ಮದುವೆ ಅನ್ನೋ ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಇದೊಂದು ಒಬ್ಬ ವ್ಯಕ್ತಿಗೆ ಹೊಸ ಜೀವನವನ್ನು ಕಟ್ಟಿಕೊಡುವಂತಹದ್ದು. ಸಾಂಪ್ರದಾಯಿಕವಾಗಿ ಮನೆಯಲ್ಲೇ ನಡೆಯುತ್ತಿದ್ದ ಮದುವೆ ಸಮಾರಂಭಗಳು, ಇದೀಗ ಆಡಂಭರಗಳಿಂದಲೇ ತುಂಬಿದೆ. ಸಂಪ್ರದಾಯ, ಆಚರಣೆ ಪ್ರದೇಶಗಳಿಂದ ಪ್ರದೇಶಗಳಿಗೆ ಬೇರೆಯಾದ್ರೂ, ಸಂಭ್ರಮ ಮಾತ್ರ ಒಂದೇ ಆಗಿರುತ್ತದೆ. ಇದೀಗ ಹಲವಾರು ವರದಿಗಳು ಬಹಿರಂಗ ಪಡಿಸಿರುವಂತೆ, ಇತ್ತೀಚೆಗೆ ಬಹುತೇಕರು ಮದುವೆಗಾಗಿ ಸಾಲ ಮಾಡುವವರೇ ಹೆಚ್ಚಾಗಿದ್ದಾರೆ. ಆದ್ರೆ ಸರಿಯಾದ ಯೋಜನೆ ಹಾಕಿಕೊಂಡರೆ, ಸಾಲ ಮಾಡದೆಯೂ ಮದುವೆಯಾಗಬಹುದು.

ಮದುವೆಗೆಂದು ಮಾಡಿದ ಸಾಲ, ದೊಡ್ಡ ಆರ್ಥಿಕ ಹೊರೆಯಾಗಬಹುದು. ಆದ್ದರಿಂದ ಯಾರೇ ಆಗಲಿ ಮದುವೆಗೂ ಮುನ್ನ ಸಾಲ ಮಾಡುವವರಾದರೆ, ಅದನ್ನು ತೀರಿಸುವ ಪ್ಲಾನ್ ಮೊದಲೇ ಮಾಡಿಕೊಂಡಿರಬೇಕು. ಆವಾಗಲೇ ನಿಮ್ಮ ಮದುವೆ, ಜೀವನದ ಬಗೆಗಿನ ಹೊರೆಗಳು ದೂರವಾಗುತ್ತದೆ. ಆದ್ದರಿಂದ ಮದುವೆಗೆ ಸಾಲ ಮಾಡಬೇಕಾ? ಬೇಡ್ವಾ? ಈ ಎಲ್ಲಾ ಗೊಂದಲಗಳಿಗೆ ಉತ್ತರ ಇಲ್ಲಿದೆ ಓದಿ.
ಮೊದಲಿಗೆ ಮದುವೆಯ ಬಜೆಟ್ ಅಂದಾಜು ಮಾಡಿ!
