ವಿಶ್ವದ ಅತ್ಯಂತ ಯಶಸ್ವಿ ಹೂಡಿಕೆದಾರರಲ್ಲಿ ವಾರೆನ್ ಬಫೆಟ್ (Warren Buffett) ಕೂಡಾ ಒಬ್ಬರು. ಕಳೆದ ವರ್ಷ ಬರ್ಕ್‌ಶೈರ್ ಹ್ಯಾಥ್‌ವೇ ಕಂಪನಿಯ ನಾಯಕತ್ವವನ್ನು ಇತ್ತೀಚೆಗೆ ಬದಲಾಯಿಸಿದ ನಂತರ, ಹೂಡಿಕೆದಾರರಿಗೆ ಅವರ ಹೂಡಿಕೆ ರಹಸ್ಯ ಬಗ್ಗೆ ಭಾರೀ ಕುತೂಹಲ ಹುಟ್ಟಿದೆ. ಅಲ್ಲದೇ ಬಫೆಟ್ ಅವರೂ ಕೂಡಾ ಹೂಡಿಕೆ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ. ಇದೀಗ ವಾರೆನ್ ಬಫೆಟ್ ಅವರ ಟಾಪ್ ಹೂಡಿಕೆ ರಹಸ್ಯಗಳು (Investment Secret) ವೈರಲ್ ಆಗುತ್ತಿದೆ. ಈ ಹೂಡಿಕೆ ರಹಸ್ಯಗಳು, ಹೂಡಿಕೆದಾರರಿಗೆ ಉತ್ತಮವಾಗಿದೆ.

ವರದಿ ಪ್ರಕಾರ, ವಾರೆನ್ ಬಫೆಟ್ ಅವರು ಹೂಡಿಕೆಗಾಗಿ ಹಲವಾರು ತಂತ್ರಗಳನ್ನು ಫಾಲೋ ಮಾಡಿದ್ದಾರೆ. ಇದೀಗ ಈ ರಹಸ್ಯಗಳು ಹೊರಬಿದ್ದಿದೆ. ಆಪಲ್ (Apple), ಅಮೇರಿಕನ್ ಎಕ್ಸ್‌ಪ್ರೆಸ್ (American Express), ಕೋಕಾ-ಕೋಲಾ (Coco-Cola), ಗೈಕೋ (GEICO), ಮೈಕ್ರೋಸಾಫ್ಟ್ (Microsoft), ಬ್ಯಾಂಕ್ ಆಫ್ ಅಮೆರಿಕಾ (Bank Of America), ಆಲ್ಫಾಬೆಟ್ (Alphabet), ಅಮೆಜಾನ್ (Amazon) ನಂತಹ ದೊಡ್ಡ ದೊಡ್ಡ ಕಂಪನಿಗಳಲ್ಲಿ ಅವರು ಮಾಡಿದ ಹೂಡಿಕೆಗಳೇ ಅವರನ್ನು ಈ ಮಟ್ಟಕ್ಕೆ ತಲುಪುವಂತೆ ಮಾಡಿದೆ. ಅಲ್ಲದೇ ಜಗತ್ತಿನ ಟಾಪ್ 10 ಶ್ರೀಮಂತರಲ್ಲಿ ಇವರೂ ಒಬ್ಬರು.
ಸಮಯವೇ ಅತ್ಯಂತ ದೊಡ್ಡ ಆಸ್ತಿ: ವಾರೆನ್ ಬಫೆಟ್ ಅವರು ಸಮಯವನ್ನು ಒಂದು ಆಸ್ತಿಯಂತೆ ನೋಡುತ್ತಾರೆ. ಅದಕ್ಕಾಗಿ ಹೂಡಿಕೆದಾರರಿಗೆ ಸಮಯ ಬಹಳ ಮುಖ್ಯ. ನೀವು ಮಾಡಿದ ಹೂಡಿಕೆಗೆ ಬರುವ ಬಡ್ಡಿ, ಸಮಯದ ಮೇಲೆ ನಿರ್ಧರಿಸಿರುತ್ತದೆ. ಆದ್ದರಿಂದ ತಾಳ್ಮೆಯಿಂದ ಉತ್ತಮ ಕಂಪನಿಗಳಲ್ಲಿ ಹೂಡಿಕೆ ಮಾಡಿ, ಅನಗತ್ಯವಾಗಿ ಬೇಕಾಬಿಟ್ಟಿ ಮಾರಾಟ ಮಾಡಬೇಡಿ. ಬಫೆಟ್ ಹೇಳುವಂತೆ, "ಸಮಯವು ನಿಮ್ಮ ಸ್ನೇಹಿತನಾಗಬೇಕು, ಶತ್ರುವಲ್ಲ." ಎಂದು ಹೇಳಿದ್ದಾರೆ.
ಅರ್ಥಮಾಡಿಕೊಂಡಿದ್ದನ್ನು ಮಾತ್ರ ಖರೀದಿಸಿ: ವಾರೆನ್ ಬಫೆಟ್ ಅವರು ತಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರುವಲ್ಲಿ ಮಾತ್ರ ಹೂಡಿಕೆ ಮಾಡುತ್ತಾರೆ. ಆದಷ್ಟು ಗೊತ್ತಿರದ ವಿಚಾರಗಳ ಬಗ್ಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಆದಷ್ಟು ಅಂತಹ ಕ್ಷೇತ್ರಗಳನ್ನು ತಪ್ಪಿಸಿ. ಇದು ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ನಿರ್ಧಾರಗಳಿಗೆ ಸಹಾಯ ಮಾಡುತ್ತದೆ.
ಹೂಡಿಕೆ ಸರಳವಾಗಿರಲಿ: ನೀವು ಮಾಡೋ ಹೂಡಿಕೆ ಮೊತ್ತದ ಬಗ್ಗೆ ಸೀಕ್ರೆಟ್ ನಿಮ್ಮಲ್ಲೇ ಇರಲಿ. ಆದ್ದರಿಂದ ಹೂಡಿಕೆಯನ್ನು ಸರಳವಾಗಿಡಿ. ಅನೇಕ ಊಹಾಪೋಹಗಳ ಬದಲು, ಹೂಡಿಕೆ ಮೇಲೆ ಕೇಂದ್ರೀಕರಿಸಿ. ಕೆಲವೊಂದು ಷೇರುಗಳನ್ನು ಸರಿಯಾಗಿ ಗಮನಿಸಿ ಬರೆಯಿರಿ ಮತ್ತು ದೀರ್ಘಕಾಲ ಹಿಡಿದಿಡಿ.
ಗುಣಮಟ್ಟಕ್ಕೆ ಆದ್ಯತೆ ನೀಡಿ:
ಸಾಮಾನ್ಯ ಕಂಪನಿಗಳ ಮೇಲೆ ಹೂಡಿಕೆ ಮಾಡುವ ಬದಲಿಗೆ, ಅತ್ಯಂತ ಗುಣಮಟ್ಟದ 1 ಕಂಪನಿ ಮೇಲೆ ಹೂಡಿಕೆ ಮಾಡುವುದು ಉತ್ತಮ ಎಂಬುದು ವಾರೆನ್ ಬಫೆಟ್ ಅವರ ಸಲಹೆ. ಏಕೆಂದರೆ ಅಂತಹ ಕಂಪನಿಗಳು ಉತ್ತಮ ಲಾಭವನ್ನು ನೀಡುವುದಲ್ಲದೇ, ಅಪಾಯವನ್ನು ಕಡಿಮೆ ಮಾಡುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications