ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮದ ಆರಂಭಿಕ ಷೇರು ಮಾರಾಟದ (ಐಪಿಒ) ಸಮಯವನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಬೇಕಾಗಬಹುದು ಎಂದು ಹೇಳಿದ್ದಾರೆ.
"ತಾತ್ವಿಕವಾಗಿ, ನಾನು ಈ ಹಿಂದಿನ ದಿನಾಂಕದಂದೇ ಎಲ್‌ಐಸಿ ಐಪಿಒ ನಡೆಸಲು ಬಯಸುತ್ತೇನೆ. ಏಕೆಂದರೆ ನಾವು ಅದನ್ನು ಸಂಪೂರ್ಣವಾಗಿ ಭಾರತೀಯ ಪರಿಗಣನೆಗಳ ಆಧಾರದ ಮೇಲೆ ಸ್ವಲ್ಪ ಸಮಯದವರೆಗೆ ಯೋಜಿಸಿದ್ದೇವೆ," ಎಂದು ಬಿಸಿನೆಸ್ ಲೈನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಆದರೆ ಜಾಗತಿಕ ಪರಿಗಣನೆಗಳನ್ನು ಕೂಡಾ ನಾವು ನೋಡಬೇಕಾಗಿದೆ ಎಂದು ತಿಳಿಸಿದರು.
ಎಲ್‌ಐಸಿ ಐಪಿಒ ಬಿಡುಗಡೆಯ ಪರಿಶೀಲನೆಯು ಭಾರತದ ಅತಿದೊಡ್ಡ ಮೆಗಾ ಸಾರ್ವಜನಿಕ ಕೊಡುಗೆಯ ಸಮಯದ ಮೇಲೆ ಪರಿಣಾಮ ಬೀರಬಹುದು ಎಂದು ನಂಬಲಾಗಿದೆ. ಎಲ್‌ಐಸಿ ಐಪಿಒ ಬಿಡುಗಡೆಗೆ ಕೇಂದ್ರವು ಈ ಹಿಂದೆ ಮಾರ್ಚ್ ಅನ್ನು ಗಡುವು ಎಂದು ನಿಗದಿಪಡಿಸಿತ್ತು. ಅದರ ಐಪಿಒ ದಾಖಲೆಯನ್ನು ಫೆಬ್ರವರಿ 13 ರಂದು ಸಲ್ಲಿಸಲಾಗಿದೆ.

"ಖಾಸಗಿ ವಲಯದ ಪ್ರವರ್ತಕರು ಈ ಕರೆಯನ್ನು ತೆಗೆದುಕೊಂಡಾಗ, ಅವರು ಇದನ್ನು ಕಂಪನಿಯ ಮಂಡಳಿಗೆ ಮಾತ್ರ ವಿವರಿಸಬೇಕು. ಆದರೆ ನಾನು ಅದನ್ನು ಇಡೀ ಜಗತ್ತಿಗೆ ವಿವರಿಸಬೇಕಾಗಿದೆ," ಎಂದು ಹೇಳಿದ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಎಲ್‌ಐಸಿ ಐಪಿಒ ದಿನಾಂಕ ಪರಿಷ್ಕರಣೆಯ ಬಗ್ಗೆ ಹೇಳಿದ್ದಾರೆ.