ಮದುವೆ ಬಗ್ಗೆ ನಿರ್ಧಾರ ಕೈಗೊಂಡಾಗ, ಮದುವೆಯ ಖರ್ಚಿನ ಬಗ್ಗೆ ಮೊದಲು ಅಂದಾಜು ಮಾಡಬೇಕು. ಸ್ಥಳ, ಅಡುಗೆ, ಫೋಟೋಗ್ರಫಿ, ಬಟ್ಟೆ, ಆಭರಣ ಮತ್ತು ಅಂದಾಜು ಖರ್ಚುಗಳ ಬಗ್ಗೆ ಪಟ್ಟಿ ಮಾಡಬೇಕು. ಈ ಲೆಕ್ಕ ಮಾಡಿದ್ರೆ ಮಾತ್ರ ಮದುವೆ ಖರ್ಚಿನ ಬಗ್ಗೆ ಅಂದಾಜು ತಿಳಿಯಬಹುದು. ಆದರೆ ಹಲವರು ಈ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳೋದೆ ಇಲ್ಲ. ಆದ್ದರಿಂದ ದಂಪತಿ ತಮ್ಮ ಉಳಿತಾಯ ಮತ್ತು ಕುಟುಂಬ ಸದಸ್ಯರ ಹಣಗಳನ್ನು ಕಳೆದು, ಉಳಿದ ಮೊತ್ತ ಎಷ್ಟು ಎಂಬುದನ್ನು ಲೆಕ್ಕ ಹಾಕಿ. ಆ ನಂತರ ಅಗತ್ಯವಿದ್ದಷ್ಟು ಹಣ ಸಾಲ ಮಾಡಿ ಎಂದು ಸ್ಯಾಲರಿಆನ್‌ಟೈಮ್‌ನ ವ್ಯವಸ್ಥಾಪಕ ನಿರ್ದೇಶಕ ಅಂಕಿತ್ ಮೋದಿ ಹೇಳುತ್ತಾರೆ.
ಸಾಲದ ಆಯ್ಕೆ ಸರಿಯಾಗಿ ಮಾಡಿ:
ಭಾರತದಲ್ಲಿ ಸಾಮಾನ್ಯವಾಗಿ ಮದುವೆ ಸಾಲಗಳನ್ನು ವೈಯಕ್ತಿಕ ಸಾಲಗಳಾಗಿ ರಚಿಸಲಾಗುತ್ತದೆ. ಆದ್ದರಿಂದ ಕ್ರೆಡಿಟ್ ಸ್ಕೋರ್ ಮತ್ತು ಸಾಲ ನೀಡುವವರ ನಿಯಮಗಳನ್ನು ನೋಡಿಕೊಂಡು ಬಡ್ಡಿದರ ನಿರ್ಧಾರವಾಗುತ್ತದೆ. ಇನ್ನು ಹೆಚ್ಚಿನ ಸಾಲದಾತರು 1 ಲಕ್ಷದಿಂದ 50 ಲಕ್ಷದವರೆಗೆ ಸಾಲ ನೀಡಲು ರೆಡಿ ಇರುತ್ತಾರೆ. ಬಡ್ಡಿ ದರ ಕೂಡ 10% ನಿಂದ ಆರಂಭವಾಗುತ್ತದೆ.
ಸಾಲ ಪಡೆಯುವವರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು!
ಸಾಲದ ಅವಧಿ 1 ರಿಂದ 7 ವರ್ಷಗಳವರೆಗೆ ಇರಬಹುದು.
ದೀರ್ಘಾವಧಿಯ ಅವಧಿಗಳು ಇಎಂಐ ಕಮ್ಮಿ ಮಾಡುತ್ತದೆ. ಆದರೆ ಒಟ್ಟು ಬಡ್ಡಿದರ ಕೂಡಾ ಹೆಚ್ಚಿಸುತ್ತದೆ.
ಆದ್ದರಿಂದ ನಿಮ್ಮ ಬಜೆಟ್‌ಗೆ ತಕ್ಕಂತೆ ಸಾಲ ಮಾಡಿ.
ಸಾಲ ಮರುಪಾವತಿ ಪ್ಲಾನ್ ಮಾಡಿಟ್ಟುಕೊಳ್ಳಿ:
ನಿಮ್ಮ ಸಾಲ ಸಿಗುವ ಮೊದಲೇ, ಅದನ್ನು ಮರುಪಾವತಿ ಮಾಡೋದು ಹೇಗೆ, ಇಎಂಐ, ಹೀಗೆ ಎಲ್ಲದರ ಬಗ್ಗೆ ಲೆಕ್ಕ ಮಾಡಿಟ್ಟುಕೊಳ್ಳಿ. ಇದರಿಂದ ನಿಮಗೆ ಯೋಜಿಸಿದಕ್ಕಿಂತಲೂ ಬೇಗನೇ ಸಾಲ ತೀರಿಸಬಹುದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications