ರಷ್ಯಾದ ಪಡೆಗಳು ಉಕ್ರೇನ್‌ನ ಹಲವಾರು ನಗರಗಳಲ್ಲಿ ಕ್ಷಿಪಣಿಗಳನ್ನು ಹಾರಿಸಿದ ನಂತರ ಅಂದರೆ ರಷ್ಯಾವು ಉಕ್ರೇನ್‌ನಲ್ಲಿ ಯುದ್ಧವನ್ನು ಆರಂಭ ಮಾಡಿದ ಬಳಿಕ ಬಿಟ್‌ಕಾಯಿನ್ ಗುರುವಾರ ಒಂದು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಬಿಟ್‌ಕಾಯಿನ್ ಶೇಕಡಾ 7.9 ರಷ್ಟು ಕುಸಿದು 34,324 ಡಾಲರ್‌ಗೆ ಇಳಿದಿದೆ. ಇದು ಜನವರಿ 24ಕ್ಕಿಂತ ಕಡಿಮೆಯಾಗಿದೆ. ಕೊನೆಯ ವಹಿವಾಟು ಶೇಕಡಾ 4.5 ರಷ್ಟು ಕಡಿಮೆಯಾಗಿದೆ. ಬಿಟ್‌ಕಾಯಿನ್ ಜೊತೆ ಸಾಮಾನ್ಯವಾಗಿ ವಹಿವಾಟು ನಡೆಸುವ ಕೆಲವು ನಾಣ್ಯಗಳು ಕೂಡಾ ಕುಸಿತ ಕಂಡಿದೆ. ಎಥೇರಿಯಮ್ ಶೇಕಡ ಶೇಕಡಾ 10.8 ರಷ್ಟು ಪಾತಾಳಕ್ಕೆ ಇಳಿದಿದೆ.
Coinmarketcap ಡೇಟಾ ಪ್ರಕಾರ, ಕಳೆದ 24 ಗಂಟೆಗಳಲ್ಲಿ 150 ಶತಕೋಟಿ ಡಾಲರ್ (€133.64 ಶತಕೋಟಿ) ಗಿಂತ ಹೆಚ್ಚಿನ ಮೊತ್ತವು ಸಂಪೂರ್ಣ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಿಂದ ನಾಶವಾಗಿದೆ. ಆದರೆ ರಷ್ಯಾದ ಆಕ್ರಮಣದ ಆಘಾತದಿಂದ ಇಂದು ಕ್ರಿಪ್ಟೋಕರೆನ್ಸಿಗಳು ಚೇತರಿಕೆ ಕಂಡಿದೆ ಎಂದು ವರದಿಗಳು ಹೇಳಿದೆ.

ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಪ್ರಕ್ಷುಬ್ಧ ಸ್ಥಿತಿಯಲ್ಲಿ
ರಷ್ಯಾದ ಮೇಲೆ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಇತರ ದೇಶಗಳು ವಿಧಿಸಿರುವ ಕಠಿಣ ಆರ್ಥಿಕ ನಿರ್ಬಂಧಗಳ ಮಧ್ಯೆ, ಕ್ರಿಪ್ಟೋಕರೆನ್ಸಿ ಕುಸಿತ ಕಂಡಿದೆ. ಉಕ್ರೇನ್ ಆಕ್ರಮಣದ ಕಾರಣದಿಂದಾಗಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಪ್ರಕ್ಷುಬ್ಧ ಸ್ಥಿತಿಯಲ್ಲಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ಪಡೆಗಳು ಉಕ್ರೇನ್‌ಗೆ ಗಡಿಯನ್ನು ದಾಟುತ್ತವೆ ಎಂದು ಘೋಷಿಸಿದಾಗ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಪಾತಾಳಕ್ಕೆ ಕುಸಿಯಲು ಆರಂಭ ಮಾಡಿದೆ. ಎಲ್ಲಾ ಪ್ರಮುಖ ಕ್ರಿಪ್ಟೋಕರೆನ್ಸಿಗಳು ಮಾರುಕಟ್ಟೆಯ ಬಂಡವಾಳ 200 ಶತಕೋಟಿ ಡಾಲರ್ (12 ಪ್ರತಿಶತ ಕುಸಿತ) ಕ್ಕಿಂತ ಹೆಚ್ಚು ಕುಸಿದವು.
ರಷ್ಯಾದ ಆಕ್ರಮಣದ ಒಂದು ದಿನದ ನಂತರ, CoinMarketCap ಪ್ರಕಾರ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಬಂಡವಾಳ (ಕ್ಯಾಪಿಟಲ್ ಮೌಲ್ಯ) 1.71 ಟ್ರಿಲಿಯನ್ ಡಾಲರ್ ಆಗಿದೆ. ಇದು ನಿನ್ನೆಗಿಂತ 7.67 ಶೇಕಡಾ ಹೆಚ್ಚಳವಾಗಿದೆ. ಈ ನಡುವೆ ಕ್ರಿಪ್ಟೋಕರೆನ್ಸಿಗಳ ಕಾನೂನು ಸ್ಥಿತಿಯನ್ನು ರಷ್ಯಾ ಇನ್ನೂ ಸ್ಪಷ್ಟಪಡಿಸಿಲ್ಲ.
ಇತ್ತೀಚಿನ ಸರ್ಕಾರಿ ಪತ್ರಿಕೆಯ ಪ್ರಕಾರ, ಲಕ್ಷಾಂತರ ರಷ್ಯನ್ನರು 2 ಟ್ರಿಲಿಯನ್ ರೂಬಲ್ಸ್ ($22.9 ಶತಕೋಟಿ) ಮೌಲ್ಯದ ಕ್ರಿಪ್ಟೋಕರೆನ್ಸಿಗಳನ್ನು ಹೊಂದಿದ್ದಾರೆ. ಮತ್ತೊಂದು ಮಾಧ್ಯಮ ವರದಿಯು 17 ಮಿಲಿಯನ್ ರಷ್ಯನ್ನರು, ಒಟ್ಟು ಜನಸಂಖ್ಯೆಯ 12 ಪ್ರತಿಶತದಷ್ಟು ಜನರು ಕ್ರಿಪ್ಟೋಕರೆನ್ಸಿ ಹೊಂದಿದ್ದಾರೆ ಎಂದು ಹೇಳಿದೆ.


Click it and Unblock the Notifications