2026-27ರ ಕೇಂದ್ರ ಬಜೆಟ್‌ಗೆ (Union Budget 2026) ಮುಂಚಿತವಾಗಿ, ಭಾರತದ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ವಿವಾಹಿತ ದಂಪತಿಗೆ ಕಡ್ಡಾಯವಲ್ಲದ ಜಂಟಿ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಸ್ತಾಪಿಸಿದೆ. ಅದರ ಜೊತೆಗೆ ತೆರಿಗೆ ಅನುಸರಣೆಯನ್ನು ಸರಳಗೊಳಿಸುವುದು, ತೆರಿಗೆಯಲ್ಲಿ ನ್ಯಾಯಸಮ್ಮತತೆಯನ್ನು ಸುಧಾರಿಸುವುದು ಮತ್ತು ತೆರಿಗೆ ಆಡಳಿತವನ್ನು ಬಲಪಡಿಸುವುದು ಐಸಿಎಐನ ಈ ಪ್ರಸ್ತಾವನೆಯ ಮುಖ್ಯ ಉದ್ದೇಶವಾಗಿದೆ. ಇದು ಐಸಿಎಐ ಪ್ರಿಬಜೆಟ್ ಸಲಹೆಗಳಲ್ಲಿ ಒಂದಾಗಿದೆ. ಇನ್ನು ಪ್ರಸ್ತುತ ಭಾರತದಲ್ಲಿ ಮದುವೆಯಾದ ದಂಪತಿಗಳು ಸಪರೇಟ್ ಟ್ಯಾಕ್ಸ್ ರಿಟರ್ನ್ ಫೈಲ್ (IT Return File) ಮಾಡಬೇಕು. ಆದ್ರೆ ಒಂದು ವೇಳೆ ಈ ಬಾರಿಯ ಬಜೆಟ್‌ನಲ್ಲಿ ಈ ಪ್ರಪೋಸಲ್ ಬಂದರೆ ಅದು ಬದಲಾಗಬಹುದು.

ಪ್ರಸ್ತುತ, ಭಾರತೀಯ ತೆರಿಗೆ ಕಾನೂನುಗಳು ಸಂಗಾತಿಗಳಿಗೆ ಜಂಟಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅವಕಾಶ ನೀಡುವುದಿಲ್ಲ. ವೈವಾಹಿಕ ಸ್ಥಿತಿ ಅಥವಾ ಕುಟುಂಬದ ಆದಾಯದ ಸ್ವರೂಪ ಏನೇ ಇರಲಿ, ಪ್ರತಿಯೊಬ್ಬ ವ್ಯಕ್ತಿಗೂ ಪ್ರತ್ಯೇಕವಾಗಿ ತೆರಿಗೆ ವಿಧಿಸಲಾಗುತ್ತದೆ.
- ಅಂದರೆ, ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಆದಾಯಕ್ಕೆ ಸಪರೇಟ್ ಐಟಿ ರಿಟರ್ನ್ ಫೈಲ್ ಮಾಡಬೇಕು.
- ಮದುವೆಯಾಗಿದ್ದರೂ ಅಥವಾ ಹೌಸ್‌ಹೋಲ್ಡ್ ಆದಾಯ ಹೇಗಿದ್ದರೂ, ಪ್ರತಿಯೊಬ್ಬರೂ ತಮ್ಮದೇ ಎಕ್ಸೆಂಪ್ಷನ್ ಲಿಮಿಟ್, ಡಿಡಕ್ಷನ್ ಮತ್ತು ರಿಬೇಟ್ ಬಳಸಬಹುದು.
- ಡ್ಯುಯಲ್ ಇನ್‌ಕಮ್ ಫ್ಯಾಮಿಲಿಗಳಿಗೆ ಇದು ಒಳ್ಳೆಯದು. ಏಕೆಂದರೆ ಇಲ್ಲಿ ಇಬ್ಬರೂ ಪ್ರತ್ಯೇಕ ರಿಲೀಫ್ ಪಡೆಯುತ್ತಾರೆ.
- ಆದರೆ ಒಬ್ಬರೇ ಮನೆಯಲ್ಲಿ ಸಂಪಾದಿಸುವವರಿದ್ದರೆ ನಷ್ಟ. ಏಕೆಂದರೆ ಒಬ್ಬರ ಆದಾಯಕ್ಕೆ ಟ್ಯಾಕ್ಸ್ ಸ್ಲ್ಯಾಬ್ ಬಿದ್ದರೆ, ಹೆಚ್ಚು ಟ್ಯಾಕ್ಸ್ ಕಟ್ಟಬೇಕಾಗುತ್ತದೆ.
ICAI ಜಾಯಿಂಟ್ ಟ್ಯಾಕ್ಸೇಷನ್ ಸೂಚಿಸಿದ್ದೇಕೆ?
