ಕೇಂದ್ರ ಬಜೆಟ್ 2026 (Central Budget 2026) ಮಂಡನೆಗೆ ದಿನಗಣನೆ ಶುರುವಾಗಿದೆ. ಹೂಡಿಕೆದಾರರು, ತೆರಿಗೆದಾರರು ಕೇಂದ್ರದರಿಂದ ಘೊಷಣೆಯಾಗಲಿರುವ ಬಂಪರ್ ಕೊಡುಗೆಗಳ ಬಗ್ಗೆ ಭಾರೀ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM-GKAY) ಮುಂದುವರಿಯುವುದೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ. ಈ ಬಗ್ಗೆ ಭಾರೀ ಗೊಂದಲಗಳು ಉಂಟಾಗಿದ್ದು, ಕೇಂದ್ರ ಬಜೆಟ್‌ನಲ್ಲಿ ಏನಾಗಲಿದೆ ಎಂದು ಕಾದುನೋಡಬೇಕಿದೆ.

ಏನಿದು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY):
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಎಂಬುದು ಭಾರತ ಸರ್ಕಾರದ ಒಂದು ಮಹತ್ವದ ಆಹಾರ ಭದ್ರತಾ ಯೋಜನೆಯಾಗಿದೆ. ಬಡವರು ಮತ್ತು ಅಂತ್ಯೋದಯ ಕುಟುಂಬಗಳಿಗೆ ಉಚಿತ ಧಾನ್ಯಗಳನ್ನು ನೀಡುವ ಮೂಲಕ ಅವರ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇನ್ನು ಈ ಯೋಜನೆಯನ್ನು 2020ರ ಮಾರ್ಚ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಆರಂಭಿಸಲಾಯಿತು. ಇನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ (NFSA) ಅಡಿಯಲ್ಲಿ ಬರುತ್ತದೆ. ಹಾಗೆಯೇ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ನಿರ್ವಹಿಸುತ್ತದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM-GKAY), 'ಆತ್ಮನಿರ್ಭರ ಭಾರತ' ಉಪಕ್ರಮದ ಭಾಗವಾಗಿದೆ. ಇದು ವಲಸೆ ಕಾರ್ಮಿಕರು ಮತ್ತು ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುತ್ತದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಈ ಯೋಜನೆಯನ್ನು ಐದು ವರ್ಷಗಳವರೆಗೆ, ಅಂದರೆ ಡಿಸೆಂಬರ್ 2028 ರವರೆಗೆ ವಿಸ್ತರಿಸಿದೆ. ಇದಕ್ಕಾಗಿ ಒಟ್ಟು ₹11.8 ಲಕ್ಷ ಕೋಟಿ ಸಬ್ಸಿಡಿಯನ್ನು ಸಹ ಮೀಸಲಿಡಲಾಗಿದೆ.
ಈ ಯೋಜನೆಯಡಿ ದೇಶದ 81.3 ಕೋಟಿ ಬಡ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆಜಿ ಆಹಾರ ಧಾನ್ಯ ದೊರೆಯುತ್ತದೆ. ಅಂತ್ಯೋದಯ ಯೋಜನೆಯ ಕುಟುಂಬಗಳಿಗೆ ಮಾಸಿಕ 35 ಕೆಜಿ ಧಾನ್ಯ ವಿತರಣೆಯೂ ಇದರಲ್ಲಿ ಸೇರಿದೆ. ಯೋಜನೆಯನ್ನು ಈಗಾಗಲೇ 2028ರವರೆಗೆ ಕಾನೂನಾತ್ಮಕವಾಗಿ ವಿಸ್ತರಿಸಿರುವ ಕಾರಣ, ಬಜೆಟ್ 2026-27ರಲ್ಲಿ ಇದು ಕೊನೆಗೊಳ್ಳುವ ನಿರೀಕ್ಷೆಯಿಲ್ಲ ಎಂದು ಹೇಳಲಾಗಿದೆ.
2022ಕ್ಕೂ ಮೊದಲು, ಸರ್ಕಾರವು ಗೋಧಿಯನ್ನು ಕೆ.ಜಿ.ಗೆ ₹2, ಅಕ್ಕಿಯನ್ನು ₹3 ದರದಲ್ಲಿ ನೀಡುತ್ತಿತ್ತು. ಬಳಿಕ ಅದನ್ನು ಉಚಿತವಾಗಿ ನೀಡಲಾಯಿತು. ನಂತರ ಪ್ರತೀ ಬಜೆಟ್‌ನಲ್ಲಿ ಈ ಬಗ್ಗೆ ಅಪ್‌ಡೇಟ್ ಆಗುತ್ತಲೇ ಇದೆ.
ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಉಚಿತ ಪಡಿತರ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವಿಧಾನ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಆದರೂ, ಸಾಮಾನ್ಯ ಹಂತಗಳು ಹೀಗಿವೆ: ನಿಮ್ಮ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಅಲ್ಲಿಂದ ಹೊಸ ರೇಷನ್ ಕಾರ್ಡ್ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ. ನಿಮ್ಮ ಹೆಸರು, ವಿಳಾಸ, ಆದಾಯ ಹಾಗೂ ಕುಟುಂಬ ಸದಸ್ಯರ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ಆದಾಯ ಪ್ರಮಾಣಪತ್ರ, ವಿಳಾಸದ ಪುರಾವೆ ಮತ್ತು ಗುರುತಿನ ಚೀಟಿಯಂತಹ ಅಗತ್ಯ ದಾಖಲೆಗಳನ್ನು ಅಲ್ಲಿ ಸಲ್ಲಿಸಬೇಖು.
ಭರ್ತಿ ಮಾಡಿದ ಅರ್ಜಿ ಮತ್ತು ಅಗತ್ಯ ದಾಖಲೆಗಳೊಂದಿಗೆ, ಇಲಾಖೆಯ ಹತ್ತಿರದ ಕಚೇರಿಗೆ ಸಲ್ಲಿಸಿ. ದಾಖಲೆಗಳು ಮತ್ತು ಮಾಹಿತಿ ಪರಿಶೀಲನೆಯ ನಂತರ, ನಿಮಗೆ ಪಡಿತರ ಕಾರ್ಡ್ ನೀಡಲಾಗುತ್ತದೆ.


Click it and Unblock the Notifications