ವಿದೇಶ ನೇರ ಹೂಡಿಕೆಗೆ ಅನುಮತಿ ನೀಡುವ ತಿದ್ದುಪಡಿ ಅನುಮೋದನೆ
ಕಳೆದ ವಾರ, ಕೇಂದ್ರ ಸಚಿವ ಸಂಪುಟವು ಎಲ್‌ಐಸಿಯಲ್ಲಿ ವಿದೇಶಿ ನೇರ ಹೂಡಿಕೆಗೆ ಶೇಕಡಾ 20 ರವರೆಗೆ ಅನುಮತಿಸುವ ನೀತಿ ತಿದ್ದುಪಡಿಯನ್ನು ಅನುಮೋದಿಸಿದೆ. ಈ ಮಧ್ಯೆ, ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಬಿಡುಗಡೆಗಾಗಿ ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ, ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಬಿಡುಗಡೆಗಾಗಿ ಕ್ರಿಯಾ ಯೋಜನೆಯನ್ನು ಪರಿಶೀಲಿಸಲು ಮತ್ತು ಸಿದ್ಧಪಡಿಸಲು ಕೇಂದ್ರವು ಈ ವಾರ ಸಭೆ ಸೇರಲಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
ಭಾರತದ ಸರ್ಕಾರಿ ಸ್ವಾಮ್ಯದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (LIC)ಯಿಂದ ಷೇರುಗಳ ಸಾರ್ವಜನಿಕ ಕೊಡುಗೆ(IPO)ಯನ್ನು ಮಾರ್ಚ್ 11ರಂದು ಹೂಡಿಕೆದಾರರಿಗೆ ತೆರೆದುಕೊಳ್ಳುವ ನಿರೀಕ್ಷೆಯಿತ್ತು. ಆದರೆ ಈಗ ಇನ್ನೂ ತಡವಾಗುವ ಸಾಧ್ಯತೆ ಇದೆ. ದೇಶದಲ್ಲೇ ಅತಿದೊಡ್ಡ ಪ್ರಮಾಣದಲ್ಲಿ ಅಂದರೆ 8 ಬಿಲಿಯನ್ ಡಾಲರ್ ಮೌಲ್ಯದ ಐಪಿಓ ಅನ್ನು ಹೂಡಿಕೆದಾರರಿಗೆ ನೀಡಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ದೇಶದ ಅತಿದೊಡ್ಡ ಐಪಿಒಗಾಗಿ ವೇದಿಕೆಯನ್ನು ಸಿದ್ಧಪಡಿಸಿದ ಜೀವ ವಿಮಾ ನಿಗಮವು ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಅಂದಾಜು 63,000 ಕೋಟಿಗೆ ಸರ್ಕಾರದಿಂದ ಶೇಕಡಾ 5 ರಷ್ಟು ಪಾಲನ್ನು ಮಾರಾಟ ಮಾಡಲು ಕರಡು ಪತ್ರಗಳನ್ನು ಸಲ್ಲಿಸಿದೆ. 31.6 ಕೋಟಿ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಅಥವಾ 5 ಪ್ರತಿಶತ ಸರ್ಕಾರಿ ಪಾಲು ಐಪಿಒ ಆಗಿ ಹೊರಹೊಮ್ಮಲಿದೆ.
ವಿಮಾ ಭೀಮ್‌ನ ನೌಕರರು ಮತ್ತು ಪಾಲಿಸಿದಾರರು ಇದರಲ್ಲಿ ನೈಜ ಬೆಲೆಗಿಂತ ರಿಯಾಯಿತಿಯನ್ನು ಪಡೆಯುತ್ತಾರೆ. ಕಾಯ್ದಿರಿಸಿದ ಕೋಟಾದ ಅಡಿಯಲ್ಲಿ ಬಿಡ್ ಮಾಡಲು ಬಯಸುವ ಎಲ್ಐಸಿ ಪಾಲಿಸಿದಾರರು ತಮ್ಮ ಪಾಲಿಸಿಯನ್ನು ಪ್ಯಾನ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಅಗತ್ಯವಾಗಿದೆ. ಹಾಗೆಯೇ ಆಧಾರ್ ಜೊತೆಗೂ ಲಿಂಕ್ ಮಾಡಿಕೊಳ್ಳಬೇಕಾಗಿದೆ. ಪ್ರಸ್ತಾವಿತ ಯೋಜನೆಯ ಪ್ರಕಾರ, ಎಲ್‌ಐಸಿಯ ಐಪಿಒದ 10 ಪ್ರತಿಶತದವರೆಗೆ ಪಾಲಿಸಿದಾರರಿಗೆ ಕಾಯ್ದಿರಿಸಲಾಗುತ್ತದೆ. ಜೀವ ವಿಮೆಯ ಪ್ರಮುಖ ಸಂಸ್ಥೆಯಾದ ಎಲ್‌ಐಸಿಯು ಡಿಮ್ಯಾಟ್ ಖಾತೆಯನ್ನು ಹೊಂದಿರುವ ತನ್ನ ಪಾಲಿಸಿದಾರರಿಗೆ ತಮ್ಮ ಆದಾಯ ತೆರಿಗೆ ಪ್ಯಾನ್ ಅನ್ನು ತಮ್ಮ ಪಾಲಿಸಿಗಳೊಂದಿಗೆ ಲಿಂಕ್ ಮಾಡಲು ಹೇಳಿದೆ. ಹಾಗೆಯೇ ಹಾಗೆಯೇ ಪಾಲಿಸಿಗಳಿಗೆ ಆಧಾರ್ ಜೋಡಣೆ ಮಾಡಬೇಕಾಗಿದೆ.


Click it and Unblock the Notifications