ICAI ಸದ್ಯದ ಪ್ರಪೋಸಲ್ ಪ್ರಕಾರ, ಮದುವೆಯಾದ ದಂಪತಿ ಆಫ್ಷನಲ್ ಜಾಯಿಂಟ್ ಟ್ಯಾಕ್ಸೇಷನ್ ಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಕಾರಣಗಳು ಕೆಳಗಿವೆ.
- ದಂಪತಿ ತಮ್ಮ ಆದಾಯವನ್ನು ಒಟ್ಟಿಗೆ ಸೇರಿಸಿ, ಇದೇ ಐಟಿ ರಿಟರ್ನ್ ಫೈಲ್ ಮಾಡಬಹುದು.
- ಇದರಿಂದ ಸಿಂಗಲ್ ಇನ್‌ಕಮ್ ಫ್ಯಾಮಿಲಿಗಳಿಗೆ ಟ್ಯಾಕ್ಸ್ ಕಡಿಮೆಯಾಗುತ್ತದೆ. ಏಕೆಂದರೆ ಇಲ್ಲಿ ಸೇರಿಸಿದ ಟ್ಯಾಕ್ಸ್ ಅನ್ನು ಹೈ ಸ್ಲ್ಯಾಬ್‌ಗೆ ಬೀಳದಂತೆ ಶೇರ್ ಮಾಡಿಕೊಳ್ಳಬಹುದು.
- ಇದು ಟ್ಯಾಕ್ಸ್‌ನಿಂದ ಸೇಫ್ ಆಗಲು, ಕುಟುಂಬ ಸದಸ್ಯರ ನಡುವೆ ಹಣ ವರ್ಗಾವಣೆ ಕೂಡಾ ಕಡಿಮೆ ಮಾಡುತ್ತದೆ.
- ಸದ್ಯ ಈ ಸಿಸ್ಟಮ್ ಅಮೆರಿಕ, ಯುಕೆಯಲ್ಲಿದೆ. ಅದೇ ಸಿಸ್ಟಮ್ ಇಲ್ಲಿ ತರುವಂತೆ ಹೇಳಲಾಗಿದೆ.
ಏನಿದು ಜಾಯಿಂಟ್ ಟ್ಯಾಕ್ಸೇಷನ್ ಸಿಸ್ಟಮ್?
ಜಾಯಿಂಟ್ ಟ್ಯಾಕ್ಸೇಷನ್ ಸಿಸ್ಟಮ್ ಎಂದರೆ ಮದುವೆಯಾದ ದಂಪತಿ, ತಮ್ಮ ಆದಾಯವನ್ನು ಒಟ್ಟಿಗೆ ಸೇರಿಸಿ ಒಂದೇ ಆದಾಯ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ವ್ಯವಸೈಎ. ಪ್ರಸ್ತುತ ಭಾರತದಲ್ಲಿ ಈ ವ್ಯವಸ್ಥೆ ಇಲ್ಲ.
ಇದರ ಅರ್ಥ ಏನು?
- ದಂಪತಿ ಬಯಸಿದರೆ ತಮ್ಮ ಎರಡೂ ಆದಾಯವನ್ನು ಒಟ್ಟು ಗೂಡಿಸಿ ಒಂದೇ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಬಹುದು.
- ಟ್ಯಾಕ್ಸ್ ಲೆಕ್ಕ ಹಾಕುವಾಗ ಕುಟುಂಬದ ಒಟ್ಟು ಆದಾಯವನ್ನು ಪರಿಗಣಿಸಲಾಗುತ್ತದೆ.
- ಇದರಿಂದ ಟ್ಯಾಕ್ಸ್ ಸ್ಲ್ಯಾಬ್‌ಗಳು ಬದಲಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಉದಾಹರಣೆಗೆ, ಗಂಡನ ಆದಾಯ 15 ಲಕ್ಷ ಇದ್ರೆ ಪ್ರಸ್ತುತ ಹೈ ಸ್ಲ್ಯಾಬ್‌ಗೆ ಇದು ಬೀಳುತ್ತದೆ. ಅಲ್ಲದೇ ಹೆಚ್ಚು ಟ್ಯಾಕ್ಸ್ ಪಾವತಿಸಬೇಕು. ಆದ್ರೆ ಜಾಯಿಂಟ್ ಟ್ಯಾಕ್ಸೇಷನ್ ಬಂದರೆ, ಈ 15 ಲಕ್ಷ ಆದಾಯವನ್ನು ಎರಡು ಜನರಿಗೆ ಹಂಚಿಕೊಂಡು ಲೆಕ್ಕ ಹಾಕಬಹುದು. ಇದರಿಂದ ಸ್ಲ್ಯಾಬ್ ಕೂಡಾ ಬದಲಾಗುತ್ತದೆ. ಅಲ್ಲದೇ ಟ್ಯಾಕ್ಸ್ ಕಡಿಮೆಯಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications