನೆಗಳು:

1. ಬಿಹಾರ್ ಸರ್ಕಾರದ 'ಕನ್ಯಾ ಸುರಕ್ಷಾ' ಯೋಜನೆ:

ಬಿಹಾರ ರಾಜ್ಯದಲ್ಲಿ ಹೆಣ್ಣು ಮಕ್ಕಳ ಪ್ರಗತಿಗಾಗಿ ಕನ್ಯಾ ಸುರಕ್ಷಾ ಎಂಬ ಯೋಜನೆಯನ್ನು ತರಲಾಗಿದೆ. ಈ ಯೋಜನೆಯ ಉದ್ದೇಶ ಬಿಪಿಎಲ್ ಕುಟುಂಬಗಳ ಹೆಣ್ಣು ಮಕ್ಕಳಿಗಾಗಿ 2,000 ರೂ. ಎಫ್‌ಡಿಯಾಗಿ ಠೇವಣಿ ಇಡಲಾಗುತ್ತದೆ. ಈ ಮೊತ್ತವನ್ನು ಅವರು 18ನೇ ವಯಸ್ಸಿನಲ್ಲಿ ಪಡೆಯಬಹುದು.

2. ಮಧ್ಯಪ್ರದೇಶದ 'ಲಾಡ್ಲಿ ಲಕ್ಷ್ಮಿ' ಯೋಜನೆ:

ಮಧ್ಯ ಪ್ರದೇಶದ ಲಾಡ್ಲಿ ಯೋಜನೆಯು ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸಮಾಜದಲ್ಲಿ ಅವರ ಸ್ಥಾನವನ್ನು ವೃದ್ಧಿಸುವ ಉದ್ದೇಶದಿಂದ ಅನುಷ್ಠಾನಗೊಂಡಿದೆ. ಈ ಯೋಜನೆಯಡಿ ಹೆಣ್ಣು ಮಕ್ಕಳ ಖಾತೆಯಲ್ಲಿ 2,000 ರೂ. ಇಂದ 25,000 ರೂ.ವರೆಗೆ ಹಣವನ್ನು ವಿವಿಧ ಹಂತಗಳಲ್ಲಿ ಠೇವಣಿ ಇಡಲಾಗುತ್ತದೆ.

3. ದೆಹಲಿಯ 'ಲಾಡ್ಲಿ' ಯೋಜನೆ:

ದೆಹಲಿಯ ಲಾಡ್ಲಿ ಯೋಜನೆಯಡಿ ದುರ್ಬಲ ವರ್ಗದ ಹೆಣ್ಣು ಮಕ್ಕಳಿಗೆ, ಶಿಶುಜನನದ ಸಂದರ್ಭದಲ್ಲಿ ರೂ. 10,000-11,000, ಶಾಲಾ ಹಂತಗಳಲ್ಲಿ ಪ್ರತಿ ಹಂತಕ್ಕೆ ರೂ. 5,000 ವರೆಗೆ ಸಹಾಯಧನ ನೀಡಲಾಗುತ್ತದೆ.

4. ರಾಜಸ್ಥಾನದ 'ರಾಜಶ್ರೀ' ಯೋಜನೆ:

ರಾಜಸ್ಥಾನದಲ್ಲಿ ರಾಜಶ್ರೀ ಯೋಜನೆಯಡಿ ಹೆಣ್ಣು ಮಕ್ಕಳ ಖಾತೆಯಲ್ಲಿ, ಹುಟ್ಟಿನಿಂದ ಪದವಿಯವರೆಗೆ ರೂ. 50,000ದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯಡಿ ಹುಟ್ಟಿನಿಂದ ಪದವಿಯವರೆಗೆ ರೂ. 50,000ದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. .

5. ಮಹಾರಾಷ್ಟ್ರದ 'ಮಜೀ ಕನ್ಯಾ ಭಾಗ್ಯಶ್ರೀ' ಯೋಜನೆ:

ಈ ಯೋಜನೆಯು ವಾರ್ಷಿಕ ಆದಾಯ ₹7.5 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳಿಗೆ ಉದ್ದೇಶಿತವಾಗಿದ್ದು, ಹೆಣ್ಣು ಮಗುವಿಗೆ ರೂ. 5,000 ರಿಂದ ₹25,000 ವರೆಗೆ ಸಹಾಯಧನ ಒದಗಿಸುತ್ತದೆ.

6. ತಮಿಳುನಾಡಿನ 'ಸಿಎಂ ಹೆಣ್ಣು ಮಕ್ಕಳ ರಕ್ಷಣಾ' ಯೋಜನೆ:

ಒಂಟಿ ಅಥವಾ ಇಬ್ಬರು ಹುಡುಗಿಯರ ಕುಟುಂಬಗಳಿಗೆ ಪ್ರೋತ್ಸಾಹಧನ ರೂಪದಲ್ಲಿ ₹25,000 ಅಥವಾ ₹50,000ದವರೆಗೆ ಮಂಜೂರಾಗುತ್ತದೆ. ಈ ಮೊತ್ತವನ್ನು 18ನೇ ವಯಸ್ಸಿನಲ್ಲಿ ಪಡೆಯಬಹುದು.

7. ಉತ್ತರಾಖಂಡದ 'ನಂದಾ ದೇವಿ ಕನ್ಯಾ' ಯೋಜನೆ:

2009ರ ನಂತರ ಬಿಪಿಎಲ್ ಕುಟುಂಬದಲ್ಲಿ ಜನಿಸಿದ ಎರಡೂ ಹೆಣ್ಣು ಮಕ್ಕಳಿಗೆ ₹5,000ವರೆಗೆ ಎಫ್‌ಡಿಯಾಗಿ ಹಣ ಠೇವಣಿ ಇಡಲಾಗುತ್ತದೆ.

ಇನ್ನು ಹೆಣ್ಣು ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳು ಪ್ರತಿ ಹಂತದಲ್ಲೂ ಜನನದಿಂದ ಪದವೀಧರವಾಗುವವರೆಗೂ ಸಹಾಯಕವಾಗಿರುತ್ತವೆ. ಪೋಷಕರು ಮತ್ತು ಸಂರಕ್ಷಕರು ಈ ಯೋಜನೆಗಳ ಮಾಹಿತಿ ತಿಳಿದುಕೊಂಡು ಸೂಕ್ತ ಹಂತದಲ್ಲಿ ಅರ್ಜಿ ಸಲ್ಲಿಸಿದರೆ, ತಮ್ಮ ಮಕ್ಕಳ ಭವಿಷ್ಯವನ್ನು ಇನ್ನಷ್ಟು ಭದ್ರಗೊಳಿಸಬಹುದು. ಈ ಯೋಜನೆಗಳು ದೇಶದ ಹೆಣ್ಣು ಮಕ್ಕಳಿಗೆ ಕೇವಲ ಹಣಕಾಸು ನೆರವಿನಷ್ಟೇ ಅಲ್ಲ, ಭರವಸೆಯ ಬೆಳಕೂ ಹೌದು. ಸದೃಢ ಸಮಾಜ ನಿರ್ಮಾಣಕ್ಕಾಗಿ ಹೆಣ್ಣು ಮಕ್ಕಳ ಪ್ರಗತಿಗೆ ಇವು ದೊಡ್ಡ ಹಂತದ ಪಾದಾರ್ಪಣೆ. ಆದ್ದರಿಂದ ಇವುಗಳ ಸದುಪಯೋಗವನ್ನು ಪಡೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+